ಮೇ ತಿಂಗಳಲ್ಲಿ ಮಾರುತಿಯ ಹೊಸ ಸೆಲೆರಿಯೋ ಕಾರು ಮಾರುಕಟ್ಟೆಗೆ?
ಮಾರುತಿ ಸುಜುಕಿಯ ಪ್ರಮುಖ ಹ್ಯಾಚ್‌ಬ್ಯಾಕ್ ಕಾರ್ ಸೆಲೆರಿಯೋ ಹೊಸ ಮಾಡೆಲ್ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಮೊದಲು ಸೆಲೆರಿಯೋ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಮತ್ತೆ ಕಾರಿನ ಲಾಂಚ್ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಹೊಸ ಕಾರು ಪ್ರೀಮಿಯಂ ಲುಕ್ ಮತ್ತು ಹೆಚ್ಚು ಸುರಕ್ಷಾ ಫೀಚರ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.
ಮಾರುತಿ ಸುಜುಕಿ ಕಂಪನಿಯ ಸೆಲೆರಿಯೋ 2014ರಲ್ಲಿ ಲಾಂಚ್ ಆಗಿ ನಿಧಾನವಾಗಿ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕವರ್ಗವನ್ನು ವಿಸ್ತರಿಸಿಕೊಳ್ಳಲು ಯಶಸ್ವಿಯಾಗಿದೆ. ಎಂಟ್ರಿ ಲೇವಲ್ ಹ್ಯಾಚ್‌ಬ್ಯಾಕ್ ಕಾರು ಸೆಗ್ಮೆಂಟ್‌ನಲ್ಲಿ ಈ ಕಾರು ಹೆಚ್ಚು ಜನಪ್ರಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ನೆಕ್ಸ್ಟ್ ಜನರೇಷನ್ ಸೆಲೆರಿಯೋ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಇದುವರೆಗೂ ಮಾರುಕಟ್ಟಿಗೆ ಬಂದಿಲ್ಲ.
ಹುಂಡೈ ಭರ್ಜರಿ ಆಫರ್: ಆಯ್ದ ಕಾರುಗಳ ಮೇಲೆ 1.5 ಲಕ್ಷ ರೂ.ವರೆಗೂ ಡಿಸ್ಕೌಂಟ್
ಇದೀಗ ಗೊತ್ತಾಗಿರುವ ಮಾಹಿತಿ ಪ್ರಕಾರ, ಮಾರುತಿ ಸುಜುಕಿ ತನ್ನ ನೆಕ್ಸ್ಟ್ ಜನರೇಷನ್ ಸೆಲೆರಿಯೋ ಕಾರನ್ನು ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಮೊದಲು 2021ರ ಏಪ್ರಿಲ್‌ನಲ್ಲಿ ಸೆಲೆರಿಯೋ ರಸ್ತೆಗೆ ಇಳಿಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗಿನ ಮಾಹಿತಿ ಪ್ರಕಾರ ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೋ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ ಎಂದು ಹಲವು ಸುದ್ದಿ ವೆಬ್‌ತಾಣಗಳು ವರದಿ ಮಾಡಿವೆ.
2014ರಲ್ಲಿ ಲಾಂಚ್ ಆದ ಮಾರುತಿ ಸುಜುಕಿ ಸೆಲೆರಿಯೋ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಬದಲಾವಣೆಯನ್ನು ಕಂಡಿಲ್ಲ. ಹಾಗಾಗಿ, ಹೊಸ ತಲೆಮಾರಿನ ಸೆಲೆರಿಯೋ ಮಾರುಕಟ್ಟೆಗೆ ಬರಲಿದೆ ಎಂದು ವರ್ಷಗಳಿಂದ ಹೇಳಿಕೊಂಡು ಬರಲಾಗುತ್ತಿದೆ. ಹಲವು ಬಾರಿ ಈ ಹೊಸ ಸೆಲೆರಿಯೋ ಪ್ರಯೋಗಾರ್ಥವಾಗಿ ರಸ್ತೆಗಳಲ್ಲಿ ಓಡಾಡಿದ್ದರ ಬಗ್ಗೆ ಸುದ್ದಿಯೂ ಆಗಿದೆ. ಈಗ ಮೇ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ನೆಕ್ಸ್ಟ್ ಜನರೇಷನ್ ಸೆಲೆರಿಯೋ ಕಾರಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಮಾರುತಿ ಸುಜುಕಿಯ ಹಾರ್ಟೆಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಕಾರು ಕೂಡ ತಯಾರಾಗಲಿದೆ. ವಾಗನ್ ಆರ್ ಕೂಡ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಾಗುತ್ತದೆ ಹಾಗಾಗಿ ಹೊಸ ಸೆಲೆರಿಯೋ ಕೂಡ ಹೆಚ್ಚು ಕ್ಯಾಬಿನ್ ಸ್ಪೇಸ್ ಮತ್ತು ಹೆಚ್ಚಿನ ಪ್ರಮಾಣದ ಡೈಮೆನ್ಷನ್ ಹೊಂದಿರಬಹುದು ಎಂದು ಅಂದಾಜಿಸಬಹುದು. ಸುಜುಕಿ ಕನೆಕ್ಟ್ 7 ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಳ್ಳುವ ಸಾಧ್ಯತೆ ಇದೆ. ಇದು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಓಲಾ ಕ್ಯಾಬ್ ಗೊತ್ತಲ್ಲ, ಅದೇ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ!
ಈಗಾಗಲೇ ಅನೇಕ ಬಾರಿ ಈ ಸೆಲೆರಿಯೋ ಪ್ರಯೋಗಾರ್ಥವಾಗಿ ರಸ್ತೆಗಳಲ್ಲಿ ಕಂಡಿದೆ. ಈ ಕಾರು ಹೆಚ್ಚು ಕರ್ವ್‌ಗಳನ್ನು ಒಳಗೊಂಡ ಹೊಸ ವಿನ್ಯಾಸವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಈ ಹ್ಯಾಚ್‌ಬ್ಯಾಕ್ ಕಾರಿಗೆ ಹೆಚ್ಚು ಆಧುನಿಕ ಮತ್ತು ಪ್ರೀಮಿಯಂ ಲುಕ್ ಸಿಗಲಿದೆ. ಈಗ ಚಾಲ್ತಿಯಲ್ಲಿರುವ ಮಾಡೆಲ್‌ನಲ್ಲಿ ಈ ರೀತಿಯ ಲುಕ್ ಮಿಸ್ ಆಗಿರುವುದನ್ನು ನಾವು ಗುರುತಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಈಗ ಚಾಲ್ತಿಯಲ್ಲಿರುವ ಮಾಡೆಲ್‌ಗಿಂತ ಮುಂಬರುವ ಹೊಸ ತಲೆಮಾರಿನ ಸೆಲೆರಿಯೋ ಕಾರು ಹೆಚ್ಚು ಸುರಕ್ಷಿತವಾಗಿರುತ್ತದೆ. ನೀವು ಸ್ಟ್ಯಾಂಡರ್ಡ್ ಮಾಡೆಲ್‌ನಲ್ಲೇ ಎರಡು ಏರ್ ಬ್ಯಾಗ್, ಎಬಿಎಸ್, ರಿಯರ್ ಕಾರ್ ಪಾರ್ಕಿಂಗ್, ಸ್ಪೀಡ್ ಅಲರ್ಟ್‌ನಂಥ ಸುರಕ್ಷತಾ ಫೀಚರ್‌ಗಳನ್ನು ನಿರೀಕ್ಷೆ ಮಾಡಬಹುದಾಗಿದೆ.
ಇನ್ನು ನಿರೀಕ್ಷೆಯಂತೆ 1.0 ಲೀ. ಎಂಜಿನ್ ಈ ಹೊ ಸೆಲೆರಿಯೋದಲ್ಲಿ ಇರಲಿದೆ ಎನ್ನಲಾಗುತ್ತಿದೆ. ಹಾಗಾಗಿ ಗ್ರಾಹಕರು ಇಂಧನ ದಕ್ಷತೆಯನ್ನು ನಿರೀಕ್ಷಿಸಬಹುದು. ಹಾಗೆಯೇ ಪವರ್ ಔಟ್‌ಪುಟ್ ಕೂಡ ಅದೇ ಇರಲಿದೆ. ಅಂದರೆ, 67 ಹಾರ್ಸ್ ಪವರ್ ದೊರೆಯಲಿದೆ. ತೂಕದಲ್ಲಿ ಒಂದಿಷ್ಟು ವ್ಯತ್ಯಾಸವನ್ನ ಕಾಣಬಹುದು.
ಇಷ್ಟು ಮಾತ್ರವಲ್ಲದೇ ಮಾರುತಿ ಈ ಬಾರಿ ಸೆಲೆರಿಯೋ ಮಾಡೆಲ್‌ನಲ್ಲಿ 1.2 ಲೀ. ಎಂಜಿನ್ ಕೂಡ ಆಫರ್ ಮಾಡುವ ಸಾಧ್ಯತೆ ಎನ್ನಲಾಗುತ್ತಿದೆ. ಈ ಎಂಜಿನ್‌ನಿಂದ ನೀವು 81 ಎಚ್‌ಪಿ ಪವರ್ ನಿರೀಕ್ಷಿಸಬಹುದು. ಈ ಎಂಜಿನ್ ಅನ್ನು ನೀವು ಸದ್ಯ ವಾಗನ್ ಆರ್‌ನಲ್ಲಿ ಕಾಣಬಹುದಾಗಿದೆ.
ಗುಜರಿ ನೀತಿಯಡಿ ಹಳೆಯ ವಾಹನ ತ್ಯಜಿಸಿ ಹೊಸ ವಾಹನ ಖರೀದಿಸಿದ್ರೆ ಶೇ.5ರಷ್ಟು ರಿಯಾಯ್ತಿ!
ಸುರಕ್ಷಿತೆ, ಪ್ರೀಮಿಯಂ, ಸ್ಪೇಸ್, ಎಂಜಿನ್ ಎಲ್ಲ ದೃಷ್ಟಿಯಿಂದ ಮುಂಬರುವ ಮಾರುತಿ ಸೆಲೆರಿಯೋ ಹೆಚ್ಚು ಗಮನ ಸೆಳೆಯಲಿದೆ ಎಂದು ಹೇಳಬಹುದು. ಹಾಗಾಗಿ, ಈ ಹೊಸ ಮಾಡೆಲ್ ಸೆಲೆರಿಯೋ ಟಾಟಾ ಕಂಪನಿಯ ಟಿಯಾಗೋ, ಸ್ಯಾಂಟ್ರೋ ಸೇರಿದಂತೆ ಎಂಟ್ರಿ ಲೇವಲ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.