Car Price Hike: ಹೊಸ ವರ್ಷಕ್ಕೆ ಹೊಸ ಕಾರು ಖರೀದಿ ಯೋಚನೆ ನಿಮಗಿದೆಯಾ?ಜನವರಿಯಿಂದ ಮಾರುತಿ ಸುಜುಕಿ ಬೆಲೆ ಏರಿಕೆ!

  • ಹೊಸ ವರ್ಷಕ್ಕೆ ಹೊಸ ಕಾರು ಖರೀದಿ ಹೆಚ್ಚು
  • ಜನವರಿಯಿಂದ ಮಾರುತಿ ಸುಜುಕಿ ಕಾರಿನ ಬೆಲೆ ಹೆಚ್ಚಳ
  • ಹೊಸ ವರ್ಷದಿಂದ ಕಾರು ದುಬಾರಿ, ಇಲ್ಲಿದೆ ಬೆಲೆ ವಿವರ
Maruti Suzuki annouces price hike from January 2022 due higher production cost ckm

ನವದೆಹಲಿ(ಡಿ.02):  ಹೊಸ ವರ್ಷವನ್ನು(New Year 2022) ಹೊಸ ಕಾರು ಖರೀದಿಯೊಂದಿಗೆ ಹಲವರು ಬರಮಾಡಿಕೊಳ್ಳುತ್ತಾರೆ. ಪ್ರತಿ ವರ್ಷ ಹೊಸ ವರ್ಷಕ್ಕೆ ಕಾರು(Cars) ಕಂಪನಿಗಳು ಹಲವು ಆಫರ್ ನೀಡುತ್ತವೆ. ಭರ್ಜರಿ ಡಿಸ್ಕೌಂಟ್(Offers) ಸೇರಿದಂತೆ ಹಲವು ಆಫರ್ ಹೊಸ ವರ್ಷಕ್ಕೆ ಸದಾ ಸಿದ್ದ. ಆದರೆ ಈ ಬಾರಿ ಹೊಸ ವರ್ಷದಲ್ಲಿ ಕಾರು ಖರೀದಿ ಕೊಂಚ ದುಬಾರಿಯಾಗಿದೆ. ಜನವರಿ 1, 2022ರಿಂದ ಮಾರುತಿ ಸುಜುಕಿ(Maruti Suzuki) ತನ್ನ ಕಾರುಗಳ ಬೆಲೆ ಹೆಚ್ಚಿಸುತ್ತಿದೆ(Price Hike). 

ಮಾರುತಿ ಸುಜುಕಿ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗುತ್ತಿದೆ.  ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಾರಿಗೆ ಬೆಲೆ ಹೆಚ್ಚಾಗಿದೆ. ಇದರ ಪರಿಣಾಮ ಅನಿವಾರ್ಯವಾಗಿ ಕಾರುಗಳ ಬೆಲೆ ಹೆಚ್ಚಿಸಬೇಕಾಗಿದೆ ಎಂದು ಮಾರುತಿ ಸುಜುಕಿ ಹೇಳಿದೆ. 

Maruti Swift Micro SUV:ಟಾಟಾ ಪಂಚ್‌ ಪ್ರತಿಸ್ಪರ್ಧಿಯಾಗಿ ಸುಜುಕಿ ಸ್ವಿಫ್ಟ್ ಕ್ರಾಸ್!?

ಕಾರಿನ ಮಾಡೆಲ್(Model) ಮೇಲೆ ಬೆಲೆ ಹೆಚ್ಚಳವಾಗಲಿದೆ. ಸದ್ಯ ಮಾರುತಿ ಸುಜುಕಿ ಬೆಲೆ ಹೆಚ್ಚಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಯಾವ ಕಾರಿಗೆ ಎಷ್ಟು ಬೆಲೆ ಏರಿಕೆಯಾಗುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಬಾರಿ ಎಲ್ಲಾ ಕಾರುಗಳ ಬೆಲೆ ಹೆಚ್ಚಳ ಖಚಿತ ಎಂದು ಸ್ಪಷ್ಟಪಡಿಸಿದೆ.

2021ರಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ ಮಾಡಿದೆ. ಕಚ್ಚಾ ವಸ್ತುಗಳ(raw material) ಬೆಲೆ ಏರಿಕೆಯಿಂದ ಮಾರುತಿ ಸುಜುಕಿ ಬೆಲೆ ಏರಿಕೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಆಯ್ದ ಕಾರುಗಳ ಬೆಲೆ 1.9 ಶೇಕಡಾ ಹೆಚ್ಚಿಸಲಾಗಿತ್ತು. ಕೆಲ ಕಾರುಗಳ ಮೇಲೆ ಮಾರುತಿ ಸುಜುಕಿ 1,000 ರೂಪಾಯಿಯಿಂದ 22,500 ರೂಪಾಯಿವರೆಗೆ ಹೆಚ್ಚಿಸಲಾಗಿತ್ತು.

New Car Launch: ಅಪ್‌ಡೇಟ್‌ಗಳೊಂದಿಗೆ ರಸ್ತೆಗಿಳಿಯಲಿದೆ ಹೊಸ ಮಾರುತಿ ವಿಟಾರಾ ಬ್ರೆಜಾ

ಭಾರತದ ಆಟೋಮೊಬೈಲ್ ಕ್ಷೇತ್ರ ಕಳೆದ 3 ವರ್ಷಗಳಿಂದ ಸತತ ಹೊಡೆತ ಅನುಭವಿಸುತ್ತಿದೆ. 2019ರಲ್ಲಿ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ಮಾರಾಟ ಕುಂಠಿತಗೊಂಡಿತ್ತು. 2020 ಹಾಗೂ 2021 ರಲ್ಲಿ ಕೊರೋನಾ ವೈರಸ್ ಹೊಡೆತ ನೀಡಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಿಂದ ಮಾರಾಟ ಕುಸಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದೀಗ ಭಾರತೀಯ ಆಟೋಮೊಬೈಲ್ ಚಿಪ್ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಹಲವು ಉತ್ಪಾದನಾ ಘಟಗಳು ಕಾರ್ಯನಿರ್ವಹಿಸುತ್ತಿಲ್ಲ. ಕಾರು ಉತ್ಪಾದನೆ ಕೂಡ ಕುಸಿದಿದೆ. ಆಮದು ಸಂಕು ಹೆಚ್ಚಳ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳು ಇದೀಗ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಗೆ ಕಾರಣವಾಗಿದೆ.

ಹಲವು ಅಡೆತಡೆ ನಡುವೆನವೆಂಬರ್ ತಿಂಗಳ  ಗರಿಷ್ಠ ಮಾರಾಟ ಪಟ್ಟಿಯಲ್ಲಿ ಮಾರುತಿ ಕಾರುಗಳು ಸ್ಥಾನ ಉಳಿಸಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಮಾರುತಿ ವ್ಯಾಗನಆರ್ ಪಾತ್ರವಾಗಿದೆ. ನವೆಂಬರ್ ತಿಂಗಳಲ್ಲಿ 16,853 ವ್ಯಾಗನ್ಆರ್ ಕಾರು ಮಾರಾಟವಾಗಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಮಾರುತಿ ಸ್ವಿಫ್ಟ್ 14,568 ಕಾರುಗಳು ಮಾರಾಟವಾಗಿದೆ. ಮೂರನೇ ಸ್ಥಾನದಲ್ಲಿರುವ ಮಾರುತಿ ಅಲ್ಟೋ ಕಾರು 13,812 ಕಾರುಗಳು ಮಾರಾಟವಾಗಿದೆ. ನವೆಂಬರ್ ತಿಂಗಳಲ್ಲಿ ಮಾರುತಿ ಬ್ರಿಜಾ 10,760 ಕಾರುಗಳು ಮಾರಾಟವಾಗಿದೆ.

ನವೆಂಬರ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಕಾರು ಗರಿಷ್ಠ ಮಾರಾಟ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದೆ. 6ನೇ ಸ್ಥಾನದಲ್ಲಿ ಮಾರುತಿ ಬಲೆನೋ, 7ನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್, 8ನೇ ಸ್ಥಾನದಲ್ಲಿ ಮಾರುತಿ ಇಕೋ, 9ನೇ ಸ್ಥಾನದಲ್ಲಿ ಮಾರುತಿ ಎರ್ಟಿಗಾ ಹಾಗೂ 10ನೇ ಸ್ಥಾನದಲ್ಲಿ ಕಿಯಾ ಸೆಲ್ಟೋಸ್ ಸ್ಥಾನ ಪಡೆದಿದೆ ಟಾಪ್ 10 ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ 8 ಕಾರುಗಳು ಸ್ಥಾನಪಡೆದಿದೆ
 

Latest Videos
Follow Us:
Download App:
  • android
  • ios