Kia Carens Booking: ಇಂದಿನಿಂದ ಕಿಯಾ ಕ್ಯಾರೆನ್ಸ್ ಕಾರು ಬುಕಿಂಗ್ ಆರಂಭ!
*ಜನವರಿ 14ರಿಂದ ಕಿಯಾ ಕ್ಯಾರೆನ್ಸ್ ಬುಕಿಂಗ್ ಆರಂಭ
*25 ಸಾವಿರ ರೂ. ಮುಂಗಡ ಪಾವತಿಸಿ ಬುಕಿಮಗ್
*ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ನಿರ್ಮಾಣ
Auto Desk: ದೇಶದ ಎಸ್ಯುವಿ (SUV) ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದ ಕಿಯಾ ಇಂಡಿಯಾ (Kia Company) ಕಂಪನಿ, 2022ರಲ್ಲಿ ಹೊಸದಾಗಿ ಬಿಡುಗಡೆಗೊಳಿಸುತ್ತಿರುವ ಕಿಯಾ ಕ್ಯಾರೆನ್ಸ್ಗೆ (Kia Carens) ಬುಕಿಂಗ್ ಆರಂಭಿಸಲಿದೆ. ಈ ಹಿಂದೆ ಕಾರಿನ ಬಿಡುಗಡೆ ಕುರಿತು ಮಾಹಿತಿ ನೀಡಿದ್ದ ಕಿಯಾ ಕಂಪನಿ, ಜನವರಿ 14ರಿಂದ ಬುಕಿಂಗ್ ಆರಂಭಿಸುವುದಾಗಿ ತಿಳಿಸಿತ್ತು.ಇಂದಿನಿಂದ ಜನರು 25 ಸಾವಿರ ರೂ. ಮುಂಗಡ ಪಾವತಿಸಿ ಹತ್ತಿರದ ಕಿಯಾ ಡೀಲರ್ಶಿಪ್ ನೆಟ್ವರ್ಕ್ ನಲ್ಲಿಯೂ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.ಕಿಯಾ ಸಂಸ್ಥೆಯ ಸೋನೆಟ್ (Sonet) ಹಾಗೂ ಸೆಲ್ಟೋಸ್ (Seltos) ಕಾರುಗಳಿಗೆ ಬಾರಿ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ, ಕಿಯಾ ಕಂಪನಿ ಈಗ ಕಿಯಾ ಕ್ಯಾರೆನ್ಸ್ ಅನ್ನು ಬಿಡುಗಡೆ ಮಾಡುತ್ತಿದೆ. ಇದು ಮೇಡ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ತಯಾರಾದ ವಾಹನವಾಗಿದ್ದು, ಇದನ್ನು 9೦ ದೇಶಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿದೆ.
3 ಸಾಲಿನ ಆಸನದ ವ್ಯವಸ್ಥೆ ಹೊಂದಿರುವ ಕೊರಿಯನ್ ಮೂಲದ ಈ ಕಾರು ಕಳೆದ ತಿಂಗಳೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡಿದೆ. ಐಷಾರಾಮಿ ಸೌಲಭ್ಯವುಳ್ಳ ಈ ವಾಹನವನ್ನು ಇದರ ತಯಾರಕರು ‘ಮನರಂಜನಾ ವಾಹನ’ (Recreational vehicle) ಎಂದು ಕರೆದಿದ್ದಾರೆ. ಕಿಯಾ ಕ್ಯಾರೆನ್ಸ್ ಐದು ಟ್ರಿಮ್ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ, ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಐಷಾರಾಮಿ ಮತ್ತು ಐಷಾರಾಮಿ ಪ್ಲಸ್, ಟ್ರಿಮ್ಗಳು. ಇದು 6 ಹಾಗೂ 7 ಸೀಟರ್ ವಿನ್ಯಾಸಗಳನ್ನು ಒಳಗೊಂಡಿದ್ದು, 6 ಏರ್ ಬ್ಯಾಗ್ಗಳನ್ನು ಒಳಗೊಂಡಂತೆ 10ದೃಢವಾದ ಹೈ-ಸೆಕ್ಯೂರ್ ಸುರಕ್ಷತಾ ಪ್ಯಾಕೇಜ್ ಅನ್ನು ಹೊಂದಿದೆ. ಈ ಲಕ್ಸುರಿ ವಾಹನ ಕಿಯಾ ಕನೆಕ್ಟ್ ಮೂಲಕ 66 ಕನೆಕ್ಟೆಡ್ ವೈಶಿಷ್ಟ್ಯದೊಂದಿಗೆ ಸುಧಾರಿತ ಸಂಪರ್ಕವನ್ನು ಹೊಂದಿದೆ.
ಪವರ್ ಟ್ರೈನ್ಗಳು, ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಅದರ ವರ್ಗದಲ್ಲಿ ಉದ್ದವಾದ ವೀಲ್ಬೇಸ್ ಹೊಂದಿದ್ದು, ಆಧುನಿಕ ಭಾರತೀಯ ಕುಟುಂಬಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಇದಲ್ಲದೆ, ವಾಹನವು ಮುಂದಿನ ಪೀಳಿಗೆಯ ಕಿಯಾ ಕನೆಕ್ಟೋದೊಂದಿಗೆ 26.03 ಸೆಂ (10.25") HD ಟಚ್ಸ್ಕ್ರೀನ್ ನದಯಾವಿಗೇಷನ್ , 8 ಸ್ಪೀಕರ್ಗಳೊಂದಿಗೆ BOSE ಪ್ರೀಮಿಯಂ ಸೌಂಡ್ ಸಿಸ್ಟಮ್ , ವೈರಸ್ ಮತ್ತು ಬ್ಯಾಕ್ಟೀರಿಯಾದ ರಕ್ಷಣೆಯೊಂದಿಗೆ ಏರ್ ಪ್ಯೂರಿರಿಫೈಯರ್ ನಂತಹ ಅನೇಕ ಪ್ರಥಮ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಕಿಯಾಕ್ಯಾರೆನ್ಸ್ ಅನ್ನು ಮೂರು ಪವರ್ ಟ್ರೇನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ: Range Rover Car ಹೊಚ್ಚ ಹೊಸ ರೇಂಜ್ ರೋವರ್ ಕಾರಿನ ಬುಕಿಂಗ್ ಆರಂಭಿಸಿದ ಲ್ಯಾಂಡ್ ರೋವರ್
ಸೆಲ್ಟೋಸ್ ಮಾದರಿಯಲ್ಲೇ ಕ್ಯಾರೆನ್ಸ್ 3 ಪವರ್ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ- ಅವುಗಳೆಂದರೆ, 1.5 ಲೀಟರ್ ಪೆಟ್ರೋಲ್ (115 ಪಿಎಸ್ ಮತ್ತು 144 ಎನ್ಎಂ) 6-ಸ್ಪೀಡ್ ಎಂಟಿಯೊಂದಿಗೆ, 1.4 ಲೀಟರ್ ಟಿ-ಜಿಡಿಐ ಪೆಟ್ರೋಲ್ (140 ಪಿಎಸ್ ಮತ್ತು 242 ಎನ್ಎಂ) 6 –ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಮತ್ತು 1.5 ಲೀಟರ್ ಸಿಆರ್ಡಿಐ ವಿಜಿಟಿ ಡೀಸೆಲ್ (115 ಪಿಎಸ್ ಮತ್ತು 250 ಎನ್ಎಂ) 6 ಸ್ಪೀಡ್ ಎಂಟಿ ಮತ್ತು 6 ಸ್ಪೀಡ್ ಎಟಿ.
ಕಿಯಾ ಕಂಪನಿಯ ನಾಲ್ಕನೇ ಎಸ್ಯುವಿ ಭಾರತದಲ್ಲಿ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ದೇಶದಲ್ಲಿ ಕಿಯಾ ಸೆಲ್ಟೋಸ್, ಕಿಯಾ ಸೋನೆಟ್ ಹಾಗೂ ಕಿಯಾ ಕಾರ್ನಿವಲ್ ಕಾರುಗಳು ಮಾರುಕಟ್ಟೆಯಲ್ಲಿವೆ. 2021ರಲ್ಲಿ ಕಿಯಾದ ಒಟ್ಟು 2.27 ಲಕ್ಷ ಕಾರುಗಳು ಮಾರಾಟವಾಗಿವೆ. ದೇಶೀಯ ಮಾರುಕಟ್ಟೆಯಲ್ಲಿ ಇದು ಶೇ.29ರಷ್ಟು ಏರಿಕೆ ಕಂಡಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಶೇ.6ರಷ್ಟು ಪಾಲುದಾರಿಕೆಯೊಂದಿಗೆ, ಐದು ಪ್ರಮುಖ ಕಾರು ತಯಾರಕ ಕಂಪನಿಗಳ ಒಂದು ಎಂಬ ಸ್ಥಾನ ಗುರುತಿಸಿಕೊಂಡಿದೆ.