ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿರುವ ಟಾಟಾ ಮೋಟಾರ್ಸ್, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಮೊದಲಿನಿಂದಲೂ ಅಗ್ರಸ್ಥಾನಿ.  ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಬಳಕೆದಾರರನ್ನು ಸಂತುಷ್ಟಗೊಳಿಸುತ್ತಿದೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಟಾಟಾ ತನ್ನ ಉತ್ಕೃಷ್ಟತೆಯನ್ನು ಕಾಯ್ದುಕೊಂಡು ಬರುತ್ತಿದೆ. ಟಾಟಾ ಮೋಟಾರ್ಸ್ ನೆರೆಯ ನೇಪಾಳದಲ್ಲಿ ಕಾಂಪಾಕ್ಟ್ ಟ್ರಕ್ ಇಂಟ್ರಾ ವಿ20 ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿದೆ.

ಹೋಂಡಾ ಹೈನೆಸ್ ಬೆಲೆ 2,500 ರೂ. ಹೆಚ್ಚಳ

ಟಾಟಾ ಮೋರ್ಟಾಸ್ ಇಂಟ್ರಾ ವಿ20 ಕಾಂಪಾಕ್ಟ್ ಟ್ರಕ್ ಅನ್ನು ಶ್ರೀಪ್ರದಿ ಟ್ರೇಡಿಂಗ್ ಜತೆಗೂಡಿ ನೇಪಾಳದಲ್ಲಿ ಬಿಡುಗಡೆ ಮಾಡಿದೆ.

ಟಾಟಾ ಮೋಟಾರ್ಸ್‌ನ ಈ ಕಾಂಪಾಕ್ಟ್ ಟ್ರಕ್ ಇಂಟ್ರಾ ವಿ20 ಟ್ರಕ್ ಬೆಲೆ 19,75 ಲಕ್ಷ ನೇಪಾಳಿ ರೂಪಾಯಿಯಾಗಿದೆ. ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಮಾರಾಟಕ್ಕೆ ಸಂಬಂಧಿಸಿದಂತೆ ನೇಪಾಳದಲ್ಲಿ ವ್ಯಾಪಕ ನೆಟ್ವರ್ಕ್ ಹೊಂದಿರುವ ಶ್ರೀಪದಿ ಟ್ರೇಡಿಂಗ್‌ ಈ ಸಣ್ಣ ಟ್ರಕ್‌ ಉತ್ಪಾದಕತೆಯನ್ನು  ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ವಿ10 ಮತ್ತು ವಿ20 ಇಂಟ್ರಾ ಟ್ರಕ್‌ಗಳನ್ನು ಮೇ 2019ರಲ್ಲಿ ಮಾರುಕಟ್ಟೆಗೆ  ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ನೆರೆಯ ನೇಪಾಳದಲ್ಲಿ ಇಂಟ್ರಾ ವಿ20 ಕಾಂಪಾಕ್ಟ್ ಟ್ರಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಟಾಟಾ ಮೋಟಾರ್ಸ್‌ನ ವೈವಿಧ್ಯಮಯ ಮತ್ತು ವಾಣಿಜ್ಯ ವಾಹನಗಳಿಗೆ ನೇಪಾಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಹೊಸ ಮಾದರಿಗಳು ಮತ್ತು ವೆರಿಯೆಂಟ್ ವಾಹನಗಳನ್ನು ಪರಿಚಯಿಸಲು ನಾವು ಪ್ರಯತ್ನಿಸಲಿದ್ದೇವೆ ಎಂದು ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳ ವ್ಯಾಪಾರ ಘಟಕದ ಅಂತಾರಾಷ್ಟ್ರೀಯ ವ್ಯವಹಾರದ ಉಪಾಧ್ಯಕ್ಷ ರುದ್ರರೂಪ್ ಮೈತ್ರಾ ತಿಳಿಸಿದ್ದಾರೆಂದು ಸುದ್ದಿ ಜಾಲತಾಣಗಳು ವರದಿ ಮಾಡಿವೆ.

1 ಲಕ್ಷ ಕೋಟಿ ರೂ. ದಾಟಿದ ಬಜಾಜ್‌ನ ಮಾರುಕಟ್ಟೆ ಬಂಡವಾಳ!

ಮತ್ತೆ ಮರಳಿ ಬಂದ ಐಕಾನಿಕ್ ಟಾಟಾ ಸಫಾರಿ
ಟಾಟಾ ಮೋಟಾರ್ಸ್ ಇದೀಗ ತನ್ನ ಐಕಾನಿಕ್ ಸಫಾರಿ ಬ್ರ್ಯಾಂಡ್ ಎಸ್‌ಯುವಿಯನ್ನು ಮತ್ತೆ ಲಾಂಚ್ ಮಾಡುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಅತ್ಯಧಿಕ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿರುವ ಟಾಟಾ ಕಂಪನಿ, ಗ್ರಾವಿಟಾಸ್ ಎಂಬ ಹೆಸರಿನಲ್ಲಿ 7 ಸೀಟರ್ ಎಸ್‌ವಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿತ್ತು. ಅದೇ ಎಸ್‌ಯುವಿಯನ್ನು ಇದೀಗ ಕಂಪನಿ ಸಫಾರಿ ಬ್ರ್ಯಾಂಡ್‌ನಡಿ ಜನವರಿ 26ಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಟೋಟಾ ಮೋಟಾರ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ದಿ ಆಲ್ ನ್ಯೂ ಟಾಟಾ ಸಫಾರಿಗಾಗಿ ರೆಡಿಯಾಗಿರಿ ಎಂಬ ಒಕ್ಕಣಿಕೆಯೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಜನವರಿಯಲ್ಲಿ ನಿಮ್ಮ ಹತ್ತಿರದ ಶೋರೂಮ್‌ಗಳಿಗೆ ಬರಲಿದೆ ಎಂದು ಹೇಳಲಾಗಿದೆ.

ಶೀಘ್ರವೇ ಈ ಐಕಾನಿಕ್ ಟಾಟಾ ಸಫಾರಿಗೆ ಪ್ರಿ ಬುಕ್ಕಿಂಗ್ ಕೂಡ ಆರಂಭವಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ ಹೊಸ ಟಾಟಾ ಸಫಾರಿ ಎಸ್‌ಯುವಿ, 5 ಸೀಟರ್ ಹ್ಯಾರಿಯರ್‌ನ 7 ಸೀಟರ್ ವರ್ಷನ್ ಆಗಿದೆ ಎಂದು ಹೇಳಬಹುದು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಅತ್ಯುದ್ಭುತ ಪ್ರದರ್ಶನ ತೋರುತ್ತಿದೆ. ಟಿಯಾಗೋ, ಟಿಗೋರ್, ಹ್ಯಾರಿಯರ್‌ನಂಥ ಕಾರುಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಗ್ರಾಹಕರು ಕೂಡ ಟಾಟಾ ಪ್ರಯಾಣಿಕ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಪರಿಣಾಮ ಕಳೆದ ಎಂಟು ವರ್ಷಗಳಲ್ಲೇ ಈ ಬಾರಿ ಅತ್ಯಧಿಕ ವಾಹನಗಳನ್ನು ಮಾರಾಟದ ಪ್ರದರ್ಶನ ತೋರಿದೆ. ಇದೀಗ ಟಾಟಾ ಮೋಟಾರ್ಸ್ ಹೆಗ್ಗಳಿಕೆಗೆ ಐಕಾನಿಕ್ ಸಫಾರಿ ಕೂಡ ಮತ್ತೆ ಮರಳಿ ಸೇರುತ್ತಿದೆ. ಇದರೊಂದಿಗೆ ಟಾಟಾ ಮೋಟಾರ್ಸ್ ‘ಸಫಾರಿ’ ಹೊಸ ದಿಕ್ಕಿನತ್ತ ಸಾಗಲು ಸಜ್ಜಾಗಿದೆ ಎಂದು ಹೇಳಬಹುದು.

8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!