Electric Vehicle ಕಾರು ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯ, ಇಲ್ಲಿದೆ ಟಿಪ್ಸ್!

  • ಆದಾಯ ತೆರಿಗೆ ನಿಯಮದ ಪ್ರಕಾರ ಕಾರು ಐಷಾರಾಮಿ ಪ್ರಾಡಕ್ಟ್
  • ಎಲೆಕ್ಟ್ರಿಕ್ ಕಾರು ಸಾಲದಲ್ಲಿ ಆದಾಯ ತೆರಿಗೆ ಉಳಿಸಲು ಸಾಧ್ಯ
  • 80EEB ಸೆಕ್ಷನ್ ಅಡಿಯಲ್ಲಿ ಕಾರು ಸಾಲದಿಂದ ಆದಾಯ ಉಳಿಸುವುದು ಹೇಗೆ?
Income Tax benefits for Electric vehicle loans under 80EEB section in India ckm

ಬೆಂಗಳೂರು(ಡಿ.18):  ಆದಾಯ ತೆರಿಗೆ(Income Tax) ನಿಯಮದ ಪ್ರಕಾರ ಇಂಧನ ಕಾರುಗಳು ಐಷಾರಾಮಿ ವಸ್ತು(Luxury Porduct). ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಾರು(Petrol Diesel) ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯವಿಲ್ಲ. ಆದರೆ ಎಲೆಕ್ಟ್ರಿಕ್ ಕಾರುಗಳ ಸಾಲದಿಂದ(Electric Vehicle Loans) ಆದಾಯ ತೆರಿಗೆ ಉಳಿಸಲು ಸಾಧ್ಯವಿದೆ. ಹೀಗಾಗಿ ಕಾರು ಆದಾಯ ಉಳಿಸುವುದಲ್ಲದೇ ಆದಾಯ ತೆರಿಗೆ ಉಳಿಸಲು ಸಾಧ್ಯವಿದೆ. 

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಇಂಧನ ಕಾರುಗಳ ನಿರ್ವಹಣೆ ಅತ್ಯಂತ ದುಬಾರಿಯಾಗಿದೆ. ಹೀಗಾಗಿ ಹಲವರು ಇದೀಗ ಎಲೆಕ್ಟ್ರಿಕ್ ಕಾರುಗಳತ್ತ ಚಿತ್ತ ಹರಿಸುತ್ತಿದ್ದಾರೆ. ಇತ್ತ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇತ್ತ ಎಲೆಕ್ಟ್ರಿಕ್ ಕಾರುಗಳ ಸಾಲದಿಂದ 80EEB ಅಡಿಯಲ್ಲಿ ಆದಾಯ ತೆರಿಗೆ ಉಳಿಸಲು ಅವಕಾಶವಿದೆ.

Vehicle Deregistration ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!

ಎಲೆಕ್ಟ್ರಿಕ್ ವಾಹನಗಳಿಗೆ(Electric Vehicle) ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಸಾಲದಿಂದ ಆದಾಯ ತೆರಿಗೆ ಉಳಿಸಲು ಅವಕಾಶ ನೀಡಿದೆ. ಸೆಕ್ಷನ್ 80EEB ಅಡಿಯಲ್ಲಿ  ಓರ್ವ ವ್ಯಕ್ತಿ ಎಲೆಕ್ಟ್ರಿಕ್ ಕಾರನ್ನು ಸಾಲದ ಮೂಲಕ ಖರೀದಿಸಲು ಇಚ್ಚಿಸಿದರೆ ಆತ ಸಾಲದ ಮೊತ್ತದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ 1.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಿರುತ್ತಾರೆ.

80EEB ಸೆಕ್ಷನ್ ಅಡಿಯಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಗೂ ಆದಾಯ ತೆರಿಗೆ ವಿನಾಯತಿ ಲಭ್ಯವಿದೆ. ಆದರೆ ಕೆಲ ಷರತ್ತುಗಳನ್ನು ಹಾಕಲಾಗಿದೆ. ಈ ಷರತ್ತಿನ ವಿವರ ಇಲ್ಲಿದೆ.

Helicopter from scrap ಕಾರು ಬಿಡಿಭಾಗದಿಂದ ಹೆಲಿಕಾಪ್ಟರ್ ನಿರ್ಮಾಣ, ವ್ಯಂಗ್ಯವಾಡಿದ ಗ್ರಾಮಸ್ಥರ ಮುಂದೆ ಹಾರಿತು ಲೋಕಲ್ ಚಾಪರ್!

ಎಲೆಕ್ಟ್ರಿಕ್ ವಾಹನ ಸಾಲದಿಂದ ಆದಾಯ ವಿನಾಯಿತಿ ಪಡೆಯಲು ಒಬ್ಬ ವ್ಯಕ್ತಿಗೆ ಒಂದು ಸಾರಿ ಮಾತ್ರ ಸಾಧ್ಯವಿದೆ. ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ಮಾತ್ರ  80EEB ಅಡಿಯಲ್ಲಿ ಸಾಲದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

ಎಲೆಕ್ಟ್ರಿಕ್ ವಾಹನದ ಮೇಲಿನ ಸಾಲಕ್ಕೆ ಮಾತ್ರ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನಕ್ಕೆ ಸಾಲ ಒದಗಿಸುವ ಸಂಸ್ಥೆಗಳು ಮಾನ್ಯತೆ ಪಡೆದ ಬ್ಯಾಂಕ್  ಅಥವಾ  NBFC ಗಳಿಂದ ಆಗಿರಬೇಕು. ಸ್ಥಳೀಯ ಫೈನಾನ್ಸ್ ಅಥವಾ ಇತರ ಬಡ್ಡಿ ಸಾಲಗಳಗೆ ಅನ್ವಯವಾಗುವುದಿಲ್ಲ.

ಎಲೆಕ್ಟ್ರಿಕ್ ಕಾರುಗಳ ಮೇಲಿನ ಸಾಲದಲ್ಲಿ ತೆರಿಗೆ ವಿನಾಯಿತಿ ಪಡೆಯಲು ವ್ಯಕ್ತಿಗಳು ಮಾತ್ರ ಪಡೆಯಬಹುದು. ಅಂದರೆ ಸಂಸ್ಥೆ, ವ್ಯವಹರಕ್ಕಾಗಿ ಖರೀದಿಸುವ ಎಲೆಕ್ಟ್ರಿಕ್ ವಾಹನ ಸಾಲದ ಮೇಲೆ ತೆರಿಗೆ ವಿನಾಯಿತಿ ಪಡೆಯಲು  ಸಾಧ್ಯವಿಲ್ಲ.

Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

ಎಲೆಕ್ಟ್ರಿಕ್ ವಾಹನಗಳತ್ತ ಜನರನ್ನು ಆಕರ್ಷಿಸಲು, ಭಾರತದಲ್ಲಿ ಜನರು ಇಂಧನ ವಾಹನದಿಂದ ಎಲೆಕ್ಟ್ರಿಕ್ ವಾಹನಕ್ಕೆ ಪರಿವರ್ತಿತರಾಗಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಇದಕ್ಕೆ ಕಾಲಮಿತಿಯನ್ನ ಹಕಲಾಗಿದೆ. ಏಪ್ರಿಲ್ 1, 2019 ರಿಂದ ಮಾರ್ಚ್ 31, 2023 ರ ಅವಧಿಯಲ್ಲಿ ಪಡೆದ ಎಲೆಕ್ಟ್ರಿಕ್ ವಾಹನ ಸಾಲದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ. 

ಆದಾಯ ತೆರಿಗೆ ನಿಯಮದ ಪ್ರಕಾರ 80EEB ಸೆಕ್ಷನ್ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು FY 2020-2021ರಿಂದ ಪಡೆಯಬಹುದು.

ಇದರ ಜೊತೆಗೆ ಜಿಎಸ್‌ಟಿಯಲ್ಲೂ ಕೆಲ ಆಫರ್ ನೀಡಿದೆ. ಎಲೆಕ್ಟ್ರಿಕ್ ವಾಹನ ಖರೀದಿಯು GST ತೆರಿಗೆ ಪ್ರಯೋಜನ ನೀಡಲಿದೆ. GST  ತೆರಿಗೆ ದರವನ್ನು ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ.

ಇಂದಿನ ಕಾಲದಲ್ಲಿ ಕಾರು ಅತೀ ಅವಶ್ಯಕವಾಗಿದೆ. ಆದರೆ ವೃತ್ತಿಪರರು ಸಾಲದ ಮೂಲಕ ಕಾರು ಖರೀದಿ ಮೊದಲ ಆಯ್ಕೆಯಾಗಿರುತ್ತದೆ. ಆದರೆ ಆದಾಯ ತೆರಿಗೆಯದ್ದೇ ಚಿಂತೆ. ಇತ್ತ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ವೃತ್ತಿಪರರಿಗೆ ಆದಾಯ ತೆರಿಗೆ ಉಳಿಸಲು ಇದು ಮಹತ್ವದ ರಹದಾರಿಯಾಗಿದೆ.

Latest Videos
Follow Us:
Download App:
  • android
  • ios