ಕೇವಲ 6.79 ಲಕ್ಷ ರೂಗೆ ಮಾರುತಿ ಸ್ವಿಫ್ಟ್ ಡಿಝೈರ್ ಬಿಡುಗಡೆ, ಗರಿಷ್ಠ 5 ಸ್ಟಾರ್ ಸುರಕ್ಷತೆ!
ಹೊಚ್ಚ ಹೊಸ ಮಾರುತಿ ಸ್ವಿಫ್ಟ್ ಡಿಝೈರ್ ಕಾರು ಬಿಡುಗಡೆಯಾಗಿದೆ. ಕೇವಲ 6.79 ಲಕ್ಷ ರೂಪಾಯಿ ಬೆಲೆಯಲ್ಲಿ ಗರಿಷ್ಠ ಅಂದರೆ 5 ಸ್ಟಾರ್ ಸುರಕ್ಷತೆ ಕಾರು ಇದಾಗಿದೆ. ಮಾರುತಿ ಸುಜುಕಿಯ ಮೊದಲ 5 ಸ್ಟಾರ್ ಸುರಕ್ಷತೆ ಕಾರು ಇದಾಗಿದೆ. ಬರೋಬ್ಬರಿ 25.72 ಕಿ.ಮಿ ಮೈಲೇಜ್ ನೀಡಲಿದೆ. ಕಡಿಮೆ ಬೆಲೆಯಲ್ಲಿ ಮಾರುತಿ ಡಿಝೈರ್ ಕಾರಿನ ಸಂಪೂರ್ಣ ಡಿಟೇಲ್ ಇಲ್ಲಿದೆ.
ಮಾರುತಿ ಸುಜುಕಿ ಕಾರುಗಳು ಸುರಕ್ಷತೆ ಇಲ್ಲ ಅನ್ನೋ ಮಾತುಗಳು ಪ್ರತಿ ಬಾರಿ ಕೇಳಿಬರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ 5 ಸ್ಟಾರ್ ಸುರಕ್ಷತೆಯ ಕಾರು ಬಿಡುಗಡೆ ಮಾಡಿದೆ. ಮಾರುಜಿ ಸುಜುಕಿ ಸ್ವಿಫ್ಟ್ ಡಿಝೈರ್ ಕಾರು ಬಿಡುಗಡೆಯಾಗಿದೆ. ಸಬ್ ಕಾಂಪಾಕ್ಟ್ ಸೆಡಾನ್ ಕಾರು ಹೊಸ ರೂಪ, ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ ಹಾಗೂ ಹೆಚ್ಚುವರಿ ಫೀಚರ್ಸ್ ಮೂಲಕ ಬಿಡುಗಡೆಯಾಗಿದೆ.
ಹೊಸ ಸ್ವಿಫ್ಟ್ ಡಿಝೈರ್ ಕಾರಿನ ಬೆಲೆ 6.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ವಿಶೇಷ ಅಂದರೆ ಒಂದು ಲೀಟರ್ ಪೆಟ್ರೋಲ್‌ಗೆ ಮೈಲೇಜ್ ಬರೋಬ್ಬರಿ 25.71 ಕಿ.ಮಿ. ಸಿಎನ್‌ಜಿ ವೇರಿಯೆಂಟ್ ಡಿಝೈರ್ ಕಾರು ಬರೋಬ್ಬರಿ 33.73 ಕಿ.ಮಿ ಮೈಲೇಜ್ ನೀಡಲಿದೆ. ಹೀಗಾಗಿ 5 ಸ್ಟಾರ್ ಸುರಕ್ಷತೆ ನೀಡಿದರೂ ಮೈಲೇಜ್ ಹಾಗೂ ನಿರ್ವಹಣೆ ವಿಚಾರದಲ್ಲಿ ಮಾರುತಿ ತನ್ನ ಬ್ರ್ಯಾಂಡ್ ವ್ಯಾಲ್ಯೂ ಉಲಳಿಸಿಕೊಂಡಿದೆ.
ಹೊಸ ಮಾರುತಿ ಸ್ವಿಫ್ಟ್ ಡಿಝೈರ್ ಕಾರಿನ ವಿನ್ಯಾಸ ಸಂಪೂರ್ಣ ಬದಲು. ಕಟ್ಟಿಂಗ್ ಎಡ್ಜ್ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇದುವರೆಗೂ ಬಿಡುಗಡೆಯಾಗಿರು ಡಿಝೈರ್ ಕಾರಿಗೆ ಹೋಲಿಸಿದರೆ, ಈ ಬಾರಿಯ ಹೊಸ ಡಿಝೈರ್ ಅತ್ಯುತ್ತಮ ವಿನ್ಯಾಸ ಹೊಂದಿದೆ. ಇನ್ನು 1.2 ಲೀಟರ್ 3 ಸಿಲಿಂಡರ್ ಎಂಜಿನ್ ಹೊಂದಿದೆ. ಪೆಟ್ರೋಲ್ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 111.7 ಎನಎಂ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ.
ಮಾರುತಿ ಸುಜುಕಿಯ ಮೊದಲ ಗರಿಷ್ಠ ಸುರಕ್ಷತೆ ಕಾರು ಇದಾಗಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ನೂತನ ಡಿಝೈರ್ ಕಾರು 5 ಸ್ಟಾರ್ ಸೇಫ್ಟಿಂಗ್ ರೇಟಿಂಗ್ಸ್ ಪಡೆದಿದೆ. 5 ಸ್ಟಾರ್ ವಾಹನಗಳಿಗೆ ನೀಡುವ ಗರಿಷ್ಠ ಸೇಫ್ಟಿ ರೇಟಿಂಗ್ಸ್ ಆಗಿದೆ. 6 ಏರ್‌ಬ್ಯಾಗ್, ಇಬಿಡಿ, ಎಬಿಎಸ್, ಹಿಲ್ ಹೋಲ್ಡ್ ಅಸಿಸ್ಟ್, ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.
ನೂತನ ಡಿಝೈರ್ ಕಾರು Lxi, Vxi,Zxi ಹಾಗೂ Zxi+ ವೇರಿಯೆಂಟ್‌ನಲ್ಲಿ ಲಭ್ಯವಿದೆ.ಸಿಎನ್‌ಜಿ ವೇರಿಯೆಂಟ್ ಕಾರು Vxiಹಾಗೂ Zxi ಟ್ರಿಮ್‌ನಲ್ಲಿ ಲಭ್ಯವಿದೆ. ಆರಂಭಿಕ ಬೆಲೆ 6.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಪ್ ಮಾಡೆಲ್ ಬೆಲೆ 10.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಸನ್‌ರೂಪ್ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.
ಕಾರಿನ ಇಂಟಿರಿಯರ್ ಕೂಡ ಅಷ್ಟೇ ಉತ್ತಮವಾಗಿದೆ. ಪ್ರೀಮಿಯಂ ಫೀಲ್ ಹಾಗೂ ಗುಣಮಟ್ಟತೆ ಕಾಪಾಡಿಕೊಳ್ಳಲಾಗಿದೆ. ವೈಯರ್‌ಲೆಸ್ ಕನೆಕ್ಟಿವಿಟಿ, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಯುಎಸ್‌ಡಿ ಚಾರ್ಜಿಂಗ್ ಪೋರ್ಟ್ ಲಭ್ಯವಿದೆ. ಮುಂಭಾಗದಲ್ಲಿ ಹೊಸ ಗ್ರಿಲ್ ನೀಡಲಾಗಿದೆ. ಈ ಮೂಲಕ ಕಾರಿನ ಸ್ಪೋರ್ಟೀವ್ ಲುಕ್ ಹೆಚ್ಚಾಗಿದೆ.