ಮಾರ್ಚ್ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದ ಹೋಂಡಾ ಆಯ್ದ ಕಾರುಗಳ ಮೇಲೆ ರಿಯಾಯಿತಿ ಆಫರ್, ಕಡಿಮೆ ಬೆಲೆಗೆ ಕಾರು ಮಾರ್ಚ್ 31ರ ವರೆಗೆ ಡಿಸ್ಕೌಂಟ್ ಆಫರ್ ಲಭ್ಯ

ನವದೆಹಲಿ(ಮಾ.08): ಭಾರತದ ಕಾರು ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎದುರಾಗುತ್ತಿದೆ. ಹೊಸ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದರ ನಡುವೆ ಮಾರಾಟ ವೇಗ ಹೆಚ್ಚಿಸಿಕೊಳ್ಳಲು ಹಲವು ಪ್ರಯತ್ನಗಳು ನಡೆಯತ್ತಲೇ ಇದೆ. ಇದರಲ್ಲಿ ಪ್ರಮುಖವಾಗಿ ಡಿಸ್ಕೌಂಟ್ ಆಫರ್ ಮೂಲಕ ಮಾರಾಟ ವೇಗ ಹೆಚ್ಚಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಹೋಂಡಾ ಇಂಡಿಯಾ ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ.

Add Asianetnews Kannada as a Preferred SourcegooglePreferred

ಹೋಂಡಾ ಸಿಟಿ(5ನೇ ಜನರೇಶನ್)
ಹೋಂಡಾ ಸಿಟಿ 5ನೇ ಜನರೇಶನ್ ಕಾರಿನ ಮೇಲೆ ಒಟ್ಟು 35,596 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರಲ್ಲಿ ನೇರವಾಗಿ ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ. ಇನ್ನು 10,596 ರೂಪಾಯಿ ಉಚಿತ ಆಕ್ಸಸರೀಸ್, ಎಕ್ಸ್‌ಚೇಂಜ್ ಬೋನಸ್ 5,000 ರೂಪಾಯಿ, ಹೋಂಡಾ ಗ್ರಾಹಕರಾಗಿದ್ದರೆ ಹೆಚ್ಚುವರಿಯಾಗಿ ಲಾಯಲ್ಟಿ ಬೋನಸ್ 5,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ ಪಡೆಯಲಿದ್ದೀರಿ. ಇದರೊಂದಿಗೆ ಕಾರ್ಪೋರೇಟ್ ಆಫರ್ 8,000 ರೂಪಾಯಿ ನೀಡಲಾಗಿದೆ.

ಕಡಿಮೆ ದರ, ಸುರಕ್ಷತೆ: ಹೋಂಡಾ ಅಮೇಜ್ ಕಾರಿನ ಮಾರಾಟ ಅಮೇಜಿಂಗ್!

ಹೋಂಡಾ WR-V
ಹೋಂಡಾ WR-V ಕಾರಿಗೆ ಒಟ್ಟು 26,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದು ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ, ಕಾರ್ಪೋಪೇಟ್ ಬೋನಸ್ 4,000 ರೂಪಾಯಿ, ಹೋಂಡಾ ಕಸ್ಟಮರ್ ಆಗಿದ್ದಲ್ಲಿ ಲಾಯಲ್ಟಿ ಬೋನಸ್ 5,000 ರೂಪಾಯಿ ಹಾಗೂ ಹೋಂಡಾ ಕಾರ್ ಎಕ್ಸ್‌ಚೇಂಜ್ 7,000 ರೂಪಾಯಿ ಒಳಗೊಂಡಿದೆ.

ಹೋಂಡಾ ಸಿಟಿ (4ನೇ ಜನರೇಶನ್)
4ನೇ ಜನರೇಶನ್ ಹೋಂಡಾ ಸಿಟಿ ಕಾರಿನ ಮೇಲೆ ಒಟ್ಟು 20,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ ಹೋಂಡಾ ಗ್ರಾಹಕರಿಗೆ ಲಾಯಲ್ಟಿ ಬೋನಸ್ 5,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ. ಇನ್ನು ಕಾರ್ಪೋರೇಟ್ ಡಿಸ್ಕೌಂಟ್ ಆಫರ್ 8,000 ರೂಪಾಯಿ ಒಳಗೊಂಡಿದೆ.

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ, ಭಾರತಕ್ಕೆ ಯಾವಾಗ ಪ್ರವೇಶ?

ಹೋಂಡಾ ಅಮೇಜ್
ಹೋಂಡಾ ಅಮೇಜ್ ಒಟ್ಟು 15,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಕಾರ್ಪೋರೇಟ್ ಡಿಸ್ಕೌಂಟ್ 4,000 ರೂಪಾಯಿ, ಹೋಂಡಾ ಕಸ್ಟಮರ್ಸ್‌ಗೆ ಲಾಯಲ್ಟಿ ಬೋನಸ್ 5,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ 6,000 ರೂಪಾಯಿ ಒಳಗೊಂಡಿದೆ.

ಹೋಂಡಾ ಜಾಝ್
ಹೋಂಡಾ ಜಾಝ್ ಪೆಟ್ರೋಲ್ ಕಾರಿನ ಮೇಲೆ 33,158 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 12,158 ರೂಪಾಯಿ ಎಕ್ಸಸರಿ ಒಳಗೊಂಡಿದೆ. ಕಾರು ಎಕ್ಸ್‌ಚೇಂಜ್ ಬೋನಸ್ 5,000 ರೂಪಾಯಿ, ಇನ್ನು ಹೊಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ. ಕಾರ್ಪೋರೇಟ್ ಆಫರ್ 4,000 ರೂಪಾಯಿ ಹಾಗೂ ಲಾಯಲ್ಟಿ ಬೋನಸ್ 5,000 ರೂಪಾಯಿ ಘೋಷಿಸಲಾಗಿದೆ.

ಹೋಂಡಾ ಕಾರು ಭಾರತದಲ್ಲಿ ಮಾರ್ಚ್ ತಿಂಗಳ ಆಫರ್ ಘೋಷಿಸಿದೆ. ಇದರ ಪ್ರಕಾರ ಮಾರ್ಚ್ 31 ರ ವರೆಗೆ ಈ ಆಫರ್ ಅನ್ವಯವಾಗಲಿದೆ. ಇನ್ನು ಆಫರ್ ನಗರ, ರಾಜ್ಯ,ಪಟ್ಟಣಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಸಮೀಪದ ಡೀಲರ್ ಬಳಿ ಖಚಿತಪಡಿಸಿಕೊಳ್ಳಿ. ಈ ಆಫರ್ ಮಾರ್ಚ್ ತಿಂಗಳಿಗೆ ಮಾತ್ರ ಅನ್ವಯವಾಗಲಿದೆ.