Asianet Suvarna News Asianet Suvarna News

ಮಾರುತಿ ಸುಜುಕಿ ಕೆ10 ಕಾರಿಗೆ ಡಿಸ್ಕೌಂಟ್, ಕೈಗೆಟುಟುಕವ ದರದಲ್ಲಿ ವಾಹನ!

ಮಾರುತಿ ಸುಜುಕಿ ಕಾರು ಬಿಡುಗಡೆಯಾಗಿ ಸರಿಸುಮಾರು ಒಂದು ತಿಂಗಳಾಗಿದೆ. ಇದೀಗ ಹಬ್ಬಗಳು ಆಗಮಿಸಿದೆ. ಇದರ ಬೆನ್ನಲ್ಲೇ ಹೊಚ್ಚ ಹೊಸ ಮಾರುತಿ ಸುಜುಕಿ ಕೆ10 ಕಾರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. 

Maruti suzuki announces discounts on affordable 3rd generation k10 car in this festival season ckm
Author
First Published Sep 30, 2022, 4:18 PM IST

ನವದೆಹಲಿ(ಸೆ.30): ಮಾರುತಿ ಸುಜುಕಿ 3ನೇ ಜನರೇಶನ್ ಕೆ10 ಕಾರು ಬಿಡುಗಡೆಯಾಗಿದೆ. ಮಾರುತಿ ಸುಜುಕಿ ಕೆ10 ಕಾರು ಭಾರತದಲ್ಲಿ ಲಭ್ಯವಿರುವ ಗೈಕೆಟುಕುವ ದರದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಹಬ್ಬದ ಪ್ರಯುಕ್ತ ಮಾರುತಿ ಕೆ10 ಕಾರು ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಹೊಚ್ಚ ಹೊಸ ಕೆ10 ಕಾರಿಗೆ ಒಟ್ಟು 25,000 ರೂಪಾಯಿ ಡಿಸ್ಕೌಂಟ್ ಘೋಷಿಸಿದ್ದರೆ, ಅಲ್ಟೋ 800 ಕಾರಿಗೆ ಒಟ್ಟು 29,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಹೊಸ ಮಾರುತಿ ಕೆ10 ಕಾರು ಆಗಸ್ಟ್ 18 ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಇದು 3ನೇ ಜನರೇಶನ್ ಕಾರಾಗಿದೆ. 2011ರಲ್ಲಿ ಮಾರುತಿ ಕೆ10 ಕಾರು ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಬಳಿಕ ಅಪ್‌ಗ್ರೇಡ್ ಆಗುತ್ತಾ ಬಂದಿದೆ. ಹೊಚ್ಚ ಹೊಸ ಮಾರುತಿ ಸುಜುಕಿ ಕೆ10 ಕಾರಿನ ಬೆಲೆ 3.99 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ನಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 5.84 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ಇನ್ನು ಮಾರುತಿ ಅಲ್ಟೋ 800 ಕಾರಿನ ಬೆಲೆ 3.39 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ(ಎಕ್ಸ್ ಶೋರೂಂ).

ಕೆ10 ಕಾರು 1.0 ಲೀಟರ್ ಡ್ಯುಯೆಲ್ ಜೆಟ್, ಡ್ಯುಯೆಲ್ VVT ಪೆಟ್ರೋಲ್ ಎಂಜಿನ್ ಹೊಂದಿದೆ. ನೂತನ ಕಾರು 66.62 PS ಪವರ್ ಹಾಗೂ 89Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಕಾರಿನ ಮೈಲೇಜ್ ಕೂಡ ವೃದ್ಧಿಸಿದೆ. ಕೆ10 ಆಟೋಮ್ಯಾಟಿಕ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 24.90 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು 24.39 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಮಾರುತಿಗೆ ಮುಂದಿನ 3 ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ಕಾರು ರಫ್ತು ಗುರಿ

ಕೆ10 ಕಾರುು 7 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಪೋಟೈನ್ಮೆಂಟ್ ಹೊಂದಿದೆ. ಇದರ ಜೊತೆಗೆ ಹಲವು ಹೆಚ್ಚುವರಿ ಫೀಚರ್ಸ್ ಈ ಕಾರಿನಲ್ಲಿದೆ. ಇದೀಗ ಡಿಸ್ಕೌಂಟ್ ಘೋಷಿಸಿರುವ ಕಾರಣ ನೂತನ ಕಾರಿನ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಹಬ್ಬದ ಸೀಸನ್‌ನಲ್ಲಿ ಕೈಗಟುಕುವ ದರದ ಕಾರು ಖರೀದಿಸಲು ಇದು ಸಕಾಲವಾಗಿದೆ. ಆಫರ್ ರಾಜ್ಯದಿಂದ ರಾಜ್ಯಕ್ಕೆ ನಗರಗಳಲ್ಲಿ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್‌ಬಳಿ ಪರಿಶೀಲಿಸಿ.

ಮಾರುತಿ ಜಿಮ್ನಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಪ್ಲಾನ್‌!
ಭಾರತ ಖ್ಯಾತ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಜಿಮ್ನಿ ಎಸ್‌ಯುವಿಯನ್ನು ಜನರ ಅಭಿಪ್ರಾಯ ಆಧರಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ತನ್ನ ಎಸ್‌ಯುವಿ ಕ್ಷೇತ್ರವನ್ನು ಬಲಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಕಳೆದ 50 ವರ್ಷಗಳಿಂದಲೂ ಮಾರುತಿ ಜಿಮ್ನಿ ಜಾಗತಿಕ ಮಾರುಕಟ್ಟೆಯಲ್ಲಿದೆ. ಗುರುಗ್ರಾಮದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಈ ಕಾರನ್ನು ತಯಾರಿಸಿ ಮಧ್ಯ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಇದು ಎಸ್‌ಯುವಿಗಳಲ್ಲೇ ಚಿಕ್ಕದಾಗಿದ್ದರೂ ತನ್ನ ಆಫ್‌ರೋಡ್‌ ಕ್ಷಮತೆಯಿಂದ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. 2020ರ ಆಟೋ ಎಕ್ಸೊ$್ಪೕದಲ್ಲಿ ಪ್ರದರ್ಶನಗೊಂಡ ನಂತರ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಭಾರತದಲ್ಲೂ ಈ ಕಾರನ್ನು ಬಿಡುಗಡೆ ಮಾಡುವ ಯೋಚನೆ ಮಾಡಲಾಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಮಾರುತಿ 800 ಗೆ 39 ವರ್ಷ: ಮಾರುತಿ ಸುಜುಕಿ ಕಂಪನಿ ಗೌರವಿಸಿದ್ದು ಹೀಗೆ..

Follow Us:
Download App:
  • android
  • ios