ದೇಶೀಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಕಂಪನಿಯ ಪ್ರಯಾಣಿಕ ಮತ್ತು ಆಫ್ ರೋಡ್ ವಾಹನಗಳು ಧೂಳೆಬ್ಬಿಸುತ್ತಿವೆ. ಇತ್ತೀಚೆಗಷ್ಟೇ ಥಾರ್ ವಾಹನ ಬಿಡುಗಡೆಗೊಂಡು ಸೃಷ್ಟಿಸಿದ ಸಂಚಲನ ಎಲ್ಲರಿಗೂ ಗೊತ್ತಿರುವಂಥದ್ದೇ. ದೇಶಿ ಕಂಪನಿಯಾಗಿರುವ ಮಹೀಂದ್ರಾ ಇದೀಗ ಜನವರಿ ತಿಂಗಳಲ್ಲಿ ತನ್ನ ವಾಹನಗಳ ಮಾರಾಟದ ಮೇಲೆ ಸಿಕ್ಕಾಪಟ್ಟೆ ಆಫರ್ ಘೋಷಿಸಿದೆ. ಮಂಹೀಂದ್ರಾ ಡೀಲರ್‌ಶಿಪ್‌ಗಳು ನಾನಾ ಆಫರ್‌ಗಳನ್ನು ನೀಡುತ್ತಿವೆ.

ಈ ಆಫರ್‌ಗಳಲ್ಲಿ ನಗದು ರಿಯಾಯ್ತಿ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯ್ತಿ, ವಿಸ್ತರಿತ ವಾರೆಂಟಿ ಮತ್ತು ಕಾಂಪ್ಲಿಮೆಂಟಪರಿ ಬಿಡಿಭಾಗಗಳು ಸೇರಿಕೊಂಡಿವೆ. ಒಂದು ಹಂತದಲ್ಲಿ ಯಾರೂ ಊಹಿಸಲಾರದಷ್ಟು ಆಫರ್‌ ಮೊತ್ತ ಏರಿಕೆಯಾಗಬಹುದು. ಅಷ್ಟರ ಮಟ್ಟಿಗೆ ಮಹೀಂದ್ರಾ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಫರ್‌ಗಳನ್ನು ಘೋಷಿಸುತ್ತಿದೆ.

15 ವರ್ಷಗಳ ಹಳೆಯ ವಾಹನಗಳು ಗುಜರಿಗೆ ಪಕ್ಕಾ?

ಈ ಎಲ್ಲ ಆಫರ್‌ಗಳು ಸೀಮಿತ ಅವಧಿಗೆ ಮಾತ್ರವೇ ಲಭ್ಯವಾಗಲಿವೆ. ಅಂದರೆ, ಈ ತಿಂಗಳಿ(ಜನವರಿ)ಗೆ ಮಾತ್ರವೇ ಈ ಆಫರ್‌ಗಳು ಸಿಗಲಿವೆ. ಜನವರಿ 31 ಕೊನೆಯ ದಿನವಾಗಿದೆ. ನೀವು ಗಮನಿಸಬೇಕಾದ ಸಂಗತಿ ಏನೆಂದರೆ, ಈ ಆಫರ್‌ಗಳು ದೇಶದ ವಿವಿಧ ಭಾಗಗಳ ನಾನಾ ನಗರಗಳ ಮಧ್ಯೆ ಬೇರೆ ಬೇರೆ ಯಾಗಿರುಬಹುದು.

ಮಹೀಂದ್ರಾ ಎಕ್ಸ್‌ಯುವಿ500 ಮಾರಾಟದ ಮೇಲೂ ಮಹೀಂದ್ರಾ ಆಫರ್‌ಗಳನ್ನು ಘೋಷಿಸಿದೆ. ಈ ವಾಹನವನ್ನು ಈಗಲೇ ಖರೀದಿಸಿದರೆ ಸಿಕ್ಕಾಪಟ್ಟೆ ಹಣ ಉಳಿತಾಯ ಮಾಡಬಹುದು. ಈ ಕಾರು ಖರೀದಿ ಸಂಬಂಧ ವಿನಿಮಯ ಬೋನಸ್ ಆಗಿ 20,000 ರೂ. ದೊರೆತರೆ, ಕಾರ್ಪೊರೇಟ್ ರಿಯಾಯ್ತಿ 9,000 ರೂಪಾಯಿ ಇರಲಿದೆ. ಇನ್ನು 10 ಸಾವಿರ ರೂ. ಮೌಲ್ಯದ ಬಿಡಿಭಾಗಗಳು ಇರಲಿವೆ. ಈ ಬಿಡಿ ಭಾಗಗಳ ರಿಯಾಯ್ತಿ ಎಕ್ಸ್‌ಯುವಿ500ನ ಡಬ್ಲ್ಯೂ5 ಮತ್ತು ಡಬ್ಲ್ಯೂ7 ಮಾದರಿಗಳಿಗೆ ಮಾತ್ರವೇ ಸಿಗಲಿದೆ ಎಂಬುದನ್ನು ಗ್ರಾಹಕರು ಗಮನಿಸಬೇಕು. ಮತ್ತೆ ಹೆಚ್ಚುವರಿಯಾಗಿ ಡಬ್ಲ್ಯೂ9 ಮತ್ತು ಡಬ್ಲ್ಯೂ 11 ಮಾದರಿಯ ಎಕ್ಸ್‌ಯುವಿ 500 ವಾಹನದ ಮೇಲೆ 20,000 ರೂಪಾಯಿ ರಿಯಾಯ್ತಿ ದೊರೆಯಲಿದೆ.

ಇನ್ನು ಸ್ಕಾರ್ಪಿಯೋ ಖರೀದಿ ಮೇಲೆ ನಿಮಗೆ 10000 ರೂಪಾಯಿ ಆಫರ್ ದೊರೆತರೆ, ವಿಸ್ತರಿತ ಬೋನಸ್ 15 ಸಾವಿರ ರೂ, ಕಾರ್ಪೊರೇಟ್ ಡಿಸ್ಕೌಂಟ್ 4,500 ಸಿಗುತ್ತದೆ. ಜೊತೆಗೆ 10 ಸಾವಿರ ರೂಪಾಯಿ ಮೌಲ್ಯದ ಬಿಡಿ ಭಾಗಗಳ ಆಫರ್ ಕೂಡ ಇದೆ.

ಮಹೀಂದ್ರಾ ಮರಾಝೋ ಖರೀದಿ ಮೇಲೂ ಈ ತಿಂಗಳಲ್ಲಿ ಕಂಪನಿ ಬಂಪರ್ ಆಫರ್ ಘೋಷಿಸಿದೆ. ಈ ಆಫರ್‌ಗಳಲ್ಲಿ ವಿಸ್ತರಿತ ಬೋನಸ್ ಆಗಿ 15,000 ರೂಪಾಯಿ, ಕಾರ್ಪೊರೇಟ್ ಡಿಸೌಂಟ್ 6,000 ರೂಪಾಯಿ ಇರಲಿದೆ. ಇಷ್ಟು ಮಾತ್ರವಲ್ಲದೇ ಎಂ2 ವೆರಿಯೆಂಟ್ ಮೇಲೆ ನಿಮಗೆ ಮತ್ತೆ ಹೆಚ್ಚುವರಿಯಾಗಿ 20 ಸಾವಿರ ರೂಪಾಯಿ ನಗದು ಆಫರ್‌ ಇದ್ರೆ ಎಂ4 ಮತ್ತು ಎಂ6 ವೆರಿಯೆಂಟ್‌ಗಳ ಖರೀದಿ ಮೇಲೆ 15,000 ರೂ. ನಗದು ಡಿಸ್ಕೌಂಟ್ ಪಡೆದುಕೊಳ್ಳಬಹುದು.

5.2 ಸೆಕೆಂಡಲ್ಲಿ 0 ನಿಂದ 100 ಕಿ.ಮೀ. ವೇಗ; ಐಒನಿಕ್ ಕಾರಿನ 5 ಚಿತ್ರಗಳು ಬಿಡುಗಡೆ!

ಬೊಲೆರೋ ಖರೀದಿಯ ಮೇಲೂ ಆಫರ್‌ಗಳಿವೆ. ಈ ವಾಹನದ ಖರೀದಿ ಮೇಲೆ ನಿಮಗೆ 10000 ರೂಪಾಯಿನಷ್ಟು ವಿಸ್ತರಿತ ಬೋನಸ್ ದೊರೆತರೆ, 6500
ರೂಪಾಯಿ ನಗದು ರಿಯಾಯ್ತಿ ಸಿಗಲಿದೆ. ಕಾರ್ಪೊರೇಟ್ ಡಿಸ್ಕೌಂಟ್ 4 ಸಾವಿರ ರೂಪಾಯಿ ಸಿಗಲಿದೆ.

ಮಹಿಂದ್ರಾ ಎಕ್ಸ್‌ಯುವಿ300 ಪೆಟ್ರೋಲ್ ಮಾದರಿ ವಾಹನದ ಖರೀದಿಯು ನಿಮಗೆ ಆನಂದ ನೀಡಲಿದೆ. ಯಾಕೆಂದರೆ, ಕಂಪನಿ ಈ ಮಾಡೆಲ್‌ ಮೇಲೂ ಆಫರ್‌ಗಳನ್ನು ಘೋಷಿಸಿದೆ. ಈ ವಾಹನ ಖರೀದಿಸಿದರೆ ಗ್ರಾಹಕರಿಗೆ ನಗದು ರಿಯಾಯ್ತಿಯಾಗಿ 5000 ರೂಪಾಯಿ ಸಿಕ್ಕರೆ, ವಿನಿಮಯ ಬೋನಸ್ ಆಗಿ 25,000 ರೂಪಾಯಿ ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ 4,5000 ರೂ. ಸಿಗಲಿದೆ. ಬಿಡಿಭಾಗಗಳ ರಿಯಾಯ್ತಿ ಮೌಲ್ಯ 5,000 ರೂಪಾಯಿ ಇದೆ.

ಇದೇ ವಾಹನ ಡಿಸೇಲ್ ಮಾದರಿಯನ್ನು ಖರೀದಿಸುವಿರಿ ಎಂದಾದರೆ ಕಂಪನಿಯು ನಿಮಗೆ  ಬಂಪರ್ ಆಫರ್‌ಗಳನ್ನು ಘೋಷಿಸಿದೆ. ನಗದು ರಿಯಾಯ್ತಿಯಾಗಿ 10,000 ರೂ. ಸಿಕ್ಕರೆ, ವಿನಿಮಯ ಬೋನಸ್ 25 ಸಾವಿರ ಮತ್ತು ಕಾರ್ಪೋರೆಟ್ ಡಿಸ್ಕೌಂಟ್ 4,500 ರೂ. ಹಾಗೂ 5,000 ಬಿಡಿಭಾಗಗಳ ರಿಯಾಯ್ತಿ ಸಿಗಲಿದೆ.

ಐಕಾನಿಕ್ ಕಾರ್ ಮಾರುತಿ 800 ಬಗ್ಗೆ ನಿಮಗೆಷ್ಟು ಗೊತ್ತು?