34 ಕಿ.ಮೀ ಮೈಲೇಜ್, ಕೈಗೆಟುಕುವ ದರದಲ್ಲಿ ಮಾರುತಿ ಅಲ್ಟೋ ಕೆ10 CNG ಕಾರು ಬಿಡುಗಡೆ!
ಎಲೆಕ್ಟ್ರಿಕ್ ವಾಹನಗಳ ಜೊತೆಗೆ CNG ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಮಾರುತಿ ಸುಜುಕಿ CNG ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಮಾರುತಿ ಅಲ್ಟೋ ಕೆ10 CNG ವರ್ಶನ್ ಬಿಡುಗಡೆಯಾಗಿದೆ. ಕೈಗೆಟುಕುವ ದರದಲ್ಲಿ ಈ ಕಾರು ಲಭ್ಯವಿದೆ. ಇಷ್ಟೇ ಅಲ್ಲ 34 ಕಿ.ಮೀ ಮೈಲೇಜ್ ನೀಡಲಿದೆ.
ನವದೆಹಲಿ(ನ.19): ಮಾರುತಿ ಅಲ್ಟೋ ಕೆ10 ಕಾರು ಭಾರತದಲ್ಲಿ ಭಾರಿ ಬೇಡಿಕೆಯ ಕಾರಾಗಿದೆ. ಮಾರಾಟದಲ್ಲೂ ದಾಖಲೆ ಬರೆದಿದೆ. ಇದೀಗ ಮಾರುತಿ ಸುಜುಕಿ CNG ವರ್ಶನ್ ಅಲ್ಟೋ ಕೆ10 ಕಾರು ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಅಂದರೆ ಒಂದು ಕೆಜಿ CNGಯಲ್ಲಿ ಕಾರು 33.85 ಕಿ.ಮೀ ಮೈಲೇಜ್ ನೀಡಲಿದೆ. ಪೆಟ್ರೋಲ್ ದರ ಏರಿಕೆ ನಡುವೆ CNG ಕಾರಿನ ಮೈಲೇಜ್ ಗ್ರಾಹಕರಲ್ಲಿ ಹೊಸ ಆಶಾವಾದ ಮೂಡಿಸಿದೆ. ನೂತನ ಕಾರಿನ ಬೆಲೆ 5.94 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಮಾರುತಿ ಸುಜುಕಿ CNG ಕಾರುಗಳಿಗೆ ಹೆಚ್ಚಿನ ಒತ್ತು ನೀಡಿದೆ. ಇತರ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಮಾರುತಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಸದ್ಯಕ್ಕಿಲ್ಲ ಎಂದಿದೆ. ಆದರೆ ಸತತವಾಗಿ CNG ಕಾರುಗಳ ಬಿಡುಗಡೆ ಮಾಡುತ್ತಿದೆ.
ಮಾರುತಿ ಅಲ್ಟೋ 800 ಸೇರಿದಂತೆ ಹಲವು ಮಾರುತಿ ಕಾರುಗಳು (Car) CNG ವರ್ಶನ್‌ನಲ್ಲಿ ಲಭ್ಯವಿದೆ. ಈ ಸಾಲಿಗೆ ಮಾರುತಿ ಅಲ್ಟೋ ಕೆ10 ಕಾರು(Maruti Suzuki Alto K10) ಕೂಡ ಸೇರಿಕೊಂಡಿದೆ. ಅಲ್ಟೋ ಕೆ10 ಕಾರು 1.0 ಲೀಟರ್ K10C ಡ್ಯುಯೆಲ್ ಜೆಟ್ VVT ಎಂಜಿನ್ ಹೊಂದಿದೆ. 65 bhp ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. CNG ಮಾರುತಿ ಕೆ10 ಕಾರು 55 bhp ಹಾಗೂ 82 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
CNG ವೇರಿಯೆಂಟ್‌ನಲ್ಲಿ ಟೊಯೋಟಾ ಗ್ಲಾಂಜಾ ಹಾಗೂ ಅರ್ಬನ್ ಕ್ರೂಸರ್, 30.61 ಕಿ.ಮೀ ಮೈಲೇಜ್!
21 ದಿನದಲ್ಲಿ 300 ಗ್ರಾಂಡ್ ವಿಟಾರಾ ಕಾರು ಗ್ರಾಹಕರಿಗೆ
ಕಾರು ಮಾರಾಟ ಸಂಸ್ಥೆಯಾದ ನೆಕ್ಸಾ, ಕೇವಲ 21 ದಿನಗಳಲ್ಲಿ ಮಾರುತಿ ಸುಜುಕಿಯ 300 ಗ್ರಾಂಡ್ ವಿಟಾರಾ ಕಾರುಗಳನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ತಲುಪಿಸಿದೆ. ಹೊಸ ಮಾದರಿಯ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಕರ್ನಾಟಕದಲ್ಲಿ ಅತ್ಯುತ್ತಮವಾದ ಸ್ಪಂದನೆ ದೊರೆತಿದ್ದು, ಈವರೆಗೆ 4,500ಕ್ಕೂ ಹೆಚ್ಚು ಬುಕಿಂಗ್ ಸ್ವೀಕರಿಸಲಾಗಿದೆ. ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ ಎಸ್‌ಯುವಿಯಲ್ಲಿ ಹೊಸ ಅವತರಣಿಕಯಾಗಿದೆ. ಅದು ಈ ವರ್ಷ ಜುಲೈನಲ್ಲಿ ಭಾರತದಲ್ಲಿ ಅನಾವರಣಗೊಂಡಿತ್ತು. ಅಧಿಕೃತ ಬಿಡುಗಡೆ ಮಾಡುವ ಮೊದಲೇ 57,000 ಬುಕಿಂಗ್‌ಗಳನ್ನು ಸ್ವೀಕರಿಸಲಾಗಿದೆ. ಕೆಲ ವರ್ಷಗಳಿಂದ ಎಸ್‌ಯುವಿ ವಿಭಾಗವು ಉತ್ತಮವಾದ ಬೆಳವಣಿಗೆ ಕಂಡಿದೆ. ಕಾರು ಉದ್ಯಮದಲ್ಲಿ ಶೇ.19ರಷ್ಟಿದ್ದ ಎಸ್‌ಯುವಿ ಕೊಡುಗೆ, 2021-22ರಲ್ಲಿ ಶೇ.40ಕ್ಕೆ ಏರಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಡುತ್ತಿರುವ ಹಾಗೂ ರಸ್ತೆ ಗೋಚರತೆ ಚೆನ್ನಾಗಿರುವುದೇ ಎಸ್‌ಯುವಿ ವಿಭಾಗದ ಬೆಳವಣಿಗೆ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿ 2.5 ಕೋಟಿಗೂ ಹೆಚ್ಚು ಕಾರು ಉತ್ಪಾದಿಸಲಿದೆ ಮಾರುತಿ ಸುಜುಕಿ
ಗ್ರ್ಯಾಂಡ್ ವಿಟಾರಾ ಪ್ರತಿ ಕಿಲೋ ಮೀಟರ್‌ಗೆ 27.97 ಮೈಲೇಜ್ ನೀಡುತ್ತದೆ. ಇಂಧನ-ಸಾಮರ್ಥ್ಯ ಅತ್ಯಂತ ದಕ್ಷತೆ ಹೊಂದಿದೆ. ಗ್ರ್ಯಾಂಡ್ ವಿಟಾರಾದ ಮಿಡ್ ಹೈಬ್ರಿಡ್ ಬೆಲೆ 10.45 ಲಕ್ಷ ರು.ಇಂದ ಆರಂಭವಾಗಲಿದೆ. ಸ್ಟ್ರಾಂಗ್ ಹೈಬ್ರಿಡ್ ಬೆಲೆ .17.99 ಲಕ್ಷ (ಎಕ್ಸ್-ಶೋರೂಮ್) ಇರಲಿದೆ.