27 ಲಕ್ಷ ಮೌಲ್ಯದ ಐಷಾರಾಮಿ ಪೋರ್ಶೆ ಕಾರು ತಿರಸ್ಕರಿಸಿದ ಪತ್ನಿ: ಪತಿ ಮಾಡಿದ್ದೇನು ನೋಡಿ!

ರಷ್ಯಾದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 27 ಲಕ್ಷ ಮೌಲ್ಯದ ಪೋರ್ಶೆ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಪತ್ನಿ ತಿರಸ್ಕರಿಸಿದ್ದಾಳೆ. ಇದರಿಂದ ಬೇಸರಗೊಂಡ ಪತಿ ಕಾರನ್ನು ಕಸದ ತೊಟ್ಟಿಗೆ ಎಸೆದಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Husband gifts damaged luxury car to wife she rejected it

ಮದುವೆ ವಾರ್ಷಿಕೋತ್ಸವಕ್ಕೋ , ಹುಟ್ಟುಹಬ್ಬ ಅಥವಾ ವ್ಯಾಲೆಂಟೈನ್ಸ್‌ ಡೇಗೆ ಪತಿ ಪತ್ನಿಯರು ಪರಸ್ಪರ ಉಡುಗೊರೆಗಳನ್ನು ನೀಡಿ ಖುಷಿ ಪಡುತ್ತಾರೆ. ಅದು ಅವರವರ ಆರ್ಥಿಕ ಸ್ಥಿತಿಗೆ ತಕ್ಕಂತೆ ಅವರು ದುಬಾರಿ ಉಡುಗೊರೆಗಳನ್ನು ನೀಡುತ್ತಾರೆ. ಅದೇ ರೀತಿ ರಷ್ಯಾದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಮೊನ್ನೆ ಮೊನ್ನೆಯಷ್ಟೇ ಮುಗಿದ ವ್ಯಾಲೆಂಟೈನ್ಸ್ ಡೇ ದಿನ ದುಬಾರಿ ಅಂದರೆ ಸುಮಾರು 27 ಲಕ್ಷ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಆದರೆ ಪತ್ನಿಗೇನಾಯ್ತೋ ಗೊತ್ತಿಲ್ಲ, ಆಕೆ ಆತನ ಈ ದುಬಾರಿ ಗಿಫ್ಟನ್ನು ತಿರಸ್ಕರಿಸಿದಳಂತೆ ಇದರಿಂದ ಬೇಸರ ಹಾಗೂ ಸಿಟ್ಟಾದ ಗಂಡ ಅದನ್ನು ಕಸ ಎಸೆಯುವಲ್ಲಿ ಎಸೆದಿದ್ದಾನೆ ಇಂತಹ ಒಂದು ಘಟನೆ ರಷ್ಯಾದ ರಾಜಧಾನಿ ಮಾಸ್ಕೋದ ಮೈಟಿಶ್ಚಿ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಇಷ್ಟು ದುಬಾರಿ ಕಾರನ್ನು ತಿರಸ್ಕರಿಸಿದ ಪತ್ನಿಯ ಬಗ್ಗೆ ಹಾಗೂ ಇದನ್ನು ಕಸಕ್ಕೆಸೆದ ಪತಿಯ ಬಗ್ಗೆ ಹಲವು ಕಾಮೆಂಟ್ ಮಾಡುತ್ತಿದ್ದಾರೆ. 

ವೈರಲ್ ಫೋಟೋ ನೋಡಿದ ಅನೇಕರು ಹೆಂಡತಿ ತಿರಸ್ಕರಿಸಿದರೇನಂತೆ ಬೇರೆ ಹುಡುಗಿಗೆ ಕೊಟ್ಟು ವ್ಯಾಲೆಂಟೈನ್ ಡೇ ಆಚರಿಸಬಹುದಿತ್ತು ಎಂದು ಹಾಸ್ಯಮಯವಾಗಿ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಕಸವನ್ನು ಹೊತ್ತೊಯ್ಯುವ ಗಾರ್ಬೆಜ್ ಕಂಟೈನರ್‌ನಲ್ಲಿ ಇದ್ದ ಕಾರನ್ನು ಐಷಾರಾಮಿ ಪೋರ್ಶೆ ಮೆಕನ್ ಎಂದು ಗುರುತಿಸಲಾಗಿದೆ. ಅನೇಕರು ಇದನ್ನು ವಿಫಲವಾದ ದಾಂಪತ್ಯವನ್ನು ಉಳಿಸಿಕೊಳ್ಳುವುದಕ್ಕೆ ವ್ಯಕ್ತಿ ಮಾಡಿದ ಹತಾಶ ಪ್ರಯತ್ನ ಎಂದು ಕರೆದಿದ್ದಾರೆ. ಆದರೆ ಪತ್ನಿ ಅದನ್ನು ತಿರಸ್ಕರಿಸಿದ್ದರಿಂದ ಬೇಸರಗೊಂಡ ವ್ಯಕ್ತಿ ತನ್ನ ಸಿಟ್ಟು ಆಕ್ರೋಶವನ್ನು ಕಾರಿನ ಮೇಲೆ ತೋರಿಸಿಕೊಂಡಿದ್ದು, ಸಾರ್ವಜನಿಕವಾಗಿ ಕಾರನ್ನು ಕಸ ಹೊತ್ತೊಯ್ಯುವ ಲಾರಿಗೆ ತುಂಬಿಸಿದ್ದಾನೆ ಎಂದು ರಷ್ಯಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಸ್ಥಳೀಯ ಮಾಧ್ಯಮ ಆದರೆ ಈ ವಾಹನ ಈ ಹಿಂದೆಯೇ ಅಪಘಾತಕ್ಕೀಡಾಗಿದ್ದು, ಹಾನಿಗೊಳಗಾಗಿತ್ತು. ಆರಂಭದಲ್ಲಿ, ಆ ವ್ಯಕ್ತಿ ಕಾರನ್ನು ರಿಪೇರಿ ಮಾಡಿ ಮಾರ್ಚ್ 8 ರ ಅಂತರರಾಷ್ಟ್ರೀಯ ಮಹಿಳಾ ದಿನದಂದು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡಲು ಪ್ಲಾನ್ ಮಾಡಿದ್ದ ಆದರೆ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಅವಳನ್ನು ಅಚ್ಚರಿಗೊಳಿಸಲು ಆತ ನಿರ್ಧರಿಸಿದ್ದ ಹೀಗಾಗಿ ಅದಕ್ಕೂ ಮೊದಲೂ ಕಾರನ್ನು ಪೂರ್ಣವಾಗಿ ದುರಸ್ತಿ ಮಾಡಲು ಮುಂದಾಗಿದ್ದ.  ಆದರೆ ದುರಸ್ತಿಯಾಗಿರಲಿಲ್ಲ. ಆದರೆ ಆತನ ದುರಾದೃಷ್ಟಕ್ಕೆ ಕಾರು ಆ ವಿಶೇಷ ದಿನಕ್ಕೆ ರಿಪೇರಿಯಾಗಿರಲಿಲ್ಲ. 

ಆದರೆ ಆತ ಸುಮ್ಮನಿರುವ ಬದಲು ಆ ಹಾನಿಗೊಳಗಾದ ಕಾರನ್ನೇ ಕೆಂಪು ರಿಬ್ಬನ್‌ನಿಂದ ಅಲಂಕರಿಸಿ ಪತ್ನಿಗೆ ನೀಡಿದ್ದಾನೆ. ಆದರೆ ಇದರಿಂದ ಅವಮಾನಕ್ಕೊಳಗಾದ ಪತ್ನಿಗೆ ಇಂಪ್ರೆಸ್ ಆಗುವ ಬದಲು ಇನ್ಸಲ್ಟ್ ಆದಂತಾಗಿದ್ದು, ಆಕೆ ಈ ಉಡುಗೊರೆಯನ್ನು ತಿರಸ್ಕರಿಸಿದ್ದಾಳೆ. ಇದರಿಂ ತೀವ್ರ ಬೇಸರಗೊಂಡ ಪತಿ ಆ ಕಾರಿಗೆ ಅಷ್ಟೊಂದು ಲಕ್ಷವನ್ನು ತಾನು ವೆಚ್ಚ ಮಾಡಿದ್ದೇನೆ ಎಂಬುದನ್ನು  ಗಣನೆಗೆ ತೆಗೆದುಕೊಳ್ಳದೇ ಅದನ್ನು ಕಸ ಹೊತ್ತುಯ್ಯುವ ಕಂಟೈನರ್‌ಗೆ ತುಂಬಿದ್ದಾನೆ ಎಂದು ವರದಿಯಾಗಿದೆ. ಆತನ ಈ ನಿರ್ಧಾರಕ್ಕೆ ಅಲ್ಲಿನ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ.

Latest Videos
Follow Us:
Download App:
  • android
  • ios