Asianet Suvarna News Asianet Suvarna News

ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್‌ಗೆ ಹುಲಿ ಮುಖದ ಭಿನ್ನ ಕಾರು, ಟ್ರೆಂಡ್ ಆಗ್ತಿದೆ ಕಿಚ್ಚನ ಜೀಪ್!

ಬಿಗ್‌ಬಾಸ್ 10ರ ನಡುವೆ ಕಿಚ್ಚ ಸುದೀಪ್ ತಮ್ಮ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಇದೀಗ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಬಳಸುವ ಕಾರಿನ ವಿಡಿಯೋವೊಂದು ವೈರಲ್ ಆಗಿದೆ. ಕಿಚ್ಚ ಫ್ಯಾನ್ ಪೇಜ್ ಈ ವಿಡಿಯೋ ಹಂಚಿಕೊಂಡಿದ್ದು, ಭಾರಿ ಕ್ರೇಜ್ ಹುಟ್ಟುಹಾಕಿದೆ. 

Kichcha Sudeep use Modified car in upcoming Max Movie Kannada says Report ckm
Author
First Published Oct 27, 2023, 1:19 PM IST | Last Updated Oct 27, 2023, 1:19 PM IST

ಬೆಂಗಳೂರು(ಅ.27) ಬಿಗ್‌ಬಾಸ್ 10ರ ಮೂಲಕ ಕಿಚ್ಚ ಸುದೀಪ್ ಪ್ರತಿ ವಾರ ಸ್ಮಾಲ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಚ್ಚನ ಮಾತುಗಳು, ಬಿಗ್‌ಬಾಸ್ ನಡೆಸಿಕೊಡುತ್ತಿರುವು ರೀತಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರ ನಡುವೆ ಸುದೀಪ್ ತಮ್ಮ ಚಿತ್ರಗಳಲ್ಲೂ ಬ್ಯೂಸಿಯಾಗಿದ್ದಾರೆ. ಈ ಪೈಕಿ ಮ್ಯಾಕ್ಸ್ ಚಿತ್ರ ಭಾರಿ ಕ್ರೇಜ್ ಹುಟ್ಟುಹಾಕಿದೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಆದರೆ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಬಳಸುತ್ತಿರುವ ಎನ್ನಲಾದ ಕಾರಿನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಭಿನ್ನ ರೀತಿಯ ಕಾರು ಮಾಡಿಫಿಕೇಶನ್ ಮಾಡಲಾಗಿದ್ದು, ಚಿತ್ರದ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚ ಸುದೀಪ್  ಹುಲಿಯ ಆಕ್ರಮಣಕಾರಿ ಮುಖವಿರುವ ವಾಹನ ಬಳಸುತ್ತಿದ್ದಾರೆ ಅನ್ನೋ ವಿಡಿಯೋವನ್ನು ಕಿಚ್ಚನ ಅಭಿಮಾನಿಗಳು ಹಂಚಿಕೊಂಡಿದ್ದಾರೆ. 4X4 ಜೀಪ್‌ನ್ನು ಸಂಪೂರ್ಣವಾಗಿ ಮಾಡಿಫಿಕೇಶನ್ ಮಾಡಲಾಗಿದೆ. ಮುಂಭಾಗದಲ್ಲಿ ಹುಲಿಯ ಅಗ್ರೆಸ್ಸೀವ್ ಮುಖದ ರೀತಿ ಡಿಸೈನ್ ಮಾಡಲಾಗಿದೆ. ಹುಲಿಯ ಹಲ್ಲುಗಳು, ಕಣ್ಣು, ಮೂಗು ಸೇರಿದಂತೆ ಆಕ್ರಮಣಶೀಲ ಮುಖದ ರೀತಿಯಲ್ಲಿ ಕಾರನ್ನು ಮಾಡಿಫಿಕೇಶನ್ ಮಾಡಲಾಗಿದೆ.

ಕಿಚ್ಚನ 'ಮ್ಯಾಕ್ಸ್' ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್: ಸಿನಿಮಾ ರಿಲೀಸ್‌ಗೆ ನಡೆದಿದೆ ದೊಡ್ಡ ಪ್ಲ್ಯಾನ್ !

ನಿರ್ದೇಶಕ  ವಿಜಯ್ ಕಾರ್ತಿಕ್ ನಿರ್ದೇಶನದ ಮ್ಯಾಕ್ಸ್ ಚಿತ್ರದ ಹೆಚ್ಚಿನ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸುದೀಪ್‌ಗೆ ಕ್ಯಾರೆಕ್ಟರ್ ಕುರಿತು ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸುಳಿವು ನೀಡಲಾಗಿದೆ. ಬರೋರೆಲ್ಲಾ ಜ್ವಾಲಾಮುಖಿಯಿಂದ ತಪ್ಪಿಸಿಕೊಳ್ಳಬಹುದು, ಭೂಕಂಪದಿಂದ ತಪ್ಪಿಸಿಕೊಳ್ಳಬಹುದು, ಸುನಾಮಿಯಿಂದಲೂ ತಪ್ಪಿಸಿಕೊಳ್ಳಬಹುದು. ಇವನತ್ರ ತಗಲಾಕೊಂಡ್ರೆ ಸತ್ತ ಎಂದು ಪೊಲೀಸ್ ಅಧಿಕಾರಿ ಹೇಳುವ ಮಾತು ಕಿಚ್ಚನ ಪಾತ್ರ ಚಿತ್ರಣ ನೀಡುತ್ತಿದೆ. ಇದೀಗ ಈ ಚಿತ್ರದಲ್ಲಿ ಸುದೀಪ್ ಈ ಟೈಗರ್ ನೋಸ್ ಕಾರನ್ನು ಬಳಸಿದ್ದಾರೆ ಎಂದು ವಿಡಿಯೋ ಹರಿದಾಡುತ್ತಿದೆ. 

 

 

ಕಿಚ್ಚನ ಫ್ಯಾನ್ ಪೇಜ್‌ಗಳಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಸುದೀಪ್ ಕ್ಯಾರೆಕ್ಟರ್‌ಗೆ ತಕ್ಕನಾಗಿ ಅಗ್ರೆಸ್ಸೀವ್ ಟೈಗರ್ ಜೀಪ್ ವಿನ್ಯಾಸ ಮಾಡಲಾಗಿದೆ. ಈ ಮೂಲಕ ಹುಲಿ ಬೇಟೆಯಾಡುವ ರೀತಿ ನಾಯಕ ಈ ಚಿತ್ರದಲ್ಲಿ ದುಷ್ಠರ ಬೇಟೆಯಾಡಲಿದ್ದಾರೆ ಅನ್ನೋದನ್ನು ಸಾಂಕೇತವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ತೋರಿಸಲಾಗಿದೆ.

ಡ್ರೋನ್ ಕಾಮಿಡಿಯಿಂದ ನೊಂದ ಪ್ರತಾಪ್..! ಕಿಚ್ಚ ಮಾತಿಗೆ ಪ್ರತಾಪ್ ಫುಲ್ ಚಾರ್ಜ್

ಸಾಮಾಜಿಕ ಜಾಲತಾಣದಲ್ಲಿ ಇದೀಗ ಸುದೀಪ್ ಮ್ಯಾಕ್ಸ್ ಚಿತ್ರದ ಈ ವಾಹನವೇ ಭಾರಿ ಟ್ರೆಂಡ್ ಆಗುತ್ತಿದೆ. ಸುದೀಪ್ ಬಳಸುವ ವಾಹನವೇ ಈ ಮಟ್ಟಿಗೆ ಟ್ರೆಂಡ್ ಸೃಷ್ಟಿಸಿದರೆ ಇದೀಗ ಸುದೀಪ್ ಚಿತ್ರ ಧೂಳೆಬ್ಬಿಸಲಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. 

 

 

Latest Videos
Follow Us:
Download App:
  • android
  • ios