5 ಸ್ಟಾರ್ ರೇಟಿಂಗ್ ಇದ್ರೂ ಶೂನ್ಯ ಮಾರಾಟ: ಎಸ್-ಕ್ರಾಸ್ ವಿವರ ತೆಗೆದು ಹಾಕಿದ ಮಾರುತಿ
ಕಳೆದ ಕೆಲ ತಿಂಗಳಲ್ಲಿ ಇದು ಶೂನ್ಯ ಮಾರಾಟ ದಾಖಲಿಸಿದ ಪರಿಣಾಮ ಮಾರುತಿ ಸುಜುಕಿ, ನೆಕ್ಸಾ ಡೀಲರ್ಶಿಪ್ನ ಅಧಿಕೃತ ವೆಬ್ಸೈಟ್ನಿಂದ ಎಸ್-ಕ್ರಾಸ್ ಅನ್ನು ಡಿಲಿಸ್ಟ್ ಮಾಡಿದೆ.
ಮಾರುತಿ ಸುಜುಕಿ (Maruti Suzuki) ಒಂದರ ಹಿಂದೊಂದರಂತೆ ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಅದರ ಎಲ್ಲಾ ವಾಹನಗಳು ಭಾರಿ ಬೇಡಿಕೆಯಿದೆ ಎಂದಲ್ಲ. ಮಾರುತಿಯ ಮಹತ್ವಾಕಾಂಕ್ಷೆಯ ಎಸ್-ಕ್ರಾಸ್ (S-Cross) ಎಸ್ಯುವಿ (SUV) ಗ್ರಾಹಕರನ್ನು ತಲುಪುವಲ್ಲಿ ವಿಫಲವಾಗಿದೆ. ಕಳೆದ ಕೆಲ ತಿಂಗಳಲ್ಲಿ ಇದು ಶೂನ್ಯ ಮಾರಾಟ ದಾಖಲಿಸಿದೆ. ಪರಿಣಾಮವಾಗಿ ಕಂಪನಿ, ನೆಕ್ಸಾ ಡೀಲರ್ಶಿಪ್ನ ಅಧಿಕೃತ ವೆಬ್ಸೈಟ್ನಿಂದ ಎಸ್-ಕ್ರಾಸ್ ಅನ್ನು ಡಿಲಿಸ್ಟ್ ಮಾಡಿದೆ.
ಈಗ ವೆಬ್ಸೈಟಿನಲ್ಲಿ ಗ್ರ್ಯಾಂಡ್ ವಿಟಾರಾ (Grand Vitara), ಎಕ್ಸ್ಎಲ್ 6 (XL 6), ಸಿಯಾಜ್ (Ciaz), ಬಲೆನೊ (Boleno) ಮತ್ತು ಇಗ್ನಿಸ್ (Ignis) ಮಾದರಿಗಳು ಮಾತ್ರ ಗೋಚರಿಸುತ್ತವೆ. ಕಳೆದ 3 ತಿಂಗಳಿಂದ ಒಂದೇ ಒಂದು ಎಸ್-ಕ್ರಾಸ್ ಕೂಡ ಮಾರಾಟವಾಗಿಲ್ಲ. ಇದರ ನಂತರ ಕಂಪನಿಯ ಅಧಿಕೃತ ವೆಬ್ಸೈಟ್ನಿಂದ ತೆಗೆದು ಹಾಕಲಾಗಿದೆ. ಮಾರುತಿ ಎಸ್-ಕ್ರಾಸ್ ಅನ್ನು ಬದಲಿಸಲಿದೆ ಎಂಬ ವರದಿಗಳ ಬೆನ್ನಲ್ಲೇ ಕಂಪನಿಯು ತನ್ನ ಎಲ್ಲಾ ಹೊಸ ಗ್ರಾಂಡ್ ವಿಟಾರಾವನ್ನು ಬಿಡುಗಡೆ ಮಾಡಿತ್ತು. ಇದರಿಂದ ಜನರು ಅದರತ್ತ ಗಮನ ಹರಿಸಿದ್ದರಿಂದ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಒಂದೇ ಒಂದು ಘಟಕವೂ ಮಾರಾಟವಾಗಿಲ್ಲ. ಅದರ ನಂತರ ಕಂಪನಿಯು ತನ್ನ ವೆಬ್ಸೈಟ್ನಿಂದ ಅದನ್ನು ತೆಗೆದುಹಾಕಿದೆ. ಈಗ ಕಂಪನಿಯು ಅದನ್ನು ಶಾಶ್ವತವಾಗಿ ಸ್ಥಗಿತಗೊಳಿಸುತ್ತಿದೆ ಎಂಬ ವರದಿಗಳಿವೆ.
ಮಾರುತಿ ಸುಜುಕಿ ಕೆ10 ಕಾರಿಗೆ ಡಿಸ್ಕೌಂಟ್, ಕೈಗೆಟುಟುಕವ ದರದಲ್ಲಿ ವಾಹನ!
2021ರ ಆಗಸ್ಟ್ನಲ್ಲಿ, 2522 ಎಸ್-ಕ್ರಾಸ್ ಮಾರಾಟವಾಗಿವೆ. ಅಂದರೆ, 2022ರ ಆಗಸ್ಟ್ ನಲ್ಲಿ, ಅದರ ವಾರ್ಷಿಕ ಮಾರಾಟವು ಶೂನ್ಯಕ್ಕೆ ಇಳಿದಿದೆ. ಅದೇ ರೀತಿ, 2021ರ ಜುಲೈನಲ್ಲಿ ಎಸ್-ಕ್ರಾಸ್ನ 1972 ವಾಹನಗಳನ್ನು ಮಾರಾಟ ಮಾಡಿದೆ. 2022ರ ಜುಲೈನಲ್ಲಿ ಅದರ ವಾರ್ಷಿಕ ಮಾರಾಟವು ಶೂನ್ಯಕ್ಕೆ ಇಳಿದಿದೆ. ಅಂದರೆ, ಅದರ ವಾರ್ಷಿಕ ಮತ್ತು ಮಾಸಿಕ ಮಾರಾಟ ಶೂನ್ಯವಾಗಿತ್ತು. ಇದರ ನಂತರ, ಸೆಪ್ಟೆಂಬರ್‌ನಲ್ಲೂ ಇದರ ಮಾರಾಟ ಶೂನ್ಯವಾಗಿತ್ತು. ಆದರೆ, ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಎಸ್-ಕ್ರಾಸ್ ಪ್ರಾಬಲ್ಯ ಸಾಧಿಸಿದೆ. ಮಾರ್ಚ್ನಲ್ಲಿ 2674 ಹಾಗೂ ಏಪ್ರಿಲ್‌ನಲ್ಲಿ 2922 ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಈ ಹಿಂದೆ ಎಸ್-ಕ್ರಾಸ್ನಲ್ಲಿ 42 ಸಾವಿರ ರೂಪಾಯಿಗಳ ದೊಡ್ಡ ರಿಯಾಯಿತಿಯನ್ನು ನೀಡುತ್ತಿತ್ತು.
ಮಾರುತಿ ಎಸ್-ಕ್ರಾಸ್ ನೆಕ್ಸಾ ಔಟ್ಲೆಟ್ನಿಂದ ಮಾರಾಟವಾದ ಮೊದಲ ಕಾರು. ನಂತರ, ನೆಕ್ಸಾ (Nexa) ಬಂಡವಾಳವನ್ನು ವಿಸ್ತರಿಸಿ, ಕಂಪನಿಯು ಇಗ್ನಿಸ್ (Ignis), ಬೊಲೆನೋ (Baleno), ಸಿಯಾಜ್ (Ciaz) ಮತ್ತು ಎಕ್ಸ್ಎಲ್6 (XL6) ಅನ್ನು ಪ್ರಾರಂಭಿಸಿತು. ಮಾರುತಿ ತನ್ನ ಪ್ರೀಮಿಯಂ ಕಾರುಗಳನ್ನು ನೆಕ್ಸಾ ಔಟ್ಲೆಟ್ಗಳಲ್ಲಿ ಮಾರಾಟ ಮಾಡುತ್ತದೆ. ಎಕ್ಸ್ಎಲ್ 6 ಇದೀಗ ನೆಕ್ಸಾ ಶೋರೂಂಗಳಲ್ಲಿ ಅತ್ಯಂತ ದುಬಾರಿ ಮಾದರಿಯಾಗಿದೆ. XL6 ನ ಆರಂಭಿಕ ಬೆಲೆ 11.29 ಲಕ್ಷ ರೂ.ಗಳಿಂದ 14.55 ಲಕ್ಷ ರೂ.ಗಳವರೆಗೆ ಇದೆ. ಆದರೆ, ಎಸ್-ಕ್ರಾಸ್ ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 8.95 ಲಕ್ಷ ರೂ.
ಮಾರುತಿಗೆ ಮುಂದಿನ 3 ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ಕಾರು ರಫ್ತು ಗುರಿ
ಎಸ್-ಕ್ರಾಸ್ ವೈಶಿಷ್ಟ್ಯಗಳೆಂದರೆ, ಇದು ಮಾರುತಿಯ ಅತ್ಯಂತ ಐಷಾರಾಮಿ ಕಾರು. ಇದು ರೈನ್ ರೆಸಿಸ್ಟೆಂಟ್ ವೈಪರ್ಗಳು, ಕ್ರೂಸ್ ಕಂಟ್ರೋಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಹೊಂದಿದೆ. ಇದು 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಆ್ಯಪಲ್ ಕಾರ್ಪ್ಲೇ (Apple CarPlay) ಮತ್ತು ಆ್ಯಂಡ್ರಾಯ್ಡ್ ಆಟೋ ಕನೆಕ್ಟ್ (Android Auto connect) ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 1.5-ಲೀಟರ್ ಎಂಜಿನ್ನಿಂದ ಚಾಲಿತವಾಗಿದ್ದು ಅದು 105PS ಪವರ್ ಮತ್ತು 138Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. S-Cross ಯುರೋ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 5-ಸ್ಟಾರ್ ವಯಸ್ಕರ ರಕ್ಷಣೆಯ ರೇಟಿಂಗ್ ಪಡೆದಿದೆ.