48 ದೇಶಗಳಲ್ಲಿ ಲಭ್ಯವಿರುವ 16 ವರ್ಷಗಳ ಕಾಲ ನಂ.1 ಎನಿಸಿರುವ ಮಾರುತಿ ಸುಜಕಿ ಡಿಜೈರ್ ಹೊಸ ಮೈಲಿಗಲ್ಲು!
Maruti Dzire: ಭಾರತದ ಅತ್ಯಂತ ಪ್ರೀತಿಪಾತ್ರ ಸೆಡಾನ್ ಕಾರು ಮಾರುತಿ ಸುಜುಕಿ ಡಿಸೈರ್ ಅಪರೂಪದ ಪ್ರೊಡಕ್ಷನ್ ಮೈಲಿಗಲ್ಲನ್ನು ಸಾಧಿಸಿದೆ.
ಬೆಂಗಳೂರು (ಡಿ.30): ದೇಶದ ಅತ್ಯಂತ ಪ್ರೀತಿಯ ಸೆಡಾನ್ ಕ್ಲಾಸ್ ಕಾರು ಮಾರುತಿ ಸುಜುಕಿ ಡಿಸೈರ್ ಹೊಸ ಮೈಲಿಗಲ್ಲು ಸಾಧಿಸಿದೆ. ಮಾರುತಿ ಸುಜುಕಿ ಕಂಪನಿ ಡಿಜೈರ್ ಕಾರ್‌ನ 30 ಲಕ್ಷ ಪ್ರೊಡಕ್ಷನ್ ಮೈಲಿಗಲ್ಲನ್ನು ಮುಟ್ಟಿದೆ. ಡಿಜೈರ್ ಕಾರನ್ನು ಮಾರುಕಟ್ಟೆಗೆ ಅನಾವರಣ ಮಾಡಿದ 16 ವರ್ಷ 11 ತಿಂಗಳಲ್ಲಿ 30 ಲಕ್ಷ ಪ್ರೊಡಕ್ಷನ್ ಮೈಲಿಗಲ್ಲು ಮುಟ್ಟಿದೆ. ಇದಕ್ಕೂ ಮುನ್ನ 2015ರ ಏಪ್ರಿಲ್‌ನಲ್ಲಿ 1 ಲಕ್ಷ, 2019ರ ಜೂನ್‌ನಲ್ಲಿ 2 ಲಕ್ಷದ ಪ್ರೊಡಕ್ಷನ್ ಮೈಲಿಗಲ್ಲನ್ನು ಸಾಧಿಸಿತ್ತು. ಇಂದು ಮಾರುತಿ ಸುಜುಕಿ ಡಿಸೈರ್ ಕಾರು ವಿಶ್ವದ 48 ದೇಶಗಳಲ್ಲಿ ಲಭ್ಯವಿದೆ. ಇದಕ್ಕೂ ಮುನ್ನ ಮಾರುತಿ ಸುಜುಕಿ ಕಂಪನಿಯು ಆಲ್ಟೋ, ಸ್ವಿಪ್ಟ್ ಹಾಗೂ ವ್ಯಾಗನರ್ ಕಾರುಗಳಲ್ಲಿ 30 ಲಕ್ಷದ ಪ್ರೊಡಕ್ಷನ್ ಮೈಲಿಗಲ್ಲು ಸಾಧನೆ ಮಾಡಿತ್ತು.
2008ರಲ್ಲಿ ಮಾರುತಿ ಸುಜುಕಿ ಡಿಜೈರ್ ಅನಾವರಣ ಮಾಡಿದ್ದ ಕಂಪನಿ, ಅದಾದ ಬಳಿಕ ಇದರ 2 ಹಾಗೂ 3ನೇ ಆವೃತ್ತಿಯನ್ನು ಕ್ರಮವಾಗಿ 2012 ಹಾಗೂ 2017ರಲ್ಲಿ ಪರಿಚಯಿಸಿತ್ತು. 4ನೇ ಜನರೇಷನ್‌ನ ಆಲ್ ನ್ಯೂ ಡಿಜೈರ್ 2024ರ ನವೆಂಬರ್‌ನಲ್ಲಿ ಅನಾವರಣವಾಗಿದೆ. ಡಿಜೈರ್ ಭಾರತದಲ್ಲಿ ಅಚ್ಚುಮೆಚ್ಚಿನ ಕಾರ್, ಮಾತ್ರವಲ್ಲದೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮೆಚ್ಚುಗೆಯನ್ನು ಪಡೆದಿದೆ.
ಅಕ್ಟೋಬರ್ 2008 ರಲ್ಲಿ ಅದರ ರಫ್ತು ಪ್ರಾರಂಭವಾದಾಗಿನಿಂದ, ಲ್ಯಾಟಿನ್ ಮತ್ತು ಮಧ್ಯ ಅಮೆರಿಕ, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಪ್ರಮುಖ ಪ್ರದೇಶಗಳೊಂದಿಗೆ 48 ದೇಶಗಳಿಗೆ ಸುಮಾರು 2.6 ಲಕ್ಷ ಘಟಕಗಳನ್ನು ರಫ್ತು ಮಾಡಲಾಗಿದೆ. FY 2023-24 ರಲ್ಲಿ, ಮಾರುತಿ ಸುಜುಕಿಯಿಂದ ಡಿಜೈರ್ ಎರಡನೇ ಅತಿ ಹೆಚ್ಚು ರಫ್ತು ಮಾಡಲಾದ ಮಾದರಿಯಾಗಿದೆ.
ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ADAS ಕಾರು, ಹೊಸ ಹೋಂಡಾ ಅಮೇಜ್ ಬಿಡುಗಡೆ!
ಮೈಲಿಗಲ್ಲಿನ ಕುರಿತು ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಕೆಯುಚಿ, “ನಮ್ಮ ಗ್ರಾಹಕರ ನಿರಂತರ ನಂಬಿಕೆಗಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ, ಇದು ಮಾರುತಿ ಸುಜುಕಿ ಡಿಜೈರ್‌ಗಾಗಿ 3 ಮಿಲಿಯನ್ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಲು ಪ್ರಮುಖವಾಗಿದೆ' ಎಂದಿದ್ದಾರೆ. "ವರ್ಷಗಳಲ್ಲಿ, ಡಿಜೈರ್ ನಮ್ಮ ಮಾರಾಟಕ್ಕೆ ಗಣನೀಯ ಕೊಡುಗೆ ನೀಡಿದೆ, ನಮ್ಮನ್ನು 16 ವರ್ಷಗಳ ಕಾಲ ಸೆಡಾನ್ ವಿಭಾಗದ ಲೀಡರ್‌ಅನ್ನಾಗಿ ಮಾಡಿದೆ" ಎಂದು ಅವರು ಹೇಳಿದ್ದಾರೆ.
ಕೇವಲ 6.79 ಲಕ್ಷ ರೂಗೆ ಮಾರುತಿ ಸ್ವಿಫ್ಟ್ ಡಿಝೈರ್ ಬಿಡುಗಡೆ, ಗರಿಷ್ಠ 5 ಸ್ಟಾರ್ ಸುರಕ್ಷತೆ!