ಕಾರು ಅಪಘಾತಗಳ ಸಂದರ್ಭದಲ್ಲಿ ಅನೇಕ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಇದಕ್ಕಾಗಿ ಹೊಸ ಹೊಸ ಸೇಫ್ಟಿ ಕ್ರಮಗಳನ್ನು ಹೊಸ ಮಾಡೆಲ್ ಕಾರುಗಳಲ್ಲಿ ಅಳವಡಿಸುತ್ತಿದ್ದರೂ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಕೊನೆಗೂ ಈ ಟ್ವೆಂಟಿ-20ಗೆ ಸಿಹಿ ಸುದ್ದಿ ಸಿಕ್ಕಿದೆ. ನಿಮ್ಮ ಸೇಫ್ಟಿಗೆ ಹೊಸ ಕಾರೊಂದು ಬರುತ್ತಿದೆ. ಶೀಘ್ರದಲ್ಲೇ ನಿರೀಕ್ಷಿಸಿ. 

ಹೋಂಡಾ ಸಿಟಿಯ 2020ರ ಆವೃತ್ತಿಯು ಕ್ರ್ಯಾಶ್ ಸೇಫ್ಟಿ ಸಿಸ್ಟಂ ಹೊಂದಿದ್ದು, ಸುರಕ್ಷತೆಗಳ ಪಟ್ಟಿಯಲ್ಲಿ ಟಾಪ್ 1 ಸ್ಥಾನವನ್ನು ಪಡೆದುಕೊಂಡಿದೆ. ಎಎಸ್ಇಎಎನ್ (ಆಸಿಯಾನ್- ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್) ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ನಡೆಸುವ ಕ್ರ್ಯಾಶ್ ಟ್ರೆಸ್ಟ್‌ನಲ್ಲಿ ಪೂರಾ 5 ಸ್ಟಾರ್ ಪಡೆದು ಸೂಪರ್ ಸೇಫ್ಟಿ ಕಾರ್ ಎಂಬ ಹೆಗ್ಗಳಿಕೆಗೆ ಹೋಂಡಾ ಸಿಟಿ ಪಾತ್ರವಾಗಿದೆ. ಇದಕ್ಕೆ ಹ್ಯುಂಡೈ ವರ್ನಾ, ಮಾರುತಿ ಸುಜುಕಿ ಸಿಯಾಜ್, ಟೊಯೋಟಾ ಯಾರಿಸ್‌ನ 2020 ಸೀರೀಸ್ ಗಳು ಪ್ರತಿಸ್ಪರ್ಧಿಯಾಗಿ ಪೈಪೋಟಿ ಕೊಟ್ಟಿವೆ.

ಇದನ್ನೂ ಓದಿ: ಬುಕ್ ಮಾಡಿದ ಹತ್ತೇ ದಿನದಲ್ಲಿ ಕೈಸೇರಲಿದೆ ಜಾವಾ; ಫುಲ್ ಖುಷ್ ಹುವಾ!...

ಕೊರೋನಾ ಬಳಿಕ ಭಾರತಕ್ಕೆ ಎಂಟ್ರಿ
ಪ್ರಸ್ತುತ ಈ ಕಾರು ಥಾಯ್ಲೆಂಡ್‌ನಲ್ಲಿ ಮಾತ್ರ ಮಾರುಕಟ್ಟೆ ಪ್ರವೇಶಿಸಿದ್ದು, ಶೀಘ್ರದಲ್ಲೇ ಭಾರತದಲ್ಲೂ ಬಿಡುಗಡೆಗೊಳಿಸುವ ಚಿಂತನೆ ಇದೆ. ದೇಶದಲ್ಲಿ ಕೊರೋನಾ ವೈರಸ್ ಹಿನ್ನೆಲೆ ಲಾಕ್‌ಡೌನ್ ಆಗಿದೆ. ಜೊತೆಗೆ ಅಟೋಮೊಬೈಲ್ ಉದ್ಯಮವೂ ಕುಸಿತಗೊಂಡಿವೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಮುಗಿದ ಮೇಲೆ ಸರಿಯಾದ ಸಮಯ ನೋಡಿಕೊಂಡು ಲಾಂಚ್ ಮಾಡುವ ಚಿಂತನೆ ಇದೆ ಎನ್ನಲಾಗಿದೆ.

ಏನಿದರ ವೈಶಿಷ್ಟ್ಯತೆ?
ಬಾಹ್ಯ ಹಾಗೂ ಒಳಾಂಗಣ ವಿನ್ಯಾಸದಲ್ಲಿ ಹೊಸತನವಿದ್ದರೆ, ವೈಡರ್ ಮತ್ತು ಲಾಂಗರ್ ಡೈಮೆನ್ಶನ್ (ಆಯಾಮ)ಗಳನ್ನು ಹೊಂದಿದೆ. ಈಗ ಮಾರ್ಕೆಟ್‌ನಲ್ಲಿರುವ ವಾಹನಗಳಿಂತ ಹೆಚ್ಚಿನ ಫೀಚರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. 5 ಮತ್ತು 6 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಅಟೋಮಾಟಿಕ್ ಟ್ರಾನ್ಸ್ ಮಿಶನ್ಸ್ ನೊಂದಿಗೆ BS6 ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಅನ್ನು ಹೊಂದಿದೆ.

ಇದನ್ನೂ ಓದಿ: ನೆಕ್ಸಾನ್ XZ+ S ಟ್ರಿಮ್ ವೇರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್!

ಆಸಿಯಾನ್ ಎನ್‌ಸಿಎಪಿ ರೇಟಿಂಗ್ ಹೀಗಿದೆ
ಹೋಂಡಾ ಸಿಟಿ ಹೊಂದಿರುವ ಸುರಕ್ಷತಾ ತಂತ್ರಜ್ಞಾನದಲ್ಲಿ ಯಾವ ವಿಭಾಗಕ್ಕೆ ಎಷ್ಟು ಅಂಕ ಎಂಬುದನ್ನು ಗಮನಿಸೋಣ. ಅಡಲ್ಟ್ ಆಕ್ಯುಪೆಂಟ್ ಪ್ರೊಟೆಕ್ಷನ್‌ನಲ್ಲಿ 50 ಅಂಕಕ್ಕೆ 44.83, ಚೈಲ್ಡ್ ಆಕ್ಯುಪೆಂಟ್ ಪ್ರೊಟೆಕ್ಷನ್‌ನಲ್ಲಿ 25 ಅಂಕಕ್ಕೆ 22.82 ಹಾಗೂ ಸೇಫ್ಟಿ ಅಸಿಸ್ಟ್ ಟೆಕ್ನಾಲಜಿಯಲ್ಲಿ 25 ಅಂಕಕ್ಕೆ 18.89 ಪಾಯಿಂಟ್‌ಗಳನ್ನು ಪಡೆದು ಅತ್ಯುತ್ತಮ ಗುಣಮಟ್ಟ ಹೊಂದಿರುವ ಖ್ಯಾತಿಗೊಳಪಟ್ಟಿದೆ. 

ಈಗಿರುವ ಫೀಚರ್ ಗಳೇನು?
ಈಗಾಗಲೇ ಥಾಯ್ಲೆಂಡ್ ನಲ್ಲಿರುವ ಕಾರಿನಲ್ಲಿ ಈ ಎಲ್ಲ ಸುರಕ್ಷತೆಗಳ ಜೊತೆಗೆ 6 ಏರ್‌ಬ್ಯಾಗ್ ಮತ್ತು ಬ್ಲೈಂಡ್ ಸ್ಪಾಟ್ ವಿಶುವಲೈಸೇಶನ್ ಸಿಸ್ಟಂ ಹೊಂದಿದ್ದು, ಇದು ಇನ್ಫೋಟೈನ್ಮೆಂಟ್ (ಟಿವಿ ಮಾದರಿ) ಸ್ಕ್ರೀನ್‌ನಲ್ಲಿ ಮೊದಲೇ ಮಾಹಿತಿ ನೀಡುತ್ತದೆ. ಜೊತೆಗೆ ಟೈರ್ ಪ್ರೆಶರ್ ಮಾನಿಟರ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಸಿಸ್ಟಮ್, ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ), ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಸೌಲಭ್ಯವನ್ನು ಹೊಂದಿದೆ. ಭಾರತದಲ್ಲಿ ಕಾರಿನ ಮುಂಬದಿಯಲ್ಲಿ 2 ಏರ್ ಬ್ಯಾಗ್ (ಡ್ಯೂಯಲ್ ಫ್ರಂಟ್ ಏರ್ ಬ್ಯಾಗ್), ಎಬಿಎಸ್, ಪಾರ್ಕಿಂಗ್ ಸೆನ್ಸಾರ್ ಅಳವಡಿಕೆ ಕಡ್ಡಾಯವಾಗಿದೆ. ಸದ್ಯ ಈ ಕಾರಿನ ಪ್ರಾರಂಭಿಕ ದರ 10 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಟಾಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಕಡಿಮೆ ಬೆಲೆಯ ಹ್ಯುಂಡೈ ಎಲೆಕ್ಟ್ರಿಕ್ ಕಾರು!

ಏನಿದು ಕ್ರ್ಯಾಶ್ ಟೆಸ್ಟ್?
ಒಂದು ಕಾರಿನ ಮಾಡೆಲ್ ಮಾರುಕಟ್ಟೆಗೆ ಬಿಡುಗಡೆಯಾಗಬೇಕೆಂದರೆ ಮುಂಚಿತವಾಗಿ ಎಲ್ಲ ರೀತಿಯ ಪರೀಕ್ಷೆಗಳಿಗೆ ಒಳಪಡಬೇಕು. ಅದರಲ್ಲಿ ಕ್ರ್ಯಾಶ್ ಟೆಸ್ಟ್ ಕೂಡಾ ಒಂದು. ಇಲ್ಲಿ ಕಾರಿನ ವಿನ್ಯಾಸದ ಮೇಲೆ ಪರಿಣಾಮವನ್ನು ಅಂದಾಜಿಸಲಾಗುತ್ತದೆ. ಜೊತೆಗೆ ಕಾರನ್ನು ವೇಗವಾಗಿ ಓಡಿಸಿ ಡಿಕ್ಕಿ ಹೊಡೆಸಿ ಅಪಘಾತದಂತೆ ಮಾಡಿ ಎಷ್ಟರ ಮಟ್ಟಿಗೆ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ಪರೀಕ್ಷಿಸಲಾಗುವುದು.