21 ನಿಮಿಷದಲ್ಲಿ 1 ಕೋಟಿ ರೂ ದಾಟಿದ ಮಹೀಂದ್ರ XUV400 ಬಿಡ್ಡಿಂಗ್!
ಮಹೀಂದ್ರ XUV400 ಎಲೆಕ್ಟ್ರಿಕ್ ಕಾರಿನ ಬಿಡ್ಡಿಂಗ್ ಇಂದಿನಿಂದ(ಜ.26) ಜನವರಿ 31ರ ವರೆಗೆ ನಡೆಯಲಿದೆ. ಬಿಡ್ಡಿಂಗ್ ಆರಂಭಗೊಂಡ 21 ನಿಮಿಷಕ್ಕೆಮಹೀಂದ್ರ XUV400 ಕಾರಿನ ಬೆಲೆ 1 ಕೋಟಿ ರೂಪಾಯಿ ದಾಟಿದೆ. ಈ ಬಿಡ್ಡಿಂಗ್ ಗೆದ್ದವರಿಗೆ ಮಹೀಂದ್ರ XUV400 ಹೊಚ್ಚ ಕಾರನ್ನು ಆನಂದ್ ಮಹೀಂದ್ರ ವಿತರಿಸಲಿದ್ದಾರೆ.
ನವದೆಹಲಿ(ಜ.26): ಗಣರಾಜ್ಯೋತ್ಸವ ದಿನಾಚರಣೆಯಂದು ಮಹೀಂದ್ರ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು XUV400 ಬಿಡ್ಡಿಂಗ್ ಆರಂಭಗೊಡಿದೆ. ಬಿಡ್‌ನಿಂದ ಬರವು ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಲಾಗುತ್ತದೆ. ಮಹೀಂದ್ರ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು XUV400 ಕಾರಿನ ಬಿಡ್ಡಿಂಗ್ ತೀವ್ರಪೈಪೋಟಿ ನಡೆಯುತ್ತಿದೆ. ಬಿಡ್ ಗೆದ್ದವರಿಗೆ ಫೆಬ್ರವರಿ 10 ರಂದು ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಕಾರು ಹಸ್ತಾಂತರಿಸಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಬಿಡ್ಡಿಂಗ್ ಆರಂಭಗೊಂಡಿದೆ. ಕೇವಲ 21 ನಿಮಿಷಕ್ಕೆ ಕಾರಿನ ಬೆಲೆ 1 ಕೋಟಿ ರೂಪಾಯಿ ಅಧಿಕ ಮೊತ್ತಕ್ಕೆ ಬಿಡ್ಡಿಂಗ್ ನಡೆದಿದೆ. ಈ ಮೂಲಕ ಅತೀ ಅಲ್ಪ ಸಮಯದಲ್ಲಿ ಗರಿಷ್ಠ ಮೊತ್ತ ದಾಖಲೆ ಬರೆದಿದೆ.
ಯುವ ಫ್ಯಾಷನ್ ಡಿಸೈನರ್ ರಿಮ್ಜಿಮ್ ದಾದು ಜತೆ ಸಹಯೋಗದಲ್ಲಿ ಮಹೀಂದ್ರಾದ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ವಿನ್ಯಾಸಗೊಳಿಸಿದ ಈ ಏಕೈಕ ವಿಶೇಷ ಆವೃತ್ತಿಯನ್ನು 2022ರ ನವೆಂಬರ್ 28 ರಂದು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ವಿಜೇತರು 2023ರ ಫೆಬ್ರವರಿ 11ರಂದು ಹೈದರಾಬಾದ್‍ನಲ್ಲಿ ಆಲ್- ಎಲೆಕ್ಟ್ರಿಕ್ ಎಫ್‍ಐಎ ಫಾರ್ಮುಲಾ ಇ ಚಾಂಪಿಯನ್‍ಶಿಪ್‍ನ ಭಾರತ ಉದ್ಘಾಟನಾ ಸುತ್ತನ್ನು ವೀಕ್ಷಿಸಲು ವಿಶೇಷ ಪಾಸ್ ಪಡೆಯಲಿದ್ದಾರೆ.
ಹೊಚ್ಚ ಹೊಸ ಮಹೀಂದ್ರ ಥಾರ್ 2WD ಬಿಡುಗಡೆ, ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!
ಆನ್‍ಲೈನ್ ಹರಾಜಿನ ಬಿಡ್ಡಿಂಗ್ 2023ರ ಜನವರಿ 26 ರಂದು ಬೆಳಿಗ್ಗೆ 11 ಗಂಟೆಗೆ ಆರಂಭಗೊಂಂಡು, ಜನವರಿ 31ರ ವರೆಗೆ ಮುಕ್ತವಾಗಿರುತ್ತದೆ. ಸಂಪೂರ್ಣ ಹರಾಜು ಪ್ರಕ್ರಿಯೆಯು ಅರ್ನ್‍ಸ್ಟ್ ಮತ್ತು ಯಂಗ್ ಮೂಲಕ ನಡೆಸಲ್ಪಡುತ್ತದೆ. ಹರಾಜು ವಿಜೇತರು ಈ ಎಕ್ಸ್‍ಕ್ಲೂಸಿವ್ ಆವೃತ್ತಿ ಎಕ್ಸ್‍ಯುವಿ400 ಪಡೆಯಲಿದ್ದಾರೆ.
ಮಹೀಂದ್ರ XUV400
ಎಲೆಕ್ಟ್ರಿಕ್ XUV400 ಮಹೀಂದ್ರಾದ ಹಾರ್ಟ್‍ಕೋರ್ ವಿನ್ಯಾಸ ತತ್ವಶಾಸ್ತ್ರವನ್ನು ದಾದು ಅವರ ಸಿಗ್ನೇಚರ್ ಶೈಲಿಯ ಸಂಕೀರ್ಣ ಸೊಬಗುಗಳೊಂದಿಗೆ ಸಂಯೋಜಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊದಿದೆ. ಇದು ರಿಮ್ಜಿಮ್ ದಾಡು ಅವರ ಡ್ಯಾಝಲ್ ಬ್ಲೂ ಬಾಡಿ ಬಣ್ಣವನ್ನು ಧರಿಸಿದೆ. ಇದು ಅಲ್ಟ್ರಾ- ಪ್ರೀಮಿಯಂ ತಾಮ್ರದ ಬ್ರ್ಯಾಂಡಿಂಗ್ ಅಂಶಗಳು, ಡ್ಯುಯಲ್- ಟೋನ್ ಕಾಪರ್ ರೂಫ್ ಮತ್ತು ಪಿಯಾನೋ ಕಪ್ಪು ಮಿಶ್ರಲೋಹದ ಚಕ್ರಗಳಿಂದ ಮತ್ತಷ್ಟು ಎದ್ದುಕಾಣುತ್ತದೆ. ರಿಮ್ಜಿಮ್ ದಾದು ಎಕ್ಸ್ ಬೋಸ್ ಲೋಗೋದ ಅತ್ಯಾಧುನಿಕ ಚಿತ್ರಣವನ್ನು ಎಸ್‍ಯುವಿಯ ಒಳಗೆ ಮತ್ತು ಹೊರಗೆ ಎಚ್ಚರಿಕೆಯಿಂದ ಆಯ್ಕೆಮಾಡಿದ ಪ್ರದೇಶಗಳಲ್ಲಿ ಇರಿಸಲಾಗಿದೆ. ಈ ಪ್ರದೇಶದ ಆಯ್ಕೆಗಳು ಕಡಿಮೆ ಪರಿಮಾಣದಲ್ಲಿ ತಾಮ್ರದ ಟ್ರಿಮ್ ಅಂಶಗಳಿಗೆ ಮತ್ತು ಎಸ್‍ಯುವಿಯ ಅದ್ಭುತವಾದ ಡ್ಯುಯಲ್-ಟೋನ್ ರೂಫ್‍ಗೆ ಪೂರಕವಾಗಿದೆ.
ಅಮೆರಿಕ ಇವಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ ಮಹೀಂದ್ರಾ
ನೀವು ಒಳ ಹೊಕ್ಕಂತೆಲ್ಲ, ಐಷಾರಾಮಿ ವಿನ್ಯಾಸದ ಲೆಥೆರೆಟ್ ಆಸನಗಳನ್ನು ಜೊತೆಗೆ ಸಂಕೀರ್ಣವಾಗಿ ರಚಿಸಲಾದ ರಿಮ್ಜಿಮ್ ದಾದು ನೀಲಿ ಕಸೂತಿಯನ್ನು ನೀವು ಗಮನಿಸಬಹುದು. ನೀವು ಎರಡನೇ ಸಾಲಿನ ಸೀಟ್ ಆರ್ಮ್‍ರೆಸ್ಟ್ ಅನ್ನು ಕಡಿಮೆಗೊಳಿಸಿದಾಗ ಈ ವಿನ್ಯಾಸದ ಸ್ಥಳವು ಮತ್ತಷ್ಟು ತೆರೆದುಕೊಳ್ಳುತ್ತದೆ, ಅಲ್ಲಿ ನೀವು ಪ್ರೀಮಿಯಂ ಲೆಥೆರೆಟ್ ವಸ್ತುವಿನ ಮೇಲೆ ಹೆಮ್ಮೆಯಿಂದ ಕುಳಿತುಕೊಳ್ಳುವ ಸೂಕ್ಷ್ಮವಾಗಿ ರಚಿಸಲಾದ ಲೋಗೋ ವಿವರದಿಂದ ಮೋಡಿಗೆ ಒಳಗಾಗುತ್ತೀರಿ. ಡಿಸೈನರ್ ಜೋಡಿಯು ಕುಶನ್‍ಗಳು, ಸೀಟ್ ಬೆಲ್ಟ್ ಕವರ್, ಕೀಹೋಲ್ಡರ್, ಕ್ಯಾರಿ-ವಿತ್-ಯು ಪೌಚ್‍ಗಳು ಮತ್ತು ದೈನಂದಿನ ಬಳಕೆಯ ಪ್ರೀಮಿಯಂ ಡಫಲ್ ಬ್ಯಾಗ್‍ನಂತಹ ಪರಿಕರಗಳ ಶ್ರೇಣಿಯನ್ನು ಸಹ ಕಲ್ಪಿಸಿಕೊಂಡಿದೆ, ಇವೆಲ್ಲವನ್ನು ರಿಮ್‍ಜಿಮ್‍ನ ವಿಶೇಷ ಮೆಟಾಲಿಕ್ ಫ್ಯಾಬ್ರಿಕ್ ಮೆಟೀರಿಯಲ್‍ನಲ್ಲಿ ಟ್ರಿಮ್ ಮಾಡಲಾಗಿದೆ.
ಎಕ್ಸ್‍ಯುವಿ400 ವೇಗ, ಮೋಜು ಮತ್ತು ಭವಿಷ್ಯದ ವಾಹನವಾಗಿದೆ. ಮಹೀಂದ್ರಾ ವಿನ್ಯಾಸವು ನಮ್ಮ ಗ್ರಾಹಕರ ಹೃದಯವನ್ನು ಆಕರ್ಷಿಸುವ ಉತ್ಪನ್ನಗಳಿಗೆ ಹೆಸರುವಾಸಿ ಮತ್ತು ನಾವು ಅದನ್ನು ಹಾರ್ಟ್‍ಕೋರ್ ವಿನ್ಯಾಸ ಎಂದು ಕರೆಯುತ್ತೇವೆ. ಇದು ಮರೆಯಲಾಗದ ಅನುಭವಗಳನ್ನು ಸೃಷ್ಟಿಸುವ ಕಾರಿನ ವಿನ್ಯಾಸದ ಭಾವನೆ ಮತ್ತು ನಮ್ಮ ಉತ್ಪನ್ನಗಳ ಗಟ್ಟಿತನವನ್ನು ಒಟ್ಟಿಗೆ ತಂದಿದೆ. ನಾವು ರಿಮ್ಜಿಮ್ ದಾದು ಅವರೊಂದಿಗೆ ಸಹಭಾಗಿತ್ವ ಹೊಂದಿದ್ದೇವೆ ಏಕೆಂದರೆ ಅವರ ಕೆಲಸವು ನೈಜ ವಿನ್ಯಾಸದ ವೈಶಿಷ್ಟ್ಯದಿಂದ ಕೂಡಿದೆ. ಅದು ಭವಿಷ್ಯಕ್ಕೆ ಹೊಂದಿಕೆಯಾಗುವ ಮೋಜು ಮತ್ತು ಆಕರ್ಷಕ ವಾಹನವಾಗಿದೆ. ಇದು ತಂತ್ರಜ್ಞಾನ ಮತ್ತು ಬೆರಗುಗೊಳಿಸುವ ಕರಕುಶಲತೆಯನ್ನು ಸಂಯೋಜಿಸುತ್ತದೆ ಮತ್ತು ಇದು ನಿಖರವಾಗಿ ಮಹೀಂದ್ರಾದಲ್ಲಿನ ನಮ್ಮ ತತ್ವವಾಗಿದೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾದ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ಹೇಳಿದ್ದಾರೆ.