Asianet Suvarna News Asianet Suvarna News

New generation Alto ಹೊಸ ವರ್ಷದಲ್ಲಿ ಹೊಸ ರೂಪದಲ್ಲಿ ನ್ಯೂ ಜನರೇಶನ್ ಮಾರುತಿ ಸುಜುಕಿ ಅಲ್ಟೋ ಬಿಡುಗಡೆ!

  • 2022ರಲ್ಲಿ ಮಾರುತಿ ಸುಜುಕಿ ನ್ಯೂ ಜನರೇಶ್ ಕಾರು ಬಿಡುಗಡೆಗೆ ತಯಾರಿ
  • ಮಾರುತಿ ಬ್ರೆಜಾ, ಬಲೆನೋ ಬೆನ್ನಲ್ಲೇ ಬಿಡುಗಡೆಯಾಗಲಿದೆ ಅಲ್ಟೋ
  • ಈಗಿನ ಅಲ್ಟೋ ಕಾರಿಗಿಂತ ಗಾತ್ರದಲ್ಲಿ, ನೋಟದಲ್ಲಿ ಬದಲಾವಣೆ
Maruti Suzuki Set to launch New Generation alto with more safety features in 2022 ckm
Author
Bengaluru, First Published Dec 28, 2021, 7:40 PM IST

ನವದೆಹಲಿ(ಡಿ.28):  ಮಾರುತಿ ಸುಜುಕಿ(Maruti Suzuki) ಹೊಸ ವರ್ಷದಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. 2022ರಲ್ಲಿ ನ್ಯೂ ಜನರೇಶನ್ ಮಾರುತಿ ಬ್ರೆಜಾ, ನ್ಯೂ ಜನರೇಶನ್ ಬಲೆನೋ ಕಾರು ಬಿಡುಗಡೆಯಾಗಲಿದೆ. ಇದರ ಜೊತೆಗೆ ಮಾರುತಿ ಸುಜುಕಿ ತನ್ನ ಅಲ್ಟೋ ಕಾರನ್ನು(Alto) ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಮುಂಭಾಗದ ಗ್ರಿಲ್, ಶೈಲಿ, ವಿನ್ಯಾಸ ಎಲ್ಲವೂ  ಸೇರಿ ಹೊಸ ಅಲ್ಟೋ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

2021ರ ಅಂತ್ಯದಲ್ಲಿ ಮಾರುತಿ ಸುಜುಕಿ ನೆಕ್ಸ್ಟ್ ಜನರೇಶನ್ ಸೆಲೆರಿಯೋ ಕಾರು ಬಿಡುಗಡೆ ಮಾಡಿತ್ತು. ಹೊಸ ವಿನ್ಯಾಸದಲ್ಲಿ ಈ ಕಾರು ಬಿಡುಗಡೆಯಾಗಿತ್ತು. ಇದೀಗ ಅಲ್ಟೋ ಸರದಿ. ಈಗಾಗಲೇ ನ್ಯೂ ಜನರೇಶನ್ ಅಲ್ಟೋ ಕಾರಿನ ರೋಡ್ ಟೆಸ್ಟ್ ನಡೆಯುತ್ತಿದೆ. ಹೊಸ ವರ್ಷದ ಆರಂಭಿಕ ದಿನಗಳಲ್ಲಿ ಅಲ್ಟೋ ಬಿಡುಗಡೆಯಾಗುವ ಸಾಧ್ಯತೆ ಇದೆ.

Year End 2021 ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಟಾಪ್ 5 ಕಾರು!

ಮುಂಭಾಗದ ಗ್ರಿಲ್, ಬಂಪರ್, ಹೆಡ್‌ಲೈಟ್, ಟೈಲ್ ಲೈಟ್ಸ್ ಎಲ್ಲವೂ ಹೊಸ ಅಲ್ಟೋದಲ್ಲಿ ಬದಲಾಗಿದೆ. ಈ ಮೂಲಕ ಮಾರುತಿ ಸುಜುಕಿ ಮತ್ತೆ ಅಲ್ಟೋ ಮೂಲಕ ಸಣ್ಣ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಮುಂದಾಗಿದೆ. ಇಂಟಿರಿಯರ್‌ನಲ್ಲೂ ಬದಲಾವಣೆ ಮಾಡಲಾಗಿದೆ. ನೂತನ ಅಲ್ಟೋ ಕಾರಿನಲ್ಲಿ ಟಚ್ ಸ್ಕ್ರೀನ್ ಸಿಸ್ಟಮ್, ಪವರ್ ವಿಂಡೋ, ಎಬಿಎಸ್, ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿ ಇರಲಿದೆ.

Auto News: ಅಲ್ಟೋ 800 ಹೇಗಿದೆ? ಪ್ರಯೋಗಾರ್ಥ ರಸ್ತೆಗಳಲ್ಲಿ ಸಂಚಾರ

ಮಾರುತಿ ಸುಜುಕಿ ಅಲ್ಟೋ ಎಂಜಿನ್
ನೂತನ ಅಲ್ಟೋ ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟೋ ಕಾರಿನ ಎಂಜಿನ್ ಬಳಸಲಾಗುತ್ತಿದೆ. ಅಲ್ಟೋ ಕಾರು  BS6 ಎಮಿಶನ್ 796 cc ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 47 bhp ಪವರ್ ಹಾಗೂ 69 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. 

ಮಾರುತಿ ಸುಜುಕಿ ಅಲ್ಟೋ ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅಲ್ಟೋ ಬೆಲೆ 3,15,000 ರೂಪಾಯಿ(ಎಕ್ಸ್ ಶೋ ರೂಂ) ಇದು ಬೇಸ್ ಮಾಡೆಲ್ ಬೆಲೆ, ಇನ್ನು STD ಮಾಡೆಲ್ ಬೆಲೆ 3.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ LXI ಬೆಲೆ 3.86 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈಗ ಬುಕಿಂಗ್ ಮಾಡಿದರೆ ಕಾರು ಡೆಲಿವರಿಗೆ ಸರಿಸುಮಾರು 1 ತಿಂಗಳ ಸಮಯ ತೆಗೆದುಕೊಳ್ಳಲಿದೆ. ನೂತನ ಕಾರಿನ ಬೆಲೆ ಕುರಿತ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ ಬೆಲೆ ಏರಿಕೆ ಸಾಧ್ಯತೆ ಹೆಚ್ಚು. 2022ರ ಜನವರಿಯಿಂದ ಬಹುತೇಕ ಆಟೋ ಕಂಪನಿಗಳು ಕಾರು ಹಾಗೂ ಇತರ ವಾಹನಗಳ ಬೆಲೆ ಏರಿಕೆ ಮಾಡುತ್ತಿದೆ. ಇದರ ಜೊತೆಗೆ ಕೆಲ ಹೆಚ್ಚುವರಿ ಫೀಚರ್ಸ್ ನ್ಯೂ ಜನರೇಶನ್ ಅಲ್ಟೋಗೆ ಸೇರಿಕೊಳ್ಳುತ್ತಿರುವ ಕಾರಣ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಬೇಸ್ ಮಾಡೆಲ್ ಬೆಲೆ 3.50 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುವ ಸಾಧ್ಯತೆ ಇದ ಎಂದು ಅಂದಾಜಿಸಲಾಗಿದೆ.

2021ರ ಮಾರುತಿ ಕಾರುಗಳ ಮಾರಾಟದಲ್ಲಿ ಅಲ್ಟೋಗೆ 3ನೇ ಸ್ಥಾನ
2021ರಲ್ಲಿ ಮಾರುತಿ ಸುಜುಕಿ ಕಾರು ಮಾರಾಟ ಪಟ್ಟಿಯಲ್ಲಿ ಅಲ್ಟೋ 3ನೇ ಸ್ಥಾನದಲ್ಲಿದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಅಲ್ಟೋ ನಿರೀಕ್ಷಿತ ಮಾರಾಟ ಕಂಡಿಲ್ಲ. ನವೆಂಬರ್ 2021ರಲ್ಲಿ ಅಲ್ಟೋ 13,812 ಅಲ್ಟೋ ಕಾರುಗಳು ಮಾರಾಟವಾಗಿತ್ತು. 2020ರ ನವೆಂಬರ್ ತಿಂಗಳಲ್ಲಿ ಅಲ್ಟೋ ಮಾರಾಟ 15,321 ಕಾರುಗಳು ಮಾರಾಟವಾಗಿತ್ತು. ನವೆಂಬರ್ 2021ರಲ್ಲಿ ವ್ಯಾಗನರ್ ಕಾರು ಮೊದಲ ಸ್ಥಾನದಲ್ಲಿದ್ದರೆ, ಮಾರುತಿ ಸ್ವಿಫ್ಟ್ ಕಾರು ಎರಡನೇ ಸ್ಥಾನದಲ್ಲಿದೆ. ಇದೀಗ ಅಲ್ಟೋ ಕಾರಿನ ಮಾರಾಟ ಹೆಚ್ಚಿಸಲು ಹೊಸ ಫೀಚರ್ಸ್‌ನೊಂದಿಗೆ 2022ರಲ್ಲಿ ಬಿಡುಗಡೆಯಾಗುತ್ತಿದೆ.
 

Follow Us:
Download App:
  • android
  • ios