1.2 ಕೋಟಿ ರೂ ಟೊಯೊಟಾ ವಿಲ್‌ಫೈರ್ ಕಾರಿನಲ್ಲಿ ಬೀಗರ ಊಟಕ್ಕೆ ಆಗಮಿಸಿದ ಅಭಿಷೇಕ್ ದಂಪತಿ!
ಅದ್ಧೂರಿ ಮದುವೆ, ಆರತಕ್ಷತೆ ಬಳಿಕ ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಅದ್ಧೂರಿ ಬೀಗರ ಊಟ ಸತ್ಕಾರ ನಡೆದಿದೆ. ಮಟನ್, ಚಿಕನ್, ಅಂಬಿ ನೆಚ್ಚಿನ ನಾಟಿ ಕೋಳಿ ಸೇರಿದಂತೆ ಹಲವು ಮೆನು ಸಿದ್ದಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ದಂಪತಿ 1.2 ಕೋಟಿ ರೂ ಮೌಲ್ಯದ ವಿಲ್‌ಫೈರ್ ಕಾರಿನಲ್ಲಿ ಆಗಮಿಸಿದ್ದರು. ಈ ಕಾರಿನಲ್ಲಿ ಹಲವು ವಿಶೇಷತೆಗಳಿದೆ.
ಬೆಂಗಳೂರು(ಜೂ.16): ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ದಂಪತಿ ಅದ್ಧೂರಿ ಬೀಗರ ಊಟ ಕಾರ್ಯಕ್ರಮ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಬೀಗರ ಊಟಕ್ಕೆ 7 ಟನ್ ಚಿಕನ್, 7 ಟನ್ ಮಟನ್, ನಾಟಿಕೋಳಿಯಿಂದ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಇಂದು ಬೆಳಗ್ಗೆ 11 ಗಂಟೆಯಿಂದ ಬೀಗರ ಊಟ ಕಾರ್ಯಕ್ರಮ ಆರಂಭಗೊಂಡಿತ್ತು. ಮಧ್ಯ 3 ಗಂಟೆಯಾದರೂ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ರಾಗಿ ಮುದ್ದೆ, ನಾಟಿ ಕೋಳಿ ಸಾಂಬಾರ್, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಕಬಾಬ್, ಮೊಟ್ಟೆ, ರೈಸ್, ಪಾಯಸ, ಐಸ್‌ಕ್ರೀಂ, ಸ್ವೀಟ್ಸ್, ಬೀಡ, ಬಾಳೆ ಹಣ್ಣು ಸೇರಿದಂತೆ ಹಲವು ಖಾದ್ಯಗಳನ್ನು ನೀಡಲಾಗಿದೆ. ಈ ವಿಶೇಷ ಬೀಗರ ಊಟ ಸತ್ಕಾರಕ್ಕೆ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ದಂಪತಿ ಆಗಮಿಸಿದ ಕಾರು ಕೂಡ ಹಲವು ವಿಶೇಷತೆಗಳಿಂದ ಕೂಡಿದೆ. ಮಂಡ್ಯದ ಗೆಜ್ಜಲೆಗೆರೆಯಲ್ಲಿ ಆಯೋಜಿಸಿದ್ದ ಬೀಗರ ಊಟ ಕಾರ್ಯಕ್ರಮಕ್ಕೆ ಅಭಿಷೇಕ್ ದಂಪತಿ 1.2 ಕೋಟಿ ರೂಪಾಯಿ ಬೆಲೆಯ ಟೋಯೋಟಾ ವಿಲ್‌ಫೈರ್ ಕಾರಿನಲ್ಲಿ ತೆರಳಿದ್ದರು.
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಅಭಿಷೇಕ್ ದಂಪತಿ ಟೋಯೋಟಾ ವಿಲ್‌ಫೈರ್ ಕಾರಿನ ಮೂಲಕ ಸಾಗಿದ್ದಾರೆ. ಇತ್ತ ಅಭಿಷೇಕ್ ದಂಪತಿಗಳನ್ನು ನೋಡಿದ ಹಲವರು ಕೈಬೀಸಿ ಶುಭಕೋರಿದ್ದಾರೆ. ಇತ್ತ ಕಾರಿನೊಳಗಿನಿಂದ ಅಭಿಷೇಕ್ ದಂಪತಿ ಕೂಡ ವಿಶ್ ಮಾಡಿದ್ದಾರೆ. ಅಭಿಷೇಕ್ ಅಂಬರೀಷ್ ಬಿಳಿ ಶರ್ಟ್, ಪಂಚೆ, ಶಲ್ಯ ಧರಿಸಿದ್ದರೆ, ಅವಿವಾ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಅವಿವಾ ಮುದ್ದೆ ತಿನ್ನೋದು ಡೌಟು, ಬಿರಿಯಾನಿ ಸಖತ್ ಆಗಿ ತಿಂತಾರೆ : ನಟ ಅಭಿಷೇಕ್
ಅಭಿಷೇಕ್ ಅಂಬರೀಷ್ ಹಾಗೂ ಅವಿವಾದ ಪ್ರಯಾಣಿಸಿದ ಟೋಯೋಟಾ ವಿಲ್‌ಫೈರ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಇದರ ಎಕ್ಸ್‌ಶೋ ರೂಂ ಬೆಲೆ ಸರಿಸುಮಾರು 96.55 ಲಕ್ಷ ರೂಪಾಯಿ. ಇನ್ನು ವಿಮೆ, ರಿಜಿಸ್ಟ್ರೇಶನ್, ರಸ್ತೆ ತೆರೆಗಿ ಸೇರಿದಂತೆ ಇತರ ಖರ್ಚುಗಳು ಸೇರಿದರೆ ಆನ್‌ರೋಡ್ ಬೆಲೆ 1.2 ರಿಂದ 1.5 ಕೋಟಿ ರೂಪಾಯಿ.
ಟೋಯೋಟಾ ವಿಲ್‌ಫೈರ್ ಕಾರು ಅತ್ಯಂತ ಆರಾಮದಾಯಕ ಪ್ರಯಾಣ ನೀಡಲಿದೆ. ಅದೆಷ್ಟೇ ದೂರ ಪ್ರಯಾಣವಾದರೂ ವಿಲ್‌ಫೈರ್ ಪ್ರಯಾಣಿಕರನ್ನು ಸುಸ್ತಾಗಿಸುವುದಿಲ್ಲ. ಲೆಗ್ ರೂಂ, ಹೆಡ್ ರೂಂ, ಬೂಟ್ ಸ್ಪೇಸ್ ಸೇರಿದಂತೆ ಅತ್ಯಂತ ಸ್ಥಳಾವಕಾಶದ ಕಾರು ಇದಾಗಿದೆ. ಹೆಚ್ಚಾಗಿ ಸಿನಿಮಾ ನಟ ನಟಿಯರು, ರಾಜಕಾರಣಗಳು, ಉದ್ಯಮಿಗಳು ಈ ಕಾರು ಹೆಚ್ಚಾಗಿ ಖರೀದಿಸುತ್ತಾರೆ. ಕಾರಿನೊಳಗೆ ಹೆಚ್ಚಿನ ಸ್ಥಳಾವಕಾಶ ಇದೆ. ಹೀಗಾಗಿ ಕಾಲು ಮಡಚಿ ಕುಳಿತಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಇನ್ನು ವಿಶ್ರಾಂತಿ ಪಡೆಯಲು ಈ ಕಾರು ಸೂಕ್ತವಾಗಿದೆ.
ಅಭಿಷೇಕ್-ಅವಿವಾ ದಂಪತಿಗೆ ಮೋದಿ ಪತ್ರ; ನವ ಜೋಡಿಗೆ ಶುಭಕೋರಿದ ಪ್ರಧಾನಿ
ವಿಲ್‌ಫೈರ್ ಕಾರು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಗ್ಲೋಬಲ್ ಎನ್‌ಸಿಪಿ ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. 5 ಸ್ಟಾರ್ ಗರಿಷ್ಠ ರೇಟಿಂಗ್ ಆಗಿದೆ. ಡ್ರೈವರ್, ಪ್ಯಾಸೆಂಜರ್, ಸೈಡ್ ಸೇರಿದಂತೆ 7 ಏರ್‌ಬ್ಯಾಗ್ ಈ ಕಾರಿನಲ್ಲಿದೆ. ಎಬಿಎಸ್ ಬ್ರೇಕಿಂಗ್, ಇಬಿಡಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, ಬ್ರೇಕ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಮಕ್ಕಳ ಸುರಕ್ಷತೆಗಾಗಿ ಚೈಲ್ಡ್ ಸೇಫ್ಟಿ ಲಾಕ್, ಕಡ್ಡಾಯ ಫೀಚರ್ ಪಾರ್ಕಿಂಗ್ ಸೆನ್ಸಾರ್, ಕ್ರಾಶ್ ಸೆನ್ಸಾರ್ ಹೊಂದಿದೆ. ಜೊತೆಗೆ ಎಂಜಿನ್ ಚೆಕ್ ವಾರ್ನಿಂಗ್, ಸೈಡ್ ಇಂಪಾಕ್ಟ್ ಬೀಮ್ಸ್, ಡೋರ್ ವಾರ್ನಿಂಗ್, ಸೀಟ್ ಬೆಲ್ಟ್ ಅಲರಾಂ, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಈ ಕಾರಿನಲ್ಲಿದೆ.
2494 cc ಎಂಜಿನ್, 4 ಸಿಲಿಂಡರ್, 4 ವೇಲ್ವ್ ಹೊಂದಿದೆ. ಕಾರು 141 bhp ಪವರ್( @ 4500 rpm) ಹಾಗೂ 198 Nm ಪೀಕ್ ಟಾರ್ಕ್( @ 2800 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.