ಹುಂಡೈ ಭರ್ಜರಿ ಆಫರ್: ಆಯ್ದ ಕಾರುಗಳ ಮೇಲೆ 1.5 ಲಕ್ಷ ರೂ.ವರೆಗೂ ಡಿಸ್ಕೌಂಟ್!
ಹೆಚ್ಚಾಗಿ ಪ್ರೀಮಿಯಂ ಕಾರಗಳನ್ನು ಉತ್ಪಾದಿಸುವ ದಕ್ಷಿಣ ಕೊರಿಯಾ ಮೂಲದ ಹುಂಡೈ ಮಾರ್ಚ್ ತಿಂಗಳಲ್ಲಿ ತನ್ನ ಆಯ್ದ ಕೆಲವು ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಗ್ರಾಹಕರು 1.5 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ಪಡೆಯಬಹುದಾಗಿದೆ. ಸಮೀತಿ ಅವಧಿಯ ಈ ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಖ್ಯಾತ ಕಾರು ತಯಾರಿಕಾ ಕಂಪನಿ ಹುಂಡೈ ಮಾರ್ಚ್ ತಿಂಗಳಲ್ಲಿ ತನ್ನ ಆಯ್ದ ಕೆಲವು ಕಾರು ಖರೀದಿಗಳ ಮೇಲೆ ಅದ್ಭುತ ಆಫರ್‌ಗಳನ್ನು ಘೋಷಿಸಿದೆ. ಗ್ರಾಹಕರು ಹುಂಡೈ ಕಾರುಗಳ ಖರೀದಿ ಮೇಲೆ 1.5 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.
ದಕ್ಷಿಣ ಕೊರಿಯಾ ಮೂಲದ ಈ ಹುಂಡೈ ಭಾರತೀಯ ಆಟೋ ವಲಯದಲ್ಲಿ ತನ್ನದ ಛಾಪು ಮೂಡಿಸಿದೆ. ಪ್ರೀಮಿಯಂ ಕಾರುಗಳನ್ನೇ ಹೆಚ್ಚಾಗಿ ಮಾರುವ ಕಂಪನಿ, ಇದೀಗ ತನ್ನ ಸ್ಯಾಂಟ್ರೋ, ಗ್ರ್ಯಾಂಡ್ ಐ10 ನಿಯೋಸ್, ಔರಾ ಮತ್ತು ಎಲಾಂಟ್ರಾ ಮತ್ತು ಕೋನಾ ಇವಿ ಕಾರುಗಳ ಆಯ್ದ ಮಾಡೆಲ್‌ಗಳ ಮೇಲೆ 1.5 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ನೀಡುತ್ತಿದೆ.
ಗುಜರಿ ನೀತಿಯಡಿ ಹಳೆಯ ವಾಹನ ತ್ಯಜಿಸಿ ಹೊಸ ವಾಹನ ಖರೀದಿಸಿದ್ರೆ ಶೇ.5ರಷ್ಟು ರಿಯಾಯ್ತಿ!
ಹುಂಡೈ ನೀಡುತ್ತಿರುವ ಈ ಬಂಪರ್ ಡಿಸ್ಕೌಂಟ್ ಆಫರ್ ಈ ತಿಂಗಳು ಕೊನೆಯವರೆಗೂ ಅಂದರೆ ಮಾರ್ಚ್ 31ರವರೆಗೂ ಮಾತ್ರವೇ ಇರಲಿದೆ. ಹಾಗಾಗಿ, ಹುಂಡೈ ಕಾರುಗಳನ್ನು ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದ್ರೆ ಈಗ ಖರೀದಿಸಿದ್ರೆ ಅತ್ಯುತ್ತಮ ಆಫರ್‌ಗಳು ಸಿಗಲಿವೆ ಎಂದು ಹೇಳಬಹುದು.
ಹುಂಡೈ ನೀಡುತ್ತಿರುವ ಈ ಡಿಸ್ಕೌಂಟ್‌ನಲ್ಲಿ ನಗದು ರಿಯಾಯ್ತಿ, ಕಾರ್ಪೊರೇಟ್ ಬೆನೆಫಿಟ್ಸ್, ಎಕ್ಸ್‌ಚೇಂಜ್ ಬೋನಸ್ ಮತ್ತು ಇತ್ಯಾದಿ ಸೇರಿಕೊಂಡಿವೆ. ಇಷ್ಟು ಮಾತ್ರವಲ್ಲದೇ ಸರ್ಕಾರಿ ನೌಕರರಿಗೆ ಎಕ್ಸ್‌ಕ್ಲೂಸಿವ್ ಆಫರ್ ಆಗಿ ಕಂಪನಿ 8000 ರೂ.ವರೆಗೂ ಆಫರ್ ನೀಡುತ್ತಿದೆ. ಜೊತೆಗೆ ಮೆಡಿಕಲ್ ವೃತ್ತಿಯಲ್ಲಿರುವವರು, ಚಾರ್ಟರ್ಡ್ ಅಕೌಂಟೆಂಟ್ಸ್, ಎಸ್‌ಎಂಇಗಳು, ಶಿಕ್ಷಕರು ಮತ್ತು ಆಯ್ದ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡೋರಿಗೆ ವಿಶೇಷ ಆಫರ್ ಅನ್ನು ಕಂಪನಿ ಘೋಷಿಸಿದೆ. ಹುಂಡೈ ಕಂಪನಿಯ ಘೋಷಿಸಿರುವ ಆಫರ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಬ್ರಾಂಡ್‌ಗಳಾದ ವೆನ್ಯು, ವೆರ್ನಾ, ಐ20, ಕ್ರೆಟಾ ಹಾಗೂ ಟಸ್ಕನ್ ಕಾರುಗಳ ಮೇಲೆ ಹುಂಡೈ ಯಾವುದೇ ಆಫರ್ ಅನ್ನು ಘೋಷಿಸಿಲ್ಲ
.
ಹುಂಡೈ ಕಂಪನಿಯ ಎಲೆಕ್ಟ್ರಿಕ್ ಕಾರ್ ಆಗಿರುವ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿ ಮೇಲೆ ಗ್ರಾಹಕರಿಗೆ ಗರಿಷ್ಠ 1.5 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ಅನ್ನು ಕಂಪನಿ ಘೋಷಿಸಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಉತ್ತೇಜನ ನೀಡುವ ಪ್ರಯತ್ನವನ್ನು ಕಂಪನಿ ಮಾಡುತ್ತಿದೆ ಎಂದು ಹೇಳಬಹುದು.
ಮಾರ್ಚ್ ಆಫರ್: Renault ಕಾರುಗಳ ಖರೀದಿಯ ಮೇಲೆ 75 ಸಾವಿರ ರೂ.ವರೆಗೆ ಲಾಭ
ಎಲೆಂಟ್ರಾ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿ ಮೇಲೂ ಒಂದು ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 70 ಸಾವಿರ ರೂ. ಇದ್ದರೆ ಎಕ್ಸ್‌ಚೇಂಜ್ ಬೋನಸ್ 30 ಸಾವಿರ ರೂಪಾಯಿ ಇದೆ.
ಹುಂಡೈನ ಎಂಟ್ರಿ ಲೇವಲ್ ಹ್ಯಾಚ್ ಬ್ಯಾಕ್ ಕಾರ್ ಆಗಿರುವ ಸ್ಯಾಂಟ್ರೋ ಖರೀದಿ ಮೇಲೆ ಗ್ರಾಹಕರಿಗೆ 50 ಸಾವಿರ ರೂಪಾಯಿವರೆಗೂ ಡಿಸ್ಕೌಂಟ್ ಸಿಗಲಿದೆ. ಈ ಪೈಕಿ ನಗದು ರಿಯಾಯ್ತಿ, ಎಕ್ಸ್‌ಚೇಂಜ್ ಆಫರ್ ಮತ್ತು ಕಾರ್ಪೊರೇಟ್ ಬೆನೆಫಿಟ್ಸ್ ಕ್ರಮವಾಗಿ 30 ಸಾವಿರ ರೂಪಾಯಿ, 15 ಸಾವಿರ ರೂಪಾಯಿ ಮತ್ತು 5 ಸಾವಿರ ರೂಪಾಯಿ ಇರಲಿದೆ. ಜೊತೆಗೆ ಎಂಟ್ರಿ ಲೇವಲ್ ಎರಾ ಟ್ರಿಮ್ ಮೇಲೆ 20 ಸಾವಿರ ರೂಪಾಯಿವರೆಗೂ ಕ್ಯಾಶ್ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ, ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಆಫರ್ ಸೇಮ್ ಇರಲಿದೆ.
ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮಾಹಿತಿಯ ಪ್ರಕಾರ ಗ್ರ್ಯಾಂಡ್ ಐ10 ನಿಯೋಸ್ ಮೇಲೂ ರಿಯಾಯ್ತಿ ನೀಡಲಾಗುತ್ತಿದೆ. ಈ ಕಾರು ಖರೀದಿ ಮೇಲೆ ನಿಮಗೆ 60 ಸಾವಿರ ರೂಪಾಯಿವರೆಗೂ ರಿಯಾಯ್ತಿ ಸಿಗಲಿದೆ. ಇದರಲ್ಲಿ 45 ಸಾವಿರ ರೂಪಾಯಿವರೆಗೆ ಕ್ಯಾಶ್ ಡಿಸ್ಕೌಂಟ್ ಸಿಕ್ಕರೆ ಎಕ್ಸ್‌ಚೇಂಜ್ ಬೋನಸ್ 10 ಸಾವಿರ ರೂಪಾಯಿ ಹಾಗೂ ಕಾರ್ಪೋರೆಟ್ ಬೆನಿಫಿಟ್ಸ್ 5 ಸಾವಿರ ರೂಪಾಯಿವರೆಗೂ ಸಿಗಲಿದೆ.
ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್, ಮಾರ್ಚ್ ಅಂತ್ಯದವರೆಗೆ ಮಾತ್ರ!
ಸಬ್ ಕಾಂಪಾಕ್ಟ್ ಸೆಡಾನ್ ಔರಾ ಕೂಡ ಡಿಸ್ಕೌಂಟ್ ಪಟ್ಟಿಯಲ್ಲಿದೆ. ಈ ಕಾರು ಖರೀದಿ ಮೇಲೆ ಗ್ರಾಹಕರಿಗೆ 70 ಸಾವಿರ ರೂಪಾಯಿವರೆಗೂ ಲಾಭವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ವೆರಿಯೆಂಟ್‌ಗಳ ಮೇಲೆ ರಿಯಾಯ್ತಿ ಸಿಗಲಿದೆ. 70 ಸಾವಿರ ರೂಪಾಯಿ ಡಿಸ್ಕೌಂಟ್‌ನಲ್ಲಿ 50 ಸಾವಿರ ರೂಪಾಯಿ ನಗದು ರಿಯಾಯ್ತಿ ಮತ್ತು ಎಕ್ಸ್‌ಚೇಂಜ್ ಹಾಗೂ ಕಾರ್ಪೊರೇಟ್ ಬೆನೆಫಿಟ್ಸ್ ಕ್ರಮವಾಗಿ 15000 ರೂ. ಮತ್ತು 5000 ರೂ. ಸಿಗಲಿದೆ.