ಸೇಫ್ಟಿ ಕ್ರ್ಯಾಶ್ ಟೆಸ್ಟಿಂಗ್: ಮಹೀಂದ್ರಾ ಥಾರ್‌ಗೆ ಎಷ್ಟು ಸ್ಟಾರ್ ಗೊತ್ತಾ?
ಮಹೀಂದ್ರಾ ಕಂಪನಿಯ ಥಾರ್ ಬಿಡುಗಡೆಯಾದಾಗಿನಿಂದ ಒಂದಿಲ್ಲ ಒಂದು ಕಾರಣದಿಂದ ಸದ್ದು ಮಾಡುತ್ತಲೇ ಇದೆ. ಆಫ್‌ರೋಡ್ ವಿಭಾಗದಲ್ಲಿ ತನ್ನದೇ ಪ್ರಭಾವವನ್ನು ಸೃಷ್ಟಿಸಿಕೊಂಡಿರುವ ಥಾರ್ ಇದೀಗ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲೂ ಅದ್ವಿತೀಯ ಸಾಧನೆ ಮಾಡಿದೆ.
ಭಾರತದ ಆಫ್‌ರೋಡ್ ವೆಹಿಕಲ್ ವಿಭಾಗದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಎರಡನೇ ತಲೆಮಾರಿನ ಮಹೀಂದ್ರಾ ಥಾರ್, ಸೇಫ್ಟಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್‌ಗಳನ್ನು ಪಡೆದುಕೊಂಡಿದೆ.
ಈ ಮೂಲಕ ಬಾಡಿ ಆನ್ ಫ್ರೇಮ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್ ಗರಿಷ್ಠ ಸ್ಟಾರ್ ಪಡೆದ ಭಾರತದ ವಾಹನವಾಗಿದೆ. ಗ್ಲೋಬಲ್ ಎನ್‌ಸಿಎಪಿ ಈ ಸೇಫ್ಟಿ ಕ್ರ್ಯಾಶ್ ಪರೀಕ್ಷೆಯನ್ನು ನಡೆಸಿದ್ದು, ಮಹೀಂದ್ರಾ ಥಾರ್‌ಗೆ ಒಟ್ಟಾರೆ ನಾಲ್ಕು ಸೇಫ್ಟಿ ಸ್ಟಾರ್‌ಗಳು ದೊರೆತಿವೆ.
Renault Kiger: ಕಿಗರ್ ಶೋಕಾರ್ ಪ್ರದರ್ಶಿದ ರೆನಾಲ್ಟ್, ಭಾರತದಲ್ಲಿ ಶೀಘ್ರವೇ ಬಿಡುಗಡೆ
ಗ್ಲೋಬಲ್ ಎನ್‌ಸಿಎಪಿ ನಡೆಸಿದ ಚೈಲ್ಡ್ ಸೇಫ್ಟಿ ಪರೀಕ್ಷೆಯಲ್ಲೂ ಮಹೀಂದ್ರಾ ಥಾರ್ ಅತಿ ಹೆಚ್ಚು ಶ್ರೇಯಾಂಕವನ್ನು ಸಂಪಾದಿಸಿದೆ. ದೇಶೀಯವಾಗಿ ವಿನ್ಯಾಸಗೊಂಡಿರುವ ಥಾರ್ ಆಫ್‌ರೋಡ್ ಡ್ರೈವಿಂಗ್ ಸಾಮರ್ಥ್ಯಕ್ಕೆ ಬೇರೆ ಯಾವುದೇ ಸಾಟಿ ಇಲ್ಲ ಎಂಬುದನ್ನು ಈ ಪರೀಕ್ಷೆ ಒತ್ತಿ ಹೇಳುತ್ತಿದೆ. ಕಾರಿನ ಅದ್ಭುತ ಚಾಲನಾಶಕ್ತಿಯ ಹೊರತಾಗಿಯೂ, ವಿಶಿಷ್ಟವಾದ ವಿನ್ಯಾಸ, ಹೊಸ ಹೊಸ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿರುವ ಥಾರ್ ಇದೀಗ, ಸೇಫ್ಟಿ ವಿಷಯದಲ್ಲಿ ಈ ಸೆಗ್ಮೆಂಟ್ ಇತರ ಯಾವುದೇ ವೆಹಿಕಲ್‌ಗಳಿಗಿಂತ ತುಂಬ ಮುಂದಿದೆ.
ಪ್ರಯಾಣಿಕರ ಸುರಕ್ಷತೆಯೆಡೆಗೆ ನಾವು ಹೊಂದಿರುವ ಅಚಲವಾದ ಬದ್ಧತೆಯನ್ನು ಮಹೀಂದ್ರಾ ಥಾರ್‌ಗೆ ದೊರೆತಿರುವ 4 ಸ್ಟಾರ್ ಸಾಬೀತುಪಡಿಸಿದೆ. ಪ್ರಯಾಣಿಕರ ಸುರಕ್ಷತೆಯನ್ನು ಪ್ರಥಮ ಆದ್ಯತೆಯಾಗಿ ಗಮನದಲ್ಲಿಟ್ಟುಕೊಂಡು ಥಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅಸಲಿಗೆ, ಥಾರ್‌ನ ಸಂಪೂರ್ಣ ಸುರಕ್ಷತಾ ಸಿಮ್ಯುಲೇಶನ್ ಮತ್ತು ಅಭಿವೃದ್ಧಿಯನ್ನು ಚೆನ್ನೈನ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಮಾಡಲಾಗಿದೆ. ಈ ಶ್ರೇಯಾಂಕದಿಂದಾಗಿ ಗ್ರಾಹಕರಲ್ಲಿ ಮತ್ತಷ್ಟು ತಮ್ಮ ನೆಚ್ಚಿನ ಆಯ್ಕೆಯನ್ನಾಗಿ ಮಾಡುತ್ತದೆ ಎಂಬ ಬಗ್ಗೆ ನಂಬಿಕೆ ಇದೆ ಎಂದು ಮಹೀಂದ್ರಾ ಕಂಪನಿ ಹೇಳಿಕೊಂಡಿದೆ.
ಹೇಗಿದೆ ಥಾರ್?
ಹೊಸ ಥಾರ್ 2020 ಎಸ್‌ಯುವಿ ವಾಹನವನ್ನು ಬಾಡಿ-ಆನ್-ಫ್ರೇಮ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಈ ಹಿಂದಿದ್ದ ಎಸ್‌ಯುವಿಗಿಂತಲೂ ಗಮನಾರ್ಹವಾಗಿ ದೊಡ್ಡದಾಗಿದೆ ಎಂದು ಹೇಳಬಹುದು. ಹೀಗಿದ್ದರೂ, ಹೊಸ ವಾಹನವು ಹಳೆಯ ಲುಕ್‌ನ್ನು ಹಾಗೆಯೇ ಉಳಿಸಿಕೊಂಡಿದೆ. ಎಎಕ್ಸ್ ಶ್ರೇಣಿಯಲ್ಲಿ 16 ಇಂಚಿನ ಸ್ಟೀಲ್ ವ್ಹೀಲ್ಸ್, ಕಡಿಮೆ ಉಪಕರಣಗಳು ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್‌ಗಳಿಲ್ಲ. ಆದರೆ ದೊಡ್ಡದಾದ 18 ಇಂಚಿನ ಅಲಾಯ್ ವೀಲ್‌ಗಳು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಮತ್ತು ಹೆಚ್ಚಿನ ಫೀಚರ್‌ಗಳನ್ನು ಈ ಹೊಸ ಥಾರ್ ವಾಹನ ಹೊಂದಿದೆ.
ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ
ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು ನಿಜವಾಗಿಯೂ ತ್ರಿಡೋರ್ ಮಾದರಿಯನ್ನು ಮುಂದುವರಿಸಿದೆ. ಈ ವಾಹನದಲ್ಲಿ ಚಕ್ರಗಳ ಅನುಪಾತವೂ ಇನ್ನೂ ಚೆನ್ನಾಗಿದೆ. ಒಟ್ಟಾರೆ ವಾಹನದ ಅಂದವೂ ಕೂಡ ಗಮನ ಸೆಳೆಯುತ್ತದೆ. ಹಳೆಯ ಮಾಡೆಲ್‌ಗಿಂತಲೂ ಹೆಚ್ಚಿನ ಪ್ರಮಾಣದ ಸುಧಾಣೆಗಳನ್ನು ನೀವು ಹೊಸ ಮಾಡೆಲ್‌ನಲ್ಲಿ ಕಾಣಬಹುದು. ಎಂಜಿನ್ ಬಗ್ಗೆ ಹೇಳುವುದಾದರೆ, ಥಾರ್‌ನಲ್ಲಿ 2.0 ಲೀಟರ್ ಎಂಸ್ಟಾಲಿಯನ್ 150 ಟಿ ಜಿಡಿಐ ಪೆಟ್ರೋಲ್ ಎಂಜಿನ್ ಇದ್ದು, 5000 ಆರ್‌ಪಿಎಂಗೆ 150 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ ಮತ್ತು 1,500ರಿಂದ 3,000 ಆರ್‌ಪಿಎಂ ಮಧ್ಯೆ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದೇ ವೇಳೆ, 2.2 ಡಿಸೇಲ್ ಎಂಜಿನ್ 3,760 ಆರ್‌ಪಿಎಂನಲ್ಲಿ 130 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 1,600ರಿಂದ 2,800 ಆರ್‌ಪಿಎಂ ಮಧ್ಯೆ 300 ಎನ್‌ಎಂ ಟಾರ್ಕ್ ಕೂಡ ಸಿಗುತ್ತದೆ. ಎರಡೂ ಎಂಜಿನ್‌ಗಳು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಹೊಂದಿವೆ.
ಈ ಥಾರ್ ಬಿಡುಗಡೆಯಾದ ನಾಲ್ಕು ದಿನದಲ್ಲೇ 9,000 ಬುಕ್ಕಿಂಗ್‌ಗಳನ್ನು ಪಡೆದು ದಾಖಲೆ ಸೃಷ್ಟಿಸಿತ್ತು. ಎಸ್‌ಯುವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ 12 ದಿನದಲ್ಲಿ 9,000 ಬುಕ್ ಆಗಿ ದಾಖಲೆ ಬರೆದಿತ್ತು. ಆ ದಾಖಲೆಯನ್ನು ನಾಲ್ಕೇ ದಿನಕ್ಕೆ ಥಾರ್ ಮುರಿದು ಹಾಕಿತ್ತು. ಬಿಡುಗಡೆಯ ಆರಂಭದಲ್ಲಿ ಥಾರ್ ದೇಶದ 18 ನಗರಗಳಲ್ಲಿ ದೊರೆಯುತ್ತಿತ್ತು. ಜೊತೆಗೆ, ಅಕ್ಟೋಬರ್ 10ರೊಳಗೇ ದೇಶದ 100 ನಗರಗಳಲ್ಲೂ ಈ ಥಾರ್ ದೊರೆಯುತ್ತಿದೆ.
ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ, ಭಾರತಕ್ಕೆ ಯಾವಾಗ ಪ್ರವೇಶ?
ಎಲ್ಲಾ ವರ್ಗದ ಜನರು ಈ ಥಾರ್‌ಗೆ ಮಾರು ಹೋಗಿದ್ದಾರೆ. ನಗರ, ಗ್ರಾಮೀಣ, ಯುವಕರು, ಮಹಿಳೆಯರು, ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಹಲವರು ಥಾರ್ ಬುಕ್ಕಿಂಗ್ ಮಾಡುತ್ತಿದ್ದಾರೆ ಮತ್ತು ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮಲೆಯಾಳಂ ನಟ ಪೃಥ್ವಿರಾಜ್ ಸೇರಿ ಹಲವು ಗಣ್ಯರು ಮೆಚ್ಚುಗೆ ಸೂಚಿಸಿದ್ದನ್ನು ನೀವಿಲ್ಲ ಸ್ಮರಿಸಬಹುದು.