Asianet Suvarna News Asianet Suvarna News

ಟಾಟಾ ನೆಕ್ಸಾನ್ ಡಾರ್ಕ್ ಎಡಿಶನ್ EV MAX ಕಾರು ಬಿಡುಗಡೆ, ಬುಕಿಂಗ್‌ಗಾಗಿ ಮುಗಿಬಿದ್ದ ಗ್ರಾಹಕರು!

ಟಾಟಾ ಮೋಟಾರ್ಸ್ ಹೊಚ್ಚ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಶನ್ ಕಾರು ಇದಾಗಿದೆ. ಹಲವು ಹೊಸತನಗಳು ಈ ಕಾರಿನಲ್ಲಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Tata Motors introduces new Nexon EV MAX DARK edition car in India ckm
Author
First Published Apr 17, 2023, 8:30 PM IST

ಮುಂಬೈ(ಏ.17): ಎಲೆಕ್ಟ್ರಿಕ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಭಾರತದಲ್ಲಿ ಬಹುತೇಕ ಮಾರುಕಟ್ಟೆ ಪಾಲು ಹೊಂದಿದೆ. ಕೈಗೆಟುಕುವ ದರ, ಗರಿಷ್ಠ ಮೈಲೇಜ್ ಮೂಲಕ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಮ್ಯಾಕ್ಸ್ ಡಾರ್ಕ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರು ಎರಡು ಟ್ರಿಮ್ ಮಾಡೆಲ್‌ನಲ್ಲಿ ಲಭ್ಯವಿದೆ.   XZ+ LUX ವೇರಿಯೆಂಟ್ ಕಾರಿಗೆ 19.04 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಹಾಗೂ 7.2 kW AC ಫಾಸ್ಟ್ ಚಾರ್ಜರ್‌ ಫೀಚರ್ಸ್ ಹೊಂದಿರುವ XZ+ LUX ಕಾರಿಗೆ 19.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  

ನೆಕ್ಸಾನ್ EV MAX #DARK, HARMANನ 26.03 cm (10.25 inch) ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಹೈ ರೆಸೊಲ್ಯುಶನ್ (1920X720),  ಹೈ ಡೆಫನಿಶನ್(HD)ಡಿಸ್ಪ್ಲೇ,  ವೈಫೈನಲ್ಲಿ ಆಂಡ್ರಾಯ್ಡ್ ಅಟೋ ಹಾಗೂ ಆ್ಯಪಲ್ ಕಾರ್‌ಪ್ಲೇ ಹೊಂದಿದೆ.  ಹೈ ಡೆಫನಿಶನ್ ರೇರ್ ವಿಯೂ ಕ್ಯಾಮರಾ,  ಬಾಸ್ ಸೌಂಡ್ ಸಿಸ್ಟಮ್, 6 ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್ ಅಸಿಸ್ಟೆಂಟ್,  180+ ಧ್ವನಿ ಆದೇಶಗಳು,ಹಾಗು ಹೊಸ ಯೂಸರ್ ಇಂಟರ್‌ಫೇಸ್(UI) ಹೊಂದಿರುವ, ನೆಕ್ಸಾನ್‌ ಲೈನ್ ಅಪ್‌ನಲ್ಲಿ ಪ್ರಪ್ರಥಮ ವಾಹನವಾಗಿದೆ. 

ಕೈಗೆಟುಕವ ದರ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೊಸ ಬೆಲೆ ಪ್ರಕಟ, ಇಲ್ಲಿದೆ ಸಂಪೂರ್ಣ ಪಟ್ಟಿ!

DARK ಎಡಿಶನ್ ಹೊರಾಂಗಣ ಮತ್ತು ಒಳಾಂಗಣ ಪ್ರಮುಖಾಂಶಗಳನ್ನು ಅಲಂಕರಿಸಲಿದೆ. ಈ ಸಿಗ್ನೇಚರ್ ಡಾರ್ಕ್ ಕಪ್ಪು ಬಣ್ಣದ ಬಾಡಿ, ಚಾರ್ಕೋಲ್ ಗ್ರೇ ಅಲಾಯ್ ವ್ಹೀಲ್ಸ್, ಸ್ಯಾಟಿನ್ ಬ್ಲ್ಯಾಕ್ ಹ್ಯುಮಾನಿಟಿ ಲೈನ್, Tri-Arrow DRLs ಇರುವ ಪ್ರೊಜೆಕ್ಟರ್ ಹೆಡ್‌ಲಾಫ್ಸ್, Tri-Arrow ಸಿಗ್ನೇಚರ್ LED ಟೈಲ್ ಲಾಂಪ್ಸ್, ಫೆಂಡರ್ ಮೇಲೆ ವಿಶೇಷವಾದ #DARK ಮಾಸ್ಕಾಟ್, ಹೊರಾಂಗಣದಲ್ಲಿ ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ರೈಲ್ಸ್‌ ಹೊಂದಿದೆ. ಇಂಟಿರೀಯರ್‌ನಲ್ಲಿ ತನ್ನ ಡಾರ್ಕ್-ಥೀಮ್ ಇರುವ ಒಳಾಂಗಣ ಪ್ಯಾಕ್, ಕಂಟ್ರೋಲ್ ನಾಬ್, ಸಿಗ್ನೇಚರ್ tri-arrow ವಿನ್ಯಾಸವಿರುವ ಗ್ಲಾಸ್ಸಿ ಪಿಯಾನೊ ಕಪ್ಪು ಡ್ಯಾಶ್‌ಬೋರ್ಡ್, tri-arrow  ಡಾರ್ಕ್-ಥೀಮ್ ಲೆದರೆಟ್ ಡೋರ್ ಟ್ರಿಮ್ಸ್,  EV ನೀಲಿ ಹೈಲೈಟ್ ಸ್ಟಿಚಸ್ ಹೊಂದಿದೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ ಸುಲಭವಾಗಿಸಲು ಟಾಟಾ ಮೋಟಾರ್ಸ್ ಭರ್ಜರಿ ಸ್ಕೀಮ್!
 
ಆಟೋ ಹೋಲ್ಡ್ ಇರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ , ಫ್ರಂಟ್ ಲೆದರೆಟ್ ವೆಂಟಿಲೇಟೆಡ್ ಸೀಟ್ಸ್, AQI ಡಿಸ್ಪ್ಲೇ ಇರುವ ಏರ್ ಪ್ಯೂರಿಫೈಯರ್, ವೈಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಆಟೋ ಡಿಮ್ಮಿಂಗ್ IRVM, ಎಲೆಕ್ಟ್ರಿಕ್ ಸನ್‌ರೂಫ್, ಆಟೋ ಹೆಡ್‌ಲಾಫ್ಸ್, ರೈನ್ ಸೆನ್ಸಿಂಗ್ ವೈಪರ್, ಸಂಪೂರ್ಣವಾಗಿ ಸ್ವಯಂಚಾಲಿತವಾದ ತಾಪಮಾನ ನಿಯಂತ್ರಕ, ತಂಪುಗೊಳಿಸಲಾದ ಗ್ಲವ್ ಬಾಕ್ಸ್, ಹಿಂಬದಿ ಎಸಿ ವೆಂಟ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್(PEPS)ಇರುವ ಸ್ಮಾರ್ಟ್ ಕೀ, ಆಟೋಫೋಲ್ಡ್ ಇರುವ ವಿದ್ಯುತ್ತಿನಿಂದ ಚಾಲಿತವಾಗುವ ORVMS, ಹಿಂಬದಿ ವೈಪರ್ ವಾಶರ್ ಮತ್ತು ಡೀಫಾಗರ್, 4 ಸ್ಪೀಕರ್+  4 ಟ್ವೀಟರ್ಸ್, ಸ್ಟೀರಿಂಗ್ ಮೇಲೆ ಅಳವಡಿಸಲಾದ ಕಂಟ್ರೋಲ್‌ಗಳು ಮತ್ತು ಸಂಪೂರ್ಣ ಗ್ರಾಫಿಕ್ ಡಿಸ್ಪ್ಲೇ ಇರುವ 17.78 cm (7”)TFT ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮುಂತಾದ ಸೇರ್ಪಡೆ ಅಂಶಗಳು, ಆರಾಮ ಮತ್ತು ಅನುಕೂಲತೆ ಪರಿಮಾಣದಲ್ಲಿ ಈ ಕಾರನ್ನು ಅಗ್ರಸ್ಥಾನದಲ್ಲಿರಿಸುತ್ತವೆ. ಟಾಪ್ ಎಂಡ್ ಮಾಡಲ್‌ನ ವಿನಿರ್ದೇಶನಗಳೊಂದಿಗೆ ಎಲ್ಲಾ ಸುರಕ್ಷಿತವಾದ ಮತ್ತು ಸಂಪರ್ಕಗೊಂಡ ಅಂಶಗಳನ್ನು ಹೊಂದಿರುವ ಇದು ತಡೆಹಿಡಿಯಲಾಗದ ಕೊಡುಗೆಯಾಗಿದೆ.

Follow Us:
Download App:
  • android
  • ios