Asianet Suvarna News Asianet Suvarna News

ಕೈಯಲ್ಲಿ ದುಡ್ಡಿದ್ರು Mahindra XUV 700 ಖರೀದಿ ಮಾಡೋಕಾಗಲ್ಲ: ಯಾಕೆ?

Mahindra XUV 700 Waiting List: ಮಹೀಂದ್ರಾ ಎಕ್ಸ್‌ಯುವಿ 700ಯ (Mahindra XUV700) ಕಾಯುವ ಅವಧಿ ಈಗ ಎರಡು ವರ್ಷಗಳಿಗೆ ವಿಸ್ತರಣೆಯಾಗಿದೆ. ದೇಶಾದ್ಯಂತ ಭಾರೀ ಬೇಡಿಕೆ ಹೆಚ್ಚಿದ್ದು 3,25,000 ಕಾರುಗಳ ಬುಕಿಂಗ್‌ ಈಗಾಗಲೇ ಆಗಿವೆ. ಆದರೆ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಮಾಡಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. 

Mahindra XUV700 waiting period extends to 2 years
Author
Bangalore, First Published Jun 29, 2022, 11:07 AM IST

ವಿಶ್ವಾದ್ಯಂತ ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಚಿಪ್ಗಳ (Chip shortage) ನಿರಂತರ ಕೊರತೆಯ ಹಿನ್ನೆಲೆಯಲ್ಲಿ, ದೇಶದಲ್ಲಿ ಭಾರಿ ಬೇಡಿಕೆಯಿರುವ ಮಹೀಂದ್ರಾ ಎಕ್ಸ್ಯುವಿ 700ಯ (Mahindra XUV700) ಕಾಯುವ ಅವಧಿ ಈಗ ಎರಡು ವರ್ಷಗಳಿಗೆ ವಿಸ್ತರಣೆಯಾಗಿದೆ. ಮಹೀಂದ್ರಾ ಸಮೂಹ (Mahindra group) 2021ರ ಆಗಸ್ಟ್ನಲ್ಲಿ ಬಿಡುಗಡೆ ಮಾಡಿದ ಏಳು ಆಸನಗಳ XUV700 ಗಾಗಿ ಅತ್ಯುತ್ತಮ ಬುಕಿಂಗ್ ಪಡೆದುಕೊಂಡಿತ್ತು. ಸದ್ಯ ಸುಮಾರು 70,000 ಆರ್ಡರ್ಗಳು ಬಾಕಿ ಉಳಿದಿವೆ. ಎಂದು ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಕಳೆದ ವಾರ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 

ಕಳೆದ ವರ್ಷದ ಕೊನೆಯಲ್ಲಿ ಚಿಪ್ ಕೊರತೆ ಕಡಿಮೆಯಾಗಿದೆ. ಆದರೆ, ಮಹೀಂದ್ರಾ ಇನ್ನೂ ಕೆಲವು ಪೂರೈಕೆ ಸರಪಳಿಯಲ್ಲಿ ಅವ್ಯವಸ್ಥೆ ಎದುರಿಸುತ್ತಿದೆ ಎಂದರು.
ಮುಂಬೈ ಮೂಲದ 15.8 ಶತಕೋಟಿ ಡಾಲರ್ ಮೌಲ್ಯದ ಮಹೀಂದ್ರಾದ ಕಾರು ಉತ್ಪಾದಕ ಘಟಕದಿಂದ "ಎಸ್ಯುವಿಗಳ ಬಿಗ್ ಡ್ಯಾಡಿ" “ಸ್ಕಾರ್ಪಿಯೋ-ಎನ್” ಅನ್ನು ಬಿಡುಗಡೆಗೊಳಿಸಿದೆ. 
ಕೇಂದ್ರ ಸರ್ಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (electric vehicles) ಉತ್ತೇಜನ ನೀಡುತ್ತಿರುವ ಬೆನ್ನಲ್ಲೇ ಮಹೀಂದ್ರಾ, ತನ್ನ ಹೊಸ ಇಂಧನ ವಾಹನವನ್ನು ಬಿಡುಗಡೆಗೊಳಿಸಿದ್ದು, ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿರುವ ಕಾರುಗಳಿಗೆ ಕೂಡ ಜನರು ಮಹತ್ವ ನೀಡಲಿದ್ದಾರೆ ಎಂದು ಕಂಪನಿ ನಂಬಿದೆ.

ಇದನ್ನೂ ಓದಿ: SUV ಬಿಗ್ ಡ್ಯಾಡಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಲುಕ್ ಬಹಿರಂಗಪಡಿಸಿದ ಆನಂದ್‌ ಮಹೀಂದ್ರಾ

ಮಹೀಂದ್ರಾ ಪ್ರಬಲವಾದ ಎಲೆಕ್ಟ್ರಿಕ್ ವೆಹಿಕಲ್ ಲೈನ್ ಅಪ್  (Line-up) ಹೊಂದಿಲ್ಲ. ಇದು ಪ್ರಸ್ತುತ ಒಂದು ಪ್ರಯಾಣಿಕ EV, ಇ-ವೆರಿಟೊವನ್ನು ಮಾರಾಟ ಮಾಡಿತ್ತಿದೆ. ಆದರೂ ಇದು ಎಲೆಕ್ಟ್ರಿಕ್ ತ್ರಿಚಕ್ರ ವಾಹನ (Electric three wheeler) ಮಾರುಕಟ್ಟೆಯಲ್ಲಿ ಹೆಚ್ಚು ದೊಡ್ಡ ಅಸ್ತಿತ್ವ ಹೊಂದಿದೆ. ಆದರೆ ಚಾರ್ಜಿಂಗ್ ಶ್ರೇಣಿ (Charging range)ಮತ್ತು ಚಾರ್ಜಿಂಗ್ ಮೂಲಸೌಕರ್ಯದ ಕೊರತೆಯ ಹಿನ್ನೆಲೆಯಲ್ಲಿ ಕಂಪನಿಯು 2025 ರಿಂದ 2027 ರ ನಡುವೆ ಇವಿಗಳಿಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ. ಆ ಹಂತದಲ್ಲಿ, ಎಲೆಕ್ಟ್ರಿಕ್ SUV ಮಾರಾಟವು ಮಹೀಂದ್ರಾ ಸುಮಾರು 20% ರಿಂದ 25% ರಷ್ಟಿರಲಿದೆ ಎಂದು ಜೆಜುರಿಕರ್ ಹೇಳಿದರು.

ಕಳೆದ ವರ್ಷ ಹೊಸ ಲೋಗೋ ಅನಾವರಣಗೊಳಿಸಿದ್ದ ಮಹೀಂದ್ರಾ ದೊಡ್ಡ ಎಸ್ಯುವಿ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಲಿಮಿಟೆಡ್ (Tata Motors Limited) ಮತ್ತು ಹ್ಯುಂಡೈ ಮೋಟಾರ್ (Hyundai Motor) ಕಂಪನಿಗೆ ಠಕ್ಕರ್ ನೀಡುತ್ತಿದೆ.

ಇದನ್ನೂ ಓದಿ: Thar catches fire ಚಲಿಸುತ್ತಿರುವ ಮಹೀಂದ್ರ ಥಾರ್‌ಗೆ ಹೊತ್ತಿಕೊಂಡ ಬೆಂಕಿ, ವಾಹನ ಸಂಪೂರ್ಣ ಭಸ್ಮ!

ಆಟೋಮೋಟಿವ್ ಬಿಸಿನೆಸ್ ಇಂಟೆಲಿಜೆನ್ಸ್ ಪ್ರೊವೈಡರ್ JATO ಡೈನಾಮಿಕ್ಸ್ನ ಡೇಟಾ ಪ್ರಕಾರ, 2022 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಮಹೀಂದ್ರಾ ಶೇ. 17.8 ರ ಪ್ರಮುಖ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಟಾಟಾ, ಹುಂಡೈ ಮತ್ತು ಹುಂಡೈ ಅಂಗಸಂಸ್ಥೆ ಕಿಯಾ ಅನ್ನು ಮೀರಿಸಿದೆ.

ಸದ್ಯ ಮಹೀಂದ್ರಾ ಮಾತ್ರವಲ್ಲ ಮಾರುತಿ ಸುಜುಕಿ ಸೇರಿದಂತೆ ಇತರ ಕಾರು ಕಂಪನಿಗಳು ಕೂಡ ಚಿಪ್ ಸಮಸ್ಯೆ ಎದುರಿಸುತ್ತಿವೆ. ಆದರೆ, ಈ ವರ್ಷದ ಅಂತ್ಯದಲ್ಲಿ ಈ ಸಮಸ್ಯೆ ಸಾಕಷ್ಟು ಸುಧಾರಿಸಲಿದೆ ಎಂದು ಕಾರು ತಯಾರಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಕಾಯುವ ಪಟ್ಟಿಯಲ್ಲಿ 3,25,000 ಕಾರುಗಳಿವೆ ಎಂದು ಮಹೀಂದ್ರಾ ತಿಳಿಸಿದೆ.

ಇದನ್ನೂ ಓದಿ: ಪ್ರತಿ ತಿಂಗಳು ಬುಕ್ ಆಗುತ್ತಿವೆ ಸುಮಾರು 10 ಸಾವಿರ ಮಹೀಂದ್ರಾ ಎಕ್ಸ್ಯುವಿ700

ಹೊಸ ಮಹೀಂದ್ರ ಸ್ಕಾರ್ಪಿಯೊ-ಎನ್ ನಿನ್ನೆಯಷ್ಟೇ 11.99 ಲಕ್ಷ ರೂ (ಎಕ್ಸ್ ಶೋರೂಂ) ಪ್ರಾರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಮಹೀಂದ್ರಾ SUV ಯ ಎಲ್ಲಾ ಮ್ಯಾನುವಲ್ ವೇರಿಯಂಟ್ಗಳ ಬೆಲೆಗಳನ್ನು ಬಹಿರಂಗಪಡಿಸಿದೆ. ಐದು ವೇರಿಯಂಟ್ಗಳು ಮತ್ತು ಏಳು ಬಣ್ಣಗಳಲ್ಲಿ ಲಭ್ಯವಿದ್ದು, ಸ್ಕಾರ್ಪಿಯೋ-ಎನ್ ಎಲ್ಲಾ ವಿಭಾಗಗಳಿಗೆ ಸೂಕ್ತವಾಗುತ್ತದೆ. ಸ್ವಯಂಚಾಲಿತ ಮತ್ತು 4WD ವೇರಿಯಂಟ್ಗಳ ಬೆಲೆಗಳನ್ನು ಜುಲೈ 21 ರಂದು ಘೋಷಿಸಲಾಗುವುದು ಎಂದು ಕಂಪನಿ ತಿಳಿಸಿದೆ

Follow Us:
Download App:
  • android
  • ios