Asianet Suvarna News Asianet Suvarna News

Vehicle Price Hike ಸರ್ಕಾರದ ಮಹತ್ವದ ನಿರ್ಧಾರ, ಜೂನ್ 1 ರಿಂದ ಕಾರು ಬೈಕ್ ದುಬಾರಿ!

  • ಜೂನ್ 1 , 2022ರಿಂದ ವಾಹನಗಳ ಬೆಲೆ ಹೆಚ್ಚಳ
  • ಬೈಕ್ ಬೆಲೆ ಶೇ.15, ಕಾರು ಶೇ.23 ರಷ್ಟು ಹೆಚ್ಚಳ
  • ವಿಮೆ ಬೆಲೆ ಹೆಚ್ಚಳಕ್ಕೆ ಸರ್ಕಾರದ ನಿರ್ಧಾರ
cars Bike scooter become expensive in India from June 1st due to Govt announces 3rd party insurance premiums hike ckm
Author
Bengaluru, First Published May 28, 2022, 7:53 PM IST

ನವದೆಹಲಿ(ಮೇ.28): ಬೆಲೆ ಏರಿಕೆಯಿಂದ ದೇಶದ ಜನತೆ ಕಂಗಾಲಾಗಿದೆ. ಇತ್ತೀಚೆಗೆ ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ್ದರೂ ಬೆಲೆ ಗಣನೀಯವಾಗಿ ಇಳಿಕೆಯಾಗಿಲ್ಲ. ಇದರ ನಡುವೆ ಇದೀಗ ವಾಹನ ಖರೀದಿಗೆ ಮುಂದಾಗಿರುವ ಗ್ರಾಹಕರಿಗೆ ಮತ್ತೊಂದೆ ಬರೆ. ಕಾರಣ ಜೂನ್ 1 ರಿಂದ ಕಾರು ಹಾಗೂ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರ ವಾಹನಗಳ ಇನ್ಶುರೆನ್ಸ್ ಪ್ರಿಮಿಯಂ ದರ ಹೆಚ್ಚಳ.

ವಾಹನಗಳ ಥರ್ಡ್‌ ಪಾರ್ಟಿ ವಿಮಾ ಮೊತ್ತವನ್ನು ಜೂ.1ರಿಂದ ಜಾರಿಗೆ ಬರುವಂತೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಹೊಸ ವಾಹನ ಖರೀದಿಸುವವರು ಹಾಗೂ ಈಗಾಗಲೇ ವಾಹನ ಹೊಂದಿರುವವರು ವಿಮೆಗಾಗಿ ಹೆಚ್ಚಿನ ಮೊತ್ತವನ್ನು ತೆರಬೇಕಾಗುತ್ತದೆ.

ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರು, 528 ಕಿ.ಮೀ ಮೈಲೇಜ್, ಬುಕಿಂಗ್ ಬೆಲೆ 3 ಲಕ್ಷ ರೂ!

ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿಗೆ ಹಾನಿಯಾದಾಗ ಅವರಿಗೆ ಪರಿಹಾರ ಭರಿಸಲು ಥರ್ಡ್‌ ಪಾರ್ಟಿ ವಿಮೆ ಕಡ್ಡಾಯವಾಗಿರುತ್ತದೆ. ಕೋವಿಡ್‌ ಕಾರಣ ಎರಡು ವರ್ಷಗಳಿಂದ ಈ ವಿಮಾ ಕಂತನ್ನು ಪರಿಷ್ಕರಿಸಿರಲಿಲ್ಲ. ಕೋವಿಡ್‌ ಅಬ್ಬರ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ವಿಮಾ ಕಂತನ್ನು ಹೆಚ್ಚಳ ಮಾಡಲಾಗಿದೆ. ಸಾಮಾನ್ಯವಾಗಿ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ವಿಮಾ ಕಂತು ಪರಿಷ್ಕರಣೆ ಮಾಡುತ್ತಿತ್ತು. ಇದೇ ಮೊದಲ ಬಾರಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವಿಮಾ ಕಂತನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.

ಇದೇ ವೇಳೆ, ಶೈಕ್ಷಣಿಕ ಸಂಸ್ಥೆಗಳ ಬಸ್‌ಗಳು, ಎಲೆಕ್ಟ್ರಿಕ್‌ ವಾಹನಗಳಿಗೆ ಶೇ.15ರಷ್ಟುರಿಯಾಯಿತಿ ನೀಡಲಾಗಿದೆ. ವಿಂಟೇಜ್‌ ಕಾರು ಎಂದು ನೋಂದಣಿಯಾಗಿದ್ದರೆ ಶೇ.50ರಷ್ಟುರಿಯಾಯಿತಿ ಇರುತ್ತದೆ. ಹೈಬ್ರಿಡ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಶೇ.7.5ರಷ್ಟುರಿಯಾಯಿತಿ ಇರಲಿದೆ.

ಜೂನ್ 1 ರಿಂದ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ದರ ಹೆಚ್ಚಳ ಮಾಡಲಾಗಿದೆ. ಭಾರತದ ವಿಮಾ ಕಂಪನಿಗಳ ನೋಡಲ್ ಸಂಸ್ಥೆಯಾದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಈ ಮಹತ್ವದ ನಿರ್ಧಾರ ಇದೀಗ ವಾಹನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

Range Rover Sport ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ಸ್ ಬುಕಿಂಗ್ ಆರಂಭ!

150ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯ ಬೈಕ್ ಬೆಲೆ ಶೇಕಡಾ 15 ರಷ್ಟು ಹೆಚ್ಚಳವಾಗಲಿದೆ. ಇನ್ನು 1000 ದಿಂದ 1500 ಸಿಸಿ ಎಂಜಿನ್ ಸಾಮರ್ಥ್ಯ ಕಾರುಗಳ ಬೆಲೆ ಶೇಕಡಾ 6 ರಷ್ಟು ಹೆಚ್ಚಾಗಲಿದೆ. ಇನ್ನು 1000 ಸಿಸಿ ಸಾಮರ್ಥ್ಯವರೆಗಿನ ಕಾರುಗಳ ಬೆಲೆ ಶೇಕಡಾ 23 ರಷ್ಟು ಹೆಚ್ಚಾಗಲಿದೆ.150 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಸ್ಕೂಟರ್ ಹಾಗೂ ಮೋಟಾರ್‌ಸೈಕಲ್ ಬೆಲೆ ಶೇಕಡಾ 17ರಷ್ಟು ಹೆಚ್ಚಾಗಲಿದೆ. 

ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗಿದೆ. ಆಮದು ಸುಂಕ, ಚಿಪ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಭಾರತೀಯ ಆಟೋಮೊಬೈಲ್ ಕ್ಷೇತ್ರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಸಮಸ್ಯೆಗಳಿಂದ ಭಾರತದಲ್ಲಿ ಈಗಾಗಲೇ ವಾಹನಗಳ ಬೆಲೆ ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ವಿಮೆ ದರ ಹೆಚ್ಚಳದಿಂದ ವಾಹನ ಅತ್ಯಂತ ದುಬಾರಿಯಾಗಲಿದೆ. ಭಾರತೀಯ ಆಟೋ ಕಂಪನಿಗಳು 2022ರಲ್ಲಿ ಈಗಾಗಲೇ ಹಲವು ಭಾರಿ ವಾಹನಗಳ ಬೆಲೆ ಹೆಚ್ಚಳ ಮಾಡಿದೆ. ಆದರೂ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಹೊರೆಯಾಗುತ್ತಿದೆ. ಇದೀಗ ವಿಮೆ ಪ್ರೀಮಿಯಂ ಕಾರಣ ಮತ್ತೆ ವಾಹನ ಬೆಲೆ ದುಬಾರಿಯಾಗುವುದರಿಂದ ಮಾರಾಟದಲ್ಲೂ ಕುಸಿತ ಕಾಣಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios