Asianet Suvarna News Asianet Suvarna News

ಭಾರತದಲ್ಲಿ ವೋಕ್ಸ್ವ್ಯಾಗನ್ ವೈರ್ಟುಸ್ ಬುಕಿಂಗ್‌ ಆರಂಭ

ವೋಕ್ಸ್ವ್ಯಾಗನ್ಇಂಡಿಯಾ ಇಂದು ತನ್ನ ಗ್ಲೋಬಲ್ ಸೆಡಾನ್‌ (Global Sedan) ವೋಕ್ಸ್ವ್ಯಾಗನ್ ವೈರ್ಟಸ್‌ (Volkswagen Virtus) ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಬುಕಿಂಗ್‌ ಆರಂಭಗೊಂಡಿದೆ. ಈ ಸೆಡಾನ್‌ ಮೇ ತಿಂಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

Volkswagen India unveils Virtus bookings open
Author
Bengaluru, First Published Mar 9, 2022, 6:12 PM IST

ವೋಕ್ಸ್ವ್ಯಾಗನ್ ಇಂಡಿಯಾ ಇಂದು ತನ್ನ ಗ್ಲೋಬಲ್ ಸೆಡಾನ್ (Global Sedan) ವೋಕ್ಸ್ವ್ಯಾಗನ್ ವೈರ್ಟಸ್ (Volkswagen Virtus) ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಬುಕಿಂಗ್‌ ಆರಂಭಗೊಂಡಿದೆ. ಈ ಸೆಡಾನ್‌ ಮೇ ತಿಂಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ವಿಶಾಲ ವಿನ್ಯಾಸ ಹೊಂದಿರುವ ಹೊಸ ವೋಕ್ಸ್ವ್ಯಾಗನ್ ವೈರ್ಟಸ್ ಡೈನಮಿಕ್  (Dynamic) ಮತ್ತು ಎಮೋಷನಲ್ (Emotional)  ವಿನ್ಯಾಸ ಇದೆ. ಇಂಡಿಯಾ 2.0 ಪ್ರಾಜೆಕ್ಟ್ನಡಿ  ವೋಕ್ಸ್ವ್ಯಾಗನ್ ವೈರ್ಟಸ್ ಎರಡನೇ ಉತ್ಪನ್ನವಾಗಿದ್ದು, ಶೇ. 95ರಷ್ಟು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಎಂಕ್ಯುಬಿ ಎಒ ಇನ್ ಪ್ಲಾಟ್ಫಾರಂನಡಿ ತಯಾರಿಸಲಾಗಿದೆ. ಈ ಪ್ಲಾಟ್ಫಾರಂನ ಫ್ಲೆಕ್ಸಿಬಿಲಿಟಿಯಿಂದಾಗಿ ಹೊಸ ವೈರ್ಟಸ್ ಈ ವಿಭಾಗದಲ್ಲಿಯೇ ಅತಿ ಉದ್ದನೆಯ ಕಾರಾಗಿದ್ದು  4,561 ಎಂಎಂ ಉದ್ದ ಇದೆ. ವಿಶಾಲವಾದ ಕ್ಯಾಬಿನ್ ಮತ್ತು  521 ಲೀಟರ್ ಬೂಟ್ಸ್ಪೇಸ್  ಹೊಂದಿದೆ.

“ವೋಕ್ಸ್ವ್ಯಾಗನ್ ವೈರ್ಟಸ್,  ವೋಕ್ಸ್ವ್ಯಾಗನ್ ಬ್ರಾಂಡ್ನ ಗ್ಲೋಬಲ್ ಸೆಡಾನ್ ಸಂಸ್ಕೃತಿಯನ್ನು ಭಾರತಕ್ಕೆ ಪರಿಚಯಿಸಲಿದೆ. ವೋಕ್ಸ್ವ್ಯಾಗನ್ ವಿಶ್ವಾದ್ಯಂತ ಕಳೆದ 61 ವರ್ಷಗಳಲ್ಲಿ 129 ಸೆಡಾನ್ (Sedan) ಮಾದರಿಗಳನ್ನು ಮಾರಾಟ ಮಾಡಿದೆ. ಜಾಗತಿಕ ಕಾರ್ಲೈನ್ ಆಗಿರುವ ವೋಕ್ಸ್ವ್ಯಾಗನ್, ವೈರ್ಟಸ್ ಮೂಲಕ ಭಾರತದಲ್ಲಿ ಪ್ರೀಮಿಯಂ ಮಿಡ್ಸೈಜ್ ಕಾರು ವಿಭಾಗದಲ್ಲಿ ಹೊಸ ಮಾನದಂಡ ಸೃಷ್ಟಿಸಲಿದೆ” ಎಂದು ವೋಕ್ಸ್ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಆಶಿಷ್ ಗುಪ್ತಾ ಸಂತಸ ವ್ಯಕ್ತಪಡಿಸಿದರು.

ಟಿಎಸ್ಐ ಟೆಕ್ನಾಲಜಿ ಹೊಂದಿರುವ ಹೊಸ ವೈರ್ಟಸ್ ಆಕರ್ಷಕ ಆಕ್ಟಿವ್ ಸಿಲಿಂಡರ್ ಟೆಕ್ನಾಲಜಿ (ಆಕ್ಟ್) ಹೊಂದಿದ್ದು, 1.5 ಲೀಟರ್ ಟಿಎಸ್ಐ (TSA) ಇವೊ (EVO) ಎಂಜಿನ್ ಮತ್ತು ಐಡಲ್ ಸ್ಟಾರ್ಟ್/ ಸ್ಟಾಪ್ ಸೌಲಭ್ಯ ಎರಡನ್ನೂ ಒಂದಿರುವ 1.01 ಟಿಎಸ್ಐ (TSA) ಎಂಜಿನ್ ನೊಂದಿಗೆ ಬರಲಿವೆ. 6 ಸ್ಪೀಡ್ ಮ್ಯಾನುವಲ್ (Manual), 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಅಥವಾ 7 ಸ್ಪೀಡ್ ಡಿಎಸ್ಜಿ (DSG) ಟ್ರಾನ್ಸ್ಮಿಷನ್ ಆಯ್ಕೆಗಳು ದೊರೆಯಲಿವೆ.

ಹೊಸ ಕಾರಿನ ಜಾಗತಿಕ ಪ್ರೀಮಿಯರ್

ಸ್ಟೈಲಿಷ್ ಇಂಟೀರಿಯರ್ ಹೊಂದಿರುವ ವೋಕ್ಸ್ವ್ಯಾಗನ್ ವೈರ್ಟಸ್ ಕಾರಿನಲ್ಲಿ 20.32 ಸೆ.ಮೀ. ಅಳತೆಯ ಡಿಜಿಟಲ್ ಕಾಕ್ಪಿಟ್, ಆಪಲ್ ಕಾರ್ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಮೂಲಕ ವೈರ್ಲೆಸ್ ಆಪ್ ಕನೆಕ್ಟಿವಿಟಿ ಹೊಂದಿರುವ 25.65 ಸೆ.ಮೀ ಉದ್ದದ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಅತ್ಯುತ್ತಮ ಧ್ವನಿ ವ್ಯವಸ್ಥೆ ಹೊಂದಿರುವ 8 ಸ್ಪೀಕರ್, ವೈರ್ಲೆಸ್ ಮೊಬೈಲ್ ಚಾರ್ಜಿಂಗ್, ಮೈ ವೋಕ್ಸ್ವ್ಯಾಗನ್ ಕನೆಕ್ಟ್ ಆಪ್ ಇತ್ಯಾದಿಗಳಂಥ ಅನೇಕ ಹೊಸ ತಂತ್ರಜ್ಞಾನ, ಕನೆಕ್ಟಿವಿಟಿ ಮತ್ತು ಮನೋರಂಜನೆಯ ಫೀಚರ್ಗಳಿವೆ.

ವೋಕ್ಸ್ವ್ಯಾಗನ್ ವೈರ್ಟಸ್‌ ಸುರಕ್ಷತೆಗೆ ಆದ್ಯತೆ ನೀಡಿದ್ದು,  ಹೊಸ  ವೈರ್ಟಸ್ನಲ್ಲಿ 40ಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಫೀಚರ್ಗಳಿವೆ. ಸೆಡಾನ್ ಕಾರಿನಲ್ಲಿ 6 ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ), ಮಲ್ಟಿ ಕೊಲಿಷನ್ ಬ್ರೇಕ್, ಹಿಲ್ ಹೋಲ್ಡ್ ಕಂಟ್ರೊಲ್, ಎಲ್ಡಿಆರ್ಎಲ್ಯುಕ್ತ ಎಲ್ಇಡಿ ಹೆಡ್ಲ್ಯಾಂಪ್, ಐಎಸ್ಒಫಿಕ್ಸ್, ಹಿಂಬದಿಯಲ್ಲಿ ಮೂರು ಹೆಡ್ರೆಸ್ಟ್ಗಳು, ಟೈರ್ ಪ್ರೆಷರ್ ಡಿಫ್ಲೇಷನ್ ವಾರ್ನಿಂಗ್, ರಿವರ್ಸ್ ಕ್ಯಾಮರ ಈ ಫೀಚರ್ಗಳಲ್ಲಿ ಕೆಲವು.

ಮಾರುತಿ ಸುಜುಕಿ ಹೊಸ ಕಾರು

ಹೊಸ ವೈರ್ಟಸ್ ಅತ್ಯಾಕರ್ಷಕ ಮತ್ತು ಉತ್ಸಾಹ ಹೆಚ್ಚಿಸುವ ಎಕ್ಸ್ಟೀರಿಯರ್ ಬಣ್ಣಗಳಲ್ಲಿವೆ. ವೈಲ್ಡ್ ಚೆರ್ರಿ ರೆಡ್, ಕಾರ್ಬನ್ ಸ್ಟೀಲ್ ಗ್ರೇ, ರಿಫ್ಲೆಕ್ಸ್ ಸಿಲ್ವರ್, ಕುರ್ಕುಮಾ ಯೆಲ್ಲೋ, ಕ್ಯಾಂಡಿ ವೈಟ್ ಮತ್ತು ರೈಸಿಂಗ್ ಬ್ಲೂ ಬಣ್ಣಗಳಲ್ಲಿ ಇದು ದೊರೆಯಲಿದೆ. ವೋಕ್ಸ್ವ್ಯಾಗನ್ ವೈರ್ಟಸ್ನ ಜಾಗರಿಕ ಪ್ರೀಮಿಯರ್ನೊಂದಿಗೆ ಪ್ರೀಬುಕಿಂಗ್ ಆರಂಭವಾಗಿದ್ದು, ಗ್ರಾಹಕರು ಭಾರತದಲ್ಲಿರುವ 151 ಸೇಲ್ಸ್ ಟಚ್ಪಾಯಿಂಟ್ಗಳಲ್ಲಿ ಮತ್ತು ವೋಕ್ಸ್ವ್ಯಾಗನ್ ಇಂಡಿಯಾದ ವೆಬ್ಸೈಟ್ನಲ್ಲಿ ಆನ್ಲೈನ್ ಬುಕಿಂಗ್ ಮಾಡಬಹುದು.

Follow Us:
Download App:
  • android
  • ios