Asianet Suvarna News Asianet Suvarna News

ಪ್ರತಿ ತಿಂಗಳು ಬುಕ್ ಆಗುತ್ತಿವೆ ಸುಮಾರು 10 ಸಾವಿರ ಮಹೀಂದ್ರಾ ಎಕ್ಸ್ಯುವಿ700

ಮಹೀಂದ್ರಾ ಎಕ್ಸ್‌ಯುವಿ 700ಯ ಉತ್ಪಾದನೆ ವೇಗವಾಗಿ ನಡೆಯುತ್ತಿದ್ದರೂ,  ವೇಯ್ಟಿಂಗ್‌ ಅವಧಿ ಎರಡು ವರ್ಷಗಳವರೆಗೆ ಇರಲಿದೆ ಎಂದು ಕಂಪನಿ ಘೋಷಿಸಿದೆ.

Mahindra XUV700 waiting period extends for 2 years
Author
Bangalore, First Published Jun 1, 2022, 10:35 AM IST

ಕಳೆದ ವರ್ಷ ಬಿಡುಗಡೆಯಾಗಿದ್ದ ಮಹೀಂದ್ರಾ ಎಕ್ಸ್ಯುವಿ 700 (Mahindra XUV700) ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮೊದಲ ದಿನದಿಂದಲೇ ನಿರೀಕ್ಷೆಗೂ ಮೀರಿ ಬುಕಿಂಗ್ ಗಳಿಸಿದ್ದ ಎಕ್ಸ್ಯುವಿ 700 ಅನ್ನು ಪೂರೈಕೆ ಮಾಡುವುದು ಈಗ ಕಂಪನಿಗೆ ಸವಾಲಾಗಿ ಪರಿಣಮಿಸಿದೆ. ವಿಶ್ವಾದ್ಯಂತದ ಎಲ್ಲಾ ಆಟೊಮೊಬೈಲ್ ತಯಾರಕ ಕಂಪನಿಗಳಂತೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕೂಡ ವಾಹನ ಪೂರೈಕೆ ವಿಳಂಬವಾಗುತ್ತಿದೆ. ಇತ್ತೀಚೆಗಷ್ಟೇ ಮಹೀಂದ್ರಾ ಎಕ್ಸ್ಯುವಿ 700ಯ ಉತ್ಪಾದನೆ ವೇಗವಾಗಿ ನಡೆಯುತ್ತಿದ್ದರೂ,  ವೇಯ್ಟಿಂಗ್ ಅವಧಿ ಎರಡು ವರ್ಷಗಳವರೆಗೆ ಇರಲಿದೆ ಎಂದು ಕಂಪನಿ ಘೋಷಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಹೀಂದ್ರಾ ಆ್ಯಂಡ್ ಮಹಿಂದ್ರಾದ (Mahindra and Mahindra) ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್, ಪ್ರತಿ ತಿಂಗಳು ಎಸ್ಯುವಿಗೆ ಅತಿ ಹೆಚ್ಚಿನ ಬುಕಿಂಗ್ ದೊರೆಯುತ್ತಿದೆ. ಪ್ರತಿ ತಿಂಗಳು ಸುಮಾರು 5 ಸಾವಿರ ವಾಹನಗಳನ್ನು ಉತ್ಪಾದಿಸುತ್ತಿದ್ದರೂ, ಬುಕಿಂಗ್ಗೆ ತಕ್ಕಂತೆ ವಾಹನಗಳನ್ನು ಪೂರೈಕೆ ಮಾಡಲಾಗುತ್ತಿಲ್ಲ. ಆದ್ದರಿಂದ ವೇಯ್ಟಿಂಗ್ ಅವಧಿ 18ರಿಂದ 24 ತಿಂಗಳವರೆಗೆ ಇರಲಿದೆ. ಪ್ರತಿ ತಿಂಗಳಲ್ಲಿ 9000 ದಿಂದ 10000 ವರೆಗೆ ಬುಕಿಂಗ್ ಪಡೆಯುತ್ತಿದ್ದೇವೆ ಎಂದಿದ್ದಾರೆ.

ಸೆಮಿ ಕಂಡಕ್ಟರ್ ಕೊರತೆಯ ಸಮಸ್ಯೆ ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂದಿರುವ ಅವರು, ಗ್ರಾಹಕರಿಗೆ ವೇಯ್ಟಿಂಗ್ ಅವಧಿಯನ್ನು ಕಡಿಮೆಗೊಳಿಸಲು ಉತ್ಪಾದನೆಯನ್ನು ವೇಗಗೊಳಿಸಲು ಮಹೀಂದ್ರಾ ಸಜ್ಜಾಗಿದೆ. ಜೊತೆಗೆ, ಬುಕಿಂಗ್ನ ರದ್ದತಿ ಕೂಡ ಕಡಿಮೆಯಿದೆ. ಇದು ಜನರು ವಾಹನದ ಮೇಲೆ ಇರಿಸಿರುವ ನಂಬಿಕೆಯನ್ನು ತೋರಿಸುತ್ತದೆ ಎಂದರು. ಎಕ್ಸ್ಯುವಿ ವಿವಿಧ ಕಾರಣಗಳಿಗಾಗಿ ಅತಿ ಹೆಚ್ಚಿನ ಯಶಸ್ಸನ್ನು ಗಳಿಸಿದೆ. ಅದರ ಅತ್ಯದ್ಭುತ ರಸ್ತೆ ಪ್ರೆಸೆನ್ಸ್, ಸ್ಟೈಲಿಶ್ ಹೊರಾಂಗಣ ಲುಕ್ಗಳು, ಉತ್ತಮ ನಿರ್ಮಿತ ಕ್ಯಾಬಿನ್ಗಳು, ಅತ್ಯದ್ಭುತ ಫೀಚರ್ಗಳು, ಅಡಾಸ್ ಫೀಚರ್ಗಳು ಮತ್ತು ಪೆಟ್ರೋಲ್ ಮತ್ತು ಡೀಸೆಲ್ಗಳು ಆಯ್ಕೆಯ ಅವಕಾಶ, ಮ್ಯಾನ್ಯುಯಲ್ ಮತ್ತು ಆಟೊಮೆಟಿಕ್ ಟ್ರಾನ್ಸ್ಮಿಷನ್ನಂತಹ ಕೆಲವು ಅಂಶಗಳು ಜನರನ್ನು ಈ ಎಸ್ಯುವಿಯೆಡೆಗೆ ಸೆಳೆಯುತ್ತಿದೆ. ಈ ಎಲ್ಲಾ ಅಂಶಗಳು ಕೂಡ 2022ರಲ್ಲಿ ಬಿಡುಗಡೆಯಾದ ಥಾರ್ನ ಯಶಸ್ಸಿಗೆ ಕೂಡ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ. ಸದ್ಯ ಎಸ್ಯುವಿ ಮೇಲೆ ಹೆಚ್ಚಿನ ಗಮನ ಹರಿಸಿರುವ ಮಹೀಂದ್ರಾ, ಜೂನ್ 27 ರಂದು ಅಪ್ಡೇಟ್ ಆಗಿರುವ ಸ್ಕಾರ್ಪಿಯೋ ಅನ್ನು ಬಿಡುಗಡೆಗೊಳಿಸಲಿದೆ. ಇದಕ್ಕೆ ಕಂಪನಿ ಸ್ಕಾರ್ಪಿಯೋ-ಎನ್ ಎಂದು ನಾಮಕರಣ ಮಾಡಿದೆ. 

2023ರಲ್ಲಿ ಮಹೀಂದ್ರಾ XUV ಬಿಡುಗಡೆ

ಮಹೀಂದ್ರಾ ಎಕ್ಸ್ಯುವಿ (Mahindra XUV700) ಶೋ ರೂಂ ಬೆಲೆ 13.18 ಲಕ್ಷ ರೂ.ಗಳಿಂದ ಆರಂಭವಾಗಿ  24.58 ಲಕ್ಷ ರೂ.ಗಳವರೆಗೆ ಇದೆ. ಮತ್ತು ಎಂಎಕ್ಸ್ ಪೆಟ್ರೋಲ್ 5 ಎಸ್ಟಿಆರ್ನ ನ ಆನ್-ರೋಡ್ ಬೆಲೆ  15.32 ಲಕ್ಷ ರೂ.ಗಳಷ್ಟಿದೆ.. ಟಾಪ್ ವೆರಿಯಂಟ್ ಮಹೀಂದ್ರ XUV700 ಆನ್ ರೋಡ್ ಬೆಲೆ 28.56 ಲಕ್ಷ ರೂ.ಗಳಿದೆ. ಮಹೀಂದ್ರಾ XUV700 23 ವೇರಿಯಂಟ್ಗಳಲಲ್ಲಿ ಲಭ್ಯವಿದೆ.
ಮಹೀಂದ್ರಾ XUV700 ಅನ್ನು ಹೊಸ W601 ಮೊನೊಕಾಕ್ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ. ಇದು 4695 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1755 ಎಂಎಂ ಎತ್ತರವಿದೆ. ಎಕ್ಸ್ಯುವಿ 700 (XUV700) 2,750 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಮುಂಭಾಗದಲ್ಲಿ ಇದು ಹೊಸ ಗ್ರಿಲ್, ಉದ್ದ ಕ್ರೋಮ್ ಸ್ಲೇಟ್ಗಳು ಮತ್ತು ಮಹೀಂದ್ರಾದ ಹೊಸ ಲೋಗೊವನ್ನು ಹೊಂದಿದೆ. ಹೊಸ ಎಲ್ಇಡಿ ಹೆಡ್ಲ್ಯಾಂಪ್ಗಳು ಮತ್ತು ಅವಳಿ ಸಿ-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಗಳು ಕಾರನ್ನು ಸುತ್ತುವರಿದಿದೆ. ಇದು 18-ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು ಹೊಂದಿದೆ.

ಜೂನ್ 1ರಿಂದ ಕಾರು, ಬೈಕು ದುಬಾರಿ

Follow Us:
Download App:
  • android
  • ios