Asianet Suvarna News Asianet Suvarna News

Maruti Swift Micro SUV:ಟಾಟಾ ಪಂಚ್‌ ಪ್ರತಿಸ್ಪರ್ಧಿಯಾಗಿ ಸುಜುಕಿ ಸ್ವಿಫ್ಟ್ ಕ್ರಾಸ್!?

ಟಾಟಾ ಮೋಟಾರ್ಸ್‌ನ ಪಂಚ್ (Punch) ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಕೂಡ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸುಜುಕಿ ಸ್ವಿಫ್ಟ್ ಕ್ರಾಸ್ (Suzuki Swift Cross) ಎಂಬ ಹೊಸ ಕಾರನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ಜಪಾನ್‌ನಲ್ಲಿ ಮೊದಲಿಗೆ ಬಿಡುಗಡೆಯಾಗಿ, ಆ ನಂತರ ಭಾರತವು ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ, 

Maruti suzuki plan to launch swift cross micro suv to rival tata punch car
Author
Bengaluru, First Published Dec 1, 2021, 3:39 PM IST
  • Facebook
  • Twitter
  • Whatsapp

ಟಾಟಾ ಮೋಟಾರ್ಸ್‌ (TATA Motors)ನ ಪಂಚ್‌ (PUNCH)ನ ಬಿಡುಗಡೆಯೊಂದಿಗೆ  ಭಾರತೀಯ ವಾಹನ ಉದ್ಯಮದ ಎಲ್ಲ ಸಮೀಕರಣಗಳು ಬದಲಾಗಿವೆ. ಪಂಚ್‌ಗೆ ಸಿಕ್ಕಾಪಟ್ಟೆ ಹೈಪ್ ಮತ್ತು ಬೇಡಿಕೆ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ. ಭಾರತದ ಅತಿ ದೊಡ್ಡ ವಾಹನ ಉತ್ಪಾದಕ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಈಗ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವ  ಬಗ್ಗೆ ಯೋಚಿಸುತ್ತಿದೆ. ಈ ಹಿಂದೆ, ಬಲೆನೋ(Baleno) ಆಧರಿತ ಮೈಕ್ರೋ ಎಸ್‌ಯುವಿ (Micro SUV) ಪಂಚ್‌ಗೆ ಠಕ್ಕರ್ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ, ಈಗಿನ ಹೊಸ ಮಾಹಿತಿಯ ಪ್ರಕಾರ, ಸುಜುಕಿ ಸ್ವಿಪ್ಟ್ (Suzuki Swift) ಹ್ಯಾಚ್‌ಬ್ಯಾಕ್ ಆಧರಿತ ಮೈಕ್ರೋ ಎಸ್‌ಯುವಿ ಉತ್ಪಾದನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. ಜಪಾನ್‌ನಲ್ಲಿ ಕಂಪನಿಯು ಈ ಮೈಕ್ರೋ ಎಸ್‌ಯುವಿಯನ್ನು ಸುಜುಕಿ ಸ್ವಿಫ್ಟ್ ಕ್ರಾಸ್ (Suzuki Swift Cross) ಹೆಸರಿನಲ್ಲಿ ಬಿಡುಗಡೆ ಮಾಡಲಿದ್ದು, 2024ರ ಹೊತ್ತಿಗೆ ಭಾರತವೂ ಸೇರಿದಂತೆ ಜಗತ್ತಿನ ಇತರ ಮಾರುಕಟ್ಟೆಗ ಲಾಂಚ್ ಆಗಬಹುದು ಎನ್ನಲಾಗುತ್ತಿದೆ. 

ಭಾರತದಲ್ಲಿ ಮಾರುತಿ ಕಳೆದ ತಿಂಗಳವಷ್ಟೇ ಹೊಸ ತಲೆಮಾರಿನ ಸೆಲೆರಿಯೋ (Celerio)  ಲಾಂಚ್ ಮಾಡಿತ್ತು. ಹಾಗೆಯೇ, ಸ್ವಿಫ್ಟ್ (Swift), ಬಲೆನೋ (Baleno), ಬ್ರೆಜಾ (Brezza), ಎಸ್ ಕ್ರಾಸ್ (S-Cross) ವಾಹನಗಳ ಅಪ್‌ಡೇಟ್ ವರ್ಷನ್‌ಗಳು ಸಾಲು ಸಾಲಾಗಿ ಬಿಡುಗಡೆಗೆ ಸಜ್ಜಾಗುತ್ತಿವೆ. ಇಷ್ಟಾಗಿಯೂ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಉಂಟಾಗಿರುವ ಕೊರತೆಯನ್ನು ಕೊರತೆಯನ್ನು ಸ್ವಿಫ್ಟ್ ಆಧರಿತ ಮೈಕ್ರೋ ಎಸ್‌ಯುವಿ ಮೂಲಕ ತುಂಬಿಕೊಳ್ಳಲು ಹೊರಟಿದೆ ಎನ್ನಬಹುದು.

Auto Arrivals: ನೆಕ್ಸ್ಟ್ ಜೆನ್ ಟಾಟಾ ಟಿಯಾಗೋ ಸೇರಿ 10 ಹೊಸ ವಾಹನಗಳು!

ಸ್ವಿಫ್ಟ್ ಆಧರಿತ ಮೈಕ್ರೋ ಎಸ್‌ಯುವಿ ಸುಜುಕಿ ಸ್ವಿಫ್ಟ್ ಕ್ರಾಸ್ ಮುಂದಿನ ವರ್ಷ ಲಾಂಚ್ ಆಗಬಹುದು. ಹಾಗೆಯೇ, ಇದರ ಸ್ಪೋರ್ಟೀ ವರ್ಷನ್ ಸ್ವಿಫ್ಟ್ ಸ್ಪೋರ್ಟ್ (Swift Sport) ಕೂಡ 2023ರಲ್ಲಿ ಮಾರುಕಟ್ಟೆಗೆ ದಾಪುಗಾಲು ಹಾಕಬಹುದು. ಇದರೊಂದಿಗೆ ಸುಜುಕಿ ಬಹುದೊಡ್ಡ ಲಾಂಚ್ ‌ಗಳನ್ನು ಹಾಕಿಕೊಳ್ಳುತ್ತಿರುವುದು ವೇದ್ಯವಾಗುತ್ತದೆ. ಮುಂದಿನ ವರ್ಷ ಲಾಂಚ್ ಆಗಿಲಿರುವ ಸುಜುಕಿ ಸ್ವಿಫ್ಟ್ ಕ್ರಾಸ್ (Suzuki Swift Cross) ಟಾಟಾ ಕಂಪನಿ ಪಂಚ್ (PUNCH)ಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಹಾಗೆ ನೋಡಿದರೆ, ಪಂಚ್‌ಗೆ ಎದುರಾಳಿಯಾಗಿ ಭಾರತದಲ್ಲಿ ಮಾರುತಿಯು ಇಗ್ನಿಸ್(Ignis) ಹೊಂದಿದೆ. ಆದರೂ, ಕಂಪನಿಯು ಸುಜುಕಿ ಸ್ವಿಫ್ಟ್ ಅನ್ನು ಪಂಚ್‌ಗೆ ಪೈಪೋಟಿ ನೀಡಲು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. 

ಅಂದರೆ, ಮಾರುತಿಯ ಈ ಹೊಸ ಮೈಕ್ರೋ ಎಸ್‌ಯುವಿ ಇಗ್ನಿಸ್‌ಗಿಂತ ಮೇಲ್ಪಟ್ಟ ಹಾಗೂ ವಿಟಾರಾ ಬ್ರೆಜಾಗಿಂತ ಕೆಳಗಿನ ಹಂತದಲ್ಲಿ ಅಂದರೆ, ಇವರೆಡು ಮಧ್ಯೆದ ಕಾರ್ ಆಗಿ ಸುಜುಕಿ ಸ್ವಿಫ್ಟ್ ಕ್ರಾಸ್ ‌ವಾಹನ ಬಿಡುಗಡೆ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ ಎನ್ನಲಾಗಿದೆ. 

award:ಹುಂಡೈನ IONIQ 5 ಕಾರಿಗೆ 2022 'ವರ್ಷದ ಜರ್ಮನ್ ಕಾರು ಪ್ರಶಸ್ತಿ!

ಸುಜುಕಿಯ ಹೊಸ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲೇ ಈ ಹೊಸ ಮೈಕ್ರೋ ಎಸ್‌ಯುವಿ ತಯಾರಾಗಲಿದೆ. ಜೊತೆಗೆ, ಸ್ವಿಫ್ಟ್ ಕ್ರಾಸ್‌ನಲ್ಲಿ ಟರ್ಬೋಚಾರ್ಜ್ಡ್ 1.4 ಲೀಟರ್ ಎಂಜಿನ್ ಬರಲಿದೆ. ಇದೇ ಎಂಜಿನ್ ಅನ್ನು ನೀವು ಸ್ವಿಫ್ಟ್ ಕಾರಿನಲ್ಲಿರುವುದನ್ನು ಗಮನಿಸಬಹುದು. ಈ ಎಂಜಿನ್ ಗರಿಷ್ಠ 129 ಬಿಎಚ್‌ಪಿ ಪವರ್ ಹಾಗೂ 235 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೈಯರ್ ಗ್ರೌಂಡ್ ಕ್ಲಿಯರನ್ಸ್ ಇರಲಿದ್ದು, ಆಫ್ ರೋಡ್ ಸಾಮರ್ಥ್ಯವೂ ಇದಕ್ಕೆ ಒದಗಿ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಂಪನಿಯೇನೂ ಇನ್ನೂ ಅಧಿಕೃತವಾಗಿ ಹೇಳಿಲ್ಲವಾದರೂ, ಜಪಾನ್ ಪತ್ರಿಕೆಯೊಂದರಲ್ಲಿ ಈ ಸುಜುಕಿ ಸ್ವಿಫ್ಟ್ ಕ್ರಾಸ್ ಬಗ್ಗೆ ಮಾಹಿತಿಯನ್ನು ಷೇರ್ ಮಾಡಿಕೊಳ್ಳಲಾಗಿದೆ. ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಸುಜುಕಿ ಸ್ವಿಫ್ಟ್ ಕ್ರಾಸ್ ಖಂಡಿತವಾಗಿಯೂ ಟಾಟಾ ಮೋಟಾರ್ಸ್‌ನ ಪಂಚ್‌ಗೆ ತೀವ್ರ ಪೈಪೋಟಿಯನ್ನು ನೀಡಬಹುದು. 

Follow Us:
Download App:
  • android
  • ios