Asianet Suvarna News Asianet Suvarna News

Auto News: ಅಲ್ಟೋ 800 ಹೇಗಿದೆ? ಪ್ರಯೋಗಾರ್ಥ ರಸ್ತೆಗಳಲ್ಲಿ ಸಂಚಾರ

ಇತ್ತೀಚೆಗಷ್ಟೇ ಹೊಸ ತಲೆಮಾರಿನ ಸೆಲೆರಿಯೊ ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಇಂಡಿಯಾ ಮುಂದಿನ ವರ್ಷದಲ್ಲಿ 3ನೇ ತಲೆಮಾರಿನ ಅಲ್ಟೋ 800 ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಿನ ಸ್ಪೈ ಚಿತ್ರಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಹೊಸ ಕಾರು ಹಳೆಯದಕ್ಕಿಂತ ಹೆಚ್ಚು ದೊಡ್ಡದಾಗಿದೆ ಎನ್ನಲಾಗುತ್ತಿದೆ.

New Alto 800 spied photographs are online
Author
Bengaluru, First Published Nov 25, 2021, 3:38 PM IST

ಭಾರತದ ಮಟ್ಟಿಗೆ ಸಣ್ಣ ಕಾರುಗಳ ವಿಷಯದಲ್ಲಿ ಮಾರುತಿ ಸುಜುಕಿ (Maruti Suzuki India) ಕಂಪನಿಯನ್ನು ಯಾರೂ ಹಿಂದಿಕ್ಕಲು  ಸಾಧ್ಯವಿಲ್ಲ. ಮಧ್ಯಮವರ್ಗದವರಿಗೆ ಕಾರಿನ ಪ್ರಯಾಣದ ಪ್ರವೃತ್ತಿಯನ್ನು ಬೆಳೆಸಿದ್ದೇ ಮಾರುತಿ. ಹಾಗಾಗಿ, ಈ ಸೆಗ್ಮೆಂಟ್‌ನ ಗ್ರಾಹಕರ ಅಗತ್ಯಗಳನ್ನು ಸಂಪೂರ್ಣವಾಗಿ ಅರಿತುಕೊಂಡಿರುವ ಮಾರುತಿ ಕಂಪನಿಯು ಮಾರುತಿ 800 (Maruti 800), ಮಾರುತಿ ಜೆನ್ (Maruti Zen) ಆ ನಂತರ ಅಲ್ಟೋ 800 (Alto 800) ಮೂಲಕ ಗ್ರಾಹಕರನ್ನು ಸಂತೃಪ್ತಗೊಳಿಸಲು ಯಶಸ್ವಿಯಾಗಿತ್ತು. ಇದೀಗ, ಅಲ್ಟೋ 800 ಬದಲಿಗೆ ಮೂರನೇ ತಲೆಮಾರಿನ ಅಲ್ಟೋ 800 (New Gen Alto 800) ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಕಂಪನಿ. ಈಗಾಗಲೇ ಈ ಹೊಸ ತಲೆಮಾರಿನ ಅಲ್ಟೋ 800 ಕಾರು ಪ್ರಯೋಗಾರ್ಥವಾಗಿ ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿದೆ. ಆದರೆ, ಕೆಲವು ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಕೂಡ ಆಗಿವೆ. ಈಗ ಸಿಕ್ಕಿರುವ ಸ್ಪೈ ಚಿತ್ರಗಳ ಪ್ರಕಾರ, ಹೊಸ ತಲೆಮಾರಿನ ಅಲ್ಟೋ 800 ಈ ಹಿಂದಿನ ಕಾರಿಗಿಂತಲೂ ಹೆಚ್ಚು ವಿಶಾಲ ಮತ್ತು ಎತ್ತರವೂ ಆಗಿರುವುದು ಖಚಿತವಾಗುತ್ತದೆ. ಆದರೆ, ಎಂಜಿನ್‌ನ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಬದಲಿಗ ಅನೇಕ ಹೊರ ಫೀಚರ್‌ಗಳನ್ನು ಕಾಣಬಹುದಾಗಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು (Maruti Suzuki India Company) ಇತ್ತೀಚೆಗಷ್ಟೇ ಹೊಸ ತಲೆಮಾರಿನ ಮಾರುತಿ ಸೆಲೆರಿಯೋ (Celerio) ಕಾರನ್ನು ಲಾಂಚ್ ಮಾಡಿದೆ.  ಇದೀಗ ಹೊಸ ಅಲ್ಟೋ 800 ಕಾರಿನ ಸರಿಯಾಗಿದೆ. ವಿಶೇಷ ಎಂದರೆ, ಜಪಾನ್‌ನಲ್ಲಿ ಲಾಂಚ್ ಆಗಲಿರುವ ಅಲ್ಟೋ 800 ಗೂ ಮತ್ತು ಭಾರತದಲ್ಲಿ ಬಿಡುಗಡೆಯಾಗಲಿರವ ಹೊಸ ಅಲ್ಟೋ 800 ಸಂಪೂರ್ಣವಾಗಿ ಬದಲಿರಲಿದೆ. 

2024ರಲ್ಲಿ ಭಾರತದಲ್ಲಿ ಓಡಲಿದೆ ಒಪ್ಪೋ ಎಲೆಕ್ಟ್ರಿಕ್ ಕಾರ್?!

3ನೇ ತಲೆಮಾರಿನ ಮಾರುತಿ ಅಲ್ಟೋ 800 ಮುಂಬರುವ ವರ್ಷ ಅಂದರೆ, 2022ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಕಾರಿನ ಕೆಲವು ಸ್ಪೈ ಚಿತ್ರಗಳನ್ನು ಕೆಲವರು ಆನ್‌ಲೈನ್‌ನಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ಮಾರುತಿ ಅಲ್ಟೋ 800ಗೆ ಹೋಲಿಸಿದರೆ, 2022ರ ಅಲ್ಟೋ 800 ಕಾರು ಹೆಚ್ಚು ದೊಡ್ಡಾಗಿದೆ. ಉದ್ದ, ಎತ್ತರ ಮತ್ತ ಅಗಲವೂ ಹೆಚ್ಚಾಗಿದೆ. ವಿಶೇಷ ಎಂದರೆ, ಹೊಸ ತಲೆಮಾರಿನ ಅಲ್ಟೋ ಕಾರನ್ನು ಕಂಪನಿಯು ಇನ್ನು ಮುಂದೆಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಲಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಮಾರುತಿ ಕಂಪನಿಯು ಸ್ವಿಫ್ಟ್ (Swift), ಡಿಸೈರ್ (Dezire) ಮತ್ತು ವ್ಯಾಗನ್ ಆರ್‌ (Wagon R) ಮತ್ತಿತರು ಕಾರಗಳನ್ನು ಉತ್ಪಾದನೆ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಎಸ್‌ಯುವಿ ಸ್ಟೈಲ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಕಾರು ಉತ್ಪಾದಕರು ತಮ್ಮೆಲ್ಲ ಮಾಡೆಲ್‌ ಕಾರುಗಳನ್ನು ಅಪ್‌ಗ್ರೇಡ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುತಿ ಕೂಡ ಹಿಂದೆ ಎಸ್ ಪ್ರೆಸ್ಸೋ ಎಂಬ ಕಾರನ್ನು ಲಾಂಚ್ ಮಾಡಿತ್ತು. ಹಾಗೆಯೇ ಅನೇಕ ಕಂಪನಿಗಳು ಎಸ್‌ಯುವಿ ರೀತಿ ಕಾಣುವಂಥ ಕಾರಗಳನ್ನು ಲಾಂಚ್ ಮಾಡುತ್ತಲೇ ಇವೆ. ಇದಕ್ಕೆ ಮಾರುತಿ ಕೂಡ ಹೊರತಲ್ಲ. ಹೊಸ ತಲೆಮಾರಿನ ಅಲ್ಟೋ 800 ಕೂಡ ಇದೇ ಮಾದರಿಯಲ್ಲಿ ಇರುವುದನ್ನು ಗುರುತಿಸಬಹುದಾಗಿದೆ.

Good News: ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ 

2022 ಅಲ್ಟೋ 800 ಎಂಜಿನ್ ಬಗ್ಗೆ ಹೇಳುವುದಾದರೆ, ಅಂಥ ಬದಲಾವಣೆಯನ್ನು ಕಾಣಬೇಕಿಲ್ಲ. 799 ಸಿಸಿ ಎಂಜಿನ್ ಇರಲಿದೆ ಎನ್ನಲಾಗುತ್ತಿದೆ. ಕ್ಯಾಬಿನ್ ಒಳಗಿನ ಸ್ಪೇಸ್ ಹೆಚ್ಚಾಗುವ ಸಾಧ್ಯತೆ ಇದೆ. ಸೆಮಿ ಡಿಜಿಟಲ್ ಇನ್ಸುಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಸ ಅಲ್ಟೋದಲ್ಲಿ ನೋಡಬಹುದಾಗಿದೆ. ಇನ್ನು ಸುರಕ್ಷತೆಗೆ ಸಂಬಂಧಿಸಿದಂತ ಮುಂಬದಿ ಸೀಟಿನಲ್ಲಿ ಎರಡು ಏರ್‌ಬ್ಯಾಗುಗಳು ಇರಲಿವೆ. ಜೊತೆಗೆ ಎಬಿಎಸ್ ಕೂಡ ಇರಲಿದೆ.

Follow Us:
Download App:
  • android
  • ios