ಇನ್ನೆರಡು ತಿಂಗಳಲ್ಲಿ ಹೊಸ ತಲೆಮಾರಿನ ಮಾರುತಿ ಸೆಲೆರಿಯೋ ಮಾರುಕಟ್ಟೆಗೆ?
ಮಾರುತಿ ಸುಜುಕಿಯ ಪ್ರಮುಖ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಸೆಲೆರಿಯೋ ಸೆಕೆಂಡ್ ಜೆನರೇಷನ್ ಕಾರು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಮೊದಲ ಬಾರಿಗೆ ಲಾಂಚ್ ಆದ ಈ ಕಾರು ನಿಧಾನವಾಗಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಕಂಪನಿ ಈ ಕಾರಿನ ಹೊಸ ಜೆನರೇಷನ್ ಕಾರು ಬಿಡುಗಡೆಗೆ ಸಜ್ಜಾಗಿದೆ.
ಭಾರತದ ಬಹುದೊಡ್ಡ ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ ತನ್ನ ಹಲವು ಕಾರಗಳು ನೆಕ್ಸ್ಟ್ ವರ್ಷನ್ ಬಿಡುಗಡೆ ಮಾಡುತ್ತಿದೆ. ಹೀಗೆ ಬಿಡುಗಡೆ ಕಾಣುತ್ತಿರುವ ಮಾರುತಿ ಸುಜುಕಿಯ ವಾಹನಗಳ ಸಾಲಿನಲ್ಲಿ ಸೆಲೆರಿಯೋ ಕೂಡ ಇದೆ. ವಾಸ್ತವದಲ್ಲಿ ಕಳೆದ ವರ್ಷವೇ ಹೊಸ ತಲೆಮಾರಿನ ಕಾರು ಮಾರುಕಟ್ಟೆಗೆ ಬರಲಿದೆ ಎನ್ನಲಾಗುತ್ತಿತ್ತು. ಆದರೆ, ಸಾಧ್ಯವಾಗಲಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಸೆಲೆರಿಯೋ ಕಾರಿನ ನೆಕ್ಸ್ಚ್ ಜನರೇಷನ್ ಈ ಏಪ್ರಿಲ್‌ನಲ್ಲಿ ಬಿಡುಗಡೆ ಕಾಣಲಿದೆ ಎನ್ನುತ್ತಿವೆ ಕೆಲವು ವರದಿಗಳು. ಈ ಕುರಿತ ಹಲವು ನ್ಯೂಸ್ ವೆಬ್‌ಸೈಟುಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ರೆನೋ ಕೈಗರ್ ಕಾರು; ವಿಶೇಷತೆಗಳೇ ಜೋರು!
2014ರಲ್ಲಿ ಲಾಂಚ್ ಆದ ಮಾರುತಿ ಸುಜುಕಿಯ ಸೆಲೆರಿಯೋ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಹುಂಡೈ ಕಂಪನಿಯ ಗ್ರ್ಯಾಂಡ್ ಐ10 ಮತ್ತು ಟಾಟಾ ಕಂಪನಿಯ ಟಾಟಾ ಟಿಯಾಗೋ ಕಾರುಗಳಿಗೆ ನೇರ ಸ್ಪರ್ಧೆಯೊಡ್ಡುವ ಸೆಲೆರಿಯೋ ಈ ವರ್ಷ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾಧ್ಯದೆ ಇದೆ. ಹೊಸ ಜನರೇಷನ್‌ನೊಂದಿಗೆ ಮತ್ತೊಂದಿಷ್ಟು ಫೀಚರ್, ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರಬಹುದು. ಮೂಲಗಳ ಪ್ರಕಾರ ಈ ಕಾರು ಏಪ್ರಿಲ್‌ನಲ್ಲಿ ಲಾಂಚ್ ಆಗಲಿದೆ. ಈ ಸೆಲೆರಿಯೋ ಹೊಸ ಜನರೇಷನ್ ಕಾರಿಗಾಗಿ ಕಂಪನಿ 2019ರಿಂದಲೇ ಕೆಲಸ ಮಾಡುತ್ತಿದೆ. ದೇಶದ ರಸ್ತೆಗಳಲ್ಲಿ ಈ ಕಾರು ಪ್ರರೀಕ್ಷಾರ್ಥವಾಗಿ ಹಲವು ಬಾರಿ ಓಡಾಡಿದೆ. ಈ ಬಗ್ಗೆ ಚಿತ್ರಗಳೂ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಸೆಲೆರಿಯೋ ಬಗ್ಗೆ ಆಸಕ್ತಿ ಹೊಂದಿರುವ ಹಲವು ಗ್ರಾಹಕರು ಹೊಸ ತಲೆಮಾರಿನ ಕಾರು ಲಾಂಚ್‌ಗಾಗಿ ಕಾದಿದ್ದಾರೆ.
ರಸ್ತೆಗಳಲ್ಲಿ ಪರೀಕ್ಷಾರ್ಥವಾಗಿ ಸಂಚರಿಸುವ ಸಂದರ್ಭದಲ್ಲಿ ತೆಗೆಯಲಾದ ಚಿತ್ರಗಳ ಪ್ರಕಾರ, ಹೊಸ ಸೆಲೆರಿಯೋದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಇರಲಿದೆ. ಹೊಸ ಸೆಲೆರಿಯೋದಲ್ಲಿ ಏಳು ಇಂಚಿನ ಸ್ಮಾರ್ಟ್ ಪ್ಲೇ ಸ್ಟಡಿಯೂ ಕೂಡ ಇರಲಿದೆ. ಈ ತರಹದ್ದನ್ನು ನೀವು ಮಾರುತಿ ಸುಜುಕಿಯ ಸ್ವಿಫ್ಟ್,ಎಸ್ ಪ್ರೆಸ್ಸೋ ಇತ್ಯಾದಿ ಕಾರುಗಳಲ್ಲಿ ಕಾಣಬಹುದು. ಸ್ಪೈ ಶಾಟ್‌ಗಳ ಪ್ರಕಾರ ಈ ಹ್ಯಾಚ್‌ಬ್ಯಾಕ್‌ನಲ್ಲಿ ಹೊಸ ಇನ್ಸ್‌ಟ್ರುಮೆಟ್ ಡಿಜಟಲ್ ಕನ್ಸೋಲ್ ಹೊಂದಲಿದೆ ಎಂದು ವರದಿಗಳ ಹೇಳುತ್ತಿವೆ.
ಫೆ.16ಕ್ಕೆ ಸಿಬಿ350 ಆಧರಿತ ಹೋಂಡಾ ಬೈಕ್.. ಏನೆಲ್ಲ ವಿಶೇಷ?
ಹೊಸ ತಲೆಮಾರಿನ ಸೆಲೆರಿಯೋ ಮಾರುತಿ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಆಧರಿತವಾಗಿ ನಿರ್ಮಾಣವಾಗಲಿದೆ. ಅಂದರೆ, ಹೊಸ ಸೆಲೆರಿಯೋದಲ್ಲಿ ಈಗಿರುವ ಸೆಲೆರಿಯೋಗಿಂತಲೂ ಹೆಚ್ಚು ಜಾಗ ಸಿಗಲಿದೆ. ಹೆಡ್‌ಲ್ಯಾಂಪ್ಸ್, ವಿಭಿನ್ನ ತರಹದ ಗ್ರಿಲ್, ಎಲ್ಇಡಿ ಸಿಗ್ನಚರ್ ಇರುವ ಹೊಸ ಟೈಲ್, ಲೈಟ್ ಹೊಸ ಟೇಲ್‌ಗೇಟ್ ಇತ್ಯಾದಿ ವಿನ್ಯಾಸಗಳಲ್ಲಿ ಹೊಸತನ ಕಾಣಲು ಸಿಗಲಿದೆ.
ಈಗ ಚಾಲ್ತಿಯಲ್ಲಿರುವ ಸೆಲೆರಿಯೋ 1.0 ಲೀಟರ್ ಎಂಜಿನ್ ಹೊಂದಿದೆ. ಆದರೆ, ಕೆಲವು ವರದಿಗಳ ಪ್ರಕಾರ, ಹೊಸ ಸೆಲೆರಿಯೋ ನಿಮಗೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಪ್ಷನ್‌ನಲ್ಲಿ ಸಿಗಲಿದ್ದು, ಈ ಬಗ್ಗೆ ಯಾವುದೇ ಖಚಿತ ಮಾಹಿತಿಲ್ಲ. ಇನ್ನು ಈ ಹೊಸ ತಲೆಮಾರಿನ ಸೆಲೆರಿಯೋ ಚಾಲ್ತಿಯಲ್ಲಿರುವ ಬಿಎಸ್6- ನಿಯಮಗಳ ಪ್ರಕಾರವೇ ರೂಪಿತಗೊಳ್ಳಲಿದೆ. ಇದರಲ್ಲಿ 1.0 ಲೀಟರ್ ಟ್ರಿಪಲ್ ಸಿಲೆಂಡರ್ ಕೆ10ಬಿ ಪೆಟ್ರೋಲ್ ಎಂಜಿನ್ ಇರಲಿದೆ. ಈ ಎಂಜಿನ್ ಪೀಕ್ ಟಾರ್ಕ್‌ನಲ್ಲಿ 67 ಬಿಎಚ್‌ಪಿ ಉತ್ಪಾದಿಸಲಿದೆ ಹಾಗೂ 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ನಿಮಗೆ 5 ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಸಿಗಲಿದೆ. ಜೊತೆಗೆ 5 ಸ್ಪೀಡ್ ಎಜಿಎಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಆಯ್ಕೆಯೂ ಸಿಗಲಿದೆ ಎನ್ನುತ್ತಿವೆ ಮೂಲಗಳು. ಆದರೆ, ಈ ಹೊಸ ತಲೆಮಾರಿನ ಸೆಲೆರಿಯೋ ಬಗ್ಗೆ ಮಾರುತಿ ಸುಜುಕಿಯು ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಆದರೆ, ಶೀಘ್ರವೇ ಈ ಸೆಲೆರಿಯೋ ಮಾರುಕಟ್ಟೆಗೆ ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ.. ಯಾವಾಗಿನಿಂದ?