ಮಾರುತಿ ಎಸ್-ಪ್ರೆಸ್ಸೋ PNZ ಆವೃತ್ತಿ ಬಿಡುಗಡೆ
ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ತನ್ನ ಸಿಎನ್ಜಿ ಶ್ರೇಣಿಯನ್ನು ವಿಸ್ತರಿಸಿದೆ. ಕಂಪನಿಯು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಎಸ್-ಸಿಎನ್ಜಿ (CNG) ಯನ್ನು ಬಿಡುಗಡೆ ಮಾಡಿದೆ
ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ತನ್ನ ಸಿಎನ್ಜಿ ಶ್ರೇಣಿಯನ್ನು ವಿಸ್ತರಿಸಿದೆ. ಕಂಪನಿಯು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಎಸ್-ಸಿಎನ್ಜಿ (CNG) ಯನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 5.90 ಲಕ್ಷ ರೂ. (ಎಕ್ಸ್ ಶೋ ರೂಂ). ವಾಹನವು ಕೆ (K)-ಸರಣಿ 1.0-ಲೀಟರ್ ಫ್ಯುಯಲ್ ಟ್ಯಾಂಕ್ ಹೊಂದಿದೆ ಮತ್ತು ಮತ್ತು 56 ಬಿಎಚ್ಪಿ (bhp) ವರೆಗೆ ಗರಿಷ್ಠ ಪವರ್ ಅನ್ನು ಉತ್ಪಾದಿಸುತ್ತದೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊದ ಎಲ್ಲಾ-ಹೊಸ ಸಿಎನ್ಜಿ (CNG) ಮಾದರಿಯು ಎಲ್ಎಕ್ಸ್ಐ (LXi) ಮತ್ತು ವಿಎಕ್ಸ್ಐ (VXi) ಎಂಬ ಎರಡು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಸಮಾನವಾದ ಪೆಟ್ರೋಲ್ ವೇರಿಯಂಟ್ಗಿಂತ ಇದು 95,000 ರೂ. ಹೆಚ್ಚು ದುಬಾರಿಯಾಗಿದೆ. ಮಾರುತಿ ಸುಜುಕಿ ಪರಿಚಯಿಸಿದ ನಂತರ ಎಸ್-ಪ್ರೆಸ್ಸೊದ 2.26 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ಹೇಳಿದೆ.
5 ಸ್ಟಾರ್ ರೇಟಿಂಗ್ ಇದ್ರೂ ಶೂನ್ಯ ಮಾರಾಟ: ಎಸ್-ಕ್ರಾಸ್ ವಿವರ ತೆಗೆದು ಹಾಕಿದ ಮಾರುತಿ
ಮಾರುತಿ ಸುಜುಕಿ (Maruti Suzuki) S-ಪ್ರೆಸ್ಸೊ S-CNG ವೇರಿಯಂಟ್ (Variant) 32.73 ಕಿಮೀ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಲಾಗಿದೆ. ಇದು 1.0-ಲೀಟರ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ (VVT) ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 82.1 ಎನ್ಎಂ (Nm) ಪೀಕ್ ಟಾರ್ಕ್ ಮತ್ತು 56 ಬಿಎಚ್ಪಿ (bhp) ವರೆಗೆ ಗರಿಷ್ಠ ಪವರ್ ಅನ್ನು ನೀಡುತ್ತದೆ. ಚಾಲನೆಯ ಗುಣಮಟ್ಟ ಮತ್ತು ಸೌಕರ್ಯವನ್ನು ಹೆಚ್ಚಿಸಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಎಸ್-ಸಿಎನ್ಜಿಯಲ್ಲಿ ಸಸ್ಪೆನ್ಷನ್ ಸೆಟಪ್ (Suspension set up) ಅನ್ನು ಟ್ಯೂನ್ ಮಾಡಲಾಗಿದೆ ಎಂದು ಕಂಪನಿ ಹೇಳುತ್ತದೆ.
ಕಂಪನಿಯ ಇತರ ಒಂಬತ್ತು ಸಿಎನ್ಜಿ (CNG) ಮಾದರಿಗಳಂತೆಯೇ, ಹೊಸ ವೇರಿಯಂಟ್ ಡ್ಯುಯಲ್-ಇಂಟರ್-ಡಿಪೆಂಡೆಂಟ್ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕಗಳೊಂದಿಗೆ (ECU), ಇಂಟೆಲಿಜೆಂಟ್ ಇಂಧನ ಇಂಜೆಕ್ಷನ್ ಸಿಸ್ಟಮ್, ಸ್ಟೇನ್ಲೆಸ್ ಸ್ಟೀಲ್ ಪೈಪ್ಗಳು ಮತ್ತು ಕೀಲುಗಳು, ಜೊತೆಗೆ CNG ಸಿಸ್ಟಮ್ಗಾಗಿ ಸಂಯೋಜಿತ ವೈರಿಂಗ್ ಸೌಲಭ್ಯಗಳೊಂದಿಗೆ ಬರುತ್ತದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಎಸ್-ಸಿಎನ್ಜಿ ವಾಹನವು ಮೈಕ್ರೊ ಸ್ವಿಚ್ (Micro switch) ಅನ್ನು ಹೊಂದಿದೆ. ಇದರಿಂದ ಸಿಎನ್ಜಿ ಇಂಧನ ತುಂಬುವ ಅವಧಿಯಲ್ಲಿ ಎಂಜಿನ್ ಆಫ್ ಆಗಿದೆ ಎಂದು ಖಚಿತಪಡಿಸುತ್ತದೆ. ಇದರಿಂದ ಇಂಧನ ಭರ್ತಿ ಮಾಡುವ ವೇಳೆ ವಾಹನದಲ್ಲಿ ಬೆಂಕಿ ಅವಘಡ ಸಂಭವಿಸುವ ಅಪಾಯ ಕಡಿಮೆಯಿದೆ.
ಮಾರುತಿ ಸುಜುಕಿ ಕೆ10 ಕಾರಿಗೆ ಡಿಸ್ಕೌಂಟ್, ಕೈಗೆಟುಟುಕವ ದರದಲ್ಲಿ ವಾಹನ!
ವಾಹನದ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ (Marketing) ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ, "ಎಸ್-ಪ್ರೆಸ್ಸೊದ ಎಸ್ಯುವಿ ಪ್ರೇರಿತ ವಿನ್ಯಾಸವು ಗ್ರಾಹಕರಿಂದ ಪ್ರತಿಕ್ರಿಯೆ ಪಡೆದುಕೊಂಡಿದೆ. ಜನಪ್ರಿಯ S-ಪ್ರೆಸ್ಸೊದ ಯಶಸ್ಸಿನ ಮೇಲೆ ಇದರ ಸಿಎನ್ಜಿ ಆವೃತ್ತಿಯನ್ನು ನಿರ್ಮಿಸಲಾಗಿದೆ. ನಾವು 2.26 ಲಕ್ಷ ಎಸ್-ಪ್ರೆಸೋ ವಾಹನಗಳನ್ನು ಮಾರಾಟ ಮಾಡಿದ್ದೇವೆ. ನಮ್ಮ ಪೋರ್ಟ್ಫೋಲಿಯೊದ CNG ಮಾದರಿಗಳು,ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸ್ವಚ್ಛ ಮತ್ತು ಹಸಿರು ಪರಿಸರಕ್ಕೆ ನಮ್ಮ ಬದ್ಧತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ” ಎಂದಿದ್ದಾರೆ.
ಮಾರುತಿ ಸುಜುಕಿ ಎಸ್-ಪ್ರೆಸೋ ಎರಡು ವರ್ಷಗಳ ಹಿಂದೆ ಗ್ಲೋಪಲ್ ಎನ್ಸಿಎಪಿಯ ಸುರಕ್ಷತಾ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದುಕೊಂಡಿತ್ತು. 2019ರಲ್ಲಿ ಬಿಡುಗಡೆಗೊಂಡ ಎಸ್-ಪ್ರೆಸೋ, ಕೈಗೆಟಕುವ ಕಾರುಗಳ ಪೈಕಿಯಲ್ಲಿ, ವಿಶೇಷವಾಗಿ ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಅತ್ಯುತ್ತಮ ಕಾರು ಎಂದು ಹೇಳಲಾಗುತ್ತಿದೆ. ಇದು ಎಸ್ಯುವಿಯ ಅಂಶಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಇದು ಬಿಡುಗಡೆಯಾದ ಒಂದು ವರ್ಷದೊಳಗೆ ಭಾರತದಲ್ಲಿ 75 ಸಾವಿರ ಕಾರುಗಳನ್ನು ಮಾರಾಟ ಮಾಡಿತ್ತು.