ಎಂಜಿ ಹೆಕ್ಟರ್ 7ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ. ಇದೀಗ ಹೆಕ್ಟರ್ ಸ್ಪೆಷಲ್ ಎಡಿಶನ್ ಕಾರು ಬಿಡುಗೆಯಾಗಿದೆ. ವಿಶೇಷ ಅಂದರ 60 ಸಾವಿರ ರೂಪಾಯಿ ಆಫರ್ ನೀಡಲಾಗಿದೆ. ಹೊಸ ಕಾರಿನ ಬೆಲೆ, ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು (ಆ.10) ಭಾರತದಲ್ಲಿ ಎಂಜಿ ಮೋಟಾರ್ಸ್ ತನ್ನ ಮೊದಲ ಹೆಕ್ಟರ್ ಕಾರು ಬಿಡುಗಡೆ ಮಾಡಿ ಇದೀಗ 7 ವರ್ಷ ಸಂದಿದೆ. ಎಂಜಿ ಮೋಟಾರ್ಸ್ 7ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. JSW ಎಂಜಿ ಇಂಡಿಯಾ ಮೋಟಾರ್ ಈ ಸಂಭ್ರಮವನ್ನು ಗ್ರಾಹಕರ ಜೊತೆ ಆಚರಿಸಲು ಮುಂದಾಗಿದೆ. ಇದರ ಪರಿಣಾಮ ಆಗಸ್ಟ್ ತಿಂಗಳಲ್ಲಿ ವಾರ್ಷಿಕೋತ್ಸವ ಆಫರ್ ಘೋಷಿಸಲಾಗಿದೆ. 60 ಸಾವಿರ ರೂಪಾಯಿ ಬೆನಿಫಿಟ್ ಆಫರ್ ಘೋಷಿಸಲಾಗಿದೆ.
ಕಾರಿಗೆ ಶೇಕಡಾ 100ರಷ್ಟು ಸಾಲ
ಲಿಮಿಟೆಡ್ ಪಿರಿಯೆಡ್ ಆಫರ್‌ನಲ್ಲಿ ಗ್ರಾಹಕರು ಎಕ್ಸ್‌ಚೇಂಜ್ ಬೆನಿಫಿಟ್ಸ್, ಲಾಯಲ್ಟಿ, ಕಾರ್ಪೋರೇಟ್ ಆಫರ್, ಆ್ಯನಿವರ್ಸರಿ ಡಿಸ್ಕೌಂಟ್ ಸೇರಿದಂತೆ ಒಟ್ಟು 60,000 ರೂಪಾಯಿ ಪ್ರಯೋಜನ ಸಿಗಲಿದೆ. ವಾರ್ಷಿಕೋತ್ಸವ ಅಂಗವಾಗಿ ಆಲ್ ನ್ಯೂ ಎಂಜಿ ಹೆಕ್ಟರ್ ಕಾರು ಲಾಂಚ್ ಮಾಡಲಾಗಿದೆ.ಲ 11.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಈ ಕಾರು ಲಭ್ಯವಿದೆ. ಇದೇ ವೇಳೆ ವಾರ್ಷಿಕೋತ್ಸವದ ಆಫರ್ ಕೂಡ ನೀಡಿದೆ. ವಿಶೇಷ ಅಂದರೆ ಆನ್ ರೋಡ್ ಬೆಲೆ ಮೇಲೆ ಶೇಕಡಾ 100ರಷ್ಟು ಸಾಲ ಸೌಲಭ್ಯವನ್ನು ಹೆಕ್ಟರ್ ನೀಡುತ್ತಿದೆ. ಹೊಸ ಕಾರಿಗೆ ಖರೀದಿಸುವ ಆಕ್ಸೆಸರೀಸ್‌ಗಳ ಮೇಲೆಯೂ 100% ಫೈನಾನ್ಸಿಂಗ್ ಸೌಲಭ್ಯ ಲಭ್ಯವಿದೆ.
ಹೊಸ ಲುಕ್ ಮತ್ತು ಆಕರ್ಷಕ ಬಣ್ಣಗಳು:
ಆಲ್-ನ್ಯೂ ಎಂಜಿ ಹೆಕ್ಟರ್ ಎಸ್‌ಯುವಿಯು ಮುಂಭಾಗದಲ್ಲಿ ಬೋಲ್ಡ್ 'ಆರಾ ಹೆಕ್ಸ್ ಗ್ರಿಲ್' (Aura Hex Grille) ಹಾಗೂ 'ಆರಾ ಸ್ಕಲ್ಪ್ ಬಂಪರ್'ಗಳನ್ನು ಹೊಂದಿದೆ. ಹೀಗಾಗಿ ಹೆಚ್ಚು ಸ್ಪೋರ್ಟೀವ್ ಲುಕ್ ನೀಡಲಿದೆ. ಆರಾ ಬೋಲ್ಟ್ ಅಲಾಯ್ ವೀಲ್ಸ್'ಗಳನ್ನು ನೀಡಲಾಗಿದ್ದು, 'ಸೆಲಡಾನ್ ಬ್ಲೂ' (Celadon Blue) ಮತ್ತು 'ಪರ್ಲ್ ವೈಟ್' (Pearl White) ಎಂಬ ಎರಡು ಹೊಸ ಸ್ಪೆಷಲ್ ಎಕ್ಸ್‌ಟೀರಿಯರ್ ಬಣ್ಣಗಳಲ್ಲಿ ಕಾರು ಲಭ್ಯವಿದೆ.
7-ಸೀಟರ್ ಮಾಡೆಲ್‌ನಲ್ಲಿ 'ಡ್ಯುಯಲ್-ಟೋನ್ ಅರ್ಬನ್ ಟ್ಯಾನ್' ಮತ್ತು 5-ಸೀಟರ್ ಮಾಡೆಲ್‌ನಲ್ಲಿ 'ಡ್ಯುಯಲ್-ಟೋನ್ ಐಸ್ ಗ್ರೇ' ಕಲಾತ್ಮಕ ಸೀಟ್ ಥೀಮ್ ನೀಡಲಾಗಿದೆ. ಇದರೊಂದಿಗೆ ವೆಂಟಿಲೇಟೆಡ್ ಸೀಟ್‌ಗಳು, ಹೈಡ್ರಾ ಗ್ಲಾಸ್ ಫಿನಿಶ್ ಮತ್ತು 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ನೀಡಲಾಗಿದೆ. ತಂತ್ರಜ್ಞಾನಕ್ಕೆ ಹೆಸರಾಗಿರುವ ಎಂಜಿ ಹೆಕ್ಟರ್‌ನಲ್ಲಿ ಈ ಬಾರಿಯೂ ಹೈಟೆಕ್ ಫೀಚರ್‌ಗಳನ್ನು ನೀಡಲಾಗಿದೆ. 14-ಇಂಚಿನ HD ಪೊರ್ಟ್ರೇಟ್ ಟಚ್‌ಸ್ಕ್ರೀನ್: 'ಸ್ಮಾರ್ಟ್ ಬೂಸ್ಟ್ ತಂತ್ರಜ್ಞಾನದ ಇನ್ಫೋಟೈನ್‌ಮೆಂಟ್ ಸಿಸ್ಟಮ್, i-SWIPE ಗೆಸ್ಚರ್ ಕಂಟ್ರೋಲ್ ಹೊಂದಿದೆ. ವಿಭಾಗದಲ್ಲೇ ಪ್ರಥಮ ಬಾರಿಗೆ 2 ಅಥವಾ 3 ಬೆರಳುಗಳ ಟಚ್ ಮೂಲಕ ಎಸಿ, ಮ್ಯೂಸಿಕ್ ಹಾಗೂ ನ್ಯಾವಿಗೇಷನ್ ಕಂಟ್ರೋಲ್ ಮಾಡುವ ಸೌಲಭ್ಯ ನೀಡಲಾಗಿದೆ.
ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ:
ಡಿಜಿಟಲ್ ಬ್ಲೂಟೂತ್ ಕೀ (Digital Bluetooth Key), ಡಿಜಿಟಲ್ ಕೀ ಶೇರಿಂಗ್, ರಿಮೋಟ್ ಎಸಿ ಕಂಟ್ರೋಲ್ ಹಾಗೂ 70ಕ್ಕೂ ಹೆಚ್ಚು ಕನೆಕ್ಟೆಡ್ ಕಾರ್ ಫೀಚರ್‌ಗಳನ್ನು ಒಳಗೊಂಡಿದೆ. ಆಗಸ್ಟ್ 2026 ರಲ್ಲಿ ಎಂಜಿ ಹೆಕ್ಟರ್ ಬುಕ್ ಮಾಡುವ ಪ್ರತಿಯೊಬ್ಬ ಗ್ರಾಹಕರಿಗೂ ಈ ವಿಶೇಷ ವಾರ್ಷಿಕೋತ್ಸವದ ಪ್ರಯೋಜನಗಳು ಲಭ್ಯವಾಗಲಿವೆ.


