Asianet Suvarna News Asianet Suvarna News

ಡ್ಯುಯೆಲ್ ಸಿಲಿಂಡರ್ ಟಾಟಾ ಅಲ್ಟ್ರೋಜ್ CNG ಕಾರು ಬುಕಿಂಗ್ ಆರಂಭ, ಕೇವಲ 21 ಸಾವಿರ ರೂ ಮಾತ್ರ!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಅಲ್ಟ್ರೋಜ್ ಸಿಎನ್‌ಜಿ ಕಾರು ಬುಕಿಂಗ್ ಆರಂಭಿಸಿದೆ. ನೂತನ ಕಾರು ಬೂಟ್ ಸ್ಪೇಸ್ ಇಂಧನ ಕಾರಿಗೂ ಯಾವುದೇ ವ್ಯತ್ಯಾಸವಿಲ್ಲ. 

India first twin cylinder CNG car Tata Alroz iCNG booking opens with rs 21000 ckm
Author
First Published Apr 20, 2023, 4:18 PM IST

ಬೆಂಗಳೂರು(ಏ.20): ಪೆಟ್ರೋಲ್, ಡೀಸೆಲ್ ದುಬಾರಿ, ಎಲೆಕ್ಟ್ರಿಕ್ ಕಾರುಗಳು ಕೈಗೆಟುಕುತ್ತಿಲ್ಲ. ಹೀಗಾಗಿ ಸಿಎನ್‌ಜಿ ಕಾರುಗಳು ಭಾರಿ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಬಹುತೇಕ ಕಂಪನಿಗಳು ಸಿಎನ್‌ಜಿ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಅಲ್ಟ್ರೋಜ್ ಸಿಎನ್‌ಜಿ ಕಾರಿನ ಬುಕಿಂಗ್ ಆರಂಭಿಸಿದೆ. ಈ ಕಾರಿನ ವಿಶೇಷತೆ ಅಂದರೆ ಬೂಟ್ ಸ್ಪೇಸ್, ಪೆಟ್ರೋಲ್ ಡೀಸೆಲ್ ಕಾರಿನಂತೆ ಯಾವುದೇ ವ್ಯತ್ಯಾಸವಾಗಿಲ್ಲ. ಅದೇ ಬೂಟ್ ಸ್ಪೇಸ್ ನೀಡಲಾಗಿದೆ. ಗ್ರಾಹಕರು ನೂತನ ಅಲ್ಟ್ರೋಜ್ ಸಿಎನ್‌ಜಿ ಕಾರನ್ನು 21,000 ರೂಪಾಯಿ ಪಾವತಿಸಿ ಬುಕಿಂಗ್ ಮಾಡಿಕೊಳ್ಳಬಹುದು. 

ಆಲ್ಟ್ರೋಜ್ iCNGಯನ್ನು ಜನವರಿ 2023ರಲ್ಲಿ ನಡೆದ ಆಟೋ ಎಕ್ಸ್‌ಪೋ 2023ದಲ್ಲಿ ಅನಾವರಣ ಮಾಡಲಾಗಿದೆ. ಭಾರತದ ಮೊದಲ ಡ್ಯುಯೆಲ್್ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದ ಕಾರು ಇದಾಗಿದೆ.  ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವು ಕ್ರಾಂತಿಕಾರಿ ತಂತ್ರಜ್ಞಾನವಾಗಿದ್ದು ಸಿಎನ್‌ಜಿ ಮಾಲೀಕರುಗಳಿಗೆ ವಾಸ್ತವವಾಗಿ ಬಳಸಿಕೊಳ್ಳಬಹುದಾದ ಬೂಟ್ ಸ್ಪೇಸ್ ತರುತ್ತದೆ. ಈ ಅಂಶವು ಪ್ರಸ್ತುತ ಎಲ್ಲಾ ಸಿಎನ್‌ಜಿ ಕಾರುಗಳಲ್ಲೂ ಲಭ್ಯವಿಲ್ಲ.  ಮೇ 2023ರಿಂದ ನೂತನ ಕಾರಿನ ಡೆಲಿವರಿಗಳು ಆರಂಭವಾಗಲಿದ್ದು, ಆಲ್ಟ್ರೋಜ್ iCNG ಟಾಟಾ ಮೋಟರ್ಸ್‌ನ ಯಶಸ್ವೀ ಮಲ್ಟಿ ಪವರ್‌ಟ್ರೇನ್ ತಂತ್ರಕ್ಕೆ ಬಲಿಷ್ಟ ಪುರಾವೆಯಾಗಿ ಆಲ್ಟ್ರೋಜ್ ಶ್ರೇಣಿಯಲ್ಲಿ ಈಗ ಇದನ್ನು ನಾಲ್ಕನೇ ಪವರ್‌ಟ್ರೇನ್ ಆಯ್ಕೆಯನ್ನಾಗಿ ಮಾಡಿದೆ. 

ಟಾಟಾ ನೆಕ್ಸಾನ್ ಡಾರ್ಕ್ ಎಡಿಶನ್ EV MAX ಕಾರು ಬಿಡುಗಡೆ, ಬುಕಿಂಗ್‌ಗಾಗಿ ಮುಗಿಬಿದ್ದ ಗ್ರಾಹಕರು!

ಅಲ್ಟ್ರೋಜ್ ಸಿಎನ್‌ಜಿ ವಿಶೇಷತೆ:
•    ದೊಡ್ಡದಾದ ಬಳಸಿಕೊಳ್ಳಬಹುದಾದ ಬೂಟ್ ಸ್ಪೇಸ್ ಖಾತರಿಪಡಿಸುವ ಸಲುವಾಗಿ ಲಗ್ಗೇಜ್ ಏರಿಯಾದ ಕೆಳಗೆ, 60 ಲೀಟರ್‌ಗಳ ಒಟ್ಟೂ ನೀರಿನ ಸಾಮರ್ಥ್ಯವಿರುವ (ಪ್ರತಿಯೊಂದು ಸಿಲಿಂಡರ್ 30 ಲೀಟರ್ ಸಾಮರ್ಥ್ಯ ಹೊಂದಿದೆ) ವಿನೂತನವಾದ ಅವಳಿ ಸಿಲಿಂಡರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 
•    ಸಿಂಗಲ್ ಅಡ್ವಾನ್ಸ್ಡ್ ECU – ಪೆಟ್ರೋಲ್ ಮೋಡ್‌ನಿಂದ ಸಿಎನ್‌ಜಿಗೆ ಬದಲಾಗುವಾಗ ಅಥವಾ ಸಿಎನ್‌ಜಿಯಿಂದ ಪೆಟ್ರೋಲ್ ಮೋಡ್‌ಗೆ ಬದಲಾಗುವಾಗ ತಡೆರಹಿತ ಹಾಗೂ ಜಿಗಿತವಿಲ್ಲದ ಚಾಲನಾ ಅನುಭವ ಖಾತರಿಪಡಿಸುತ್ತದೆ. 
•    ಸಿಎನ್‌ಜಿ ಮೋಡ್‌ನಲ್ಲಿ ನೇರ ಸ್ಟಾರ್ಟ್ – ತೊಂಡರೆಯಿಲ್ಲದ ಅನುಭವ ಖಾತರಿಪಡಿಸಲು ಮತ್ತು ಫ್ಯುಯೆಲ್ ಮೋಡ್‌ಗೆ ಬದಲಾಯಿಸಿಕೊಳ್ಳುವಾಗ ಚಿಂತೆಮುಕ್ತವಾಗಿರಲು, ಆಲ್ಟ್ರೋಜ್ iCNG ಸಿಎನ್‌ಜಿಯಲ್ಲೇ ನೇರವಾಗಿ ಸ್ಟಾರ್ಟ್ ಆಗುತ್ತದೆ. 
•    ಹೆಚ್ಚುವರಿ ಸುರಕ್ಷತಾ ಅಂಶಗಳು – ಥರ್ಮಲ್(ಶಾಖ) ಸಂದರ್ಭ ರಕ್ಷಣೆ, ಗ್ಯಾಸ್ ಸೋರಿಕೆ ಪತ್ತೆಹಚ್ಚುವಿಕೆ, ಮತ್ತು ಮೈಕ್ರೋ ಸ್ವಿಚ್, ಕಾರನ್ನು ರೀಫ್ಯುಯೆಲ್ ಮಾಡಿಕೊಳ್ಳುವ ಸಮಯದಲ್ಲಿ ಅದು ಅಫ್ ಆಗಿರುವುದನ್ನು ಖಾತರಿಪಡಿಸುತ್ತದೆ. 
•    3 ವರ್ಷ/ 100,000 ಕಿ.ಮೀ ಸಾಮಾನ್ಯ ವಾರಂಟಿ 

ಟಾಟಾ ಸಫಾರಿಗೆ 1 ಕೋಟಿ , ಮಾರುತಿ ಸ್ವಿಫ್ಟ್ 27 ಲಕ್ಷ ರೂ; ಭಾರತದ ಕಾರಿಗೆ ವಿದೇಶದಲ್ಲಿ ಬೆಂಕಿ ಬೆಲೆ!

ಆಲ್ಟ್ರೋಜ್ iCNG, ನಾಲ್ಕು ವೈವಿಧ್ಯಗಳಲ್ಲಿ ಲಭ್ಯವಿರುತ್ತದೆ - XE, XM+, XZ ಮತ್ತು XZ+ ಮತ್ತು ನಾಲ್ಕು ಬಣ್ಣ ಆಯ್ಕೆಗಳಲ್ಲಿ- ಒಪೆರಾ ಬ್ಲೂ, ಡೌನ್‌ಟೌನ್ ರೆರ್ಡ್, ಆರ್ಕೇಡ್ ಗ್ರ್ ಮತ್ತು ಅವೆನ್ಯೂ ವೈಟ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಆಲ್ಟ್ರೋಜ್ iCNG, ಲೆದರೆಟ್ ಸೀಟುಗಳು, iRA ಸಂಪರ್ಕಗೊಂಡ ಕಾರ್ ತಂತ್ರಜ್ಞಾನ, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್ ಮುಂತಾದ ಮಹತ್ವಾಕಾಂಕ್ಷೆಯ ಅಂಶಗಳನ್ನೂ ಒಳಗೊಂಡಿದೆ.
 

Follow Us:
Download App:
  • android
  • ios