ಬೆಂಗಳೂರು(ಡಿ.03): ನಿಸಾನ್ ಇಂಡಿಯಾ ತನ್ನ ಬಹುನಿರೀಕ್ಷಿತ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ನ ಬೆಲೆಯನ್ನು ಘೋಷಣೆ ಮಾಡಿದೆ ಮತ್ತು ದೇಶಾದ್ಯಂತ ಇರುವ ನಿಸಾನ್ ಡೀಲರ್ ಶಿಪ್ ಗಳಲ್ಲಿ ಬುಕಿಂಗ್ ಆರಂಭವನ್ನೂ ಪ್ರಕಟಿಸಿದೆ. ಇದಲ್ಲದೇ, ವೆಬ್ ಸೈಟ್ ಮೂಲಕವೂ ಬುಕಿಂಗ್ ಆರಂಭಿಸಿದೆ. ದೊಡ್ಡ, ಬೋಲ್ಡ್, ಸುಂದರ ಮತ್ತು ‘ಚೆರಿಸ್ಮ್ಯಾಟಿಕ್’ ಎಸ್ ಯುವಿ ಆಗಿರುವ ಈ ನಿಸಾನ್ ಮ್ಯಾಗ್ನೈಟ್ ವಿಶೇಷ ಉದ್ಘಾಟನಾ ಬೆಲೆಯಾದ 4,99,000 (ಎಕ್ಸ್-ಶೋರೂಂ) ರೂಪಾಯಿಗಳಲ್ಲಿ 2020 ರ ಡಿಸೆಂಬರ್ 31 ರವರೆಗೆ ಲಭ್ಯವಿದೆ.

ನಿಸಾನ್ ಮ್ಯಾಗ್ನೈಟ್ ಭಾರತದ ಅತ್ಯಂತ ಕಡಿಮೆ ಬೆಲೆ SUV ಕಾರು!.

ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ನಿಸಾನ್ ನೆಕ್ಸ್ಟ್ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. `ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಪರಿಕಲ್ಪನೆಯಲ್ಲಿ ತಯಾರಿಸಲಾಗಿರುವ ಈ ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ 20 ಕ್ಕೂ ಹೆಚ್ಚು ಪ್ರಥಮ ದರ್ಜೆ ಮತ್ತು ಅತ್ಯುತ್ತಮ ಶ್ರೇಣಿಯ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಗ್ರಾಹಕರಿಗೆ ವಿಭಿನ್ನವಾದ, ಆವಿಷ್ಕಾರಕವಾದ ಮತ್ತು ಅತ್ಯದ್ಭುತವಾದ ಮಾಲೀಕತ್ವದ ಅನುಭವವನ್ನು ನೀಡಲಿದೆ ನಿಸಾನ್ ಮೋಟರ್ ಇಂಡಿಯಾದ ಅಧ್ಯಕ್ಷ ಸಿನಾನ್ ಒಝ್ಕೊಕ್ ಹೇಳಿದರು.

11 ಸಾವಿರಕ್ಕೆ ಬುಕ್ ಮಾಡಿ ನಿಸಾನ್ ಮ್ಯಾಗ್ನೈಟ್; ಭಾರತದ ಕಡಿಮೆ ಬೆಲೆಯ SUV ಕಾರು.

ಗ್ರಾಹಕರಿಗೆ ಶ್ರೀಮಂತವಾದ ಅನುಭವವಗಳನ್ನು ನೀಡುವ ನಿಟ್ಟಿನಲ್ಲಿ ನಿಸಾನ್ ಈ ಎಸ್ ಯುವಿ ತಯಾರಿಕೆಯಲ್ಲಿಯೂ ಆವಿಷ್ಕಾರಗಳನ್ನು ಮುಂದುವರಿಸಿಕೊಂಡು ಬಂದಿದೆ. ನಿಸಾನ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾಗಿದ್ದು, ಎಕ್ಸ್-ಟ್ರಾನಿಕ್ ಸಿವಿಟಿ, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ ಮತ್ತು ನಿಸಾನ್ ಕನೆಕ್ಟ್ ನಂತಹ ಎಲ್ಲಾ ಮಾದರಿಯ ಶ್ರೇಣಿಗಳಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿದೆ. ನಿಸಾನ್ ಮ್ಯಾಗ್ನೈಟ್ ಅನ್ನು ಪ್ರತಿಯೊಂದು ಹಂತದಲ್ಲಿಯೂ ತುಂಬಾ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಭಾರತೀಯ ಗ್ರಾಹಕರ ನಿರೀಕ್ಷೆ ಮತ್ತು ಅಭಿರುಚಿಗೆ ತಕ್ಕಂತೆ ಸಿದ್ಧಪಡಿಸಲಾಗಿದೆ:

ಸ್ನೇಹಿ ಭಾರತೀಯ ಗ್ರಾಹಕರಿಗಾಗಿ, ನಿಸಾನ್ ನ `ಟೆಕ್ ಪ್ಯಾಕ್’ ನಲ್ಲಿ ವೈರ್ ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಪಡಲ್ ಲ್ಯಾಂಪ್ ಮತ್ತು ಹೈ-ಎಂಡ್ ಸ್ಪೀಕರ್ ಗಳಿರುತ್ತವೆ.

ಇಂದು ನಿಸಾನ್ ಇಂಡಿಯಾ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಅನ್ನು ಆರಂಭಿಸಿದ್ದು, ಗ್ರಾಹಕರು ತಮ್ಮ ವೈಯಕ್ತಿಕ ಡಿವೈಸ್ ಮೂಲಕ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ನ ಅನುಭವವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ಸಂವಾದ ಆಧಾರಿತ ಡ್ರೈವ್ ನಿಸಾನ್ ಗ್ರಾಹಕರಿಗೆ ಒಂದು ವಿನೂತನವಾದ ಅನುಭವವನ್ನು ನೀಡಿದ್ದಲ್ಲದೇ, ವರ್ಚುವಲ್ ಸೇಲ್ಸ್ ಕನ್ಸಲ್ಟೆಂಟ್ ರೊಂದಿಗೆ ಚೆರಿಸ್ಮ್ಯಾಟಿಕ್ ಎಸ್ ಯುವಿ ಡ್ರೈವ್ ಗೆ ಅವಕಾಶ ಕಲ್ಪಿಸುತ್ತಿದೆ.

ಈ ಹೊಚ್ಚ ಹೊಸದಾದ ನಿಸಾನ್  ಮ್ಯಾಗ್ನೈಟ್ ಬಿಡುಗಡೆಯೊಂದಿಗೆ ನಿಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕ ಕೇಂದ್ರಿತ ಪ್ರಯಾಣದಲ್ಲಿ ಒಂದು ಸ್ಮರಣೀಯ ಮೈಲಿಗಲ್ಲನ್ನು ಸ್ಥಾಪಿಸಿದೆ. ವಿಶೇಷವಾಗಿ ನಮ್ಮ ನೆಚ್ಚಿನ ಭಾರತೀಯ ಗ್ರಾಹಕರಿಗಾಗಿ ನಾವು ದೊಡ್ಡದಾದ, ಬೋಲ್ಡ್, ಸುಂದರ ಮತ್ತು `ಚೆರಿಸ್ಮ್ಯಾಟಿಕ್’ ಎಸ್ ಯುವಿಯನ್ನು ವಿಶೇಷ ಉದ್ಘಾಟನಾ ಬೆಲೆಯಲ್ಲಿ ನೀಡುತ್ತಿದ್ದೇವೆ. ಈ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ತನ್ನ ಅತ್ಯುನ್ನತವಾದ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದರು.