Asianet Suvarna News Asianet Suvarna News

Jaguar Features ಸ್ವಯಂಚಾಲಿತ ಚಾಲನೆ, ಪಾರ್ಕಿಂಗ್ ಸೇರಿ AI ಫೀಚರ್ಸ್‌, ನಿವಿಡಿಯಾ ಜೊತೆ ಜಾಗ್ವಾರ್ ಒಪ್ಪಂದ!

  • ಅತ್ಯಾಧುನಿಕ ಸುರಕ್ಷತೆ ,ಬ್ರ್ಯಾಂಡ್ ಕೇಂದ್ರಿತ ಡಿಜಿಟಲ್ ಸೇವೆ
  • 2025 ರಿಂದ ಗ್ರಾಹಕರಿಗೆ ಆಧುನಿಕ ಐಷಾರಾಮಿ ಅನುಭವದ ಕಾರು
  • AI-ಚಾಲಿತ ಸ್ವಾಯತ್ತ ಚಾಲನೆ ಮತ್ತು ಸಂಪರ್ಕಿತ ಸೇವೆ
Jaguar Land Rover announces partnership with NVIDIA for artificial intelligence Autonomous driving ckm
Author
Bengaluru, First Published Feb 18, 2022, 7:20 PM IST

ಬೆಂಗಳೂರು(ಫೆ.18): ಜಾಗ್ವಾರ್ ಲ್ಯಾಂಡ್ ರೋವರ್(Jaguar Land Rover) ಮತ್ತಷ್ಟು ಆಧುನೀಕರಣಗೊಳ್ಳುತ್ತಿದೆ. ಗ್ರಾಗಕರಿಗೆ ಸ್ವಯಂಚಾಲಿತ ಚಾಲನೆ(Autonomous driving), ಸ್ವಯಂಚಾಲಿತ ಪಾರ್ಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ನೀಡಲು ಜಾಗ್ವಾರ್ ಮುಂದಾಗಿದೆ. ಇದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)  ಮತ್ತು ಕಂಪ್ಯೂಟಿಂಗ್‍ನಲ್ಲಿ ಅಗ್ರಮಾನ್ಯವಾಗಿರುವ NVIDIA ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 

ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್ ಜೊತೆಗೆ AI(artificial intelligence) ಸಕ್ರಿಯಗೊಳಿಸಿದ ಸೇವೆಗಳು ಮತ್ತು ಅನುಭವಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು NVIDIA ಜೊತೆ ಪಾಲುದಾರಿಕೆ ಪ್ರಕಟಿಸಿದೆ. 

ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭ!

2025ರಿಂದ ಸುರಕ್ಷತೆ, ಸ್ವಯಂಚಾಲಿತ ಚಾಲನೆ ಮತ್ತು ಪಾರ್ಕಿಂಗ್(Autonomous Parking) ವ್ಯವಸ್ಥೆಗಳು ಮತ್ತು ಚಾಲಕ ಸಹಾಯ ವ್ಯವಸ್ಥೆಗಳ ವ್ಯಾಪಕ ಶ್ರೇಣಿಯನ್ನು ನೀಡಲು ಆಧುನಿಕ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ವಾಹನಗಳನ್ನು NVIDIA DRIVE ಸಾಫ್ಟ್‍ವೇರ್-ವ್ಯಾಖ್ಯಾನಿತ ಪ್ಲಾಟ್‍ಫಾರ್ಮ್‍ನಲ್ಲಿ ನಿರ್ಮಿಸಲಾಗುವುದು. ಈ ವ್ಯವಸ್ಥೆಯು, ವಾಹನದ ಒಳಗೆ ಚಾಲಕ ಮತ್ತು ಪ್ರಯಾಣಿಕರ ಪರಿವೀಕ್ಷಣೆ ಮತ್ತು ವಾಹನದ ಪರಿಸರದ ಸುಧಾರಿತ ದೃಶ್ಯೀಕರಣ ಸೇರಿದಂತೆ AI  ವೈಶಿಷ್ಟ್ಯಗಳನ್ನು ನೀಡುತ್ತದೆ.

ಈ ಬೃಹತ್-ಪ್ರಮಾಣದ ಪರಿಹಾರವು NVIDIA DRIVE Hyperion ಅನ್ನು ಆಧರಿಸಿದ್ದು, ಇದು DRIVE Orin ಕೇಂದ್ರೀಕೃತ AV ಕಂಪ್ಯೂಟರ್, ಡ್ರೈವ್ AV ಮತ್ತು ಡ್ರೈವ್ IX ಸಾಫ್ಟ್‍ವೇರ್; ಸುರಕ್ಷತೆ, ಭದ್ರತೆ ಮತ್ತು ನೆಟ್‍ವರ್ಕಿಂಗ್ ವ್ಯವಸ್ಥೆಗಳು, ಜೊತೆಗೆ, ಸರೌಂಡ್ ಸೆನ್ಸರ್‍ಗಳನ್ನು ಒಳಗೊಂಡಿದೆ ಡ್ರೈವ್ ಓರಿನ್ ಕಾರಿನ AV ಮೆದುಳು ಆಗಿದ್ದು ಇದು ಜಾಗ್ವಾರ್ ಲ್ಯಾಂಡ್ ರೋವರ್‍ನ ಆಪರೇಟಿಂಗ್ ಸಿಸ್ಟಮ್ ಅನ್ನು ನಡೆಸಿದರೆ, ಅದರ ಡ್ರೈವ್ ಹೈಪರಿಯನ್ ಕೇಂದ್ರ ನರಮಂಡಲವಾಗಿದೆ.

ಐಷಾರಾಮಿ, ಆರಾಮದಾಯ, ಶಕ್ತಿಶಾಲಿ; ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ!

ಜಾಗ್ವಾರ್ ಲ್ಯಾಂಡ್ ರೋವರ್ AV  ಮಾದರಿಗಳಿಗೆ ತರಬೇತಿ ನೀಡಲು NVIDIA DGX  ನೊಂದಿಗೆ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಡೇಟಾ ಸೆಂಟರ್ ಪರಿಹಾರಗಳನ್ನು ಮತ್ತು ನೈಜ-ಸಮಯದ ಭೌತಿಕವಾಗಿ ನಿಖರವಾದ ಸಿಮ್ಯುಲೇಶನ್‍ಗಾಗಿ NVIDIA Omniverse ನಲ್ಲಿ ನಿರ್ಮಿಸಲಾದ ಡ್ರೈವ್ ಸಿಮ್ ಸಾಫ್ಟ್‍ವೇರ್ ಅನ್ನು ಸಹ ನಿಯಂತ್ರಿಸುತ್ತದೆ. ಜಾಗ್ವಾರ್ ಲ್ಯಾಂಡ್ ರೋವರ್ ನ ಸಾಫ್ಟ್‍ವೇರ್-ವ್ಯಾಖ್ಯಾನಿತ ವೈಶಿಷ್ಟ್ಯಗಳು ಮತ್ತು ಅದರ ಸಂಪೂರ್ಣ ಪರಿಶೀಲನೆ ಮತ್ತು ಊರ್ಜಿತಗೊಳಿಸುವಿಕೆಯ ಸಂರಚನೆಯು ಓವರ್-ದಿ-ಏರ್ ಸಾಫ್ಟ್‍ವೇರ್ ನವೀಕರಣಗಳ ಮೂಲಕ ವಾಹನದ ಜೀವನದುದ್ದಕ್ಕೂ ನವೀನ ಸಹಾಯಕ ಮತ್ತು ಸ್ವಯಂಚಾಲಿತ ಡ್ರೈವಿಂಗ್ ಸೇವೆಗಳ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.

ನಮ್ಮ ರೀಮ್ಯಾಜಿನ್ ತಂತ್ರವನ್ನು ಬಳಕೆಗೆ ತರಲು, ಗುಣಮಟ್ಟ, ತಂತ್ರಜ್ಞಾನ ಮತ್ತು ಸುಸ್ಥಿರತೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸಲು ಉದ್ಯಮದ  ಧುರೀಣರಾದ NVIDIA ನೊಂದಿಗೆ ಸಹಯೋಗ ಮತ್ತು ಜ್ಞಾನ-ಹಂಚಿಕೆ ಅತ್ಯಗತ್ಯ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಬೊಲೊರೆ ಹೇಳಿದ್ದಾರೆ.

ಅತ್ಯಂತ ವಿವೇಚನಾಶೀಲ ಗ್ರಾಹಕರಿಗೆ ಜಾಗ್ವಾರ್ ಲ್ಯಾಂಡ್ ರೋವರ್ ವಿಶ್ವದ ಅತ್ಯಂತ ಅಪೇಕ್ಷಣೀಯ ಐಷಾರಾಮಿ ವಾಹನಗಳು ಮತ್ತು ಸೇವೆಗಳ ಸೃಷ್ಟಿಕರ್ತರಾಗಲಿದೆ. ವ್ಯವಹಾರವು ನಿಜವಾದ ಜಾಗತಿಕ, ಡಿಜಿಟಲ್ ಪವರ್‍ಹೌಸ್ ಆಗಿ ರೂಪಾಂತರವನ್ನು ಮುಂದುವರೆಸುತ್ತಿದ್ದಂತೆ NVIDIA  ದೊಂದಿಗಿನ ನಮ್ಮ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯು ನಮ್ಮ ಭವಿಷ್ಯದ ವಾಹನಗಳಿಗೆ ಸಂಭಾವ್ಯ ಜಗತ್ತನ್ನು ತೆರೆದಿಡುತ್ತದೆ.

ಮುಂದಿನ ತಲೆಮಾರಿನ ಕಾರುಗಳು ವಾಹನೋದ್ಯಮವನ್ನು ಅತಿದೊಡ್ಡ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಉದ್ಯಮಗಳಲ್ಲಿ ಒಂದಾಗಿ ಪರಿವರ್ತಿಸುತ್ತವೆ. ಸಾಫ್ಟ್‍ವೇರ್-ವ್ಯಾಖ್ಯಾನಿತ, ಪ್ರೊಗ್ರಾಮೆಬಲ್ ಕಾರುಗಳ ಸಂಗ್ರಹಗಳು ವಾಹನಗಳ ದೀರ್ಘಬಾಳಿಕೆಗಾಗಿ ಹೊಸ ಕಾರ್ಯಾಚರಣೆಗಳು ಮತ್ತು ಸೇವೆಗಳನ್ನು ನೀಡುತ್ತವೆ. ಸಾರಿಗೆಯ ಭವಿಷ್ಯವನ್ನು ಮರುರೂಪಿಸಲು ಮತ್ತು ಅತ್ಯಾಧುನಿಕ ಕಾರುಗಳನ್ನು ರಚಿಸಲು ಜಾಗ್ವಾರ್ ಲ್ಯಾಂಡ್ ರೋವರ್‍ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ ಎಂದು NVIDIA  ಸಂಸ್ಥಾಪಕರು ಮತ್ತು CEO ಜೆನ್ಸನ್ ಹ್ಯುವಾಂಗ್ ಹೇಳಿದರು ಹೇಳಿದರು.

ಮಾ.23ಕ್ಕೆ ಭಾರತದಲ್ಲಿ ಜಾಗ್ವಾರ್ ಎಲೆಕ್ಟ್ರಿಕ್ ಕಾರು ಬಿಡುಗಡೆ; ದೇಶಾದ್ಯಂತ ಚಾರ್ಜಿಂಗ್ ಸ್ಟೇಶನ್!

ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಪೂರೈಕೆ ಸರಪಳಿ, ಉತ್ಪನ್ನಗಳು ಮತ್ತು ಕಾರ್ಯಾಚರಣೆಗಳಲ್ಲಿ 2039 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

Follow Us:
Download App:
  • android
  • ios