ಸಿಂಗಲ್ ಚಾರ್ಜ್‌ಗೆ 1,000 ಕಿ.ಮೀ ಮೈಲೇಜ್, ಬೆಂಗಳೂರಿನಲ್ಲಿ ಬೆಂಜ್ EQXX ಇವಿ ಅನಾವರಣ!
ಮರ್ಸಿಡೀಸ್ ಬೆಂಜ್ ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ವಿಶೇಷ ಅಂದರೆ ಬೆಂಗಳೂರಿನ MBRDI ಕೇಂದ್ರದಲ್ಲಿ ಈ ಕಾರನ್ನು ಅನಾವರಣ ಮಾಡಲಾಗಿದೆ. ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಈ ಕಾರು ಅನಾವರಣ ಮಾಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 1,000 ಕಿಲೋಮೀಟರ್ ಮೈಲೇಜ್, ರೂಫ್ ಟಾಪ್‌ನಲ್ಲಿ ಸೋಲಾರ್, ಅತ್ಯಂತ ಆಕರ್ಷ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಬೆಂಗಳೂರು(ಡಿ.14): ಮರ್ಸಡೀಸ್ ಬೆಂಜ್ ಇದೀಗ ಭಾರತ ಹಾಗೂ ವಿದೇಶಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಮರ್ಸಡಿಸ್ ಬೆಂಜ್ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಮರ್ಸಡೀಸ್ ಬೆಂಜ್ 3ನೇ ಅವೃತ್ತಿಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಈ ಹೊಚ್ಚ ಹೊಸ ಕಾರು ಅನಾವರಣ ಮಾಡಲಾದಿದೆ. ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 1,000 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರ ಪ್ರಯೋಗದ ವೇಳೆ 1,000 ಕಿ.ಮೀ ಪ್ರಯಾಣಿಸದ ಬಳಿಕ ಇನ್ನೆಷ್ಟು ದೂರ ಕ್ರಮಿಸಬಹುದು ಅನ್ನೋದು ಪರಿಶೀಲಿಸಿದಾಗ ಮತ್ತೆ ಸರಿಸುಮಾರು 300 ಕಿ.ಮೀ ದೂರ ಪ್ರಯಾಣಿಸುವ ಚಾರ್ಜ್ ಬಾಕಿ ಉಳಿದಿತ್ತು. ಅಂದರೆ 1,300 ಕಿ.ಮೀ ಮೈಲೇಜ್ ಆನ್ ರೋಡ್ ಸಿಕ್ಕಿದೆ. ಸರಾಸರಿ 80 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಕಾರಿನ ಮೈಲೇಜ್ ರೇಂಜ್ ಪರಿಶೀಲಿಸಲಾಗಿದೆ.
ಈ ಹೊಚ್ಚ ಕಾರಿನ ಅಭಿವೃದ್ಧಿಯಲ್ಲಿ ಭಾರತದಲ್ಲಿರುವ ಮರ್ಸಡೀಸ್ ಬೆಂಜ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ(MBRDI) ಪ್ರಮುಖ ಪಾತ್ರ ನಿರ್ವಹಿಸಿದೆ. ವಿಶೇಷ ಅಂದರೆ MBRDI ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಇದರ ವಿಭಾಗ ಪುಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಎಂಜಿನೀಯರ್‌ಗಳ ವಿಶೇಷ ಕೂಡುಗೆ ಕಾರಿನಲ್ಲಿದೆ.
ಮೇಡ್ ಇನ್ ಇಂಡಿಯಾ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆ, 857 ಕಿ.ಮೀ ಮೈಲೇಜ್!
ಸಾಮಾನ್ಯವಾಗಿ ಕಚೇರಿ ಕೆಲಸ ಸೇರಿದಂತೆ ಇತರ ಕಾರಣಗಳಿಗೆ ಬಳಸುವವರು ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು ಒಂದು ತಿಂಗಳು ಈ ಕಾರನ್ನು ಬಳಸಬಹುದು. ಕಾರಿನ ರೂಫ್ ಟಾಪ್‌ನಲ್ಲಿ ಸೋಲಾರ್ ಪ್ಯಾನೆಲ್ ಅಳಡಿಸಲಾಗಿದೆ. ಈ ಸೋಲಾರ್ ಪವರ್‌ನಿಂದ ಕಾರಿನ ಲೈಟ್ಸ್, ಇನ್ಫೋಟೈನ್ಮೆಂಟ್ ಸಿಸ್ಟಮ್ ಚಾಲಿತವಾಗುತ್ತದೆ. ಇದರಿಂದ 25 ಕಿಲೋಮೀಟರ್ ಹೆಚ್ಚುವರಿ ಮೈಲೇಜ್ ಸಿಗಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿದೆ. ಜೊತೆಗೆ ಅತ್ಯಂತ ಆಕರ್ಷಕ ಡಿಸೈನ್ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ರಸ್ತೆ ಸುರಕ್ಷತಾ ಸಪ್ತಾಹ
ಮರ್ಸಿಡೀಸ್ ಬೆಂಜ್ 3ನೇ ಆವೃತ್ತಿಯ ರಕ್ಷ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಯಶಸ್ವಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಗೆ ಯಾವೆಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು? ಮೂಲಭೂತ ಸೌಕರ್ಯಗಳನ್ನು ಹೇಗೆ ಹೆಚ್ಚಿಸಬೇಕು? ನಾಗರೀಕರ ಸಹಕಾರ ಹೇಗಿರಬೇಕು ಅನ್ನೋದರ ಕುರಿತು ಚರ್ಚೆ ಮಾಡಲಾಗಿದೆ. ವಿಶೇಷವಾಗಿ ಮರ್ಸಿಡೀಸ್ ಬೆಂಜ್ ಪ್ರಯಾಣಿಕನ ಸುರಕ್ಷತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಲಾಯಿತು.
ಹೊಸ ತಲೆಮಾರಿನ ಮರ್ಸಿಡೀಸ್ ಬೆಂಝ್ ಮೇಬ್ಯಾಕ್ ಎಸ್ ಕ್ಲಾಸ್ ಬಿಡುಗಡೆ
ಗರಿಷ್ಠ ಸುರಕ್ಷತೆಯ ಕಾರು, ಕಾರಿನಲ್ಲಿ ಬಳಸಿರುವ ಮೆಟಲ್, ಅಪಘಾತವಾದ ಅದರ ತೀವ್ರತೆಯನ್ನು ಒಳಗಿನ ಪ್ರಯಾಣಿಕರಿಗೆ ತಟ್ಟದಂತೆ ಮಾಡಲು ಇರುವ ವ್ಯವಸ್ಥೆ, 10 ಏರ್‌ಬ್ಯಾಗ್ ಮೂಲಕ ಗರಿಷ್ಠ ಸುರಕ್ಷತೆ, ಎಮರ್ಜೆನ್ಸಿ ಕಾಲ್ ಸೇರಿದಂತೆ ಎಲ್ಲಾ ಸುರಕ್ಷತಾ ವಿಧಾನಗಳನ್ನು ಮರ್ಸಿಡೀಸ್ ಬೆಂಜ್ ಪಾಲಿಸುತ್ತಿದೆ.
ರಸ್ತೆ ಸುರಕ್ಷತೆ ಕುರಿತು ಈಗಾಗಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಾಹನ ಚಲಾಯಿಸುವಾಗ ಅನುಸರಿಸಬೇಕಾದ ವಿಧಾನಗಳ ಕುರಿತು ಅರಿವು ಮೂಡಿಸಲಾಗಿದೆ. ಮೂರನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರವನ್ನು ಈಗಾಗಲೇ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದೇವೆ. ದೇಶದ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರವನ್ನು ಆಯೋಜಿಸುತ್ತಿದ್ದೇವೆ ಎಂದು MBRDI ನಿರ್ದೇಶಕ ಹಾಗೂ ಸಿಇಒ ಮನು ಸಾಲೆ ಹೇಳಿದ್ದಾರೆ.