2023ರ ಆರಂಭದಲ್ಲಿ ಮಹೀಂದ್ರಾ XUV 400 ಇವಿ ಬಿಡುಗಡೆ
ಮಹೀಂದ್ರಾ ಆ್ಯಂಡ್ ಮಹೀಂದ್ರಾ (Mahindra and Mahindra) 2023ರ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಎಕ್ಸ್‌ಯುವಿ 300 (XUV300) ಅನ್ನು ಬಿಡುಗಡೆಗೊಳಿಸಲಿದೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ (Mahindra and Mahindra) 2023ರ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಎಕ್ಸ್‌ಯುವಿ 300 (XUV300) ಅನ್ನು ಬಿಡುಗಡೆಗೊಳಿಸಲಿದೆ. ಇದಕ್ಕೆ ಎಕ್ಸ್‌ಯುವಿ 400 (XUV400) ಎಂದು ಮರುನಾಮಕರಣ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
2023 ರ ಮೊದಲ ತ್ರೈಮಾಸಿಕದಲ್ಲಿ ಎಕ್ಸ್‌ಯುವಿ 300 (XUV300)ನ ಆಲ್-ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಮಹೀಂದ್ರಾ & ಮಹೀಂದ್ರ (M&M) ಇಂದು ಮಾಧ್ಯಮ ಸಮ್ಮೇಳನದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿತು. ಈ ವರ್ಷದ ದ್ವಿತಿಯಾರ್ಧದಲ್ಲಿ ಈ ಎಸ್‌ಯುವಿಯ ವಿವರಗಳನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ.
ಐಸ್ ಎಕ್ಸ್‌ಯುವಿ 300 (ICE XUV300) ಮತ್ತು ಅದರ ಇವಿ (EV) ಆವೃತ್ತಿಯ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಕಂಪನಿ ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅದರ ಹೆಸರನ್ನು ಬದಲಿಸಲು ನಿರ್ಧರಿಸಲಾಗಿದೆ. ಇದರ ಪವರ್‌ಟ್ರೇನ್ ಹೊರತುಪಡಿಸಿ, ವೇರಿಯಂಟ್‌ಗಳ ನಡುವಿನ ಇತರ ದೊಡ್ಡ ವ್ಯತ್ಯಾಸವೆಂದರೆ ಅದರ ಉದ್ದ. ಎಲೆಕ್ಟ್ರಿಕ್ ಆವೃತ್ತಿಯು 4.2 ಮೀಟರ್ ಉದ್ದವಿರಲಿದೆ ಎಂದು ಮಹೀಂದ್ರಾ ದೃಢಪಡಿಸಿದೆ.
ಜೂನ್ 27ಕ್ಕೆ ಮಹೀಂದ್ರಾ ಸ್ಕಾರ್ಪಿಯೋ ಬಿಡುಗಡೆ
ಇದು ಸ್ಟ್ಯಾಂಡರ್ಡ್ XUV300 ಗಿಂತ 200mm ಹೆಚ್ಚು ಉದ್ದವಿದ್ದು, ತೆರಿಗೆ ಪ್ರಯೋಜನಗಳನ್ನು ಪಡೆಯಲಿದೆ. ಇವಿಗಳಿಗೆ ಈಗಾಗಲೇ ಸರ್ಕಾರ ಸುಂಕ ಕಡಿತವನ್ನು ಘೋಷಿಸಿದೆ. ಆದ್ದರಿಂದ ಇವಿ ಕಾರುಗಳು, ನಿಗದಿಗಿಂತ ಹೆಚ್ಚಿನ ಉದ್ದ ಇರುವುದಕ್ಕಾಗಿ ದಂಡ ಪಾವತಿಸುವ ಅನಿವಾರ್ಯತೆಗೆ ಸಿಲುಕುವುದಿಲ್ಲ. ಎಕ್ಸ್‌ಯುವಿ 300ಗಾಗಿ ಮಹೀಂದ್ರಾ, ಸ್ಯಾಂಗ್‌ಯಾಂಗ್ ಟಿವೋಲಿ (SsangYong Tivoli)ಯ ದೇಹದ ರಚನೆಯನ್ನು ಹೊಂದಿದ್ದು, ಹೆಚ್ಚು ಬೂಟ್ ಸ್ಥಳ ಒದಗಿಸುತ್ತದೆ.
ಹೊಸ ಎಸ್‌ಯುವಿಯ ಪವರ್‌ಟ್ರೇನ್ ಮತ್ತು ಬ್ಯಾಟರಿ ವಿವರಗಳು ಸಂಪೂರ್ಣವಾಗಿ ಲಭ್ಯವಾಗಿಲ್ಲ. ಆದರೆ, ಮುಂಭಾಗದ ಚಕ್ರಗಳ ಏಕ ಮೋಟಾರ್ ಕನಿಷ್ಠ 150ಎಚ್‌ಪಿ ಉತ್ಪಾದನೆಯ ಸಾಮರ್ಥ್ಯ ಹೊಂದಿರಲಿದೆ. ಇತ್ತೀಚಿಗೆ ಬಿಡುಗಡೆಯಾದ ಟಾಟಾ ನೆಕ್ಸಾನ್ EV (Tata Nexon EV) ಮ್ಯಾಕ್ಸ್‌ನ ನಂತರ ಮಹಿಂದ್ರಾ ಎಲೆಕ್ಟ್ರಿಕ್ ವಲಯದಲ್ಲಿ ಮತ್ತೊಂದು ಹೆಜ್ಜೆ ಇಡಲು ಮುಂದಾಗಿದೆ. ಹೆಚ್ಚಿನ ಸಾಂದ್ರತೆಯ ಎನ್‌ಎಂಸಿ (NMC) ಕೋಶಗಳನ್ನು ಬಳಸುವುದರಿಂದ ಎಲೆಕ್ಟ್ರಿಕ್ XUV300 ಗೆ ನೆಕ್ಸಾನ್ EV ಮ್ಯಾಕ್ಸ್‌ಗಿಂತ (Nexon EV max) ಹೆಚ್ಚಿನ ವ್ಯಾಪ್ತಿ ನೀಡುತ್ತದೆ.
ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಒಪ್ಪಂದ
ಆದರೆ, ಎಕ್ಸ್‌ಯುವಿ400 (XUV400) ಗಾಗಿ ಬ್ಯಾಟರಿಗಳ ಸ್ಥಿರ ಪೂರೈಕೆ ಮಹೀಂದ್ರಾಗೆ ದೊಡ್ಡ ಸವಾಲಾಗಿದೆ. XUV400 ಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಿದ ಬ್ಯಾಟರಿಗಳ ಪ್ರಮಾಣವನ್ನು ಹೆಚ್ಚಿಸಲು ವಿಳಂಬವಾಗಿದ್ದರಿಂದ, ಎಸ್‌ಯುವಿಯ ಬಿಡುಗಡೆ ಕೂಡ ನಿಧಾನವಾಗಿದೆ. ಮಹೀಂದ್ರಾ 2020 ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ XUV300 ಅನ್ನು ಪ್ರದರ್ಶಿಸಿತ್ತು.
XUV400 ಮಹೀಂದ್ರಾದಲ್ಲಿ ಇತ್ತೀಚಿನ ಸಂಪರ್ಕಿತ ತಂತ್ರಜ್ಞಾನ ಮತ್ತು ADAS ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಆರಂಭಿಕ ಹೆಜ್ಜೆ ಇಟ್ಟಿದ್ದ ಮಹೀಂದ್ರಾ, ರೇವಾ ಕಾರ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಒಂದು ರೀತಿಯ ಪ್ರವರ್ತಕವಾಗಿ ಕೆಲಸ ಮಾಡಿದೆ. ಆದರೆ,ಮ ಇವೆರಿಟೋ (eVerito)ನ ಸೀಮಿತ ಕಾರ್ಯಕ್ಷಮತೆಯಿಂದ, ಕಂಪನಿ ಇವಿ ತಯಾರಿಕೆಯಿಂದ ಕೆಲ ಕಾಲ ಹಿಂದೆ ಸರಿದಿತ್ತು.
ಕಳೆದ ವರ್ಷ, ಮಹೀಂದ್ರಾ 2027 ರ ವೇಳೆಗೆ ಎಂಟು ಪ್ರಯಾಣಿಕ EV ಗಳನ್ನು ಬಿಡುಗಡೆ ಮಾಡುವ ಯೋಜನೆಗಳನ್ನು ಘೋಷಿಸಿತು. ಕಳೆದ ವರ್ಷ ಮಹೀಂದ್ರಾ ಬಿಡುಗಡೆಗೊಳಿಸಿದ್ದ ಎಕ್ಸ್‌ಯುವಿ 700 (XUV700) ಭಾರಿ ಬೇಡಿಕೆ ಪಡೆದುಕೊಂಡಿತ್ತು. ಈಗಲೂ ಈ ಎಸ್‌ಯುವಿಯ ವೇಯ್ಟಿಂಗ್ ಅವಧಿ 2 ವರ್ಷಗಳವರೆಗಿದ್ದರೂ, ಜನರು ಅದನ್ನು ಕಾಯ್ದಿರಿಸುವುದರಿಂದ ಹಿಂದೆ ಸರಿದಿಲ್ಲ.ಶೀಘ್ರದಲ್ಲೇ ಮಹೀಂದ್ರಾ ಬಿಡುಗಡೆಗೊಳಿಸಲಿರುವ ಸ್ಕಾರ್ಪಿಯೋ ಕೂಡ ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.