ಗಂಡನ ಉದ್ಯೋಗ, ಹೆಂಡತಿಗೆ ಸಂಬಳ: ಹೊಸ ಯೋಜನೆಯಿಂದ ಮನೆಗೆ ಬಂತು ದುಬಾರಿ ಕಾರು!
- ಕನಸು ನನಸು ಮಾಡಿಕೊಂಡ ಕೇರಳ ಮೂಲದ ಗೃಹಿಣಿ
- ಹೊಸ ಯೋಜನೆಯಿಂದ ಮನೆಗೆ ಬಂತು ಹೊಸ ಕಾರು
- ಗಂಡನ ಉದ್ಯೋಗ, ಹೆಂಡತಿಗೆ ಸಂಬಳ ಮೂಲಕ ಕಾರು ಖರೀದಿ
ಶಾರ್ಜಾ(ಜೂ.03): ಪತಿಯ ಉದ್ಯೋಗ, ಪತ್ನಿಗೆ ವೇತನ. ಇದು ಸುಳ್ಳಲ್ಲ. ಆದರೆ ಪೂರ್ತಿ ತಿಳಿಯದೇ ಈಗಲೇ ಊಹಿಸಿಕೊಳ್ಳಬೇಡಿ. ಕಾರಣ ಶಾರ್ಜಾ ಏರೈಸ್ ಗ್ರೂಪ್ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಕಂಪನಿಯ ಉದ್ಯೋಗಿಗಳ ಪತ್ನಿಯರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡಲು ಹೊಸ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಲಾಭ ಪಡೆದ ಕೇರಳ ಮೂಲದ ಸುದೀರ್ ಬಾದರ್ ಪತ್ನಿ ಫಿಜಿ ದುಬಾರಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ
ಉದ್ಯೋಗಸ್ಥ ಮಹಿಳೆಯರಿಗೂ ಮುಂದೆ ಒಳ್ಳೇ ಕಾಲವೈತೆ.
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಎಲ್ಲಾ ಕ್ಷೇತ್ರಗಳಿಗೆ ತೀವ್ರ ಹೊಡೆತ ಬಿದ್ದಿದೆ. ಆರ್ಥಿಕತೆ ಸಂಕಷ್ಟ ಎದುರಾಗಿದೆ. ಆದರೆ ಬೆರಳೆಣಿಕೆ ಮಂದಿಗೆ ಕೊರೋನಾ ಲಾಕ್‌ಡೌನ್ ಹಲವು ಲಾಭಗಳನ್ನು ತಂದಿದೆ. ಹೀಗೆ ಕೊರೋನಾ ನಡುವೆ ಶಾರ್ಜಾದ ಎರೈಸ್ ಗ್ರೂಪ್ ಹೊಸ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಪ್ರಯೋಜನ ಪಡೆದ ಹಲವರಲ್ಲಿ ಕೇರಳದ ಸುಧೀರ್ ಬಾದರ್ ಪತ್ನಿ ಫಿಜಿ ಒಬ್ಬರು.
ಏರೈಸ್ ಗ್ರೂಪ್ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಕಂಪನಿಯ ಉದ್ಯೋಗಿಗಳ ಪತ್ನಿಯರು ಆರ್ಥಿಕವಾಗಿ ಸಮಸ್ಯೆ ಎದುರಿಸಬಾರದು. ಗಂಡನ ವೇತನಕ್ಕಾಗಿ ಕಾಯುವ ಪರಿಸ್ಥಿತಿ ಬರಬಾರದು ಎಂದು ಸಂಗಾತಿಗೆ ಸಂಬಳ ಯೋಜನೆ ಆರಂಭಿಸಿದೆ. ಈ ಯೋಜನೆ ಮೂಲಕ ಸುದೀರ್ ಬಾದರ್ ಪತ್ನಿ ಫಿಚಿಗೆ ಕಳೆದ ಮಾರ್ಚ್ ತಿಂಗಳಿನಿಂದ ಉತ್ತಮ ವೇತನ ಸೇಗುತ್ತಿದೆ.
ಭಾರತೀಯ ಕಾರ್ಪೆಂಟರ್‌ಗೆ ಜಾಕ್‌ಪಾಕ್- ಲಕ್ಕಿ ಡ್ರಾನಲ್ಲಿ ಬಂತು 2 ಕೋಟಿ ಕಾರು!.
ಸುದೀರ್ ಬಾದರ್ ಪತ್ನಿ ಅರಬ್ ಎಮಿರೈಟ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. ಆದರೆ 3 ಮಕ್ಕಳ ತಾಯಿ ಆದ ಮೇಲೆ ಕೆಲಸಕ್ಕೆ ರಾಜೀನಾಮೆ ನೀಡಿ ಮಕ್ಕಳ ಆರೈಕೆಯಲ್ಲಿ ಗಮನಕೇಂದ್ರಿಕರಿಸಿದರು. ಇದೀಗ ಏರೈಸ್ ಗ್ರೂಪ್ ಮಾರ್ಚ್ ತಿಂಗಳನಿಂದ ಸಂಗಾತಿ ಸಂಬಳ ಯೋಜನೆ ಅಡಿಯಲ್ಲಿ ಫಿಜಿಗೆ ಸ್ಯಾಲರಿ ನೀಡುತ್ತಿದ್ದಾರೆ. ಈ ಸ್ಯಾಲರಿ ಕೂಡಿಟ್ಟು ವಿಶ್ವದ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಎಲೆಕ್ಟ್ರಿಕ್ ಕಾರು ಟೆಸ್ಲಾ ಬ್ರ್ಯಾಂಡ್ ಖರೀದಿಸಿದ್ದಾರೆ.
ಏರೈಸ್ ಗ್ರೂಪ್ ಜಾರಿಗೆ ತಂದಿರುವ ಸಂಗಾತಿಗೆ ಸಂಬಳ ಯೋಜನ ಇತರ ಕಂಪನಿಗಳಿಗೆ ಮಾದರಿಯಾಗಿದೆ. ಇದು ಗೃಹಿಣಿಗೆ ನೀಡಿದ ಅತ್ಯುನ್ನತ ಗೌರವವಾಗಿದೆ. ಈ ಯೋಜನೆಯಿಂದ ಗೃಹಿಣಿಯರ ಸಬಲೀಕರಣವಾಗಿದೆ ಎಂದು ಫಿಜಿ ಹೇಳಿದ್ದಾರೆ. ಇನ್ನು ಮಾಲಿನ್ಯ ರಹಿತ ಎಲೆಕ್ಟ್ರಿಕ್ ಕಾರಿನಿಂದ ಪರಿಸರಕ್ಕೂ ಕೊಡಗೆ ನೀಡಿದ ತೃಪ್ತಿ ಇದೆ ಎಂದು ಫಿಜಿ ಹೇಳಿದ್ದಾರೆ.