ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಬಲೆನೋ ಶೂನ್ಯ ಸಾಧನೆ

ಮಾರುತಿ ಸುಜುಕಿ (Maruti Suzuki) ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಹಾಗಿಯೇ ಮೇಡ್ ಇನ್ ಇಂಡಿಯಾ ಕಾರುಗಳನ್ನು ಸುಜುಕಿ ಜಗತ್ತಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತದೆ. ಭಾರತದಲ್ಲಿ ನಿರ್ಮಾಣವಾಗುವ ಬಲೆನೋ (Baleno) ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿನಲ್ಲಿ ಶೂನ್ಯ ಸಾಧನೆ ಮಾಡಿದೆ.

Made in India Baleno scores zero in Latin NCAP car crash test

ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರುಗಳು ಅತ್ಯಂತ ಜನಪ್ರಿಯವಾಗಿವೆ. ಆಕರ್ಷಕ ಬೆಲೆ ಹಾಗೂ ಮೈಲೇಜ್ ದೃಷ್ಟಿಯಿಂದಾಗಿ  ಗ್ರಾಹಕರು ಮಾರುತಿ ಕಾರುಗಳಿಗೆ ಜನರು ಮಾರು ಹೋಗುತ್ತಾರೆ. ಆದರೆ, ಕಾರ್ ಸುರಕ್ಷತೆಯ ವಿಷಯಕ್ಕೆ ಬಂದಾಗ ಇದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಇದಕ್ಕೆ ಭಾರತದಲ್ಲಿ ನಿರ್ಮಾಣವಾದ ಸುಜುಕಿ  ಬಲೆನೋ (Baleno) ಹ್ಯಾಚ್‌ಬ್ಯಾಕ್ ಊದಾಹರಣೆಯಾಗಿ ನೀಡಬಹುದು.

ಭಾರತದಲ್ಲಿ ತಯಾರಾದ ಸುಜುಕಿ ಬಲೆನೋ ಕಾರನ್ನು ಲ್ಯಾಟಿನ್ ಅಮೆರಿಕಾ (Latin America)ದ ಎನ್‌ಸಿಎಪಿ (NCAP) ಕಾರ್‌ ಕ್ರ್ಯಾಶ್‌ ಟೆಸ್ಟಿಂಗ್‌ಗೆ ಗುರಿಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬಲೆನೋ ಕಾರ್ ಫೇಲ್ ಆಗಿದೆ. ಲ್ಯಾಟಿನ್ ಎನ್‌ಸಿಎಪಿ (Latin NCAP) ಕಾರ್ ಟೆಸ್ಟಿನಲ್ಲಿ ಬಲೆನೋ ಶೂನ್ಯ ಸಂಪಾದನೆ ಮಾಡಿದೆ!

ಸದ್ದಿಲ್ಲದೇ ಬಿಡುಗಡೆಯಾದ 2021 ಜಾಗ್ವಾರ್ ಎಕ್ಸ್ ಎಫ್ ! 

ಭಾರತದಲ್ಲೂ ಭಾರೀ ಜನಪ್ರಿಯವಾಗಿರುವ ಈ ಬಲೆನೋ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಭಾರತದಲ್ಲಂತೂ ಕಾರ್ ತುಂಬ ಜನಪ್ರಿಯವಾಗಿದೆ. ಆದರೆ, ಲ್ಯಾಟಿನ್ ಎನ್‌ಸಿಎಪಿ ಕಾರ್ ಕ್ರ್ಯಾಶ್‌ಟೆಸ್ಟಿನಲ್ಲಿ ಶೂನ್ಯ ಸಾಧನೆ ಮಾಡುವ ಮೂಲಕ ನಿರಾಸೆ ಮೂಡಿಸಿದೆ. ಇತ್ತೀಚೆಗಷ್ಟೇ ಸ್ವಿಫ್ಟ್ (Swift) ಕೂಡ ಕಾರ್ ಕ್ರ್ಯಾಶ್ ಟೆಸ್ಟಿನಲ್ಲಿ ಫೇಲ್ ಆಗಿತ್ತು.

ಭಾರತದ ಗುಜರಾತ್‌ (Gujarat)ನ ಅಹ್ಮದಾಬಾದ್‍ನ (Ahmadabad) ಘಟಕದಲ್ಲಿ ತಯಾರಾಗುವ ಬಲೆನೋ ಹ್ಯಾಚ್‌ಬ್ಯಾಕ್ ಕಾರುಗಳನ್ನು ಜಪಾನ್ (Japan) ಮೂಲದ ಸುಜುಕಿ ಲ್ಯಾಟಿನ್ ಅಮೆರಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಬಲೆನೋ ಮಾತ್ರವಲ್ಲದೇ ಸ್ವಿಫ್ಟ್ ಕಾರನ್ನು ಈ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟ ಮಾಡುತ್ತದೆ. 

 

 

ಸುರಕ್ಷತೆಯ ಸ್ಟ್ಯಾಂಡರ್ಡ್ ಆಗಿ ಬಲೆನೊ ಎರಡು ಏರ್‌ಬ್ಯಾಗ್‌ (Air Bags) ಗಳನ್ನು ಹೊಂದಿದೆ. ಆದರೂ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಇದು ಶೇಕಡಾ 20.03 ಮತ್ತು ಮಕ್ಕಳಿಗೆ 17.06 ಶೇಕಡಾ ಮಾತ್ರ ಸುರಕ್ಷತೆಯನ್ನು ಒದಗಿಸುತ್ತದೆ. ಪಾದಚಾರಿಗಳ ರಕ್ಷಣೆ ಮತ್ತು ದುರ್ಬಲ ರಸ್ತೆ ಬಳಕೆದಾರರಿಗಾಗಿ ಕಾರು 64.06 ಪ್ರತಿಶತವನ್ನು ಸಾಧಿಸಿದೆ. ಸುರಕ್ಷತೆಯ ಸಹಾಯದ ವೈಶಿಷ್ಟ್ಯಗಳನ್ನು ಗಣನೆಗೆ ತೆಗೆದುಕೊಂಡಾಗ ಒಟ್ಟಾರೆ ಸ್ಕೋರ್ ನಿರಾಶಾದಾಯಕವಾಗಿದ್ದು, ಶೇಕಡಾ 6.98 ಕ್ಕೆ ಕುಸಿದಿದೆ. 

ಟಾಟಾ ಪವರ್‌ನಿಂದ ದೇಶಾದ್ಯಂತ 1000 EV ಚಾರ್ಜಿಂಗ್ ಕೇಂದ್ರಗಳು

ಸ್ಟ್ಯಾಂಡರ್ಡ್ ಸೈಡ್ ಬಾಡಿ ಮತ್ತು ಹೆಡ್ ಪ್ರೊಟೆಕ್ಷನ್ ಏರ್‌ಬ್ಯಾಗ್‌ಗಳ ಕೊರತೆ, ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (Electronic Stability Control-ESC) ಕೊರತೆ ಮತ್ತು ಚೈಲ್ಡ್ ರೆಸ್ಟ್ರೆಂಟ್ ಸಿಸ್ಟಮ್ಸ್ (Child Restraint Systems- CRS) ಅನ್ನು ಶಿಫಾರಸು ಮಾಡದಿರುವ ಸುಜುಕಿಯ ನಿರ್ಧಾರವೂ ಕಾರು ಕಳಪೆಯಾಗಿ ಕಾರ್ಯನಿರ್ವಹಿಸಲು ಕಾರಣ ಎಂದು ಲ್ಯಾಟಿನ್ ಎನ್‌ಸಿಎಪಿ (Latin NCAP) ಹೇಳಿದೆ.
 

Made in India Baleno scores zero in Latin NCAP car crash test

ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರ್ ಎನಿಸಿಕೊಂಡಿರುವ ಬಲೆನೋದಲ್ಲಿ ಕಂನಪಿಯು 1.2 ಲೀ ಪೆಟ್ರೋಲ್ ಎಂಜಿನ್ ನೀಡಿದೆ. ಇದಕ್ಕೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸಿಮಿಷನ್ ಸಾಥ್ ನೀಡಿದೆ. ಪೆಟ್ರೋಲ್ ವರ್ಷನ್ ಬಲೆನೋ ಗ್ರಾಹಕರಿಗೆ ಸಿವಿಟಿ ಆಟೋಮೆಟಿಕ್ ಟ್ರಾನ್ಸಿಮಿಷನ್ ಆಯ್ಕೆಯಲ್ಲಿ ದೊರೆಯುತ್ತದೆ. 

ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿ ನೀವು ಆಕರ್ಷಕ ಹೆಡ್‌ಲ್ಯಾಂಪ್ಸ್ ಕಾಣಬಹುದು. ಎಲ್ಇಡಿ ಡೇಟೈಮ್ ಲೈಟ್ಸ್, ಅಲಾಯ್ ವ್ಹೀಲ್ಸ್, ರೇನ್ ಸೆನ್ಸಿಂಗ್ ವೈಪರ್ಸ್, ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡ ಇದೆ. ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋಗೆ ಈ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಸಪೋರ್ಟ್ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ಫೀಚರ್‌ಗಳನ್ನು ಕಾಣಬಹುದು. 

ಥಾರ್ ಪೂರ್ತಿ ಬಚ್ಚನ್ ಸಿನಿಮಾಗಳ ಡೈಲಾಗ್, ಡ್ಯಾಶ್‌ಬೋರ್ಡ್ ಮೇಲೆ ಅಮಿತಾಭ್ ಆಟೋಗ್ರಾಫ್

ಸುರಕ್ಷತೆಯ ದೃಷ್ಟಿಯಿಂದಾಗಿ ಬಲೆನೋ ಕಾರಿನ ಮುಂಭಾಗದಲ್ಲಿ ಕಂಪನಿಯು ಎರಡು ಏರ್‌ಬ್ಯಾಗ್ಸ್, ಇಬಿಡಿ (EBD)ಯೊಂದಿಗೆ ಎಬಿಎಸ್ (ABS) ನೀಡಲಾಗಿದೆ. ಆಟೋ ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಕೂಡ ಇದೆ. ಸಾಕಷ್ಟು ಫೀಚರ್‌ಗಳನ್ನು ಹೊಂದಿರುವ ಬಲೆನೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿದೆ.

Latest Videos
Follow Us:
Download App:
  • android
  • ios