Asianet Suvarna News Asianet Suvarna News

ಕೊರೋನಾ ಹೋರಾಟದ ವಿರುದ್ಧ ಕೈಜೋಡಿಸಿದ MG ಮೋಟಾರ್; ಹೆಕ್ಟರ್ ಆ್ಯಂಬುಲೆನ್ಸ್ ಹಸ್ತಾಂತರ!

  • ಕೊರೋನಾ ಸೋಂಕಿತರಿಗೆ ನೆರವಾಗಲು ಹೆಕ್ಟರ್ ಆ್ಯಂಬುಲೆನ್ಸ್
  • NGO ಗೆ ಅತ್ಯಾಧುನಿಕ ಹೆಕ್ಟರ್ ಆ್ಯಂಬುಲೆನ್ಸ್ ನೀಡಿದ MG ಮೋಟಾರ್
  • ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ MG ಕೊಡುಗೆ
MG motors donate Hector ambulance to Bengaluru based NGO to fight againsit covid 19 ckm
Author
Bengaluru, First Published Jun 22, 2021, 6:05 PM IST

ಬೆಂಗಳೂರು(ಜೂ.22):  ಕೊರೋನಾ ವಿರುದ್ದದ ಹೋರಾಟದಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಆಟೋಮೊಬೈಲ್ ಕಂಪನಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಗೆ ನೆರವು ನೀಡಿದೆ. ಇದೀಗ ಎಂಜಿ ಮೋಟಾರ್ ಇಂಡಿಯಾ, ಭಾರತದ ಕೊರೋನಾ ಹೋರಾಟಕ್ಕೆ ಕೈಜೋಡಿಸಿದೆ. ಇದರ ಅಂಗವಾಗಿ MG ಮೋಟಾರ್ ಕಂಪನಿಯ ಹೆಕ್ಟರ್ ಕಾರುಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಬೆಂಗಳೂರಿನ NGO ಸಂಸ್ಥೆಯಾಗಿರುವ ಜೀವನ್ ಜ್ಯೋತಿ ಟ್ರಸ್ಟ್‌ಗೆ ನೀಡಿದೆ.

800KM ಮೈಲೇಜ್, 5G ಕನೆಕ್ಷನ್; ಬರುತ್ತಿದೆ MG ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೂಪರ್ ಕಾರು!

ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ NGOಗೆ  ಆ್ಯಂಬುಲೆನ್ಸ್ ನೀಡುವ ಮೂಲಕ ಕೆಜಿಎಫ್‌ನಲ್ಲಿ  ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ನೆರವಾಗಿದೆ.   ಕೆಜಿಎಫ್ ನ ಜನರು  ತಮ್ಮ ಆರೋಗ್ಯಸೇವಾ ಅಗತ್ಯಗಳಿಗೆ ಬೆಂಗಳೂರಿಗೆ ಪ್ರಯಾಣಿಸಬೇಕಾಗಿತ್ತು. ಜೀವನ್ ಜ್ಯೋತಿ ಟ್ರಸ್ಟ್ ಕೆಜಿಎಫ್‌ನಲ್ಲಿ 24/7 ವೈದ್ಯಕೀಯ ಆರೈಕೆ, ಆಸ್ಪತ್ರೆ ಅನುಕೂಲತೆಗಳನ್ನೂ ನೀಡುತ್ತಿದೆ.  ಈ ಎನ್‍ಜಿಒ  ಆರೋಗ್ಯಸೇವಾ ಸಿಬ್ಬಂದಿ, ಅಗತ್ಯ ಅನುಮತಿಗಳು ಇತ್ಯಾದಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. 

ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ MG ಹೆಕ್ಟರ್ ಕಾರು ನಿರ್ಮಾಣ!...

 ಎಂಜಿ ಮೋಟಾರ್ ಇಂಡಿಯಾ ಈಗಾಗಲೇ ನಾಗ್ಪುರದ ನಾಂಗಿಯಾ ಆಸ್ಪತ್ರೆ, ವಡೋದರದ GMERS ಆಸ್ಪತ್ರೆ ಮತ್ತು ಗುಜರಾತ್‌ನ CHC ಆಸ್ಪತ್ರೆಗೆ  ಆ್ಯಂಬುಲೆನ್ಸ್ ಗಳನ್ನು ನೀಡಿದೆ. ಎಂಜಿ ಮೋಟಾರ್ ಇಂಡಿಯಾ ಗುಜರಾತ್ ನಲ್ಲಿನ ದೇವ್ ನಂದನ್ ಗ್ಯಾಸಸ್ ಪ್ರೈ.ಲಿ.ಯಂತಹ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಆಮ್ಲಜನಕ ಉತ್ಪಾದನೆಯನ್ನು ಶೇ.36ರಷ್ಟು ಹೆಚ್ಚಿಸಲು ನೆರವಾಗಿದೆ. ಇದು ಇತ್ತೀಚೆಗೆ ಗುರುಗ್ರಾಮ್ ನಲ್ಲಿ ರೋಗಿಗಳಿಗೆ 200 ಹಾಸಿಗೆಗಳನ್ನು ದೇಣಿಗೆ ನೀಡಿದೆ.

Follow Us:
Download App:
  • android
  • ios