Suzuki Celerio: ನ.10ಕ್ಕೆ ಹೊಸ ಸೆಲೆರಿಯೋ ಲಾಂಚ್, ಹೇಗಿದೆ ಈ ಕಾರು?
ಬಹಳ ಕುತೂಹಸ ಮೂಡಿಸಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯ ಹೊಸ ತಲೆಮಾರಿನ ಸೆಲೆರಿಯೋ (Celerio) ಕಾರ್ ಲಾಂಚ್ ದಿನಾಂಕ ಫಿಕ್ಸ್ ಆಗಿದ್ದು, ನವೆಂಬರ್ 10ರಂದು ಬಿಡುಗಡೆಯಾಗಲಿದೆ. ಈಗಾಗಲೇ ಕಂಪನಿಯು ಅಡ್ವಾನ್ಸ್ಡ್ ಬುಕ್ಕಿಂಗ್ ಆರಂಭಿಸಿದ್ದು, ಗ್ರಾಹಕರು 11 ಸಾವಿರ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಕಂಪನಿಯು ಟೀಸರ್ ಕೂಡ ಬಿಡುಗಡೆ ಮಾಡಿದೆ.
ಕೊನೆಗೂ ಮಾರುತಿ ಸುಜುಕಿಯ (Maruti Suzuki) ಹೊಸ ತಲೆಮಾರಿನ ಸೆಲೆರಿಯೋ (Celerio) ಕಾರ್ ಬಿಡುಗಡೆಯ ದಿನಾಂಕ ಬಹಿರಂಗಗೊಂಡಿದೆ. ಕಂಪನಿಯು ನವೆಂಬರ್ 10ರಂದು ಈ ಸೆಲೆರಿಯೋ ಹ್ಯಾಚ್‌ಬ್ಯಾಕ್ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈಗಾಗಲೇ ಬುಕ್ಕಿಂಗ್ ಕೂಡ ಆರಂಬವಾಗಿದ್ದು, ಗ್ರಾಹಕರು 11,000 ರೂ. ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬಿಡುಗಡೆ ಮುನ್ನವೇ ಇದೇ ಮೊದಲ ಬಾರಿಗೆ ಕಂಪನಿಯು ಸೆಲೆರಿಯೋ ಕಾರಿನ ವಿಶೇಷತೆಯನ್ನು ಸಾರುವ ಟೀಸರ್ ಕೂಡ ಬಿಡುಗಡೆ ಮಾಡಿದೆ.
ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಬಲೆನೋ ಶೂನ್ಯ ಸಾಧನೆ
ಹೊಸ ತಲೆಮಾರಿನ ಸೆಲೆರಿಯೋ ನೋಡಲು ಆಕರ್ಷಕವಾಗಿದೆ. ಹೊರ ವಿನ್ಯಾಸದ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ಸ್ಪೋರ್ಟ್ಸ್ ಲುಕ್ ನೀಡಲಾಗಿದೆ. ಹೊಸ ಗ್ರಿಲ್, ಹೊಸ ಹೆಡ್‌ಲ್ಯಾಂಪ್ಸ್, ಹೊಸ ಬಂಪರ್, ಬಾಡಿ ಬಣ್ಣದ ಡೋರ್ ಹ್ಯಾಂಡಲ್ಸ್, ಒಆರ್‌ವಿಎಂಗಳಲ್ಲಿ ಟರ್ನ್ ಸಿಗ್ನಲ್ ಲೈಟ್ ಸೇರಿಸಲಾಗಿದೆ. ಜೊತೆಗೆ, ರಿಯರ್ ವಿಂಡ್‌ಶೀಲ್ಡ್ ವೈಪರ್, ಹೊಸ ಟೇಲ್ ಲ್ಯಾಂಪ್ಸ್ ಮತ್ತು ಅಲಾಯ್ ವ್ಹೀಲ್ಸ್‌ಗಳನ್ನು ಕಾಣಬಹುದಾಗಿದೆ.
ಕಾರ್ ಕ್ಯಾಬಿನ್ ಒಳಗೂ ನೀವು ಬದಲಾವಣೆಗಳನ್ನ ಕಾಣಬಹುದಾಗಿದೆ. ಟಚ್ ಸ್ಕ್ರೀನ್ (Touch Screen) ಇನ್ಫೈನ್‌ಮೆಂಟ್ ಸಿಸ್ಟಮ್, ಫೀಚರ್ ಸ್ಮಾರ್ಟ್‌ಪ್ಲೇ ಸ್ಟುಡಿಯೋ 2.0 ಇದ್ದು ಆಪಲ್ ಕಾರ್ ಪ್ಲೇ (Apple car play) ಮತ್ತು ಆಂಡ್ರಾಯ್ಡ್ ಆಟೋ (Android Auto)ಗೆ ಸಪೋರ್ಟ್ ಮಾಡುತ್ತದೆ. ಆಟೋ ಕ್ಲೈಮೆಟ್ ಚೇಂಜ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಕಾಣಬಹುದಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಎರಡು ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ISOFIX mounts, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ನೀಡಲಾಗಿದೆ.
ಈಗಾಗಲೇ ಬುಕ್ಕಿಂಗ್ ಆರಂಭ
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ಮಂಗಳವಾರ (ನ.2) ತನ್ನ ಬಹು ನಿರೀಕ್ಷಿತ ಪೆಟ್ರೋಲ್ ಕಾರ್ ಸೆಲೆರಿಯೊಗೆ (Celerio) ಬುಕಿಂಗ್ ಪ್ರಾರಂಭಿಸಿದೆ. ಕೋವಿಡ್-19 ರ ನಂತರದ ಪರಿಸ್ಥಿತಿಯಿಂದ ಕಡಿಮೆಯಾಗಿದ್ದ ತನ್ನ ವಹಿವಾಟನ್ನು ಸೆಲೆರಿಯೊ ಮಾರಾಟದ ಮೂಲಕ ವ್ಯಾಪಾರ ಹೆಚ್ಚಿಸುವ ಗುರಿಯನ್ನು ಹೊಂದಿದೆ ಮಾರುತಿ ಸುಜುಕಿ. ಯುವ ಖರೀದಿದಾರರ ಬೇಡಿಕೆಗಳನ್ನು ಪೂರೈಸಲು ಮಾರುತಿ ಸುಜುಕಿ, ಈ ಹೊಸ ತಲೆಮಾರಿನ ಕಾರನ್ನು ವಿನ್ಯಾಸ ಮಾಡಿದೆ. ಹೊಸ ಸೆಲೆರಿಯೊವನ್ನು 'ಭಾರತದಲ್ಲೇ ಹೆಚ್ಚು ಇಂಧನ ದಕ್ಷ ಪೆಟ್ರೋಲ್ ಕಾರು' ಎಂದು ಕಂಪನಿ ಹೇಳಿದೆ.
ಸದ್ದಿಲ್ಲದೇ ಬಿಡುಗಡೆಯಾದ 2021 ಜಾಗ್ವಾರ್ ಎಕ್ಸ್ ಎಫ್ !
"ಸೆಲೆರಿಯೊ ಪ್ರಾರಂಭಿಸಿದಾಗಿನಿಂದ, ತನ್ನ ವಿಶಿಷ್ಟ ಶೈಲಿ ಮತ್ತು ಆಟೋ ಗೇರ್ ಶಿಫ್ಟ್ (Auto Gear Shift) ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿತ್ತು , ದೇಶದಲ್ಲಿ 2 ಪೆಡಲ್ ತಂತ್ರಜ್ಞಾನ (2 Pedal technology) ವಿಸ್ತರಿಸಲು ಇದು ಸಹಾಯವಾಗಿತ್ತು. ಬ್ರ್ಯಾಂಡ್ ಸೆಲೆರಿಯೊ ಅಂದಿನಿಂದ ಹೊಸ ಯುಗದ ತಂತ್ರಜ್ಞಾನ, ಆಧುನಿಕ ವಿನ್ಯಾಸ ಮತ್ತು ಪ್ರಾಯೋಗಿಕತೆಗಾಗಿ ಹೆಸರುವಾಸಿಯಾಗಿದೆ" ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ (Shashank Srivastava) ಹೇಳಿದ್ದಾರೆ.
“ನಗರ ಪ್ರದೇಶದ, ಪ್ರಗತಿಪರ ಮತ್ತು ಮಹತ್ವಾಕಾಂಕ್ಷೆಯ ಗ್ರಾಹಕರು, ತಮ್ಮ ವ್ಯಕ್ತಿತ್ವದಣುಗುಣವಾಗಿ ವಿಶಿಷ್ಟ ವಿನ್ಯಾಸಗಳನ್ನು ಹೊಂದಿರುವ ಉತ್ಪನ್ನಗಳನ್ನು ಖರೀದಿಸುತ್ತಾರೆ. ಹೊಸ ಆವೃತ್ತಿಯ ಸೆಲೆರಿಯೊ ಹೊಸ ಮಾದರಿಯ ಪೆಟ್ರೋಲ್ ಎಂಜಿನ್ (Petrol Engine), ರೋಮಾಂಚಕ ಮತ್ತು ಸೊಗಸಾದ ವಿನ್ಯಾಸ ಜತಗೆ ಇತರ ವೈಶಿಷ್ಟ್ಯಗಳ ಹೊಂದಿದ್ದು ಆಲ್-ರೌಂಡರ್ ಕಾರ್ (All Rounder) ಆಗಿದೆ. ಆಲ್-ನ್ಯೂ ಸೆಲೆರಿಯೊ ಮತ್ತೊಮ್ಮೆ ಕಾರುಗಳ ಕಾಂಪ್ಯಾಕ್ಟ್ ವಿಭಾಗಕ್ಕೆ (compact segment) ಶಕ್ತಿ ತುಂಬುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.
ಈ ತಿಂಗಳು ಎಂಟು ಕಾರು ಲಾಂಚ್! ಆ ಕಾರುಗಳು ಯಾವವು?
"Next-Gen KSeries ಎಂಜಿನ್, ಡ್ಯೂಲ್ ಜೆಟ್ (Duel Jet), ಡ್ಯೂಲ್ ವಿವಿಟಿ ಎಂಜಿನ್ (Duel VVT Engine) ಹಾಗೂ ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ Idle Start-Stop ಟೆಕ್ನಾಲೊಜಿ ಬಳಸಲಾಗಿದೆ. ಆಲ್-ನ್ಯೂ ಸೆಲೆರಿಯೊ ಭಾರತದಲ್ಲೇ ಹೆಚ್ಚು ಇಂಧನ ದಕ್ಷ ಪೆಟ್ರೋಲ್ ಕಾರು ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮುಖ್ಯ ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) ಸಿವಿ ರಾಮನ್ (CV Raman) ಹೇಳಿದ್ದಾರೆ.