*2021ರಲ್ಲಿ ಆಡಿ, ಬೆನ್ಸ್‌, ಮರ್ಸಿಡಿಸ್‌, ಜಾಗ್ವಾರ್‌ ಎಲೆಕ್ಟ್ರಿಕ್‌ ಕಾರುಗಳ ಬಿಡುಗಡೆ*ಬಿಎಂಡಬ್ಲ್ಯು ಐಎಕ್ಸ್‌ ಆಡಿ ಇ-ಟ್ರಾನ್, ಮರ್ಸಿಡೀಸ್- ಬೆನ್ಸ್‌ ಇಕ್ಯೂಸಿ ಮತ್ತು ಜಾಗ್ವರ್‌ ಇ-ಪೇಸ್*ಹೊಸ ವರ್ಷದಲ್ಲಿ ಇನ್ನಷ್ಟು ಕಾರುಗಳು ಮಾರುಕಟ್ಟೆಗೆ

Auto Desk: ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಭರಾಟೆ ಏರಿಕೆಯಾಗಿರುವ ಬೆನ್ನಲ್ಲೇ ದುಬಾರಿ ಹಾಗೂ ಐಷಾರಾಮಿ ಕಾರುಗಳು ಕೂಡ ಹಿಂದೆ ಬಿದ್ದಿಲ್ಲ. ಪ್ರತಿ ಐಷಾರಾಮಿ ಕಾರು ತಯಾರಕರು ಕೂಡ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡ ಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಮುಂದಿನ ವರ್ಷದಲ್ಲಿ ಕೂಡ ಹಲವು ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬರಲಿವೆ. ಆದರೆ, ಈ ದುಬಾರಿ ಕಾರುಗಳಲ್ಲಿನ ಸಮಾನತೆಗಳೇನು, ವ್ಯತ್ಯಾಸಗಳೇನು ಎಂಬುದನ್ನು ನೋಡೋಣ.

ಬಿಎಂಡಬ್ಲ್ಯು ಇತ್ತೀಚೆಗಷ್ಟೇ ಭಾರತದಲ್ಲಿ ಐಎಕ್ಸ್‌ ಎಲೆಕ್ಟ್ರಿಕ್ ಎಸ್‌ಯುವಿ ಅನ್ನು ಬಿಡುಗಡೆಗೊಳಿಸಿದೆ. ಇದು 1.16 ಕೋಟಿ ರೂ. ಬೆಲೆ ಹೊಂದಿದೆ. ಇದು ಆಡಿ ಇ-ಟ್ರಾನ್, ಮರ್ಸಿಡೀಸ್- ಬೆನ್ಸ್‌ ಇಕ್ಯೂಸಿ ಮತ್ತು ಜಾಗ್ವರ್‌ ಇ-ಪೇಸ್ ಕಾರುಗಳಿಗೆ ಸ್ಪರ್ಧೆ ನೀಡಲಿದೆ. ಸದ್ಯ ಭಾರತದಲ್ಲಿನ ನಾಲ್ಕು ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ನಡುವಿನ ಸಮಾನತೆಗಳ ವಿವರಗಳಿವು.

ಎಲೆಕ್ಟ್ರಿಕ್‌ ಕಾರುಗಳಲ್ಲಿ ಯಾವುದು ಉತ್ತಮ?

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಬಿಎಂಡಬ್ಲ್ಯು ಇತ್ತೀಚೆಗಷ್ಟೇ ಭಾರತದಲ್ಲಿ ಐಎಕ್ಸ್‌ ಎಲೆಕ್ಟ್ರಿಕ್ ಎಸ್‌ಯುವಿ ಅನ್ನು ಬಿಡುಗಡೆಗೊಳಿಸಿದೆ. ಇದು 1.16 ಕೋಟಿ ರೂ. ಬೆಲೆ ಹೊಂದಿದೆ. ಇದು ಆಡಿ ಇ-ಟ್ರಾನ್, ಮರ್ಸಿಡೀಸ್- ಬೆನ್ಸ್‌ ಇಕ್ಯೂಸಿ ಮತ್ತು ಜಾಗ್ವರ್‌ ಇ-ಪೇಸ್ ಕಾರುಗಳಿಗೆ ಸ್ಪರ್ಧೆ ನೀಡಲಿದೆ.ಜರ್ಮನ್‌ ಕಾರು ತಯಾರಕ ಕಂಪನಿ ಮರ್ಸಿಡಿಸ್‌ ಬೆನ್ಸ್‌ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಕಾರು ಈಕ್ಯೂಸಿ ಅನ್ನು ಬಿಡುಗಡೆಗೊಳಿಸಿತ್ತು. ಒಂದೇ ವರ್ಷದಲ್ಲಿ ಈಕ್ಯೂಸಿಯ ಮೊದಲ ಬ್ಯಾಚ್‌ ಸೋಲ್ಡ್‌ ಔಟ್‌ ಆಗಿತ್ತು.

ಇದರ ನಂತರ ಮಾರುಕಟ್ಟೆಗೆ ಬಂದಿದ್ದು ಜಾಗ್ವಾರ್‌ ಐ-ಪೇಸ್‌. ಇದು 2021ರ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು. ನಂತರ ಸೆಪ್ಟೆಂಬರ್‌ನಲ್ಲಿ ಆಡಿ ಇ-ಟ್ರಾನ್‌ ಮಾರುಕಟ್ಟೆ ಪ್ರವೇಶಿಸಿತು.ಇದರಿಂದ ಜನರಲ್ಲಿ ಕೂಡ ಈ ನಾಲ್ಕು ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳಲ್ಲಿ ಯಾವುದು ಉತ್ತಮ ಎಂಬ ಅನುಮಾನ ಸಹಜ. ಈ ಎಲ್ಲಾ ದುಬಾರಿ ಕಾರುಗಳ ಬೆಲೆ 1 ಕೋಟಿ ರೂ.ಗಳಿಗೂ ಹೆಚ್ಚಿದೆ. ಬಿಎಂಡಬ್ಲ್ಯು ಐಎಕ್ಸ್‌ನ ಎರಡು ವೇರಿಯಂಟ್‌ಗಳನ್ನು ಬಿಡುಗಡೆಗೊಳಿಸಿದ್ದು, ಅದರ ದರ 1.16 ಕೋಟಿ ರೂ.ಗಳಷ್ಟಿದೆ. ಇದು ಈಗಾಗಲೇ ಸೋಲ್ಡ್‌ ಔಟ್‌ ಆಗಿದೆ. ಇದು ಈ ವಲಯದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಎಲೆಕ್ಟ್ರಿಕ್‌ ಕಾರುಗಳ ಬೆಲೆ, ಬ್ಯಾಟರಿ ಹಾಗೂ ರೇಂಜ್‌

ಟ್‌ಗಳಲ್ಲಿ ಲಭ್ಯವಿವೆ. ಇದರ ಬೇಸ್‌ ಎಸ್‌ ವೇರಿಯಂಟ್‌ ಹಾಗೂ ಮಿಡ್‌-ಸ್ಪೆಕ್‌ ಎಸ್‌ಇ ವೇರಿಯಂಟ್‌ 1.08 ಕೋಟಿ ರೂ. ಮತ್ತು ಟಾಪ್‌ ಮಾದರಿಯಾದ ಎಚ್‌ಎಸ್‌ಇ ವೇರಿಯಂಟ್ 1.12 ಕೋಟಿ ರೂ.ಗಳಲ್ಲಿ ಲಭ್ಯವಿದೆ. ಬಿಎಂಡಬ್ಲ್ಯು ಮಾದರಿಯಂತೆಯೇ ಮರ್ಸಿಡಿಸ್‌ ಕೂಡ ಇಕ್ಯೂಸಿಯ ಒಂದೇ ವೇರಿಯಂಟ್‌ ಅನ್ನು ಬಿಡುಗಡೆಗೊಳಿಸಿದೆ.ಆದರೆ, ಬ್ಯಾಟರಿ ಹಾಗೂ ರೇಂಜ್‌ ವಿಚಾರಕ್ಕೆ ಬಂದಾಗ ಆಡಿ ಇ-ಟ್ರಾನ್‌ ವಿಶೇಷವಾಗಿ ನಿಲ್ಲುತ್ತದೆ. ಇದು 95 ಕೆಡಬ್ಲ್ಯುಎಚ್‌ ಲಿಥಿಯಂ-ಐಯಾನ್‌ ಬ್ಯಾಟರಿಯ ಎರಡು ಎಲೆಕ್ಟ್ರಿಕ್‌ ಮೋಟಾರ್‌ಗಳನ್ನು ಹೊಂದಿದೆ. ಇದು 405 ಬಿಎಚ್‌ಪಿ ಗರಿಷ್ಠ ಪವರ್‌ ಮತ್ತು 664 ಎನ್‌ಎಂ ಪೀಕ್‌ ಟಾರ್ಕ್ ನೀಡುತ್ತದೆ.

ಜಾಗ್ವಾರ್‌ ಇ-ಪೇಸ್‌ ಒಂದು ಚಾರ್ಜ್‌ಗೆ 470 ಕಿಮೀ ಸಂಚರಿಸುತ್ತದೆ. ಇದು 90 ಕೆಡಬ್ಲ್ಯುಚ್‌ ಬ್ಯಾಟರಿ ಪ್ಯಾಕ್‌ ಹಾಗೂ ಎರಡು ಎಲೆಕ್ಟ್ರಿಕ್‌ ಮೋಟಾರ್‌ಗಳನ್ನು ಹೊಂದಿದ್ದು, 394 ಬಿಎಚ್‌ಪಿ ಮತ್ತು 696 ಎನ್‌ಪಿ ಪೀಕ್‌ ಟಾರ್ಕ್ ನೀಡುತ್ತದೆ. ಮರ್ಸಿಡಿಸ್‌ ಇಕ್ಯೂಸಿ 80 ಕೆಡಬ್ಲ್ಯುಎಚ್‌ ಲಿಥಿಯಮ್‌ ಐಯಾನ್‌ ಪ್ಯಾಕ್‌ ಅನ್ನು ಒಳಗೊಂಡಿದೆ.ಇದು 80 ಕೆಡಬ್ಲ್ಯುಎಚ್‌ ಲಿಥಿಯಂ ಐಯಾನ್‌ ಪ್ಯಾಕ್‌ ಹೊಂದಿದೆ. ಇದು ಒಂದು ಬಾರಿ ಚಾರ್ಜ್‌ನಲ್ಲಿ 450 ಕಿಮೀ ಚಲಿಸುತ್ತದೆ. ಇದು 407 ಬಿಎಚ್‌ಪಿ ಮತ್ತು 765 ಎನ್‌ಎಂ ಹೊಂದಿದೆ.

ಎಲೆಕ್ಟ್ರಿಕ್‌ ಕಾರುಗಳ ಚಾರ್ಜ್

ಇನ್ನು ಚಾರ್ಜ್ ವಿಚಾರಕ್ಕೆ ಬರುವುದಾದರೆ, ಈ ಕಾರುಗಳ ಪೈಕಿ ಆಡಿ ಇ-ಟ್ರಾನ್‌ ಅನ್ನು ಅತಿ ಬೇಗ ಚಾರ್ಜ್ ಮಾಡಬಹುದಾಗಿದೆ. ಇದು 150 ಕೆಡಬ್ಲ್ಯು ಚಾರ್ಜಿಂಗ್‌ ಸೆಟ್‌ಅಪ್‌ನೊಂದಿಗೆ ಕೇವಲ ಅರ್ಧ ಗಂಟೆಯಲ್ಲಿ ಶೂನ್ಯದಿಂದ ಶೇ.80ರಷ್ಟು ಚಾರ್ಜ್ ಆಗುತ್ತದೆ. ಇದಕ್ಕೆ ಹೋಲಿಸಿದರೆ ಹೊಸದಾಗಿ ಬಿಡುಗಡೆಯಾಗಿರುವ ಬಿಎಂಡಬ್ಲ್ಯು ಐಎಕ್ಸ್‌ 30 ನಿಮಿಷಗಳಿಗಿಂತ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಜಾಗ್ವಾರ್‌ ಐ-ಪೇಸ್‌ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಮರ್ಸಿಡಿಸ್‌ ಇಕ್ಯೂಸಿ ಶೇ.0-80ರಷ್ಟು ಚಾರ್ಜಿಂಗ್‌ಗೆ 49 ನಿಮಿಷ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ:

1) Vehicle Scrappage Center ಟಾಟಾದಿಂದ ವಾಹನ ಗುಜುರಿ ಘಟಕ, ಮಹಾ ಸರ್ಕಾರದ ಜೊತೆ ಒಪ್ಪಂದ!

2) Electric Vehicle ಕಾರು ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯ, ಇಲ್ಲಿದೆ ಟಿಪ್ಸ್!

3) ಕೊರೋನಾ ಗಲಾಟೆ ನಡುವೆಯೇ ಚಿಗುರಿಕೊಳ್ಳುತ್ತಿದೆ ಆಟೋಮೊಬೈಲ್ ಕ್ಷೇತ್ರ!