ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ

ಭಾರತದಲ್ಲಿ ಹೆಚ್ಚುತ್ತಿರುವ ಆಫ್ ರೋಡ್ ಸಾಹಸ ಮನೋಭಾವ ಪ್ರವೃತ್ತಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕೆಟಿಎಂ 250 ಅಡ್ವೆಂಚರ್ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಹಿಂದೆ ಬಿಡುಗೆಯಾಗಿದ್ದ ಕೆಟಿಎಂ 390 ಅಡ್ವೆಂಚರ್ ಬೈಕ್‌ಗೂ ಉತ್ತಮ ಪ್ರತಿಕ್ರಿಯೆ ದೊರೆತಿತ್ತು.
 

KTM 250 Adventure motorcycle launched in India

ಆಫ್ ರೋಡ್ ಮೋಟರ್‌ಸೈಕಲ್ ವಿಭಾಗದಲ್ಲಿ ಸೂಪರ್ ಡೂಪರ್ ಆಗಿರುವ, ಕೆಟಿಎಂ ತನ್ನ ಅಡ್ವೆಂಚರ್ ಮಾಡೆಲ್ ಕೆಟಿಎಂ 250 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬಜಾಜ್ ಆಟೋದ ಕೆಟಿಎಂ 250 ಮಾಡೆಲ್‌ ಬೈಕ್ ನೋಡಲು ಅತ್ಯಾಕರ್ಷಕವಾಗಿದ್ದು, ನಿಮ್ಮ ಅಡ್ವೆಂಚರ್ ಮನಸ್ಸಿಗೆ ಹೇಳಿ ಮಾಡಿಸಿದಂತಿದೆ. ಗ್ರಾಹಕರು ದೇಶದಲ್ಲಿರುವ ಕೆಟಿಎಂ ಶೋರೂಮ್‌ಗಳ ಮೂಲಕ ಕೆಟಿಎಂ 25 ಬೈಕ್‌ಗೆ ಬುಕ್ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್ ಬೆಲೆ 2,48,256 ರೂಪಾಯಿ(ಎಕ್ಸ್ ಶೋರೂಮ್ ಬೆಲೆ)ಯಾಗಿದೆ. ಪ್ರೀಮಿಯಂ ಮೋಟರ್ ಸೈಕಲ್ ಆಗಿರುವ ಕೆಟಿಎಂ ಭಾರತದಲ್ಲಿ ಬಜಾಜ್ ಆಟೋ ಜೊತೆಗಿಡಿ ಮಾರಾಟವನ್ನು ಮಾಡುತ್ತದೆ. ಆಸ್ಟ್ರಿಯನ್ ಮೂಲದ ಈ ಕಂಪನಿಯಲ್ಲಿ ಭಾರತದ ಬಜಾಜ್ ಆಟೋ ಕೂಡ  ಪಾಲುದಾರಿಕೆ ಹೊಂದಿದೆ.  ಕಂಪನಿಯ ಹೇಳಿಕೆಯ ಪ್ರಕಾರ, ಭಾರತದಲ್ಲಿ ಅಡ್ವೆಂಚರ್ ಟ್ರೆಂಡ್ ಏರುಗತಿಯಲ್ಲಿದ್ದು ಆ ವರ್ಗದ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹಾಗೂ ಅವರ ಅಗತ್ಯಗಳಿಗೆ ತಕ್ಕಂತೆ ಕೆಟಿಎಂ 250 ವಿನ್ಯಾಸ ಮಾಡಲಾಗಿದೆ.

Renault Kiger: ಕಿಗರ್ ಶೋಕಾರ್ ಪ್ರದರ್ಶಿದ ರೆನಾಲ್ಟ್, ಭಾರತದಲ್ಲಿ ಶೀಘ್ರವೇ ಬಿಡುಗಡೆ 

ಕೆಟಿಎಂ 250 ಅಡ್ವೆಂಚರ್, ಅಡ್ವೆಂಚರ್ ಬೈಕಿಂಗ್ ಜಗತ್ತಿನಲ್ಲಿ ತಮ್ಮ ಮೊದಲ ಹೆಜ್ಜೆ ಇಡಲು ಗ್ರಾಹಕರನ್ನು ಉತ್ತೇಜಿಸುವ ಮೂಲಕ (ಕೆಟಿಎಂ ಅಡ್ವೆಂಚರ್) ಈ ವಿಭಾಗವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕೆಟಿಎಂ 250 ಬೈಕ್, 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಒಳಗೊಂಡಿದ್ದು, ಇದರಿಂದ 30 ಎಚ್‌ಪಿ ಪವರ್ ಉತ್ಪಾದಿಸಬಹುದು ಮತ್ತು ಈ ಬೈಕ್‌ನಸ್ಸಿ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕೆಟಿಎಂ 390 ಅಡ್ವೆಂಚರ್ ಮೋಟರ್‌ಸೈಕಲ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಉತ್ತೇಜಿತರಾಗಿಯೇ ಇದೀಗ ಹೊಸ ಕೆಟಿಎಂ ಮಾಡೆಲ್‌ ಅಡ್ವೆಂಚರ್ ಬೈಕ್ ಬಿಡುಗಡೆಗೊಳ್ಳುವಂತಾಗಿದೆ.

ಈ ಹೊಸ ಕೆಟಿಎಂ 250 ಅಡ್ವೆಂಚರ್ ಬೈಕ್,   ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಬಿಎಂಡಬ್ಲ್ಯೂ ಜಿ 310 ಮತ್ತು ಹೀರೋ ಎಕ್ಸ್‌ಪಲ್ಸ್ 200 ಬೈಕ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.

ಕ್ರ್ಯಾಶ್‌ ಟೆಸ್ಟಿಂಗ್: ಕಿಯಾ ಸೆಲ್ತೋಸ್‌ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?

ಕೆಟಿಎಂ 250 ಮತ್ತು ಕೆಟಿಎಂ 390 ಬೈಕ್‌ಗಳು ಕೆಲವು ಸಾಮತ್ಯೆಗಳನ್ನು ಹೊಂದಿವೆ ಮತ್ತು ಬಿಡಿ ಭಾಗಗಳಲ್ಲೂ ಅಂಥ ವ್ಯತ್ಯಾಸಗಳೇನೂ ಇಲ್ಲ. ಆದರೂ ನೀವು ಕೆಲವು ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಕೆಟಿಎಂ 250 ಬೈಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌ನೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ನಂತಹ ವಿಭಿನ್ನ ಬದಲಾವಣೆಗಳನ್ನು ಕಾಣಬಹುದು. ಈ ಬೈಕ್ 14.5 ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಬರುತ್ತದೆ ಮತ್ತು 400 ಕಿ.ಮೀ.ವರೆಗೂ ಸಂಚರಿಸಬಹುದು. ಆಯ್ಕೆ ಮಾಡಬಹುದಾದ ಆಫ್-ರೋಡ್ ಎಬಿಎಸ್ ಜೊತೆಗೆ ಎಲ್‌ಸಿಡಿ ಸ್ಕ್ರೀನ್ ಇದೆ. ಜಿಪಿಎಸ್ ಬ್ರಾಕೆಟ್, ರೇಡಿಯೇಟರ್ ಪ್ರೊಟೆಕ್ಷನ್ ಗ್ರಿಲ್, ಕ್ರ್ಯಾಶ್ ಬಂಗ್ಸ್, ಹೆಡ್‌ಲ್ಯಾಂಪ್ ಪ್ರೊಟೆಕ್ಷನ್ ಮತ್ತು ಹ್ಯಾಂಡಲ್‌ಬಾರ್ ಪ್ಯಾಡ್‌ಗಳು ಸೇರಿದಂತೆ ಹಲವು ಫೀಚರ್‌ಗಳನ್ನು ನೀವು ಬೈಕ್‌ನಲ್ಲಿ ಕಾಣಬಹುದಾಗಿದೆ. 

ಪ್ರತಿ 3 ತಿಂಗಳಿಗೆ ಒಂದು ಹೊಸ ರಾಯಲ್‌ ಎನ್‌ಫೀಲ್ಡ್ ಬೈಕ್!

ಕೆಟಿಎಂ 250 ಅಡ್ವೆಂಚರ್ ಮೋಟರ್‌ಸೈಕಲ್‌ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಒಳಗೊಂಡಿದ್ದು, ಬೈಕ್‌ನ ಹಿಂಬದಿಯಲ್ಲಿ ಮೋನೋಶಾಕ್ ಮತ್ತು ಫ್ರಂಟ್‌ನಲ್ಲಿ  43 ಎಂಎಂ ಡಬ್ಲ್ಯೂಪಿ ಅಪೆಕ್ಸ್ ಯುಎಸ್‌ಡಿ ಫೋರ್ಕ್ಸ್ ಶಾಕ್‌ಬ್ಸವರ್‌ಗಳನ್ನು ಅಳವಡಿಸಲಾಗಿದೆ. ಬೈಕ್‌ ಮುಂದಿನ ಚಕ್ರದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಬದಿ ಚಕ್ರಕ್ಕೆ 230 ಎಂಎಂ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಮತ್ತು ಬಾಷ್‌ನಿಂದ ಎಬಿಎಸ್ ಯುನಿಟ್ ಅಳವಡಿಸಲಾಗಿದೆ. ಸೀಟ್ ಎತ್ತರವು 855 ಎಂಎಂ ಇದ್ದರೆ ಬೈಕ್‌ನ ಒಟ್ಟು ತೂಕ 177 ಕೆ.ಜಿ. ಇದೆ.

Latest Videos
Follow Us:
Download App:
  • android
  • ios