ಫೆ.16ಕ್ಕೆ ಸಿಬಿ350 ಆಧರಿತ ಹೋಂಡಾ ಬೈಕ್.. ಏನೆಲ್ಲ ವಿಶೇಷ?

ಸಿಬಿ 350 ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಿತವಾದ ಹೊಸ ಮೋಟಾರ್‌ಸೈಕಲ್ ಅನ್ನು ಹೋಂಡಾ ಫೆ.16ರಂದು ಬಿಡುಗಡೆ ಮಾಡಲಿದೆ. ಈ  ಬಗ್ಗೆ ಹೋಂಡಾ ಟೀಸರ್ ಬಿಡುಗಡೆ ಮಾಡಿದ್ದು, ಈ ಹೊಸ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನೂ ಬಿಟ್ಟುಕೊಟ್ಟಿಲ್ಲ. ಆದರೆ, ಈ ಬೈಕ್ ಬಗ್ಗೆ ಕುತೂಹಲ ಜಾಸ್ತಿಯಾಗುತ್ತಿದ್ದು, ಪೂರ್ಣ ಮಾಹಿತಿಗೋಸ್ಕರ ಕಾಯಬೇಕಿದೆ.

New Honda CB350 based motorcycle to be unveiled on Feb 16 2021

ನವದೆಹಲಿ(ಫೆ. 01)  ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಹೋಂಡಾ ಇದೀಗ ಹೊಸ ಮೋಟಾರ್‌ಸೈಕಲ್ ಟೀಸರ್ ಬಿಡುಗಡೆ ಮಾಡಿದ್ದು, ಫೆಬ್ರವರಿ  16ಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಈಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ ಈ ಮೋಟಾರ್ ಸೈಕಲ್ ಸಿಬಿ 350 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದೆ. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಬೈಕ್ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಲಾಗಿದ್ದು, ಮೋಟಾರ್‌ಸೈಕಲ್‍ನ ಹಿಂಬದಿಯನ್ನು ಮಾತ್ರವೇ ತೋರಿಸಲಾಗಿದೆ. ಪೂರ್ಣ ಪ್ರಮಾಣದ ಮೋಟಾರ್‌ಸೈಕಲ್ ಹೇಗಿದೆ ಎಂಬುದನ್ನು ಇನ್ನೂ ತಿಳಿದು ಬಂದಿಲ್ಲ. ಅಷ್ಟು ಮಾತ್ರವಲ್ಲದೇ ತಾಂತ್ರಿಕ ಹಾಗೂ ಎಂಜಿನ್‌ ಬಗ್ಗೆಯೂ ಸಂಪೂರ್ಣವಾದ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಹಾಗಿದ್ದೂ, ಈ ಬೈಕ್ ಸಿಬಿ 350 ಬೈಕ್ ಮಾದರಿಯಲ್ಲೇ ಇರಬಹುದು ಎಂದು ಊಹಿಸಲಾಗುತ್ತಿದೆ. ಟೀಸರ್‌ನಲ್ಲಿ ಪವರ್ಡ್ ಬೈ ಲೀಗಸ್ಸೀ ಎಂದು ಬರೆಯಲಾಗಿದ್ದು, ಹೋಂಡಾ ಹೈನೆಸ್ ಸಿಬಿ 350 ಬಿಡುಗಡೆ ಸಂದರ್ಭದಲ್ಲಿ ಮಾಡಲಾದ ಟೀಸರ್ ‌ಗಿಂತ ಇದು ಭಿನ್ನವಾಗಿಯೇನೂ ಇಲ್ಲ.

ಮಹೀಂದ್ರಾ XUV300 ಸೇಫ್ಟಿ ರೇಟಿಂಗ್: 5 ಸ್ಟಾರ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಕಾರು

ಹೋಂಡಾದ ಹೊಸ ಮೋಟಾರ್‌ಸೈಕಲ್ ವಿನ್ಯಾಸದಲ್ಲಿ ಸಂಪೂರ್ಣವಾಗಿ ನಾವೀನ್ಯತೆಯನ್ನು ಕಾಣಬಹುದಾಗಿದೆ. ಈ ಹೊಸ ಬೈಕ್ ಪ್ಯಾಟರ್ ರಿಯರ್ ಟೈರ್ ಹೊಂದಿರಲಿದೆ. ಹೊಸ ಬೈಕು ಸಿಬಿ 350ನಲ್ಲಿನ 18 ಇಂಚಿನ ಚಕ್ರಗಳಿಂದ 17 ಇಂಚುಗಳಷ್ಟು ಗಾತ್ರದ ಹಿಂಭಾಗದ ಟೈರ್ ಅನ್ನು ಹೊಂದಿರುತ್ತದೆ. ಮತ್ತೊಂದು ದೊಡ್ಡ ಬದಲಾವಣೆಯೆಂದರೆ ಟೈರ್‌ಗಳ ಮೇಲೆ ಚಕ್ರದ ಹೊರಮೈ ಮಾದರಿಯು ಆನ್-ಆಫ್ ರೋಡ್ ಪ್ಯಾಟರ್ನ್ ಎಂದು ತೋರುತ್ತದೆ. ಈ ಮಾದರಿಯ ಟೈರ್ ಸ್ಕ್ರ್ಯಾಂಬ್ಲರ್ ಮಾದರಿಯ ಮೋಟಾರ್ ಸೈಕಲ್‌ಗಳಲ್ಲಿ ಸಾಮಾನ್ಯವಾಗಿರುತ್ತದೆ.  ಹೈನೆಸ್ ಸಿಬಿ 350ಯಲ್ಲಿ ಇರುವಂತೆಯೇ ಈ ಹೊಸ ಬೈಕ್‌ನಲ್ಲೂ ಎಕ್ಸಾಸ್ಟ್ ಕಾಣುತ್ತದೆ. ಎಲ್ಲಾ ಕ್ರೋಮ್ ಮಡ್-ಗಾರ್ಡ್ ರೆಟ್ರೊ ಶೈಲಿಯ ಮಡ್ ಗಾರ್ಡ್‌ನಂತಲ್ಲದೆ, ಈ ಹೊಸ ಮೋಟಾರ್‌ಸೈಕಲ್ ಟೈಲ್ ಲೈಟ್ ಅಸೆಂಬ್ಲಿಯನ್ನು ಹೊಂದಿದೆ, ಇದು ಹಿಂಭಾಗದ ಸೀಟಿನಲ್ಲಿ ಎತ್ತರದ ಫ್ಲಾಟರ್ ಪ್ಲಾಸ್ಟಿಕ್ ಫೆಂಡರ್‌ನೊಂದಿಗೆ ಎಲ್ಇಡಿ ಲೈಟ್‌ಗಳನ್ನು ಅಳವಡಿಸಲಾಗಿದ್ದು, ಬೈಕ್ ಸೌಂದರ್ಯವನ್ನು ಹೆಚ್ಚಿಸಿದೆ.

ಈಗ ಬಿಡುಗಡೆಯಾಗಿರುವ ಟೀಸರ್ ಲುಕ್ಕಿನಿಂದ ಗೊತ್ತಾಗುವ ಸಂಗತಿ ಏನೆಂದರೆ, ಈ ಹೊಸ ಮೋಟಾರ್‌ಸೈಕಲ್ ಸಿಬಿ 300 ಆರ್‌ ವಿನ್ಯಾಸವನ್ನು ಪ್ರತಿಫಲಿಸುತ್ತದೆ. ವಾಸ್ತವದಲ್ಲಿ ಈ ಸಿಬಿ 300 ಆರ್ ಬಿಎಸ್‌6 ನಿಯಮಗಳಡಿ ಬಿಡುಗಡೆಯಾಗಿರಲಿಲ್ಲ. ಆಸಕ್ತಿಕರ ಸಂಗತಿ ಏನೆಂದರೆ, ಹೊಸ ಬೈಕಿಗೆ ಕಂಪನಿ ಸ್ಕ್ಯಾಂಬ್ಲರ್ ವಿನ್ಯಾಸವನ್ನು ಅಳವಡಿಸಿಕೊಂಡಿದೆಯೇ ಅಥವಾ ಸಿಬಿ 350 ಹೈನೆಸ್ ರೀತಿಯಲ್ಲಿ ರೆಟ್ರೋ ನಿಯೋ ಮಾದರಿಗೆ ಮೊರೆ ಹೋಗಿದೆಯಾ ಕಾದು ನೋಡಬೇಕು.

ಇಂಡಿಯಾ ಟು ಸಿಂಗಾಪುರ ಬಸ್, ವಯಾ ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷ್ಯಾ!

ಬಿಎಸ್‌6 ನಿಯಮಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿಬಿ300 ಆರ್  ಬೈಕ್‌ಗೆ ಮಾರಾಟದ ಆಯ್ಕೆಯೇ ಉಳಿದಿಲ್ಲ. ಬೆಲೆಯ ಹೆಚ್ಚಳ ಕಾರಣದಿಂದಾಗಿ ಈ ಬೈಕ್ ಭಾರತದಲ್ಲಿ ತೀರಾ ಹೆಚ್ಚೇನೂ ಮಾರಾಟವಾಗಲಿಲ್ಲ. ಇದೀಗ ಅದರ ಸ್ಥಾನವನ್ನು ಸಿಬಿ 350 ಆಕ್ರಮಿಸಿಕೊಂಡಿದೆ. ಹಾಗಾಗಿ, ಈ ಹೊಸ ಬೈಕ್ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ.

ಈಗಾಗಲೇ ಬಿಡುಗಡೆಗೊಂಡು ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ಹೋಂಡಾ ಹೈನೆಸ್‌ 340 ಸಿಸಿ ಏರ್ ಕೋಲ್ಡ್ ಎಂಜಿನ್ ಹೊಂದಿದೆ. ಫ್ಯುಯೆಲ್ ಇಂಜೆಕ್ಟೆಡ್ ಮತ್ತು ಸಿಂಗಲ್ ಸಿಲೆಂಡರ್ ಎಂಜಿನ್ ಆದಾಗಿದ್ದು, 5,500 ಆರ್‌ಪಿಎಂನಲ್ಲಿ 20.8 ಹಾರ್ಸ್ ಪವರ್ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 3,000 ಆರ್ಪಿಎಂನಲ್ಲಿ 30ಎನ್ಎಂ ಉತ್ಪಾದಿಸುತ್ತದೆ. ಇದೇ ರೀತಿಯ ಎಂಜಿನ್ ಅನ್ನು ಈ ಹೊಸ ಬೈಕ್‌ನಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗ ಟೀಸರ್ ಅಷ್ಟೇ ಬಿಡಗುಡೆ ಮಾಡಿರುವ ಹೋಂಡಾ ಕಂಪನಿ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಇನ್ನಷ್ಟು ಮಾಹಿತಿಯನ್ನು ಈ ಹೊಸ ಬೈಕ್ ‌ಬಗ್ಗೆ ನೀಡಬಹುದು. ಹಾಗಾಗಿ, ಅಧಿಕೃತ ಮಾಹಿತಿ ತಿಳಿದುಕೊಳ್ಳಲು ಕನಿಷ್ಠ ಫೆಬ್ರವರಿ 16ರವರೆಗಾದರೂ ನಾವು ವೇಟ್ ಮಾಡಬೇಕಾಗುತ್ತದೆ.

ಸಾಮಾನ್ಯವಾಗಿ ಈ ಹೊಸ ಬೈಕ್ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಆಟೋ ವಲಯದ ತಜ್ಞರ ಪ್ರಕಾರ ಈ ಹೊಸ ಬೈಕ್ ಬೆಲೆ ಹೋಂಡಾ ಹೈನೆಸ್‌ಗಿಂತಲೂ ತುಸು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಹೋಂಡಾ ಹೈನೆಸ್ ಎಕ್ಸ್‌ ಶೋರೂಮ್ ಬೆಲೆ 1.86 ಲಕ್ಷ ರೂ.ನಿಂದ 1.92 ಲಕ್ಷ ರೂಪಾಯಿವರೆಗೂ ಇದೆ.

8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್

Latest Videos
Follow Us:
Download App:
  • android
  • ios