Asianet Suvarna News Asianet Suvarna News

Skoda Car sales ಕೊಡಿಯಾಕ್ SUVಗೆ ಭಾರಿ ಬೇಡಿಕೆ, ಮುಂದಿನ 4 ತಿಂಗಳವರೆಗಿನ ಕಾರು ಸೋಲ್ಡ್ ಔಟ್

  • ಕೇವಲ 24 ಗಂಟೆಗಳಲ್ಲಿ 4 ತಿಂಗಳವರೆಗಿನ ಮಾರಾಟ ಪೂರ್ಣ
  • 7 ಸೀಟರ್‌ ಎಸ್‌ಯುವಿ ಮೂರು ಟ್ರಿಮ್‌ಗಳಲ್ಲಿ ಲಭ್ಯ
  • ದರ 34.99 ಲಕ್ಷ ರೂ.ಗಳಿಂದ ಆರಂಭ
Newly introduced Skoda Kodiaq facelift SUV car sold out for next 4 months ckm
Author
Bangalore, First Published Jan 13, 2022, 7:11 PM IST

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆ ಪ್ರವೇಶಿಸಿದ್ದ 2022 ಸ್ಕೋಡಾ ಕೊಡಿಯಾಕ್ (Skoda Kodiaq) ಫೇಸ್ಲಿಫ್ಟ್ ಎಸ್ಯುವಿ (SUV) ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಮುಂದಿನ ನಾಲ್ಕು ತಿಂಗಳವರೆಗೆ ಸಂಪೂರ್ಣ ಸೋಲ್ಡ್ ಔಟ್ ಆಗಿದೆ.ಈಗ ಕಾರುಗಳ ಬುಕಿಂಗ್ ನಡೆಯುತ್ತಿದೆಯಾದರೂ, ಗ್ರಾಹಕರು ಅವರ ಡೆಲಿವರಿ ಸ್ಟೇಟಸ್ ತಿಳಿಯಲು ಕನಿಷ್ಠ ನಾಲ್ಕು ತಿಂಗಳು ಕಾಯಬೇಕಾಗಿದೆ.  ಆದರೂ, ಜನರು 50 ಸಾವಿರ ರೂ. ಮುಂಗಡ ಹಣ ಪಾವತಿಸಿ ಕಾರಿನ ಬುಕಿಂಗ್ ಮಾಡಬಹುದಾಗಿದೆ.

ಸ್ಕೋಡಾ ಕೊಡಿಯಾಕ್ನ ದರ 34.99 ಲಕ್ಷ ರೂ.ಗಳಿಂದ ಆರಂಭವಾಗಲಿದೆ. 7 ಸೀಟಿನ ಈ ಎಸ್ಯುವಿ ಸ್ಟೈಲ್, (Style) ಸ್ಪೋರ್ಟ್ಲೈನ್ (Sportline) ಮತ್ತು ಲಾರಿನ್ ಆ್ಯಂಡ್ ಕ್ಲೆಮೆಂಟ್ (laurin and Clement) ವೇರಿಯಂಟ್ಗಳಲ್ಲಿ ಲಭ್ಯವಿದೆ. ಇದರ ದರ ಕೂಡ ವೇರಿಯಂಟ್ಗಳ ಆಧಾರದ ಮೇಲೆ ಬದಲಾಗಲಿದ್ದು, 37.49 ಲಕ್ಷ ರೂ.ಗಳವರೆಗೆ ಇರಲಿದೆ.

Skoda Kodiaq Facelift ಎಸ್‌ಯುವಿ ಬಿಡುಗಡೆ: ದರ ರೂ.34.99 ಲಕ್ಷದಿಂದ ಆರಂಭ!

ಕೊಡಿಯಾಕ್ ಎಸ್ಯುವಿ (SUV) ಕಳೆದ ವರ್ಷ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸಲ್ಪಟ್ಟಿದ್ದು. ಈ ಹಿಂದೆ ಮಾರುಕಟ್ಟೆಗೆ ಬಂದಿದ್ದರೂ ಎಮಿಷನ್ ಕಾರಣದಿಂದ ಹಿಂಪಡೆಯಲ್ಪಟ್ಟಿದ್ದ ಕೊಡಿಯಾಕ್ ಎರಡೂವರೆ ವರ್ಷಗಳ ನಂತರ ಹೊಸ ರೂಪದಲ್ಲಿ ಮರಳಿದೆ. ಇದರ ಹೊರಭಾಗದ ವಿನ್ಯಾಸ, ಕ್ಯಾಬಿನ್ ಒಳಗೆ ಮತ್ತು ಹುಡ್ನಲ್ಲಿ ಕೂಡ ಬದಲಾವಣೆಗಳಾಗಿವೆ.ಈಗ ಇದು ಬಿಎಸ್6 ಹಾಗೂ 2.0 ಲೀಟರ್ ಟಿಎಸ್ಐ (TSI) ಪೆಟ್ರೋಲ್ ಇಂಜಿನ್ನೊಂದಿಗೆ ಬಂದಿದೆ. ಇದರ ಪ್ರಮುಖ ಪರಿಷ್ಕರಣೆ ಎಂದರೆ 190 ಪಿಎಸ್ 2 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್, 7-ಸ್ಪಿಡ್ ಡಿಎಸ್ಜಿ (Dual clutch automatic) ಮತ್ತು 4X4 ಡ್ರೈವ್ಟ್ರೈನ್ ಅಳವಡಿಕೆಯಾಗಿದೆ.
ಇದರ ಸ್ಟೈಲ್ ಟ್ರಿಮ್‌ ರೂ.34.99 ಲಕ್ಷ, ಸ್ಪೋರ್ಟ್‌ ಲೈನ್‌ ರೂ.35.99 ಲಕ್ಷ ಹಾಗೂ ಲಾರಿನ್‌ ಆ್ಯಂಡ್‌ ಕ್ಲೆಮೆಂಟ್‌ ರೂ.37.49 ಲಕ್ಷ ರೂ.ಗಳಲ್ಲಿ ಲಭ್ಯವಿವೆ.

SKODA Cars ಲಾಂಚ್ ಆಗಲಿದೆ KODIAQ ಸೇರಿ 6 ಹೊಸ ಕಾರು, 2022 ಸ್ಕೋಡಾಗೆ ಸಂಭ್ರಮದ ವರ್ಷ!

ಕಾರಿನ ಹೊರಭಾಗದಲ್ಲಿ 10 ಬಣ್ಣದ ಆ್ಯಂಬಿಯೆಂಟ್‌ ಲೈಟ್‌ಗಳು, ಪರಿಷ್ಕೃತ ಗ್ರಿಲ್, ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಸಿಗ್ನೇಚರ್ಗಳು ಮತ್ತು ಹೊಸ ಬಂಪರ್ಗಳು ಇರಲಿವೆ. ಹಿಂಭಾಗದ ಬಂಪರ್ ಜೊತೆಗೆ ಟೈಲ್ ಲ್ಯಾಂಪ್ಗಳನ್ನು ಸಹ ಟ್ವೀಕ್ ಮಾಡಲಾಗಿದೆ. ಇಂಟೀರಿಯರ್‌ನಲ್ಲಿ ಹೊಸ ಕೊಡಿಯಾಕ್ ದೊಡ್ಡ ಡ್ಯುಯಲ್-ಟೋನ್ ಕ್ಯಾಬಿನ್ ಹೊಂದಿದೆ. ಜೊತೆಗೆ, 12 ಸ್ಪೀಕರ್‌ಗಳಿವೆ. 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಇಂಟರ್ನಲ್ ನ್ಯಾವಿಗೇಷನ್ ಮತ್ತು ವೈರ್ಲೆಸ್ ಸಂಪರ್ಕ ಹಾಗೂ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಇರಲಿದೆ. ಮೂರು ವಲಯಗಳ ಸ್ವಯಂಚಾಲಿತ ಎಸಿ, SUV ಪನೋರಮಿಕ್ ಸನ್ರೂಫ್, 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಇತರ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಸ್ಕೋಡಾ ಕೊಡಿಯಾಕ್‌ ಫೇಸ್‌ಲಿಫ್ಟ್‌ ಎಸ್‌ಯುವಿ ಇಲ್ಯುಮಿನೇಟೆಡ್‌ ಗ್ಲೌವ್‌ಬಾಕ್ಸ್‌, 270 ಲೀಟರ್‌ ಬೂಟ್‌ ಸ್ಪೇಸ್, ಏಲು ಸೀಟುಗಳಿವೆ. ಈ ಬೂಟ್‌ ಸ್ಪೇಸ್‌ ಅನ್ನು 630 ಲೀಟರ್‌ವರೆಗೆ ವಿಸ್ತರಿಸಬಹುದು. ಮೂರನೇ ಸಾಲಿನ ಸೀಟನ್ನು ಮುಂದಕ್ಕೆ ತಳ್ಳಿದರೆ ಇದರ ಬೂಟ್‌ ಸ್ಪೇಸ್‌ ಬರೋಬ್ಬರಿ 2005 ಲೀಟರ್‌ಗೆ ಏರಿಕೆಯಾಗಲಿದೆ.

2022 ಕೊಡಿಯಾಕ್ SUV 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಹೊಂದಿದ್ದು, ಗರಿಷ್ಠ 190 ಎಚ್ಪಿ ಮತ್ತು 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು  7-ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ ಹೊಂದಿದೆ. ಡೈನಾಮಿಕ್ ಚಾಸಿಸ್ ಕಂಟ್ರೋಲ್ (ಡಿಸಿಸಿ) ವ್ಯವಸ್ಥೆ ಹೊಂದಿರುವ ಎಸ್‌ಯುವಿ ಶಾಕ್ ಅಬ್ಸವರ್‌ಗಳಿಗೆ ಸರಿಹೊಂದಿಸುವ ಮೂಲಕ ಡ್ಯಾಂಪಿಂಗ್ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತದೆ.  ಇದು ಕಾರಿನ ಚಾಲಕ ಆಯ್ಕೆ ಮಾಡಿದ ಡ್ರೈವಿಂಗ್ ಮೋಡ್ಗೆ ತಕ್ಕಂತೆ ಇದು ಹೊಂದಿಕೊಳ್ಳುತ್ತದೆ. ಈ ಎಸ್‌ಯುವಿ ಇಕೋ, ನಾರ್ಮಲ್, ಸ್ಪೋರ್ಟ್ಸ್, ಸ್ನೋ ಮತ್ತು ಇಂಡಿವಿಜುವಲ್ ಎಂಬ ಐದು ಮೋಡ್ಗಳಲ್ಲಿ ಬರುತ್ತದೆ.

Follow Us:
Download App:
  • android
  • ios