ಹೊಸ ತಲೆಮಾರಿನ ಮರ್ಸಿಡೀಸ್ ಬೆಂಝ್ ಮೇಬ್ಯಾಕ್‌ ಎಸ್ ಕ್ಲಾಸ್ ಬಿಡುಗಡೆ

*2.5 ಕೋಟಿ ರೂ.ಗಳ ಕಾರು
*ಸ್ಥಳೀಯವಾಗಿ ಜೋಡಿಸಿದ ಕಾರು
*2023 ರವರೆಗೆ ಬುಕಿಂಗ್‌ ಪೂರ್ಣ

2022 Mercedes new generation Maybach S Class launched in India

Auto Desk: ಮರ್ಸಿಡೀಸ್-ಬೆನ್ಸ್ (Mercedes-Benz) ಇಂಡಿಯಾ ಹೊಸ ತಲೆಮಾರಿನ ಮರ್ಸಿಡೀಸ್ ಮೇ ಬ್ಯಾಕ್ ಎಸ್ ಕ್ಲಾಸ್ ಲಿಮೋಸಿನ್ ( Mercedes-Maybach S-ಕ್ಲಾಸ್ Limosin) ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಎಸ್-ಕ್ಲಾಸ್ ಮೇಬ್ಯಾಕ್ ದರ 2.5 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ. ಎಸ್80 4 ಮ್ಯಾಟಿಕ್ ಗೆ 3.2 ಕೋಟಿ  ರೂ.( ಎಕ್ಸ್-ಶೋರೂಮ್) ವರೆಗೆ ಇರುತ್ತದೆ. ಇದರಲ್ಲಿ ಮೊದಲನೆಯದು ಸಂಪೂರ್ಣವಾಗಿ ಸ್ಥಳೀಯವಾಗಿ ಜೋಡಿಸಲ್ಪಟ್ಟ ವಾಹನವಾಗಿದೆ., ಎರಡನೆಯದು ಸಂಪೂರ್ಣ ನಿರ್ಮಿಸಲಾದ ಘಟಕವಾಗಿ (CBU) ಭಾರತಕ್ಕೆ ಆಗಮಿಸುತ್ತದೆ. ಹೊಸ ಎಸ್-ಕ್ಲಾಸ್ ಮೇಬ್ಯಾಕ್ 2020ರ ನವೆಂಬರ್ನಲ್ಲಿ ಜಾಗತಿಕವಾಗಿ ಪರಿಚಯಿಸಲ್ಪಟ್ಟಿತ್ತು.

ಹೊಸ ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಹೆಚ್ಚು ಲೆಗ್ರೂಮ್, ಹೆಚ್ಚು ಸೌಕರ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಪವರ್ಟ್ರೇನ್ ಅನ್ನು ನೀಡುತ್ತದೆ. ಎಸ್680ಗೆ ಭಾರತದಲ್ಲಿ  ಭಾರಿ ಬೇಡಿಕೆಯಿದ್ದು, 2023 ರವರೆಗೆ ಬುಕಿಂಗ್ ಆಗಿದೆ ಎಂದು ಮರ್ಸಿಡೀಸ್ ಬೆನ್ಸ್ ಇಂಡಿಯಾ ದೃಢಪಡಿಸಿದೆ.

ಇದನ್ನೂ ಓದಿಕೇರಳದ ಉದ್ಯೋಗಿಗೆ ಮರ್ಸಿಡಿಸ್‌ ಬೆಂಜ್‌ ಕಾರು ಗಿಫ್ಟ್ ನೀಡಿದ ಮಾಲೀಕ

ಸ್ಟ್ಯಾಂಡರ್ಡ್ ಎಸ್-ಕ್ಲಾಸ್ಗೆ ಹೋಲಿಸಿದರೆ, ಹೊಸ-ಪೀಳಿಗೆಯ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ 180 ಎಂಎಂ ಉದ್ದದ ವೀಲ್ಬೇಸ್ ಹೊಂದಿದೆ. ಈ ಕಾರು ಸುಮಾರು 5.5 ಮೀಟರ್ ಉದ್ದವಿದೆ  ಮತ್ತು ವಿದ್ಯುತ್ ಚಾಲಿತವಾಗಿ ಕಾರ್ಯನಿರ್ವಹಿಸಬಹುದಾದ ಹಿಂಬದಿಯ ಬಾಗಿಲುಗಳನ್ನು ಹೊಂದಿದೆ. ಇದರಲ್ಲಿ ಚಾಲಕರು 'ಡೋರ್ಮೆನ್' ವೈಶಿಷ್ಟ್ಯದೊಂದಿಗೆ ಮುಂಭಾಗದ ಸೀಟಿನಿಂದಲೇವ  ಎಲ್ಲಾ ಬಾಗಿಲುಗಳನ್ನು ನಿಯಂತ್ರಿಸಬಹುದಾಗಿದೆ.

ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲಿಸಿದರೆ, ಹೊಸ ಮರ್ಸಿಡೀಸ್ ಮೇ ಬ್ಯಾಕ್ S-ಕ್ಲಾಸ್ ಕ್ರೋಮ್ಡ್ ಫಿನಿಷ್, ವಿಶಿಷ್ಟವಾದ ಬಾನೆಟ್, ಉದ್ದ ಸ್ಲ್ಯಾಟ್ಗಳು ಮತ್ತು ಕ್ರೋಮ್ ಸುತ್ತುವರೆದಿರುವ ಮೇಬ್ಯಾಕ್ ಗ್ರಿಲ್ ಪಡೆಯುತ್ತದೆ. ಎಲ್ಇಡಿ ಡಿಜಿಟಲ್ ಹೆಡ್ಲೈಟ್ಗಳು ಕೂಡ ಇದರ ಆಕರ್ಷಣೆಯಾಗಿರಲಿದೆ. ಇದು ಸಿ-ಪಿಲ್ಲರ್ನಲ್ಲಿ ಮೇಬ್ಯಾಕ್ ಲೋಗೋವನ್ನು ಸಹ ಹೊಂದಿದೆ.

ಇದರ ಸಿಗ್ನೇಚರ್ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಕೊಡುಗೆಯಲ್ಲಿ ಒಂದು ಆಯ್ಕೆಯಾಗಿ ಉಳಿಯಲಿದೆ. ಕಾರಿನ 19-ಇಂಚಿನ ಮೇಬ್ಯಾಕ್ ಅಲಾಯ್ ಚಕ್ರಗಳು ರೆಟ್ರೊ-ಮೊನೊಬ್ಲಾಕ್ ವಿನ್ಯಾಸದಲ್ಲಿದ್ದು, 20 ಅಥವಾ 21 ಇಂಚಿನ ಚಕ್ರಗಳಿಗೆ ಅಪ್ಗ್ರೇಡ್ ಮಾಡುವ ಆಯ್ಕೆಯೂ ಇದೆ.

ಇದನ್ನೂ ಓದಿ: Solar Powered Car 1,000 ಕಿ.ಮೀ ಮೈಲೇಜ್, ಸೋಲಾರ್ ಚಾಲಿತ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು ಅನಾವರಣ!

ಮರ್ಸಿಡೀಸ್ ಮೇ ಬ್ಯಾಕ್ S-ಕ್ಲಾಸ್ನಲ್ಲಿನ ಟೆಕ್ ಅಪ್ಗ್ರೇಡ್ಗಳು ಪ್ರತಿ ಆಸನಕ್ಕೆ ಬಹು-ಕಾಂಟೂರ್ ಮಸಾಜ್,  ಆರ್ಮ್ರೆಸ್ಟ್ಗಳು, ಡೋರ್ ಪ್ಯಾನೆಲ್ಗಳು, ಸೀಟ್ ವೆಂಟಿಲೇಶನ್ ಮತ್ತು ಹಿಂಬದಿ ಸೀಟ್ ಫುಟ್ರೆಸ್ಟ್ಗಾಗಿ ಕ್ಯಾಫ್ ಮಸಾಜ್ ಅನ್ನು ಸಹ ಒಳಗೊಂಡಿದೆ. ಪೂರ್ಣ-ಉದ್ದದ ಸೆಂಟರ್ ಕನ್ಸೋಲ್,  ಟ್ರೇ ಟೇಬಲ್ಗಳು, ಹಿಂಬದಿ-ಸೀಟಿನ ಕೂಲರ್ ಮತ್ತು ಎಕ್ಸಿಕ್ಯುಟಿವ್ ರಿಯರ್ ಸೀಟ್ ಪ್ಯಾಕೇಜ್ ಅನ್ನು ಗ್ರಾಹಕರು ಆಯ್ಕೆ ಮಾಡಬಹುದು.

ಈ ಮಾದರಿಯಲ್ಲಿ ಹೊಸ ತಲೆಮಾರಿನ MBUX ಇನ್ಫೋಟೈನ್ಮೆಂಟ್ ಸಿಸ್ಟಂ ಇದೆ. ಇದರಲ್ಲಿ ಮುಂಭಾಗ ಮತ್ತು ಮಧ್ಯದಲ್ಲಿ 12.8-ಇಂಚಿನ ಡಿಸ್ಪ್ಲೇ, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎರಡು 11.6-ಇಂಚಿನ ಹಿಂಬದಿ-ಸೀಟ್ ಎಂಟರ್ಟೈನ್ಮೆಂಟ್ ಮಾನಿಟರ್ಗಳು ಮತ್ತು ಹಿಂಭಾಗದ ನಡುವೆ ಇರುವ ತೆಗೆಯಬಹುದಾದ ಟ್ಯಾಬ್ಲೆಟ್ಗಳಿವೆ.

ಇದಲ್ಲದೆ, ಹೊಸ ಎಸ್-ಕ್ಲಾಸ್ ಮೇಬ್ಯಾಕ್ ಭಾರತದಲ್ಲಿ ಎವೇಸಿವ್ ಸ್ಟೀರಿಂಗ್ ಅಸಿಸ್ಟ್ ಮತ್ತು ಕ್ರಾಸ್-ಟ್ರಾಫಿಕ್ ಫಂಕ್ಷನ್ನೊಂದಿಗೆ ಆಕ್ಟಿವ್ ಬ್ರೇಕ್ ಅಸಿಸ್ಟ್ ಪಡೆದ ಮೊದಲ ಕಾರು ಎನಿಸಿಕೊಂಡಿದೆ. ಇದರಲ್ಲಿ ಎರಡು ಬೆಲ್ಟ್ಬ್ಯಾಗ್ಗಳು ಮತ್ತು ಹಿಂಭಾಗದ ಏರ್ಬ್ಯಾಗ್ಗಳು ಸೇರಿದಂತೆ 13 ಏರ್ಬ್ಯಾಗ್ಗಳು, ಐಚ್ಛಿಕ ರಿಯರ್-ಆಕ್ಸಲ್ ಸ್ಟೀರಿಂಗ್ ಮತ್ತು ಏರ್ಮ್ಯಾಟಿಕ್ ಏರ್ ಸಸ್ಪೆನ್ಷನ್ ಸಹ ಇದೆ.

ಹೊಸ-ಪೀಳಿಗೆಯ ಮರ್ಸಿಡೀಸ್ ಮೇಬ್ಯಾಕ್ ಎಸ್ 580 ನಲ್ಲಿನ EQ ಬೂಸ್ಟ್ 48-ವೋಲ್ಟ್ -ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ನೊಂದಿಗೆ ಬರುತ್ತದೆ. ಮೋಟಾರ್ 496 bhp ಮತ್ತು 700 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.  6.0-ಲೀಟರ್ V12 ಮೋಟಾರ್ 604 bhp ಮತ್ತು 900 Nm ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ.
ಇದು ಈ ವಿಭಾಗದಲ್ಲಿರುವ  ಎಸ್-ಕ್ಲಾಸ್ ಮೇಬ್ಯಾಕ್ ವಿಭಾಗದಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಗೆ ಸ್ಪರ್ಧೆ ನೀಡಲಿದೆ.

Latest Videos
Follow Us:
Download App:
  • android
  • ios