MG ZS Electric Charging ಎಂಜಿ ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ಭರ್ಜರಿ ಆಫರ್, ಚಾರ್ಜಿಂಗ್ ಸಂಪೂರ್ಣ ಉಚಿತ!

  • ಎಂಜಿ ZS ಎಲೆಕ್ಟ್ರಿಕ್ ಕಾರು ಖರೀದಿಸಿದ ಗ್ರಾಹಕರಿಗೆ ಚಾರ್ಜಿಂಗ್ ಉಚಿತ
  • ಎಂಜಿ ಮೋಟಾರ್ಸ್‌ನಿಂದ ವಿಶೇಷ ಕೊಡುಗೆ ಘೋಷಣೆ
  • ಫಾಸ್ಟ್ ಚಾರ್ಜಿಂಗ್ ಮೂಲಕ ತ್ವರಿತ ಚಾರ್ಜಿಂಗ್ ಸೌಲಭ್ಯ
MG motors announces ZS EV owners can avail free unlimited charging till March 31 offer ckm

ಬೆಂಗಳೂರು(ಫೆ.27): ಭಾರತದಲ್ಲಿ ಎಲೆಕ್ಟ್ರಿಕ್(Electric Car) ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ. ಎಲೆಕ್ಟ್ರಿಕ್ ಕಾರು ಖರೀದಿಸಿದರೆ ಚಾರ್ಜಿಂಗ್(EV Charging) ತಲೆನೋವು ಹೆಚ್ಚಾಗುತ್ತಿದೆ. ಚಾರ್ಜಿಂಗ್ ಸ್ಟೇಶನ್(Charging Station) ಕೊರತೆ, ಸಿಬ್ಬಂದಿಗಳಿಗೆ ಸರಿಯಾದ ಮಾಹಿತಿ ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳನ್ನು ಎಲೆಕ್ಟ್ರಿಕ್ ಕಾರು ಮಾಲೀಕರು ನೀಡುತ್ತಲೇ ಇದ್ದಾರೆ. ಈ ಸಮಸ್ಯೆಗಳ ನಡುವೆ ಎಂಜಿ ಮೋಟಾರ್ಸ್(MG ZS EV) ಎಂಜಿ ZS ಕಾರು ಖರೀದಿಸಿದ ಗ್ರಾಹಕರಿಗೆ ಉಚಿತವಾಗಿ ಕಂಪನಿಯ ಚಾರ್ಜಿಂಗ್ ಮಾಡಿಸಿಕೊಡುತ್ತಿದೆ.

ಹೌದು, ಉಚಿತ ಚಾರ್ಜಿಂಗ್. ಮಾರ್ಚ್ 31ರ ವರೆಗೆ ಎಂಜಿ ZS ಮಾಲೀಕರು ದೇಶದ ಯಾವುದೇ ಎಂಜಿ ಶೋ ರೂಂ, ಚಾರ್ಜಿಂಗ್ ಸ್ಟೇಶನ್ ಸೇರಿದಂತೆ ಎಂಜಿ ಚಾರ್ಜಿಂಗ್ ಇರುವ ಎಲ್ಲಿಯಾದರೂ ಚಾರ್ಜ್ ಮಾಡಿಕೊಂಡರೆ ಉಚಿತ. ವಿಶೇಷ ಅಂದರೆ ಎಷ್ಟು ಬಾರಿಯಾದರೂ ಚಾರ್ಜ್ ಮಾಡಿಕೊಳ್ಳಬಹುದು.

Electric Car sales ಎರಡು ವರ್ಷದಲ್ಲಿ 4 ಸಾವಿರ ಎಂಜಿ ZS ಎಲೆಕ್ಟ್ರಿಕ್ ಕಾರು ಮಾರಾಟ, ಫೆಬ್ರವರಿಯಲ್ಲಿ ಫೇಸ್‌ಲಿಫ್ಟ್ ಲಾಂಚ್!

ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ, ಅಹಮ್ಮದಾಬಾದ್, ಪುಣೆ, ನೋಯ್ಡಾ, ಗುರ್ವಾಂ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಎಂಜಿ ಮೋಟಾರ್ಸ್ ಚಾರ್ಜಿಂಗ್ ಸ್ಟೇಶನ್ ಲಭ್ಯವಿದೆ. ಇಷ್ಟೇ ಅಲ್ಲ ಉಚಿತ ಚಾರ್ಜಿಂಗ್ ಕೂಡ ಸಿಗಲಿದೆ.

ಚಾರ್ಜಿಂಗ್ ಸಮಸ್ಯೆಗಳ ಕಾರಣ ಎಲೆಕ್ಟ್ರಿಕ್ ವಾಹನ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದರ ನಡುವೆ ಎಂಜಿ ಮೋಟಾರ್ಸ್ ಪ್ರಯತ್ನ ಮಾಲೀಕರ ಸಂತಸಕ್ಕೆ ಕಾರಣವಾಗಿದೆ. ಎಂಜಿ ಮೋಟಾರ್ಸ್ ಬೆಲೆ 21.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ 419 ಕಿ.ಮೀ ಮೈಲೇಜ್ ನೀಡಲಿದೆ. ಡಿಸಿ ಚಾರ್ಜಿಂಗ್ ಮೂಲಕ 50 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ.

ಭಾರತದಲ್ಲಿ ಎಂಜಿ ಕಾರುಗಳು ಬಾರಿ ಸಂಚಲನ ಮೂಡಿಸಿದೆ. ಕಾರಣ ಹೆಕ್ಟರ್ ಮೂಲಕ ಎಂಜಿ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿತು. ಇದು ದೇಶದ ಮೊದಲ ಇಂಟರ್‌ನೆಟ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

ಎಂಜಿ ಮೋಟಾರ್ಸ್‌ ಭಾರತಕ್ಕೆ ಕಾಲಿಟ್ಟಾಗಲೇ ಆಟೋಮೊಬೈಲ್‌ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ತರಲಿದೆ ಎಂಬ ಮಾತು ಕೇಳಿಬಂದಿತ್ತು. ಅದು ನಿಜವಾಗಿದೆ. ಎಂಜಿ ತನ್ನ ಮೊತ್ತಮೊದಲ ಕಾರು ಎಂಜಿ ಹೆಕ್ಟರ್‌ ಎಸ್‌ಯುವಿಯನ್ನು ದೇಶಕ್ಕೆ ಪರಿಚಯಿಸಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನಿಂದ ಕೆಲಸ ಮಾಡುವ ಹಲವಾರು ಫೀಚರ್‌ಗಳನ್ನು ಹೊಂದಿರುವ ಈ ಕಾರನ್ನು ದೇಶದ ಮೊದಲ ಇಂಟರ್‌ನೆಟ್‌ ಕಾರು ಎಂದೇ ಕರೆಯಲಾಗಿದೆ. ಇನ್ನೆರಡು ತಿಂಗಳಲ್ಲಿ ದೇಶದ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿರುವ ಈ ಕಾರು ಆಟೊಮೊಬೈಲ್‌ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಲಿದೆ.

ಏನೇ ಬೇಕಿದ್ದರೂ ಕಾರಿನೊಂದಿಗೆ ಮಾತನಾಡಿ !
ಕಾರಿನ ಬಾಗಿಲು ಹಾಕಬೇಕಿದ್ದರೆ, ಗ್ಲಾಸ್‌ ಏರಿಸಬೇಕಿದ್ದರೆ ನೀವು ಬಟನ್‌ ಪ್ರೆಸ್‌ ಮಾಡಬೇಕು. ಆದರೆ ಕೇವಲ ಬಾಯಿಂದಲೆ ಹೇಳಿ ಯಾವುದೆ ಆಯಾಸ ಇಲ್ಲದೆ ಕಾರಿನ ವ್ಯವಸ್ಥೆ ನಿರ್ವಹಿಸುವಂತಾಗಿದ್ದರೆ ಎಂದು ನಾವು ಯೋಚನೆ ಮಾಡುವುದಕ್ಕೂ ಮುನ್ನವೇ ಇಂಗ್ಲೆಂಡಿನ ಕಾರು ತಯಾರಿಕಾ ಸಂಸ್ಥೆ ಎಂ.ಜಿ. ಮೋಟಾರ್ಸ್‌ ಅಂಥಾ ಸೌಲಭ್ಯವುಳ್ಳ ಎಂಜಿ ಹೆಕ್ಟರ್‌ ಎಂಬ ಎಸ್‌ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಎಂಜಿ ಗ್ಲೋಸ್ಟರ್‌ ಎಸ್‌ಯುವಿ
ಎಂಜಿ ಮೋಟಾರ್ಸ್‌ ಇಂಡಿಯಾ ಇದೀಗ ಎಂಜಿ ಗ್ಲೋಸ್ಟರ್‌ ಎಂಬ ಎಸ್‌ಯುವಿ ತರುತ್ತಿದೆ. ಎಂಥಾ ವೇಗದ ಡ್ರೈವಿಂಗ್‌ನಲ್ಲಿದ್ದರೂ ಕಂಟ್ರೋಲ್‌ ಪಡೆಯೋದಕ್ಕೆ ಇದರಲ್ಲಿ ಇಂಟಲಿಜೆನ್ಸ್‌ ಆಲ್‌ ಟೆರ್ರೈನ್‌ ಸಿಸ್ಟಂ ಇದೆ. ಆಫ್‌ ರೋಡ್‌ ಆನ್‌ರೋಡ್‌ ಎಂಥಾ ರಸ್ತೆ ಇದ್ದರೂ ಗ್ಲೋಸ್ಟರ್‌ ಹೆದರಲ್ಲ ಅಂತಿದೆ ಎಂಜಿ. 2.0 ಡಿಸೆಲ್‌ ಟ್ವಿನ್‌ ಟರ್ಬೋ ಇಂಜಿನ್‌ ಇದೆ. 218 ಪಿಎಸ್‌ ಪವರ್‌ ಮತ್ತು 480 ಎನ್‌ಎಂ ಟಾರ್ಕ್ ಇದೆ. ಬೆಲೆ ಕೊಂಚ ದುಬಾರಿ.  ಬುಕಿಂಗ್‌ ಮಾಡೋಕೆ 1 ಲಕ್ಷ ಕೊಡಬೇಕು.
 

Latest Videos
Follow Us:
Download App:
  • android
  • ios