Mercedes-AMG SL ಹೊಸ ಮಾದರಿಯೊಂದಿಗೆ ಗ್ರಾಹಕರಿಗೆ ವೈಯಕ್ತೀಕರಿಸಿದ ಲಗೇಜ್ ಬ್ಯಾಗ್‌ಗಳ ಕೊಡುಗೆ!
*ಮರ್ಸಿಡಿಸ್ ಎಎಂಜಿಯಲ್ಲಿ ವೈಯಕ್ತೀಕರಿಸಿದ ಲಗೇಜ್ ಬ್ಯಾಗ್‌ಗಳು ಲಭ್ಯ
*ಕಾರಿನ ಸೀಟಿಗೆ ಬಳಸಿದ ಚರ್ಮದಿಂದಲೇ ಬ್ಯಾಗ್‌ಗಳ ತಯಾರಿ
*ಮೂರು ಗಾತ್ರದ ಬ್ಯಾಗ್‌ಗಳು, ಮೂರು ಬಣ್ಣಗಳಲ್ಲಿ ಲಭ್ಯ
Auto Desk: ಕಾರು ಪ್ರಿಯರಿಗೆ ಐಷಾರಾಮಿ ಸೌಕರ್ಯಗಳನ್ನು ಒದಗಿಸುತ್ತಿರುವ ಮರ್ಸಿಡಿಸ್ (Mercedes) ಬೆನ್ಸ್ ಈಗ ತನ್ನ ಕಾರುಗಳಲ್ಲಿ ಪ್ರಯಾಣಿಕರಿಗೆ ವೈಯಕ್ತಿಕರಿಸಿದ ಲಗೇಜ್ ಬ್ಯಾಗ್ (Luggage Bags)ಗಳನ್ನು ಕೂಡ ನೀಡಲು ಮುಂದಾಗಿದೆ. ಇದಕ್ಕಾಗಿ ಮರ್ಸಿಡೀಸ್-ಎಎಂಜಿ (AMG) ಹಾಗೂ ಸ್ಯಾಂಟೋನಿ (Santoni) ಕಂಪನಿಗಳು ಕೈಜೋಡಿಸಿವೆ ಈ ಕಂಪನಿ ಮರ್ಸಿಡೀಸ್ ಶೀಘ್ರದಲ್ಲೇ ಬಿಡುಗಡೆಗೊಳಿಸಲಿರುವ ಮರ್ಸಿಡೀಸ್-ಎಎಂಜಿ ಎಸ್‌ಎಲ್‌ಗಾಗಿ ವಿಶೇಷ ಇಟಾಲಿಯನ್ ಚರ್ಮದ ಲಗೇಜ್ ಬ್ಯಾಗ್‌ಗಳನ್ನು ತಯರಿಸುತ್ತಿದೆ.
ಈ ಲಗೇಜ್ ಬ್ಯಾಗ್‌ಗಳಲ್ಲಿ ಮೂರು ಗಾತ್ರ ಬ್ಯಾಗುಗಳಿರಲಿದ್ದು, ಇವುಗಳನ್ನು ಮರ್ಸಿಡೀಸ್-ಎಎಂಜಿ ಎಸ್‌ಎಲ್ (SL)ನ ಸೀಟಿನ ಕವರ್‌ಗೆ ಬಳಸಿದ ನಪ್ಪಾ ಲೆದರ್‌ನಿಂದಲೇ ತಯಾರಿಸಲಾಗಿದೆ. ಮರ್ಸಿಡಿಸ್-ಎಎಂಜಿ ಎಸ್‌ಎಲ್ ಐಷಾರಾಮಿ ಕಾರು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ರೋಡ್‌ಸ್ಟರ್‌ನ(Raodster) ಬೂಟ್ ಸ್ಪೇಸ್‌ನಲ್ಲಿ ಹೊಂದಿಕೆಯಾಗುವಂತೆ ಈ ಲಗೇಜ್ ಬ್ಯಾಗ್‌ಗಳನ್ನು ತಯಾರಿಸಲಾಗಿದೆ. ಇದು ಒಂದು ಬ್ಯೂಟಿ ಕೇಸ್, ಒಂದು ಬ್ಯಾಕ್‌ಪ್ಯಾಕ್ ಮತ್ತು ಒಂದು ವೀಕೆಂಡರ್ ಬ್ಯಾಗ್‌ಗಳನ್ನು ಒಳಗೊಂಡಿದೆ.ಈ ಅತ್ಯುತ್ತಮ ಗುಣಮಟ್ಟದ ನಪ್ಪಾ ಲೆದರ್ ಬ್ಯಾಗ್‌ಗಳು ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.
ಅತ್ಯುನ್ನತ ಮಟ್ಟದ ಸೌಕರ್ಯ ಮತ್ತು ಗುಣಮಟ್ಟ!
ಮರ್ಸಿಡೀಸ್-ಎಎಂಜಿ ಮತ್ತು ಸ್ಯಾಂಟೋನಿ 2005 ರಲ್ಲಿಯೇ ತಮ್ಮ ಪಾಲುದಾರಿಕೆ ಪ್ರಾರಂಭಿಸಿದ್ದವು. ಈ ವೈಯಕ್ತೀಕರಿಸಿದ ಸ್ಯಾಂಟೋನಿ ಲಗೇಜ್ ಸೆಟ್ ಐಷಾರಾಮಿ ಎಎಂಜಿ ಎಸ್‌ಎಲ್ ರೋಡ್‌ಸ್ಟರ್‌ಗೆ ಪರಿಪೂರ್ಣ ಹೊಂದಾಣಿಕೆಯಾಗಿದೆ ಎಂದು ಮರ್ಸಿಡಿಸ್-ಎಎಂಜಿ ಜಿಎಂಬಿಎಚ್ ಆಡಳಿತ ಮಂಡಳಿಯ ಅಧ್ಯಕ್ಷ ಫಿಲಿಪ್ ಸ್ಕೀಮರ್ ಅಭಿಪ್ರಾಯಪಟ್ಟಿದ್ದಾರೆ. "ಹೊಸ ಮರ್ಸಿಡಿಸ್-ಎಎಂಜಿ ಎಸ್‌ಎಲ್ ಅತ್ಯುನ್ನತ ಮಟ್ಟದ ಸೌಕರ್ಯ ಮತ್ತು ಗುಣಮಟ್ಟವನ್ನು ನೀಡುತ್ತದೆ ಮತ್ತು ಇದನ್ನು ಸ್ಪೂರ್ತಿದಾಯಕ ಸ್ಪೋರ್ಟಿನೆಸ್ ಅನ್ನು ಕೂಡ ಬಿಂಬಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಈ ಲಗೇಜ್‌ಗಳನ್ನು ಗ್ರಾಹಕರು ಕಾರಿನೊಂದಿಗೆ ಪ್ಯಾಕೇಜ್ ರೂಪದಲ್ಲಿ ಪಡೆಯಬಹುದು ಅಥವಾ ವೈಯಕ್ತಿಕವಾಗಿಯೂ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ. ಈ ಬ್ಯಾಗುಗಳು 'ಸ್ಯಾಂಟೋನಿ ಫಾರ್ ಎಎಂಜಿ(Santoni for AMG)' ಎಂಬ ಲೋಗೋ ಹೊಂದಿರುತ್ತದೆ ಮತ್ತು ಕಪ್ಪು, ಸಿಯೆನ್ನಾ ಕಂದು ಮತ್ತು ಕೆಂಪು ಮೆಣಸುಗಳಲ್ಲಿ ಲಭ್ಯವಿರಲಿದೆ.ಸ್ಯಾಂಟೋನಿಯ ಸಿಇಒ ಗೈಸೆಪ್ಪೆ ಸ್ಯಾಂಟೋನಿ, “ಮರ್ಸಿಡಿಸ್-ಎಎಂಜಿ ಎಸ್‌ಎಲ್ ಗಾಗಿ ಈ ಕಸ್ಟಮೈಸ್ ಮಾಡಿದ ಬ್ಯಾಗ್‌ಗಳ ಸಂಗ್ರಹ ಪ್ರಸ್ತುತಪಡಿಸಲು ಸಂತೋಷವಾಗಿದೆ. ಇವು ಅತ್ಯುತ್ತಮ ಕರಕುಶಲತೆ, ಅತ್ಯುನ್ನತ ಗುಣಮಟ್ಟ ಮತ್ತು ಸಣ್ಣ ವಿವರಗಳಿಗೆ ಕೂಡ ಗಮನ ನೀಡಿವೆ ಎಂದಿದ್ದಾರೆ.
ಎಎಂಜಿ ಎಸ್‌ಎಲ್ ಎರಡು ರೂಪಾಂತರಗಳಲ್ಲಿ!
ಮುಂಬರುವ ಎಎಂಜಿ ಎಸ್‌ಎಲ್ ಎರಡು ರೂಪಾಂತರಗಳಲ್ಲಿ ಬರಲಿದೆ- ಎಸ್‌ಎಲ್ 55 (SL 55) ಮತ್ತು ಎಸ್‌ಎಲ್ 63 (SL 63). ಇವುಗಳು ಟ್ವಿನ್-ಟರ್ಬೋ 4.0-ಲೀಟರ್ V8 ಎಂಜಿನ್‌ನಿಂದ ಚಾಲಿತವಾಗಲಿದ್ದು, 469 ಎಚ್‌ಪಿ ಶಕ್ತಿ ಮತ್ತು 700 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮಾದರಿಯ ಹೆಚ್ಚಿನ ರೂಪಾಂತರವು 577 ಎಚ್‌ಪಿ ಮತ್ತು 800 ಎನ್‌ಎಂ ಟಾರ್ಕ್‌ನ ಶಕ್ತಿಯನ್ನು ಉತ್ಪಾದಿಸುತ್ತದೆ.ಜರ್ಮನಿ ಮೂಲದ ಮರ್ಸಿಡಿಸ್ ಭಾರತದ ಐಷಾರಾಮಿ ಕಾರುಗಳ ವಲಯದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದ್ದು, ಗ್ರಾಹಕರಿಗೆ ವೈಯಕ್ತೀಕರಿಸಿದ ಕಾರುಗಳನ್ನು ಒದಗಿಸುತ್ತದೆ.
ಇದರ ಎಎಂಜಿ ಮಾದರಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ರೋಡ್‌ಸ್ಟರ್ ಎಂದು ಗುರುತಿಸಿಕೊಂಡಿದೆ. ಇದರ ಬೆಲೆ 2.64 ಕೋಟಿ ರೂ.ಗಳಷ್ಟಿದ್ದು, ಇದು 3982 ಸಿಸಿಯ ಇಂಜಿನ್ ಹಾಗೂ ಪೆಟ್ರೋಲ್ ಮಾದರಿಯಲ್ಲಿ ಲಭ್ಯವಿದೆ. 2020ರ ಮೇ ತಿಂಗಳಲ್ಲಿ ಭಾರತದಲ್ಲಿ ಎಎಂಜಿ ಜಿಟಿ ಆರ್ ಬಿಡುಗಡೆಯಾಗಿತ್ತು. ಈಗ ಮರ್ಸಿಡಿಸ್ ಎಎಂಜಿ ಎಸ್‌ಎಲ್ ಹೊಸ ಐಷಾರಾಮಿ ಕಾರಿನ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಇದರಲ್ಲಿ ಅನೇಕ ಆಸಕ್ತಿಕರ ಅಂಶಗಳನ್ನು ಅಳವಡಿಸುತ್ತಿದೆ.
ಇದನ್ನೂ ಓದಿ:
1) Best Electric Cars: ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್, ಜಾಗ್ವಾರ್‌ಗಳಲ್ಲಿ ಯಾವುದು ಉತ್ತಮ?
2) Vehicle Scrappage Center ಟಾಟಾದಿಂದ ವಾಹನ ಗುಜುರಿ ಘಟಕ, ಮಹಾ ಸರ್ಕಾರದ ಜೊತೆ ಒಪ್ಪಂದ!
3) Electric Vehicle ಕಾರು ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯ, ಇಲ್ಲಿದೆ ಟಿಪ್ಸ್!