5.2 ಸೆಕೆಂಡಲ್ಲಿ 0 ನಿಂದ 100 ಕಿ.ಮೀ. ವೇಗ; ಐಒನಿಕ್ ಕಾರಿನ 5 ಚಿತ್ರಗಳು ಬಿಡುಗಡೆ!
ಹುಂಡೈ ಮೋಟಾರ್ ಕಂಪನಿಯ ಬಹು ನಿರೀಕ್ಷಿತ ಐಒನಿಕ್ 5 ಎಲೆಕ್ಟ್ರಿಕ್ ಕಾರಿನ 5 ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಕಾರಿನ ಬಗ್ಗೆ ಇರುವ ಕುತೂಹಲವನ್ನು ಹೆಚ್ಚಿಸಿವೆ. ಈ ಕಾರು ಮುಂದಿನ ತಿಂಗಳು ನಡೆಯಲಿರುವ ವರ್ಚುವಲ್ ಪ್ರೀಮಿಯರ್‌ನಲ್ಲಿ ಪ್ರದರ್ಶನ ಕಾಣಲಿದೆ.
ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಲ್ಲಿ ಎಲ್ಲ ಮೋಟಾರ್ ತಯಾರಿಕಾ ಕಂಪನಿಗಳು ಸಿದ್ಧತೆ ನಡೆಸಿಕೊಂಡಿವೆ. ಈಗಾಗಲೇ ಕೆಲವು ಕಂಪನಿಗಳು ಈ ವಿಷಯದಲ್ಲಿ ಮುಂದಿವೆ. ಭಾರತದಲ್ಲಿ ಹುಂಡೈ ಮೋಟಾರ್ ಕಂಪನಿಯ ಕಾರುಗಳಿಗೆ ವ್ಯಾಪಕ ಬೇಡಿಕೆ ಇದೆ. ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮೂಲಕ ಹುಂಡೈ ತನ್ನದೇ ಪ್ರಭಾವನ್ನು ಭಾರತೀಯ ಮಾರುಕಟ್ಟೆಯ ಮೇಲೆ ಹೊಂದಿದೆ. ಇದೀಗ ಕಂಪನಿ, ಐಒನಿಕ್ 5 ಮಿಡ್ ಸೈಜ್ ಎಲೆಕ್ಟ್ರಿಕಲ್ ಸಿಯುವಿಯ ಐದು ಹೊಸ ಇಮೇಜ್‌ಗಳನ್ನು ಬಿಡುಗಡೆ ಮಾಡಿದೆ.
ಈ ವಾಹನವು ಮುಂದಿನ ತಿಂಗಳು ಬಿಡುಗಡೆ ಕಾಣಲಿದೆ. ಈ ಐಒನಿಕ್ 5 ಕಾರು, ಬಿಇವಿಗೆ ಸೀಮತವಾಗಿರುವ ಸಾಲಿನ ಐಒನಿಕ್ ಮಾಡೆಲ್‌ನ ಮೊದಲು ಕಾರು ಇದಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ವರ್ಚುವಲ್ ಪ್ರೀಮಿಯರ್‌ನಲ್ಲಿ ಈ ಕಾರು ಜಗತ್ತಿಗೆ ಅನಾವರಣಗೊಳ್ಳಲಿದೆ.
ಐಕಾನಿಕ್ ಟಾಟಾ ಸಫಾರಿ ಎಸ್‌ಯುವಿ ಮತ್ತೆ ಘರ್ಜನೆಗೆ ಸಿದ್ಧ
ಕಂಪನಿ ಬಿಡುಗಡೆ ಮಾಡಿರುವ ಐಒನಿಕ್ 5 ಭಾವಚಿತ್ರಗಳು ಅತ್ಯಾಕರ್ಷಕವಾಗಿದ್ದು, ಇಡೀ ಕಾರಿನ ಒಟ್ಟು ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಎದ್ದು ಕಾಣುತ್ತದೆ. ಈಗ ಗೊತ್ತಿರುವ ಮಾಹಿತಿ ಪ್ರಕಾರ ಈ ಕಾರು ವಿಶೇಷ ತಂತ್ರಜ್ಞಾನ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಹೊಸ ತಂತ್ರಜ್ಞಾನ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ಕಳೆದ ತಿಂಗಳವಷ್ಟೇ ಕಂಪನಿ ಹೇಳಿಕೆ ನೀಡಿತ್ತು. ಇದೀಗ ಕಾರಿನ ಒಟ್ಟು ಐದು ಚಿತ್ರಗಳನ್ನು ಬಿಡುಗಡೆ ಮಾಡಿ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈಗ ಬಿಡುಗಡೆಯಾಗಿರುವ ಐಒನಿಕ್ 5 ಚಿತ್ರಗಳು ಪ್ಯಾರಾಮೆಟ್ರಿಕ್ ಪಿಕ್ಸೆಲ್ಸ್ ಮತ್ತು ಇಕೋ ಫ್ರೆಂಡ್ಲಿ ಕಲರ್ ಮಟೀರಿಯಲ್ ಫಿನಿಷ್(ಸಿಎಂಎಫ್) ಹೊಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಈ ಮೂಲಕ ಡಿಜಿಟಲ್ ಭಾವನೆಗಳನ್ನು ವ್ಯಕ್ತಪಡಿಸುವ ಕೆಲಸವನ್ನು ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಈ ಚಿತ್ರಗಳು ಪಿಕ್ಸೆಲ್ ಪ್ರೇರಿತ ಲೈಟ್ಸ್‌ಗಳನ್ನು ಹೊಂದಿದ್ದು ಅದು ಹುಂಡೈ ತನ್ನ ಹೊಸ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್‌ನೊಂದಿಗೆ ಬಳಸುತ್ತಿದೆ ಎಂಬುದನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತಿಳಿಸುವ ಪ್ರಯತ್ನವನ್ನು ನೀವಿಲ್ಲಿ ಕಾಣಹುದು.
ಹುಂಡೈ ಐಒನಿಕ್ ಕಾರು ಕ್ಲಾಮ್ಶೆಲ್ ಶೈಲಿಯ ಹೂಡ್ ಮತ್ತು ಏರೋ ಆಪ್ಟಿಮೈಸ್ಡ್ ಚಕ್ರಗಳನ್ನು ಹೊಂದಿದ್ದು, ಇದು ಪ್ಯಾರಾಮೀಟ್ರಿಕ್ ಪಿಕ್ಸೆಲ್ ವಿನ್ಯಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ದೊಡ್ಡ ಗಾತ್ರದ 20-ಇಂಚಿನ ವ್ಯಾಸದ ರಿಮ್‌ಗಳನ್ನು ಕಾಣಬಹುದು. ವಿಶೇಷ ಎಂದರೆ, ಎಲೆಕ್ಟ್ರಿಕಲ್ ಕಾರುಗಳ ಪೈಕಿ ಹುಂಡೈ ಈ ಕಾರಿನಲ್ಲಿ ನೀಡಲಾದ ಅತಿದೊಡ್ಡ ರಿಮ್ ಇದಾಗಿದೆ.
ನೇಪಾಳದ ರಸ್ತೆಗಳಲ್ಲಿ ಟಾಟಾ ಇಂಟ್ರಾ ವಿ20 ಟ್ರಕ್
ಈ ಕಾರಿನ ಇನ್ನೊಂದು ಗಮನ ಸೆಳೆಯುವ ಫೀಚರ್ ಏನೆಂದರೆ, ಐದು ನಿಮಿಷಗಳಲ್ಲಿ ಕಾರು 100 ಕಿ.ಮೀ. ದೂರ ಸಾಗಿಸುವ ಸಾಮರ್ಥ್ಯವನ್ನು ಪಡೆಯುವಷ್ಟು ಬ್ಯಾಟರಿ ಚಾರ್ಚಿಂಗ್ ಮಾಡಬಹುದು. ಅದರರ್ಥ ಸೂಪರ್‌ಫಾಸ್ಟ್ ಚಾರ್ಜಿಂಗ್ ಎಂದು ತಿಳಿದುಕೊಳ್ಳಬಹುದಾಗಿದೆ ಮತ್ತು 15 ನಿಮಿಷದಲ್ಲಿ ಶೇ.20ರಿಂದ 80ರವರೆಗಿನ ಚಾರ್ಜಿಂಗ್ ವ್ಯಾಪ್ತಿಯನ್ನು ತೋರಿಸುತ್ತದೆ ಎಂದು ಹುಂಡೈ ಹೇಳಿಕೊಂಡಿದೆ. ಬಿಡುಗಡೆ ಮುನ್ನವೇ ಭಾರಿ ಹವಾ ಸೃಷ್ಟಿಸುತ್ತಿರುವ ಈ ಹುಂಡೈ ಈ ಐಒನಿಕ್ ಕಾರು ಮೈಲುಗಲ್ಲು ಸಾಧಿಸುವ ಎಲ್ಲ ಲಕ್ಷಣಗಳಿವೆ.
ಈ ಬ್ಯಾಟರಿ ಚಾಲಿತ ಕಾರಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಕೆಲವು ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಈ ಎಂಜಿನ್ 313 ಪವರ್ ಉತ್ಪಾದಿಸುವ ಸಾಮರ್ಥ್ಯದ 230 ಕೆವಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಈ ಕಾರು ಒಳಗೊಂಡಿದೆ. ಒಮ್ಮೆ ನೀವು ಚಾರ್ಜ್ ಮಾಡಿದರೆ ಒಟ್ಟಾರೆಯಾಗಿ 450 ಕಿ.ಮೀ.ಗಳವರೆಗೂ ವಾಹನವನ್ನು ಒಡಿಸಬಹುದು. ಜೊತೆಗೆ, ಫಾಸ್ಟ್ ಚಾರ್ಜಿಂಗ್ ವ್ಯವ್ಥೆಯನ್ನು ಒಳಗೊಂಡಿರುವುದರಿಂದ ದೀರ್ಘ ಪ್ರಯಾಣವನ್ನು ಯಾವುದೇ ಅಡೆ ತಡೆ ಇಲ್ಲದೆ ಮಾಡಿಕೊಳ್ಳಬಹುದು.
ಈ ಕಾರಿನ ಇನ್ನೊಂದು ವಿಶೇಷ ಏನೆಂದರೆ, ಐಒನಿಕ್ ಕಾರು 5.2 ಸೆಂಕೆಂಡ್‌ಗಳಲ್ಲಿ ಈ ಕಾರು ಸೊನ್ನೆಯಿಂದ 100 ಕಿ.ಮೀ. ಸ್ಪೀಡ್ ಪಡೆದುಕೊಳ್ಳುವ ಸಾಮರ್ಥ್ಯವಿದೆ.
ಐಕಾನಿಕ್ ಕಾರ್ ಮಾರುತಿ 800 ಬಗ್ಗೆ ನಿಮಗೆಷ್ಟು ಗೊತ್ತು?