ಮಾರುತಿ ಸುಜುಕಿಯಿಂದ ಮತ್ತೊಂದು CNG ಕಾರು ಬಿಡುಗಡೆ VXI ಹಾಗೂ ZXI ವೇರಿಯೆಂಟ್ ಕಾರು ಲಭ್ಯ ನೂತನ ಕಾರಿನ ಬೆಲೆ 8.14 ಲಕ್ಷ ರೂಪಾಯಿಂದ ಆರಂಭ

ನವದೆಹಲಿ(ಮಾ.08): ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದೆ. ಪರ್ಯಾವಾಗಿ ಹಾಗೂ ಪರಿಸರಕ್ಕೆ ಪೂರಕವಾಗ ಸಿಎನ್‌ಜಿ ವಾಹನಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಹೀಗಾಗಿ ಭಾರತದ ಬಹುತೇಕ ಆಟೋಮೊಬೈಲ್ ಕಂಪನಿಗಳು ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಮಾರುತಿ ಸುಜುಕಿ ಮತ್ತೊಂದು ಸಿಎನ್‌ಜಿ ಕಾರು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಡಿಸೈರ್ ಇದೀಗ ಸಿಎನ್‌ಜಿ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

VXI ಹಾಗೂ ZXI ಎಂಬ ಎರಡು ವೇರಿಯೆಂಟ್‌ನಲ್ಲಿ ಮಾರುತಿ ಸುಜುಕಿ ಡಿಸೈರ್ ಸಿಎನ್‌ಜಿ ಕಾರು ಲಭ್ಯವಿದೆ. VXI ಕಾರಿನ ಬೆಲೆ 8.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ZXI ಕಾರಿನ ಬೆಲೆ 8.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮಾರುತಿ ಡಿಸೈರ್ ಕಾರಿನ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗಿದೆ. ಹೀಗಾಗಿ ಕಾರು ಪ್ರಿಯರು ಇದೀಗ ಸಿಎನ್‌ಜಿ ಕಾರಿನತ್ತ ಮೊರೆ ಹೋಗಿದ್ದಾರೆ.

Tata Car sales ಒಂದು ತಿಂಗಳಲ್ಲಿ 3,000 ಟಾಟಾ CNG ಕಾರು ಮಾರಾಟ, ಹೊಸ ದಾಖಲೆ!

ಮಾರುತಿ ಡಿಸೈರ್ CNG ಕಾರು 77 Ps ಪವರ್ ಹಾಗೂ 98.5 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. CNG ಕಾರು ಪ್ರತಿ ಕೆಜಿ CNGಗೆ 31.12 ಕಿ.ಮೀ ಮೈಲೇಜ್ ನೀಡಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ಮೈಲೇಜ್ ಆಗಿದೆ. ಇನ್ನು ಪ್ರತಿ ಕೆಜಿ CNG ಬೆಲೆ 60 ರೂಪಾಯಿ ಆಸುಪಾಸಿನಲ್ಲಿದೆ. ಇದೇ ಪೆಟ್ರೋಲ್ ಎಂಜಿನ್ ಕಾರು 90 Ps ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಭಾರತದಲ್ಲಿ ಸಿಎನ್‌ಜಿ ಕಾರಿನ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ಟಿಯಾಗೋ ಹಾಗೂ ಟಿಗೋರ್ ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ಆದರೆ ಭಾರತದಲ್ಲಿ ಸಿಎನ್‌ಜಿ ಕಾರಿನಲ್ಲಿ ಮಾರುತಿ ಸುಜುಕಿ ಹೆಚ್ಚಿನ ಆಯ್ಕೆಗಳನ್ನು ನೀಡಿದೆ. ಮಾರುತಿ ಸುಜುಕಿ ಈಗಾಗಲೇ ಅಲ್ಟೋ, ವ್ಯಾಗನರ್, ಸೆಲೆರಿಯೋ, ಎಸ್ ಪ್ರೆಸ್ಸೋ, ಎರ್ಟಿಗಾ, ಇಕೋ ಕಾರುಗಳನ್ನು ಸಿಎನ್‌ಜಿ ರೂಪದಲ್ಲಿ ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದೀಗ ಡಿಸೈರ್ ಕಾರು ಕೂಡ ಸೇರಿಕೊಂಡಿದೆ.

ಕೊರೋನಾ ಸಂಕಷ್ಟದಲ್ಲಿ ದಾಖಲೆ ಬರೆದ ಮಾರುತಿ ವ್ಯಾಗನಆರ್ CNG ಕಾರು!

ಇಂದೋರ್‌ನಲ್ಲಿದೆ ಏಷ್ಯಾದ ಅತಿದೊಡ್ಡ ಜೈವಿಕ ಸಿಎನ್‌ಜಿ ಘಟಕ 
ಬೃಹತ್‌ ನಗರಗಳಲ್ಲಿನ ತ್ಯಾಜ್ಯವನ್ನೇ ಬಳಸಿಕೊಂಡು ಜೈವಿಕ- ಸಿಎನ್‌ಜಿ ಉತ್ಪಾದಿಸುವ, ಗುಣಮಟ್ಟದ ಸಾವಯವ ರಸಗೊಬ್ಬರ ತಯಾರಿಸುವ ಏಷ್ಯಾದಲ್ಲೇ ಅತಿದೊಡ್ಡ ‘ಗೋಬರ್‌- ಧನ್‌ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.ಇಂದೋರ್‌ ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಪೈಕಿ ಹಸಿ ತ್ಯಾಜ್ಯ ಬೇರ್ಪಡಿಸಿ ಅದನ್ನು ಈ ಘಟಕಕ್ಕೆ ವರ್ಗಾಯಿಸಲಾಗುವುದು. 150 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಘಟಕವು ನಿತ್ಯ 17000 ಕೆಜಿ ಸಿಎನ್‌ಜಿ ಮತ್ತು 100 ಟನ್‌ಗಳಷ್ಟುಸಾವಯವ ರಸಗೊಬ್ಬರ ಉತ್ಪಾದಿಸಬಲ್ಲದು. ಈ ಕ್ರಮದಿಂದಾಗಿ ವಾತಾವರಣಕ್ಕೆ ಹಸಿರು ಮನೆ ಅನಿಲ ಬಿಡುಗಡೆ ಕಡಿಮೆಯಾಗುವುದರ ಜೊತೆಗೆ, ಬಳಕೆಗೆ ಸ್ವಚ್ಛ ಇಂಧನ ಲಭ್ಯವಾಗಲಿದೆ.

ರಾಜ್ಯದಲ್ಲಿ ಓಡುತ್ತಿದೆ ಸಿಎನ್‌ಜಿ ಬಸ್
ರಾಜ್ಯದ ಮೊದಲ ಸಿಎನ್‌ಜಿ ಇಂಧನ ಚಾಲಿತ ಖಾಸಗಿ ಬಸ್ಸುಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿದೆ. ಬುಧವಾರದಿಂದ ಓಡಾಡಲಿವೆ. ನಾಯಕನಹಟ್ಟಿಯ ಉದ್ಯಮಿ ಜೆ.ಆರ್‌.ರವಿಕುಮಾರ್‌ ಅವರು ಎರಡು ಸಿಎನ್‌ಜಿ ಬಸ್‌ಗಳನ್ನು ಖರೀದಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಖಾಸಗಿ ಬಸ್ಸು ಹೊಂದಿರುವ ರವಿಕುಮಾರ್‌ ಅವರಿಗೆ ಡೀಸೆಲ್‌ ಬೆಲೆ ಹಚ್ಚಳದಿಂದಾಗಿ ಬಸ್ಸುಗಳನ್ನು ಓಡಿಸುವುದೇ ಸಂಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾದಾಗ ಸಿಎನ್‌ಜಿ ಬಸ್ಸು ಓಡಿಸುವ ಐಡಿಯಾ ಹೊಳೆಯಿತು. ತಕ್ಷಣವೇ ಕಾರ್ಯೋನ್ಮುಖರಾಗಿ ಈಷರ್‌ ಕಂಪನಿಯ 2 ಚಾಸಿಗಳನ್ನು ಖರೀದಿಸಿದ್ದಾರೆ. ತಮಿಳುನಾಡಿನ ಕರೂರ್‌ನಲ್ಲಿ ಬಾಡಿ ಕಟ್ಟಿಸಿದ ಈ ಬಸ್‌ಗಳು ಎರಡು ದಿನಗಳ ಹಿಂದೆಯಷ್ಟೇ ಚಿತ್ರದುರ್ಗದ ಪ್ರಾದೇಶಿಕ ಸಾರಿಗೆæ ಇಲಾಖೆ ಕಚೇರಿಯಲ್ಲಿ ನೋಂದಣಿ ಆಗಿವೆ. ಬುಧವಾರದಿಂದ ನಾಯಕನಹಟ್ಟಿ-ಶಿವಮೊಗ್ಗ ಹಾಗೂ ನಾಯಕನಹಟ್ಟಿ-ಬೆಂಗಳೂರು ನಡುವೆ ಈ ಬಸ್ಸುಗಳ ಸಂಚರಿಸಲಿವೆ. ಬಸ್ಸಿನ ಬೆಲೆ 29 ಲಕ್ಷ ರು. ಬಸ್ಸಿನಲ್ಲಿ 20 ಕೆ.ಜಿ. ತೂಕದ ಎರಡು ಹಾಗೂ 10 ಕೆ.ಜಿ. ತೂಕದ ಎರಡು ಗ್ಯಾಸ್‌ ಟ್ಯಾಂಕ್‌ಗಳಿವೆ. 1 ಕೆಜಿ ಗ್ಯಾಸ್‌ಗೆ 6-8 ಕಿ.ಮೀ ಮೈಲೇಜ್‌ ಬರುತ್ತದೆ. 40 ಪ್ರಯಾಣಿಕರನ್ನು ಹೊತ್ತೊಯ್ಯುವ ಈ ಬಸ್‌ ಹೊಗೆಯುಗುಳದ ಪರಿಸರ ಸ್ನೇಹಿ ಬಸ್‌.