ನವದೆಹಲಿ(ಎ.06) ಲ್ಯಾಂಡ್ ರೋವರ್‌ನ ಮೊದಲ ಎಲೆಕ್ಟ್ರಿಕ್ ಮಾದರಿಯ SUV ಜಾಗ್ವಾರ್  ಐಪೇಸ್ ಭಾರತದಲ್ಲಿ  ಬಿಡುಗಡೆಯಾಗಿದೆ. ಐಷಾರಾಮದ ಜೊತೆಗೆ ಡ್ರೈವಿಂಗ್‌ನಲ್ಲೂ ಸಖತ್ ಮಸ್ತ್ ಅನುಭವ ನೀಡಲಿರುವ ಈ ಕಾರು ಕೇವಲ 4.8 ಸೆಕೆಂಡ್‌ಗಳಲ್ಲಿ ಶೂನ್ಯದಿಂದ ನೂರಕ್ಕೆ ವೇಗ ಹೆಚ್ಚಿಸಿಕೊಳ್ಳಬಲ್ಲದು. 

ಜಾಗ್ವಾರ್‌ನ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರಿನ ಬುಕಿಂಗ್ ಆರಂಭ!..

ಹೊಸ ವಿ ಪ್ರೋ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಈ ಕಾರ್‌ನಲ್ಲಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಈ ಕಾರ್‌ಅನ್ನು ವಿನ್ಯಾಸ ಮಾಡಲಾಗಿದೆ. 5 ವರ್ಷಗಳ ಸರ್ವೀಸ್ ಪ್ಯಾಕೇಜ್, ರೋಡ್ ಅಸಿಸ್ಟೆಂಟ್ ಜೊತೆಗೆ 7.4 ವಾಟ್ ವಾಲ್ ಮೌಂಟೆಡ್ ಚಾರ್ಜರ್ ಇರುತ್ತದೆ. 8 ವರ್ಷಗಳ ಬ್ಯಾಟರಿ ವಾರೆಂಟಿ ಇದೆ.

ನೂತನ ಐಪೇಸ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 470 ಕಿ.ಮೀ ಮೈಲೇಜ್ ನೀಡಲಿದೆ. ಟ್ವಿನ್ ಮೋಟಾರ್ ತಂತ್ರಜ್ಞಾನ ಒಳಗೊಂಡಿರುವ ಈ ಕಾರು 90kWh ಬ್ಯಾಟರಿ ಹೊಂದಿದೆ. ನೂತನ ಕಾರಿನ ಬೆಲೆ 1,05,90,000 ರೂಪಾಯಿ(ಎಕ್ಸ್ ಶೋ ರೂಂ)