ಭಾರತದ ರಸ್ತೆಗಳಲ್ಲಿ ಅಕ್ಷರಶಃ ರಾಜನಂತೆ ಮೆರೆದ ಮಾರುತಿ 800 ಐಕಾನಿಕ್ ಕಾರು ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಮಾರುತಿ 800ಗೆ ಸಲ್ಲುತ್ತಿದೆ. ಈ ಕಾರನ್ನು ಕಂಪನಿ ಈ ಉತ್ಪಾದಿಸುತ್ತಿಲ್ಲವಾದರೂ ಜನರಿಗೆ ಅದರ ಮೇಲಿನ ಪ್ರೀತಿಯೇನೂ ಕಡಿಮೆಯಾಗಿಲ್ಲ.
ನಿಶ್ಸಂಶಯವಾಗಿ ಮಾರುತಿ 800 ಭಾರತ ಕಂಡ ಐಕಾನಿಕ್ ಕಾರು. ಮಧ್ಯಮ ವರ್ಗ ಡಾರ್ಲಿಂಗ್ ಎನಿಸಿಕೊಂಡಿದ್ದ ಕಾರು, ಅಕ್ಷರಶಃ ಭಾರತೀಯ ರಸ್ತೆಗಳನ್ನು ಆಳಿತು. ಪ್ರೀಮಿಯರ್ ಪದ್ಮಿನಿ, ಹಿಂದೂಸ್ತಾನ್ ಅಂಬಾಸಿಡರ್ ಕಾರುಗಳೇ ಮುಖ್ಯವಾಗಿದ್ದ ಕಾಲದಲ್ಲಿ ಮಾರುತಿ 800 ಕಾರು ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಈ ಕಾರಿಗೆ ಭಾರತದಲ್ಲಿ 37ರ ಹರೆಯ. ಕಳೆದ ತಿಂಗಳಷ್ಟೇ 37ನೇ ಬರ್ತಡೇ ಆಚರಿಸಿಕೊಂಡಿದೆ ಈ ಐಕಾನಿಕ್ ಕಾರ್.
ಮಾರುತಿ ಕಂಪನಿ 2914ರಲ್ಲೇ ಮಾರುತಿ 800 ಕಾರು ಉತ್ಪಾದನೆಯನ್ನು ನಿಲ್ಲಿಸಿದೆ. ಆದರೆ, ಈಗಲೂ ನೀವು ಮಾರುತಿ 800 ಕಾರುಗಳು ಓಡಾಡುವುದನ್ನು ನೋಡಬಹುದು. ಅಷ್ಟರ ಮಟ್ಟಿಗೆ ಭಾರತೀಯರಿಗೆ ಮಾರುತಿ 800ರ ಮೇಲೆ ಮೋಹವಿದೆ. ಈಗಲೂ ಈ ಕಾರುಗಳಿಗೆ ಬೇಡಿಕೆ ಇದೆ. ಆದರೆ, ಬದಲಾದ ನಿಯಮಗಳು ಮತ್ತು ಗ್ರಾಹಕರ ಅಭಿರುಚಿಯ ಹಿನ್ನೆಲೆಯಲ್ಲಿ ಕಂಪನಿ ಸ್ಥಗಿತಗೊಳಿಸಬೇಕಾಯಿತು. ಇದೀಗ ಅಲ್ಟೋ ಬ್ರ್ಯಾಂಡ್ ಕೈಬಿಟ್ಟು ಮಾರುತಿ ಸುಜುಕಿ ಮತ್ತೆ ಮಾರುತಿ 800 ಬ್ರ್ಯಾಂಡ್‌ನಡಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ. ಏನೇ ಆಗಲಿ, ಮಾರುತಿ 800 ಭಾರತೀಯ ಮಧ್ಯಮ ವರ್ಗದ ಕಾರಿನ ಕನಸು ಕೈಗೂಡಿಸಿದ ಕಾರು. ಮಧ್ಯಮ ವರ್ಗದ ನೆಚ್ಚಿನ ಕಾರು ಎಂಬುದರಲ್ಲಿ ಎರಡು ಮಾತಿಲ್ಲ.
ಹೋಂಡಾ ಹೈನೆಸ್ ಬೆಲೆ 2,500 ರೂ. ಹೆಚ್ಚಳ
ಮೊದಲ ಫ್ರಂಟ್ ವೀಲ್ ಡ್ರೈವ್ ಕಾರು
1983ರ ಹೊತ್ತಿನಲ್ಲಿ ಭಾರತ ಮಾರುಕಟ್ಟೆಯಲ್ಲಿ ಪ್ರೀಮಿಯರ್ ಪದ್ಮಿನಿ ಮತ್ತು ಹಿಂದೂಸ್ತಾನ್ ಅಂಬಾಸಿಡರ್ ಕಾರುಗಳು ಜನಪ್ರಿಯವಾಗಿದ್ದವು. ಈ ಕಾರುಗಳು ರಿಯರ್ ವೀಲ್ ಡ್ರೈವ್ ಕಾರುಗಳಾಗಿದ್ದವು. ಆಗ ಬಂದಿದ್ದೆ ಮಾರುತಿ ದೇಶದ ಮೊದಲ ಫ್ರಂಟ್ ವೀಲ್ ಡ್ರೈವ್ ಮತ್ತು ಹೆಚ್ಚು ಅತ್ಯಾಧುನಿಕ ಕಾರ್ ಎನಿಸಿಕೊಂಡಿತ್ತು. 1983ರಲ್ಲಿ ಮಾರುತಿ ಬಿಡುಗಡೆಯಾದಾಗ ಲೀಟರ್‌ಗೆ 25.95 ಕಿ.ಮೀ ಮೈಲೇಜ್ ಸಿಗುತ್ತದೆ ಎಂದು ಹೇಳಿಕೊಂಡಿತ್ತು.
ಮಾರುತಿ 800ಗೆ ಎಸ್ಎಸ್80 ಕೋಡ್ ನೇಮ್
ಮೂಲ ಮಾರುತಿ 800ಗೆ ಸುಜುಕಿ ಫ್ರಂಟ್ ಎಸ್ಎಸ್80 ಸ್ಫೂರ್ತಿಯಾಗಿತ್ತು. ಎಸ್ಎಸ್80 ಎನ್ನುವುದು ಭಾರತದಲ್ಲಿ ಉತ್ಪಾದಿಸಲಾಗುವ ಮಾರುತಿ 800 ಕಾರಿನ ಕೋಡ್ ನೇಮ್ ಕೂಡ ಆಗಿತ್ತು. 800 ಮೊದಲ ಬ್ಯಾಚ್ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾಗಿತ್ತು. ಆ ಬಳಿಕ ಈ ಮಾಡೆಲ್ ಅನ್ನು ಸಂಪೂರ್ಣವಾಗಿ ಲೊಕಲೈಸಡ್ ಮಾಡಿ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು
ಮೊದಲ ಕಾರಿನ ಬೆಲೆ 47,500 ರೂ.
ಮಾರುಕತಿ 800 ಕಾರಿನ ಬೆಲೆ ಆಗ ಎಷ್ಟಿರಬಹುದು? ಆಗ ಮಾರುತಿ 800 ಕಾರಿನ ಬೆಲೆ ಕೇವಲ 47,500 ರೂ. 1984ರಲ್ಲಿ ಎಸಿಯೊಂದಿಗೆ ಪರಿಚಯಿಸಲಾದ ಪ್ರೀಮಿಯಂ ಕಾರಿನ ಬೆಲೆ 70000 ರೂ. ಅಂದಿನ ಇತರ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಬೆಲೆ ಕಡಿಮೆ ಇದ್ದರೂ ಮಾರುತಿ ಖರೀದಿ ಅಷ್ಟು ಸುಲಭವಾಗಿರಲಿಲ್ಲ.
ವರ್ಷಗಟ್ಟಲೇ ಕಾಯಬೇಕಿತ್ತು
ಒಂದು ಕಾಲದಲ್ಲಿ 10 ಸಾವಿರ ರೂಪಾಯಿ ಕೊಟ್ಟು 1.2 ಲಕ್ಷ ಜನರು ಮಾರುತಿ 800 ಕಾರಿಗೆ ಬುಕ್ ಮಾಡಿದ್ದರು. ಮೊದಲಿನ ಮಾಡೆಲ್‌ಗಳನ್ನು ಗ್ರಾಹಕರಿಗೆ ಲಾಟರಿ ಸಿಸ್ಟಮ್ ಮೂಲಕ ವಿತರಿಸಲಾಯಿತು. ಆಗೆಲ್ಲ ಕಾರು ಬುಕ್ ಮಾಡಿ ವರ್ಷಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಗ್ರಾಹಕರು ಹೆಚ್ಚಿನ ಹಣ ಕೊಟ್ಟು ಕಾರು ಡೆಲಿವರಿ ತೆಗೆದುಕೊಳ್ಳುವ ಪರಿಸ್ಥಿತಿ ಇತ್ತು. ಅಷ್ಟೊಂದು ಡಿಮ್ಯಾಂಡ್ ಈ ಕಾರಿಗೆ ಇತ್ತು.
ಇಂದಿರಾ ಗಾಂಧಿಯಿಂದ ಹಸ್ತಾಂತರ
ಮಾರುತಿ 800 ಕಾರಿನ ಮೊದಲ ಗ್ರಾಹಕ ಹರ್ಪಲ್ ಸಿಂಗ್. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಾರುತಿ 800 ಕಾರಿನ ಕೀಯನ್ನು ಹರ್ಪಲ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದರು. ವಿಶೇಷ ಎಂದರೆ, ಸಿಂಗ್ ಅವರು ತಮ್ಮ ಜೀವಿತಾವಧಿಯವರೆಗೂ ಈ ಮಾರುತಿ 800 ಮೊದಲ ಕಾರನ್ನು ಕಾಯ್ದುಕೊಂಡು ಬಂದಿದ್ದರು.
ಐಕಾನಿಕ್ ಟಾಟಾ ಸಫಾರಿ ಎಸ್‌ಯುವಿ ಮತ್ತೆ ಘರ್ಜನೆಗೆ ಸಿದ್ಧ
10 ಕಾರಿನ ಪೈಕಿ 8 ಮಾರುತಿ
ಮಾರುತಿ ಫಸ್ಟ್ 800 ಕಾರಿಗೆ ಎಸ್ಎಸ್80 ಎಂಬ ಕೋಡ್ ನೇಮ್ ಕೊಡಲಾಗಿತ್ತು. ಮಾರುತಿ ಉದ್ಯೋಗ ಘಟಕದಲ್ಲಿ ಆರಂಭದಲ್ಲಿ 70 ಕಾರುಗಳ ಉತ್ಪಾದನೆ ಸಾಮರ್ಥ್ಯ ಇತ್ತು. 1984ರ ಹೊತ್ತಿಗೆ ಈ ಸಾಮರ್ಥ್ಯ 20 ಸಾವಿರ ಆಯಿತು, 1988ರ ಹೊತ್ತಿಗೆ ಅದು 40 ಸಾವಿರಕ್ಕೇರಿತು. ಬಿಡುಗಡೆಯಾದ ಎರಡು ವರ್ಷದಲ್ಲೇ ಮಾರುತಿ ವರ್ಷಕ್ಕೆ ಒಂದು ಲಕ್ಷ ಕಾರು ಉತ್ಪಾದಿಸಿತು ಮತ್ತು 1997ರ ಹೊತ್ತಿಗೆ ಮಾರಾಟವಾಗುವ ಟಾಪ್ 10 ಕಾರುಗಳಲ್ಲಿ 8 ಮಾರುತಿ ಕಾರುಗಳಾಗಿದ್ದವು.
1987ರಲ್ಲಿ ಮೊದಲ ಬಾರಿಗೆ ಸೀಟ್ ಬೆಲ್ಟ್
ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿದ್ದ ಮಾರುತಿ 800 ಕಾರನ್ನು ಕಂಪನಿ ವಿದೇಶಿಗಳಿಗೂ ರಫ್ತು ಮಾಡಲು ಮುಂದಾಯಿತು. 1987ರಲ್ಲಿ ಮೊದಲ ಬಾರಿಗೆ ಭಾರತದ ನೆರೆಯ ರಾಷ್ಟ್ರಗಳಿಗೆ ರಫ್ತು ಮಾಡಲಾಯಿತು. ಬಳಿಕ, ಹಂಗ್ರಿಗೆ 500 ಕಾರು ಕಳುಹಿಸಲಾಯಿತು. ಜಕೋಸ್ಲೋವಿಯಾ, ಯುಗೋಸ್ಲೋವಿಯಾ ಮಾರುತಿ ಕಾರುಗಳು ರಫ್ತು ಕಂಡವು. ಫ್ರಾನ್ಸ್, ನೆದರ್ಲೆಂಡ್, ಇಂಗ್ಲೆಂಡ್‌ನಂಥ ಮುಂದುವರಿದ ರಾಷ್ಟ್ರಗಳಲ್ಲೂ ಮಾರುತಿ ಓಡಲಾರಂಭಿಸಿತು. ವಿದೇಶಿಗಳಿಗೆ ರಪ್ತು ಮಾಡುವಾಗ ಕೆಲವು ಸೇಫ್ಟಿ ಫೀಚರ್‌ಗಳನ್ನು ಪಾಲಿಸಬೇಕಾಯಿತು. ಹಾಗಾಗಿ, ಕಂಪನಿ ಮಾರುತಿ 800 ಕಾರಿಗೆ ಮೊದಲ ಬಾರಿಗೆ 1987ರಲ್ಲಿ ಸೀಟ್ ಬೆಲ್ಟು ಪರಿಚಿಯಿಸಿತು.
2014ರಲ್ಲಿ ಮಾರುತಿ 800 ಸ್ಥಗಿತ
ಗ್ರಾಹಕರ ಬದಲಾಗುತ್ತಿರುವ ಅಭಿವರುಚಿ ಮತ್ತು ಬಿಎಸ್ 4 ನಿಯಮಗಳನ್ನು ಪಾಲಿಸುವಲ್ಲಿ ಕಷ್ಟವಾದ್ದರಿಂದ ಕಂಪನಿ ಕೊನೆಗೆ ಮಾರುತಿ 800 ಕಾರುಗಳ ಉತ್ಪಾದನೆಯನ್ನು ಕೈ ಬಿಟ್ಟಿತು. 2014ರ ಫೆಬ್ರವರಿಯಲ್ಲಿ ಚಂಡಿಗಢನ ಗ್ರಾಹಕರೊಬ್ಬರು ಮಾರುತಿ 800 ಕಾರಿನ ಕೊನೆಯ ಮಾಲೀಕರಾದರು. ಇದರೊಂದಿಗೆ ಭಾರತೀಯ ಆಟೋ ಕ್ಷೇತ್ರದ ಐಕಾನಿಕ್ ಕಾರು ಇತಿಹಾಸದ ಪುಟಗಳನ್ನು ಸೇರಿತು. ಇಷ್ಟಾಗಿಯೂ ನೀವು ಭಾರತೀಯ ರಸ್ತೆಗಳಲ್ಲಿ ಮಾರುತಿ 800 ಕಾರುಗಳನ್ನು ಓಡುವುದನ್ನು ಕಾಣಬಹುದು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 11, 2021, 5:11 PM IST